ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಸರ್ಕಾರ!

ಗೃಹಲಕ್ಷ್ಮಿ ಯೋಜನೆ (Gruha lakshmi scheme) ಅಥವಾ ಅನ್ನಭಾಗ್ಯ (Annabhagya scheme) ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ರೇಷನ್ ಕಾರ್ಡ್ (Ration Card) ಇರುವುದು ಕಡ್ಡಾಯ.

Bengaluru, Karnataka, India
Edited By: Satish Raj Goravigere

ಸರ್ಕಾರದ ಗ್ಯಾರಂಟಿ ಯೋಜನೆ (Karnataka government guarantee schemes) ಯ ಪ್ರಯೋಜನಗಳನ್ನು ಪಡೆದುಕೊಳ್ಳುವಲ್ಲಿ ರಾಜ್ಯದ ಲಕ್ಷಾಂತರ ಜನರು ವಂಚಿತರಾಗಿದ್ದಾರೆ. ಸಾರ್ವಜನಿಕರಿಗಾಗಿಯೇ ಐದು ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಘೋಷಿಸಿದೆ. ಆದರೆ ರಾಜ್ಯ ಸರ್ಕಾರದ ಈ ಯೋಜನೆಗಳ ಪ್ರಯೋಜನಗಳು ರಾಜ್ಯದ ಎಲ್ಲಾ ಜನರಿಗೂ ಸಿಗುತ್ತದೆ ಎನ್ನುವ ಪ್ರಶ್ನೆಗೆ ಇಲ್ಲ ಎನ್ನುವುದಷ್ಟೇ ಉತ್ತರ.

ಇಂತಹ ರೈತರ ಖಾತೆಗೆ ಬರ ಪರಿಹಾರ ಹಣ 2000 ರೂಪಾಯಿ ಬಿಡುಗಡೆ! ಬಿಗ್ ಅಪ್ಡೇಟ್

The government has given good news to all families with ration cards

ಯಾಕೆ ಸರ್ಕಾರದ ಯೋಜನೆಗಳು ಫಲಾನುಭವಿಗಳವರೆಗೆ ತಲುಪುತ್ತಿಲ್ಲ ಎಂದು ನೋಡುವುದಾದರೆ, ಮುಖ್ಯವಾಗಿ ಇಲ್ಲಿ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಅಥವಾ ಅನ್ನಭಾಗ್ಯ (Annabhagya scheme) ಯೋಜನೆ ಮೊದಲಾದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಬಡತನ ರೇಖೆಗಿಂತ ಕೆಳಗಿರುವವರು (below poverty line), ಮಹಿಳೆಯರು ಫಲಾನುಭವಿಗಳಾಗಿದ್ದು, ಅವರ ಬಳಿ ರೇಷನ್ ಕಾರ್ಡ್ (Ration Card) ಇರುವುದು ಕಡ್ಡಾಯ.

ಆದರೆ ದುರದೃಷ್ಟವಶಾತ್ ರಾಜ್ಯದಲ್ಲಿ ನಿಜಕ್ಕೂ ಯಾರಿಗೆ ಬಿಪಿಎಲ್ ಕಾರ್ಡ್ (BPL card) ಅಗತ್ಯ ಇದೆಯೋ ಅಂತವರ ಬಳಿಯೇ ಈ ಕಾರ್ಡ್ ಇಲ್ಲ.

ಸರ್ಕಾರದಿಂದ ವಿಳಂಬ!

ಈಗಾಗಲೇ ಸಾಕಷ್ಟು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಆದರೆ ಇದುವರೆಗೆ ಯಾವುದೇ ಅರ್ಜಿ ಪರಿಶೀಲನೆ (application verification) ಆಗಲಿ ಅಥವಾ ವಿತರಣೆ ಆಗಲಿ ನಡೆದಿಲ್ಲ. ದಿನದಿಂದ ದಿನಕ್ಕೆ ಪಡಿತರ ಚೀಟಿ ವಿತರಣೆಯಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ಗ್ಯಾರಂಟಿ ಯೋಜನೆಗಳು ಹಲವರ ಕೈತಪ್ಪಿ ಹೋಗುತ್ತದೆ.

ಫಲಾನುಭವಿಗಳು ಈವರೆಗೆ ಐದು ಕಂತಿನ ಗೃಹಲಕ್ಷ್ಮಿ ಹಣ.. ಅಂದ್ರೆ 10,000ಗಳನ್ನು ಪಡೆದುಕೊಂಡಿದ್ದಾರೆ. ಇತ್ತ ಅದೇಷ್ಟೋ ಗೃಹಿಣಿಯರು ಸರ್ಕಾರದ ಸರ್ಕಾರಿ ಸಮಸ್ಯೆ ಹಾಗೂ ಮತ್ತಿತರ ಲೋಪದೋಷಗಳಿಂದಾಗಿ ಈ ಯೋಜನೆಯಿಂದ ವಂಚಿತರಾಗಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಒಟ್ಟಿಗೆ ಜಮಾ; ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

BPL Ration Cardತಾಲೂಕು ಮಟ್ಟದ ಗ್ಯಾರಂಟಿ ಸಮಾವೇಶದಲ್ಲಿಯೂ ಪರಿಹಾರ ಸಿಕ್ಕಿಲ್ಲ!

ಮೊನ್ನೆಯಷ್ಟೇ, ಅಂದರೆ ಫೆಬ್ರವರಿ 10ರಂದು ತೀರ್ಥಹಳ್ಳಿ ತಾಲೂಕಿನಲ್ಲಿ ಗ್ಯಾರಂಟಿ ಸಮಾವೇಶ ನಡೆಸಲಾಗಿತ್ತು. ಈ ಸಮಾವೇಶದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ ಯೋಜನೆ, ಗೃಹ ಜ್ಯೋತಿ ಯೋಜನೆ ಯುವ ನಿಧಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳಿಂದ ದೂರ ಉಳಿದಿರುವ ಸಾಕಷ್ಟು ಜನ ಭಾಗವಹಿಸಿದ್ದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.

ಇಂತಹವರ ರೇಷನ್ ಕಾರ್ಡ್ ಹೊಸ ಅರ್ಜಿಗಳು ರಿಜೆಕ್ಟ್! ರದ್ದಾದವರ ಪಟ್ಟಿ ಬಿಡುಗಡೆ

ಎಲ್ಲರಿಗೂ ತಿಳಿದಿರುವ ಹಾಗೆ ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುವ ವಿಚಾರ. ಆದರೆ ಸರ್ಕಾರದ ವಿಳಂಬದಿಂದಾಗಿ ಇದುವರೆಗೆ ಬಿಪಿಎಲ್ ಕಾರ್ಡ್ ಅರ್ಜಿಗಳು ಪರಿಶೀಲನೆಗೊಂಡು ವಿಲೇವಾರಿ ಆಗಿಲ್ಲ. ತಾಂತ್ರಿಕ ದೋಷ (technical issues) ಗಳಿಂದಾಗಿ ಹೊಸ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿರುವವರು ಅರ್ಜಿ ಸಲ್ಲಿಕೆ ಮಾಡಲು ಕೂಡ ಸಾಧ್ಯವಾಗಿಲ್ಲ.

ಸಮಾವೇಶದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ ಆದರೆ ಹಳೆಯ ರೇಷನ್ ಕಾರ್ಡ್ ವಿತರಣೆ ಆಗುವವರೆಗೂ ಹೊಸ ಅರ್ಜಿಗಳನ್ನು ಸ್ವೀಕರಿಸದಿರಲು ತೀರ್ಮಾನಿಸಲಾಗಿದೆ. ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ನಿರಾಸೆಯಾಗಿದೆ.

ಒಟ್ಟಿನಲ್ಲಿ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅದಕ್ಕೆ ಪಡಿತರ ಚೀಟಿ ಕಡ್ಡಾಯ ಎನ್ನುವ ನಿಯಮ ತಂದ ಮೇಲೆ ಫಲಾನುಭವಿಗಳಿಗೆ ಪಡಿತರ ಚೀಟಿಯನ್ನು ಕೂಡ ಅಷ್ಟೇ ಸುಲಭವಾಗಿ ಸಿಗುವಂತೆ ಮಾಡಬೇಕಿತ್ತು. ಆದರೆ ಸರ್ಕಾರ ಈ ವಿಚಾರದಲ್ಲಿ ಗಮನ ಹರಿಸಿದರೆ ಇರುವುದು ಸಾಕಷ್ಟು ಜನರಿಗೆ ಬೇಸರ ಮೂಡಿಸಿದೆ.

ಗೃಹಲಕ್ಷ್ಮಿ ಯೋಜನೆ 6ನೇ ಮತ್ತು 7ನೇ ಕಂತಿನ ಹಣ ಪಡೆಯೋಕೆ ಈ ಕೆಲಸ ಕಡ್ಡಾಯ!

The government gave a big update about applying for a new ration card