Karnataka NewsBangalore News

ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಕೈಗೆ ಸಿಗಲಿದೆ ಹಕ್ಕು ಪತ್ರ!

ರೈತರು (farmers)ಎಂದ ತಕ್ಷಣ ಎಲ್ಲರಿಗೂ ಕೃಷಿ ಜಮೀನು ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ತುಂಡು ಜಮೀನು ಇರದವರು ಇಂದು ಸರ್ಕಾರಿ ಸ್ವಾಮ್ಯದ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು (agriculture activities on government land) ಮಾಡುತ್ತಿದ್ದಾರೆ.

ಇದೀಗ ಇಂತಹ ರೈತರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಬಗೇರ್ ಹುಕುಂ ಹಾಗೂ ಅಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ನಮೂನೆ 50 ನಮೂನೆ, 53 ಹಾಗೂ ನಮೂನೆ 57ರ ಹಕ್ಕು ಪತ್ರ ನೀಡಲು ಸರ್ಕಾರ ನಿರ್ಧರಿಸಿದೆ.

Wrong name on your land Documents, Change easily like this

10ನೇ ತರಗತಿ ಪಾಸಾಗಿದ್ರೆ ಬಿಎಂಟಿಸಿಯಲ್ಲಿ ಹುದ್ದೆ, 30,000 ಸಂಬಳ; ಅರ್ಜಿ ಸಲ್ಲಿಸಿ!

ಇನ್ಮುಂದೆ ರೈತರ ಹೆಸರಿಗೆ ಹಕ್ಕು ಪತ್ರ! (Hakku Patra distribution)

ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ಅವರು ಹಕ್ಕು ಪತ್ರ ವಿತರಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇತ್ತೀಚಿಗೆ ಸಿಕ್ಕಿರುವ ಹೊಸ ಅಪ್ಡೇಟ್ ಪ್ರಕಾರ ಸದ್ಯದಲ್ಲಿಯೇ ಸರ್ಕಾರಿ ಜನನಿನಲ್ಲಿ ಸಾಕಷ್ಟು ವರ್ಷಗಳಿಂದ ಕೃಷಿ ಮಾಡಿಕೊಂಡು ಬರುತ್ತಿರುವ ರೈತರಿಗೆ ಹಕ್ಕುಪತ್ರ ನೀಡಲಾಗುವುದು.

ಆ ಜಮೀನನ್ನು ಅವರ ಹೆಸರಿಗೆ ಮಾಡಿಕೊಡುವ ಕೆಲಸ ನಡೆಯಲಿದೆ. ಇದರಿಂದ ಈಗಾಗಲೇ ಅರ್ಜಿ ಸಲ್ಲಿಸಿರುವ ಸಾಕಷ್ಟು ರೈತರು ಸ್ವಂತ ಜಮೀನು (Agriculture Land) ಪಡೆಯಲಿದ್ದಾರೆ.

ರೈತನನ್ನು ಮದುವೆಯಾದ ಯುವತಿಗೆ 5 ಲಕ್ಷ ರೂಪಾಯಿ; ಕನ್ಯಾ ಭಾಗ್ಯದ ಬಗ್ಗೆ ಸರ್ಕಾರದ ನಿರ್ಧಾರ!

Farmerಪರಿಶೀಲನೆಯಲ್ಲಿ ಕಟ್ಟುನಿಟ್ಟಿನ ಕ್ರಮ!

ಆದರೆ ಇಷ್ಟು ವರ್ಷ ಅಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ನಿಜವಾದ ಫಲಾನುಭವಿ ರೈತರಿಗಿಂತ ಹೆಚ್ಚು ಬೇರೆಯವರು ಪ್ರಯೋಜನ ಪಡೆದುಕೊಂಡಿದ್ದು, ಸರ್ಕಾರದ ಗಮನಕ್ಕೆ ಬಂದಿದ್ದು ಇನ್ನು ಮುಂದೆ ಈ ರೀತಿ ತಪ್ಪು ಆಗದಂತೆ ಎಚ್ಚರಿಕೆ ವಹಿಸಲು ಕೃಷ್ಣ ಬೈರೇಗೌಡ ಅವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

ನಿಜವಾದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಮಾತ್ರ ಹಕ್ಕುಪತ್ರ ವಿತರಣೆ ಮಾಡಬೇಕು. ಅಂತಹ ಅರ್ಜಿಗಳನ್ನು ಮಾತ್ರ ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆಸಿ ಸ್ಥಳಕ್ಕೆ ಭೇಟಿ ಕೊಟ್ಟು, ರೈತರು ಎನ್ನುವುದನ್ನು ಖಚಿತಪಡಿಸಿಕೊಂಡ ನಂತರ ಅಂತವರ ಅರ್ಜಿಯನ್ನು ಮಾನ್ಯ ಮಾಡಬೇಕು ಎಂದು ಸಚಿವರು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಹಣ ಇನ್ಮುಂದೆ ನಿಮ್ಮ ಬ್ಯಾಂಕ್ ಖಾತೆ ಸೇರಲು ಈ ಕೆಲಸ ಕಡ್ಡಾಯ!

ಡಿಜಿಟಲ್ ಹಕ್ಕು ಪತ್ರ ವಿತರಣೆ!

ಸೆಟಲೈಟ್ ಮೂಲಕ ಸಾಗುವಳಿ ಜಮೀನನ್ನು ಗುರುತಿಸಿ ಆ ದಾಖಲೆಗಳಿಗೆ ಈ ಜಮೀನು (Land), ಉಳುಮೆ ಮ್ಯಾಚ್ ಆಗುವ ಹಾಗಿದ್ದರೆ ಅಂತಹ ರೈತರಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು.

ಇನ್ನು ಭೂ ರಹಿತ ರೈತರಿಗೆ ಹಕ್ಕು ಪತ್ರ ವಿತರಣೆ ಯನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲು ನಿರ್ಧರಿಸಲಾಗಿದ್ದು, ಡಿಜಿಟಲ್ ಹಕ್ಕು ಪತ್ರ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಸರ್ಕಾರದ ಜಮೀನಿನನ್ನು ಯಾರಿಗೆ ನಿಜವಾಗಿ ಕೊಡಬೇಕು ಅಂತವರಿಗೆ ಮಾತ್ರ ಪಾರದರ್ಶಕ (transparency) ವಾಗಿ ಕೊಡಲು ಸಾಧ್ಯವಾಗುತ್ತದೆ.

ಇನ್ನು ಮುಂದೆ ಹಕ್ಕು ಪತ್ರ ವಿತರಣೆಯ ವಿಚಾರದಲ್ಲಿ ಯಾವುದೇ ರೀತಿಯ ವಂಚನೆ ಆಗಬಾರದು ಎನ್ನುವುದು ಸರ್ಕಾರದ ಉದ್ದೇಶ. ಒಟ್ಟಿನಲ್ಲಿ ಸದ್ಯದಲ್ಲಿ ಭೂ ರಹಿತ, ಕೃಷಿ ಚಟುವಟಿಕೆ ಮಾಡುತ್ತಿರುವ ರೈತರು ಸರ್ಕಾರಿ ಜಮೀನನ್ನು ಸ್ವಂತವಾಗಿಸಿಕೊಳ್ಳಲು ಹಕ್ಕು ಪತ್ರ ಪಡೆದುಕೊಳ್ಳಲಿದ್ದಾರೆ.

ಉಚಿತ ವಸತಿ ಯೋಜನೆ! ಮನೆ ಇಲ್ಲದ 36 ಸಾವಿರ ಬಡ ಜನರಿಗೆ ಮನೆ ಹಂಚಿಕೆ

Farmers who are cultivating in the government land will get the Hakku Patra

Our Whatsapp Channel is Live Now 👇

Whatsapp Channel

Related Stories