ರೈತನನ್ನು ಮದುವೆಯಾದ ಯುವತಿಗೆ 5 ಲಕ್ಷ ರೂಪಾಯಿ; ಕನ್ಯಾ ಭಾಗ್ಯದ ಬಗ್ಗೆ ಸರ್ಕಾರದ ನಿರ್ಧಾರ!
45 ಕಳೆದರೂ ಕೂಡ ರೈತ ಮಕ್ಕಳಿಗೆ ಮಾತ್ರ ಮದುವೆ (Marriage) ಆಗುತ್ತಿಲ್ಲ. ರೈತರ ಮಕ್ಕಳನ್ನು ಮದುವೆ ಆಗುವವರು ಮಾತ್ರ ಯಾರು ಇಲ್ಲ.
ರೈತರ (farmers) ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಿರುವ ಸರ್ಕಾರ ಈಗ ಈ ಸಮಸ್ಯೆಗೆ ಉತ್ತರ ಕೊಡಲಿಯಾ ಎನ್ನುವುದನ್ನು ನಿಜಕ್ಕೂ ಕಾದು ನೋಡಲೇಬೇಕು. ಅಷ್ಟಕ್ಕೂ ರೈತರ ಆ ಸಮಸ್ಯೆ ಯಾವುದು ಅದಕ್ಕೆ ಸರ್ಕಾರ ನಿಜಕ್ಕೂ ಪರಿಹಾರ ಕೊಡಲಿಯಾ ಎನ್ನುವುದನ್ನು ನೋಡೋಣ.
ರೈತರು ದೇಶದ ಜೀವಾಳ. ಬೆಳೆ ಬೆಳೆಯುವ ವಿಚಾರದಲ್ಲಿ ರೈತರಿಗೆ ಯಾವುದೇ ರೀತಿಯ ಸಮಸ್ಯೆ ಇದ್ದರೂ ಸರ್ಕಾರ ಅದಕ್ಕೆ ಪರಿಹಾರವನ್ನು ಒದಗಿಸಲು ಒಂದಲ್ಲ ಒಂದು ಯೋಜನೆಯನ್ನು ಜಾರಿಗೆ ತರುತ್ತದೆ. ಆದರೆ ಈಗ ರೈತರಿಗೆ ಇರುವುದು ಜೀವನದ ಸಮಸ್ಯೆ.
ಗೃಹಲಕ್ಷ್ಮಿ ಯೋಜನೆ ಹಣ ಇನ್ಮುಂದೆ ನಿಮ್ಮ ಬ್ಯಾಂಕ್ ಖಾತೆ ಸೇರಲು ಈ ಕೆಲಸ ಕಡ್ಡಾಯ!
ಒಂಟಿಯಾಗಿರುವ ರೈತರು ಜಂಟಿಯಾಗಿ ಜೀವನ ನಡೆಸಬೇಕು ಅಂದರೆ ಯಾರು ಹೆಣ್ಣು ಕೊಡುವವರೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು ಇದು ನಿಜಕ್ಕೂ ರೈತರು ಚಿಂತೆ ಮಾಡಬೇಕಾದ ವಿಷಯ. 45 ಕಳೆದರೂ ಕೂಡ ರೈತ ಮಕ್ಕಳಿಗೆ ಮಾತ್ರ ಮದುವೆ (Marriage) ಆಗುತ್ತಿಲ್ಲ. ಅವರು ಎಷ್ಟೇ ದುಡಿಯುತ್ತಾರೆ ಎಂದರು, ಎಷ್ಟೇ ಸಿರಿವಂತರಾಗಿದ್ದರು ಕೂಡ ರೈತರ ಮಕ್ಕಳನ್ನು ಮದುವೆ ಆಗುವವರು ಮಾತ್ರ ಯಾರು ಇಲ್ಲ.
ಇದೇ ಕಾರಣಕ್ಕೆ ರಾಜ್ಯ ರೈತ ಸಂಘಟನೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ರಾಜ್ಯ ಸರ್ಕಾರಕ್ಕೆ ಮನವಿ ಒಂದನ್ನು ಸಲ್ಲಿಸಿದ್ದಾರೆ ಇದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಎನ್ನುವ ಕುತೂಹಲ ಜನರಲ್ಲಿ ಮಾಡಿದೆ.
ರೈತರ ಮನವಿ ಏನು?
ರೈತರಿಗೆ ಎಷ್ಟೇ ಮಾಡಿದರೂ ಹುಡುಗಿಯನ್ನು ಮದುವೆ ಮಾಡಿ ಕೊಡುವವರೇ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ, ರೈತರು ಶ್ರೀಮಂತರಾಗಿದ್ದರು ಕೂಡ ಹುಡುಗಿಯ ತಂದೆ ತಾಯಿ ತಮ್ಮ ಮಕ್ಕಳನ್ನು ರೈತನಿಗೆ ಕೊಟ್ಟು ಮದುವೆ ಮಾಡಲು ಮಾತ್ರ ಹಿಂದೆಟು ಹಾಕುತ್ತಿದ್ದಾರೆ.
ಉಚಿತ ವಸತಿ ಯೋಜನೆ! ಮನೆ ಇಲ್ಲದ 36 ಸಾವಿರ ಬಡ ಜನರಿಗೆ ಮನೆ ಹಂಚಿಕೆ
ಎಷ್ಟು ದಿನ ಒಂಟಿಯಾಗಿ ಜೀವನ ನಡೆಸಲು ಸಾಧ್ಯವಿದೆ ರೈತರ ಮಕ್ಕಳು ಕೂಡ ಜಂಟಿಯಾಗಿ ಜೀವನ ನಡೆಸಬೇಕು ಅಲ್ಲವೇ ಇದೇ ಕಾರಣಕ್ಕೆ ರೈತ ಸಂಘಟನೆಯ ಮುಖ್ಯಸ್ಥರು ಸಿಎಂ ಸಿದ್ದರಾಮಯ್ಯ ಅವರಿಗೆ ಕನ್ಯಾ ಭಾಗ್ಯ ನೀಡುವಂತೆ ಮನವಿ ಮಾಡಿದ್ದಾರೆ. ಹೆಣ್ಣು ಮಗಳು ರೈತನನ್ನು ಮದುವೆ ಆದರೆ ಆಕೆಗೆ 5 ಲಕ್ಷ ರೂಪಾಯಿಗಳನ್ನು ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ರಾಜ್ಯ ಸರ್ಕಾರದ ನಿರ್ಧಾರ ಏನು?
ರಾಜ್ಯ ಸರ್ಕಾರ ಸದ್ಯ ಬಜೆಟ್ (budget) ಮಂಡಿಸಲಿದ್ದು, ಈಗಾಗಲೇ ಸಕಲ ಸಿದ್ಧತೆಗಳು ಕೂಡ ನಡೆದಿದೆ. ಈ ಬಾರಿಯ ಬಜೆಟ್ ನಲ್ಲಿ ರಾಜ್ಯ ಸರ್ಕಾರ ರೈತರ ಈ ಮದುವೆಯ ಮನವಿಯನ್ನು ಒಪ್ಪಿ ರೈತರನ್ನು ಮದುವೆ ಆಗುವ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಧನ ನೀಡುವುದಕ್ಕೆ ಅಸ್ತು ಎನ್ನಬಹುದೇ? ಈಗಾಗಲೇ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಏನು ಎಂಬ ಕುತೂಹಲ ಪ್ರತಿಯೊಬ್ಬರಲ್ಲಿಯೂ ಇದೆ. ಕೊನೆ ಪಕ್ಷ ರೈತರ ಈ ಮನವಿಯನ್ನು ರಾಜ್ಯ ಸರ್ಕಾರ ಪರಿಗಣಿಸಲಿದೆಯೇ ಎನ್ನುವುದನ್ನು ಕಾದು ನೋಡಬೇಕು.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಸರ್ಕಾರ!
5 lakh rupees for a woman, who married farmer