ಪ್ರತಿ ತಿಂಗಳು ಕೋಟ್ಯಾಂತರ ರೂಪಾಯಿ ಹಣವನ್ನು, ಲಕ್ಷಾಂತರ ಮಹಿಳೆಯರ ಖಾತೆಗೆ ಜಮಾ ಮಾಡುವ ಸಲುವಾಗಿ 2,000 ರೂಗಳನ್ನು ಸರ್ಕಾರ ಬಿಡುಗಡೆ ಮಾಡುತ್ತಿದೆ. ಆದರೆ ಇಷ್ಟೆಲ್ಲ ಮಾಡಿದ್ದು ಕೂಡ ಸಾಕಷ್ಟು ಮಹಿಳೆಯರ ಖಾತೆಗೆ (Bank Account) ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಹಣ ಬಂದು ತಲುಪುತ್ತಿಲ್ಲ.
ಫಲಾನುಭವಿ ಮಹಿಳೆಯರಿಗೆ (beneficiaries) ಇದೊಂದು ದೊಡ್ಡ ಸಮಸ್ಯೆ ಆಗಿದೆ. ಅಷ್ಟೇ ಅಲ್ಲ ಸರ್ಕಾರಕ್ಕೂ ಕೂಡ ಯಾವ ಕಾರಣಕ್ಕೆ ಇಂತಹ ಫಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆಯಾಗುತ್ತಿಲ್ಲ (Money Deposit) ಎಂದು ಚಿಂತೆ ಆಗಿದೆ.
ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಭರ್ಜರಿ ಸುದ್ದಿ! ಹಕ್ಕು ಪತ್ರ ವಿತರಣೆ
ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಲು ಸರ್ಕಾರದ ಉಪಕ್ರಮ!
ಅರ್ಹ ಹಾಗೂ ಫಲಾನುಭವಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಪ್ರತಿಯೊಂದು ಕಂತಿನ ಹಣ ಜಮಾ ಆಗಬೇಕು ಎನ್ನುವ ಕಾರಣಕ್ಕೆ ಸರ್ಕಾರ ಬೇರೆ ಬೇರೆ ಉಪಕ್ರಮ (initiative) ಕೈಗೊಂಡಿದ್ದು ಸುಳ್ಳಲ್ಲ.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ (Aadhaar seeding) ಆಗಿದ್ದರೆ ರೇಷನ್ ಕಾರ್ಡ್ ಈಕೆ ವೈ ಸಿ (ration card E-KYC) ಆಗಿದ್ದರೆ ಮಿಸ್ ಆಗದೆ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಹೇಳಲಾಗಿತ್ತು. ಆದರೆ ಹಾಗೂ ಈ ಕೆಲಸ ಮಾಡಿಕೊಂಡು ಮಹಿಳೆಯರ ಖಾತೆಗೂ ಹಣ ಜಮಾ ಆಗಿಲ್ಲ.
ಇದಕ್ಕಾಗಿ ಸರ್ಕಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಅದಾಲತ್ (Gruha lakshmi Adalat) ಗೃಹಲಕ್ಷ್ಮಿ ಕ್ಯಾಂಪ್ (camp) ನಡೆಸಿತ್ತು. ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಹಣ ಜಮಾ ಆಗದೇ ಇರುವ ಫಲಾನುಭವಿ ಮಹಿಳೆಯರನ್ನು ಗುರುತಿಸಿ ಅವರ ಖಾತೆಯಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸಬೇಕಾಗಿ ಆದೇಶ ನೀಡಲಾಗಿತ್ತು. ಇದೆಲ್ಲಾ ಮಾಡಿದ ನಂತರ ಸರ್ವರ್ ಸಮಸ್ಯೆ ಎನ್ನುವ ಕಾರಣಕ್ಕೆ ಮತ್ತೆ ಮಹಿಳೆಯರ ಖಾತೆಗೆ ಹಣ ಬಂದಿರಲಿಲ್ಲ.
ನಾಟಿಕೋಳಿ ಸಾಕಾಣಿಕೆ ತರಬೇತಿ ಜೊತೆಗೆ ಪ್ರತಿ ದಿನ ₹1,000 ರೂಪಾಯಿ ಗಳಿಸಿ
ಈ ಎಲ್ಲಾ ಸಮಸ್ಯೆಗಳನ್ನು ಹೊರತುಪಡಿಸಿ ಮಹಿಳೆಯರ ಖಾತೆಗೆ ಹಣ ಜಮಾ ಆಗದೇ ಇರುವುದಕ್ಕೆ ಈಗ ಮತ್ತೊಂದು ಕಾರಣ ಸಿಕ್ಕಿದ್ದು, ತಕ್ಷಣ ನೀವು ಈ ಕೆಲಸ ಮಾಡಿದ್ರೆ ಮುಂದೆ ಗೃಹಲಕ್ಷ್ಮಿ ಹಣ ಪಡೆದುಕೊಳ್ಳುವಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ.
ಉಚಿತ ಬಸ್ ಪ್ರಯಾಣ ಮಾಡೋ ಮಹಿಳೆಯರಿಗೆ ಬಿಗ್ ಅಪ್ಡೇಟ್! ಮತ್ತೊಂದು ಹೊಸ ಸೇವೆ
ತೆರಿಗೆ ಪಾವತಿ ಮಾಡದೆ ಇರುವುದಕ್ಕೆ ದೃಢೀಕರಣ ಪ್ರಮಾಣ ಪತ್ರ!
ಗೃಹಲಕ್ಷ್ಮಿ ಯೋಜನೆಯ ಮಾನದಂಡಗಳಲ್ಲಿ ಸರ್ಕಾರ ಪ್ರಮುಖವಾಗಿ ತಿಳಿಸಿರುವ ಅಂಶ ಏನೆಂದರೆ ಯಾವುದೇ ಆದಾಯ ತೆರಿಗೆ ಪಾವತಿ ( income tax payer) ಮಾಡುವ ಮಹಿಳೆ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಈ ಮಾನದಂಡವನ್ನು ನಿರ್ಲಕ್ಷಿಸಿ, ಲಕ್ಷಾಂತರ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಮಹಿಳೆಯರ ಅರ್ಜಿಗಳನ್ನು ಸರ್ಕಾರ ತಿರಸ್ಕರಿಸಿದೆ.
ಈ ರೀತಿ ಅರ್ಜಿ ತಿರಸ್ಕಾರ ಮಾಡುವ ಸಮಯದಲ್ಲಿ ಅರ್ಹ 20 ರಿಂದ 30,000 ಮಹಿಳೆಯರ ಅರ್ಜಿಗಳು ಕೂಡ ತಿರಸ್ಕಾರಗೊಂಡಿವೆ ಅಥವಾ ಇಂತಹ ಮಹಿಳೆಯರ ಹೆಸರು ಲಿಸ್ಟ್ ನಲ್ಲಿ ಸೇರಿಕೊಂಡಿವೆ.
ಗೃಹಲಕ್ಷ್ಮಿ 6ನೇ ಕಂತಿನ ಹಣ ಇನ್ನೂ ಬಂದಿಲ್ವಾ? ಯಾಕಿಷ್ಟು ತಡ, ಕಾರಣ ಇಲ್ಲಿದೆ
ಹಾಗಾಗಿ ನಿಮ್ಮ ಹೆಸರು ಇದ್ದರೆ ತಕ್ಷಣ ನೀವು ಆದಾಯ ತೆರಿಗೆ ಪಾವತಿ ಮಾಡುವವರಲ್ಲ ಎಂದು ದೃಡೀಕರಣ ಪ್ರಮಾಣ ಪತ್ರವನ್ನು ಹತ್ತಿರದ ಶಿಶು ಅಭಿವೃದ್ಧಿ ಇಲಾಖೆಗೆ ಸಲ್ಲಿಸಬೇಕು. ಅಲ್ಲಿಂದ ಮುಂದೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿಮ್ಮ ದೃಡೀಕರಣ ಪ್ರಮಾಣ ಪತ್ರವನ್ನು ಕಳುಹಿಸಿ ಐಟಿ ಪಾವತಿದಾರರ ಲಿಸ್ಟ್ ನಿಂದ ನಿಮ್ಮ ಹೆಸರನ್ನ ತೆಗೆದು ಹಾಕಲಾಗುವುದು. ಈ ರೀತಿ ಮಾಡಿದರೆ ಮುಂದಿನ ಗೃಹಲಕ್ಷ್ಮಿ ಯೋಜನೆಯ ಪ್ರತಿ ಕಂತಿನ ಹಣ ನಿಮ್ಮ ಖಾತೆಯನ್ನು ಸೇರುತ್ತದೆ.
Do This to get the 6th and 7th Installment of Gruha Lakshmi Yojana
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.