ಗೃಹಲಕ್ಷ್ಮಿ 6ನೇ ಕಂತಿನ ಹಣ ಇನ್ನೂ ಬಂದಿಲ್ವಾ? ಯಾಕಿಷ್ಟು ತಡ, ಕಾರಣ ಇಲ್ಲಿದೆ
ನಿಮ್ಮ ಖಾತೆಗೆ (Bank Account) ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿಲ್ಲವೆಂದರೆ ಕೂಡಲೇ ನೀವು ಗೃಹ ಲಕ್ಷ್ಮಿ ಯೋಜನೆಗೆ ನೀಡಿದ ಬ್ಯಾಂಕ್ (Bank) ಖಾತೆ ಪರಿಶೀಲಿಸಿ.
ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಯೋಜನೆಗಳಲ್ಲಿ ಗೃಹ ಲಕ್ಷ್ಮಿ ಯೋಜನೆ (Gruha lakshmi scheme) ಒಂದಾಗಿದೆ. ಈ ಯೋಜನೆ ಅಡಿಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರೂ. ನೀಡಲಾಗುತ್ತದೆ.
ಆದರೆ ಈ ಯೋಜನೆ ಆರಂಭದಿಂದಲೂ ವಿಘ್ನ ಎದುರಿಸುತ್ತಿದೆ. ಇದುವರೆಗೂ ಅರ್ಜಿ ಸಲ್ಲಿಸಿದ ಎಲ್ಲರಿಗೂ ಈ ಯೋಜನೆ ಮುಟ್ಟಿಸಲು ರಾಜ್ಯ ಸರ್ಕಾರದ ಬಳಿ ಸಾಧ್ಯವಾಗಿಲ್ಲ. ಹಾಗಂತ ರಾಜ್ಯ ಸರ್ಕಾರ ಸುಮ್ಮನೆ ಕುಳಿತಿಲ್ಲ. ತನ್ನ ಕೈಲಾಗುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.
ಇಲ್ಲಿಯವರೆಗೆ 5 ಕಂತುಗಳ ಹಣ ಜಮಾ (Money Deposit) ಮಾಡಲಾಗಿದೆ. ಇದೀಗ ಫೆಬ್ರವರಿ (month of February) ತಿಂಗಳಿನಲ್ಲಿ 6ನೇ ಕಂತಿನ ಹಣ ಜಮಾ ಆಗಲಿದೆ. ಆದರೆ ಇಲ್ಲಿವರೆಗೆ ಹಣ ಜಮಾ ಆಗದವರು ಏನು ಮಾಡಬೇಕು? ಯಾವ ಕೆಲಸ ಮಾಡಿದರೆ ಜಮಾ ಆಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.
ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಕ್ಯಾನ್ಸಲ್! ರೇಷನ್ ಕಾರ್ಡ್ ಬಗ್ಗೆ ಸರ್ಕಾರದ ಡೆಡ್ ಲೈನ್
ನಿಮ್ಮ ಖಾತೆಗೆ (Bank Account) ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿಲ್ಲವೆಂದರೆ ಕೂಡಲೇ ನೀವು ಗೃಹ ಲಕ್ಷ್ಮಿ ಯೋಜನೆಗೆ ನೀಡಿದ ಬ್ಯಾಂಕ್ (Bank) ಖಾತೆ ಪರಿಶೀಲಿಸಿ. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ (Aadhaar link) ಆಗಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿ
ಒಂದು ವೇಳೆ ನೀವು ಬ್ಯಾಂಕ್ ಖಾತೆ ಹೊಂದಿರದಿದ್ದರೆ ಅಥವಾ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದರೆ ನಿಮ್ಮ ಮನೆ ಬಳಿ ಇರುವ ಅಂಚೆ ಕಚೇರಿಗೆ ತೆರಳಿ ಅಲ್ಲಿ ಖಾತೆ ತೆರೆಯಿರಿ. ಆ ಖಾತೆಯನ್ನು ಗೃಹ ಲಕ್ಷ್ಮಿ ಯೋಜನೆಗೆ ಲಿಂಕ್ ಮಾಡಿ.
ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ತಂದ ಸರ್ಕಾರ
ನೀವು ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎನ್ನುವುದನ್ನು ಪ್ರತಿ ತಿಂಗಳು ಪರಿಶೀಲನೆ ಮಾಡಬಹುದು. ಮಾಹಿತಿ ಕಣಜ ವೆಬ್ಸೈಟ್ಗೆ ಭೇಟಿ ನೀಡಬಹುದು. ಇಲ್ಲವೇ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಹೋಗಿ ಅಲ್ಲಿ ಗೃಹ ಲಕ್ಷ್ಮಿ ಯೋಜನೆ ಸರ್ಚ್ ಮಾಡಿದರೆ ನಿಮಗೆ ಒಂದು ಲಿಂಕ್ ಸಿಗುತ್ತದೆ. ಅಲ್ಲಿ ನಿಮ್ಮ ರೇಶನ್ ಕಾರ್ಡ್ (Ration Card) ನಂಬರ್ ಹಾಕಿದರೆ ನಿಮ್ಮ ಖಾತೆಗೆ ಎಷ್ಟು ಕಂತಿನ ಹಣ ಜಮಾ ಆಗಿದೆ ಎನ್ನುವುದನ್ನು ತೋರಿಸುತ್ತದೆ.
ಗೃಹಲಕ್ಷ್ಮಿ ಯೋಜನೆಯ ₹2000 ಪಡೆಯುವ ಮಹಿಳೆಯರಿಗೆ ಇಲ್ಲಿದೆ ಭರ್ಜರಿ ಸುದ್ದಿ!
ಗೃಹ ಲಕ್ಷ್ಮಿ ಯೋಜನೆಯ ೬ನೇ ಕಂತಿನ ಹಣವು ಫೆಬ್ರವರಿ ತಿಂಗಳ ಎರಡನೇ ವಾರದಲ್ಲಿ ಜಮಾ ಆಗುವ ಸಾಧ್ಯತೆಗಳಿವೆ. ಈ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ತಲುಪಿಸಬೇಕು. ಅರ್ಜಿ ಸಲ್ಲಿಸಿದ ಎಲ್ಲರಿಗೂ ತಲುಪಿಸಬೇಕು ಎನ್ನುವ ಸಲುವಾಗಿ ಸರ್ಕಾರವು ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳ ನೇತೃತ್ವದಲ್ಲಿ ಕ್ಯಾಂಪ್ ನಡೆಸಲು ಸೂಚನೆ ನೀಡಿದೆ.
ನಿಮಗೆ ಏನಾದರೂ ಸಮಸ್ಯೆಗಳಿದ್ದಲ್ಲಿ ಗ್ರಾಮ ಪಂಚಾಯತ್ (Gram Panchayat) ಅಧಿಕಾರಿಗಳನ್ನು ಖದ್ದು ಭೇಟಿಯಾಗಿ ಸಮಸ್ಯೆ ಹೇಳಿಕೊಳ್ಳಬಹುದು. ಅವರು ನಿಮ್ಮ ಸಮಸ್ಯೆ ಪರಿಶೀಲಿಸಿ ನಿಮ್ಮ ಖಾತೆಗೆ ಹಣ ಜಮಾ ಆಗುವಂತೆ ನೋಡಿಕೊಳ್ಳುತ್ತಾರೆ.
ಹೀಗೆ 5ನೇ ಕಂತಿನ ಹಣ ಜಮಾ ಆಗದ ಫಲಾನುಭವಿಗಳು ಎಲ್ಲಿ ಸಮಸ್ಯೆ ಉಂಟಾಗಿದೆ ಎಂದು ಕಂಡುಹಿಡಿದು ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಬಹುದಾಗಿದೆ.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ; ರಾಜ್ಯದ ಜನತೆಗೆ ಗುಡ್ ನ್ಯೂಸ್
Big Update on Gruha lakshmi Yojana 6th installment money