ಗೃಹಲಕ್ಷ್ಮಿ ಯೋಜನೆಯ ₹2000 ಪಡೆಯುವ ಮಹಿಳೆಯರಿಗೆ ಇಲ್ಲಿದೆ ಭರ್ಜರಿ ಸುದ್ದಿ!
ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯನ್ನು ಜಾರಿಗೆ ತಂದ ನಂತರ ಮಹಿಳೆಯರಿಗೆ ತುಸು ನೆಮ್ಮದಿ ಸಿಕ್ಕಿದೆ ಎನ್ನಬಹುದು. ಯಾಕೆಂದರೆ ಆರ್ಥಿಕವಾಗಿ ಸಣ್ಣಪುಟ್ಟ ತಿಂಗಳ ಖರ್ಚನ್ನು ನಿಭಾಯಿಸಲು ಮಹಿಳೆಯರಿಗೆ ಎರಡು ಸಾವಿರ ರೂಪಾಯಿಗಳು ಸಹಾಯಕ ಆಗಿವೆ.
ಹೌದು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಹೆಚ್ಚು ಫೇಮಸ್ ಆಗಿದೆ. ಇದಕ್ಕೆ ಮುಖ್ಯವಾಗಿರುವ ಕಾರಣ ಮಹಿಳೆಯರಿಗೆ ಉಚಿತವಾಗಿ ಸಿಗುತ್ತಿರುವ ಎರಡು ಸಾವಿರ ರೂಪಾಯಿಗಳು.
ಸಾಕಷ್ಟು ಮಹಿಳೆಯರು ಪ್ರತಿ ತಿಂಗಳ ಖರ್ಚು (maintenance) ಗಾಗಿ ಈ ಹಣವನ್ನು ಬಳಸಿಕೊಳ್ಳುವಲ್ಲಿ ಸಹಾಯಕವಾಗಿದೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರು ಈಗಾಗಲೇ ರೂ.10,000ಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ; ರಾಜ್ಯದ ಜನತೆಗೆ ಗುಡ್ ನ್ಯೂಸ್
ನಿಮ್ಮ ಖಾತೆಗೆ ಹಣ ಬಾರದೇ ಇದ್ರೆ ಚಿಂತೆ ಬೇಡ!
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಅವರು ಈಗಾಗಲೇ ಸಂಬಂಧಪಟ್ಟ ಇಲಾಖೆಗಳ ಜೊತೆಗೆ ಹಾಗೂ ಅಧಿಕಾರಿಗಳ ಜೊತೆಗೆ ಮಾತನಾಡಿ ಯಾವ ಮಹಿಳೆಯರಿಗೆ ಹಣ ವರ್ಗಾವಣೆ (Money Deposit) ಆಗಿಲ್ಲವೋ ಅಂತವರನ್ನು ಗುರುತಿಸಿ ಅವರಿಗೆ ಹಣ ಜಮಾ ಆಗುವಂತೆ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕು ಅಂದ್ರೆ ಸರ್ಕಾರದ ನಿಯಮವನ್ನು ಪಾಲನೆ ಮಾಡಬೇಕು. ಸರ್ಕಾರದ ಮಾನದಂಡಗಳಲ್ಲಿ ತಿಳಿಸಿರುವ ಹಾಗೆ ಐಟಿ ರಿಟರ್ನ್ಸ್ ಅಥವಾ ಆದಾಯ ತೆರಿಗೆ ಪಾವತಿ (Income Tax payer) ಮಾಡುವ ಮಹಿಳೆಯರಿಗೆ ಹಣ ಸಿಗುವುದಿಲ್ಲ. ಆದರೆ ಇಂಥವರು ಕೂಡ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಇಂತಹ ಅರ್ಜಿಗಳನ್ನ ಸರ್ಕಾರ ತಿರಸ್ಕರಿಸಿದೆ. ಆದರೆ ತಾಂತ್ರಿಕ ದೋಷ (technical issues) ದಿಂದಾಗಿ ಸಾಕಷ್ಟು ಅರ್ಹ ಮಹಿಳೆಯರ ಹೆಸರು ಕೂಡ ಐಟಿ/ಜಿಎಸ್‌ಟಿ ಪಾವತಿದಾರರ ಲಿಸ್ಟ್ ನಲ್ಲಿ ಸೇರಿಕೊಂಡಿದೆ.
ಆಸ್ತಿ, ಜಮೀನು ಖರೀದಿ ಮಾಡುವವರಿಗೆ ಹೊಸ ನಿಯಮ; ಶುಲ್ಕ ಇನ್ನಷ್ಟು ಹೆಚ್ಚಳ!
ಹೀಗಾಗಿ ಅಂತವರ ಖಾತೆಗೆ (Bank Account) ಗೃಹಲಕ್ಷ್ಮಿ ಹಣ (Gruha lakshmi scheme) ಜಮಾ ಆಗುತ್ತಿಲ್ಲ ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ನೀವು ಐಟಿ ಪಾವತಿ ಮಾಡುವವರು ಅಲ್ಲದೆ ಇದ್ದರೆ ದೃಢೀಕರಣ ಪ್ರಮಾಣ ಪತ್ರವನ್ನು ಹತ್ತಿರದ ಶಿಶು ಅಭಿವೃದ್ಧಿ ಇಲಾಖೆಗೆ ತಲುಪಿಸಬೇಕು.
ಶಿಶು ಅಭಿವೃದ್ಧಿ ಇಲಾಖೆಯಿಂದ ಸ್ಥಳಿಯ ನಿರ್ದೇಶನಾಲಯ ಕಛೇರಿ ಹಾಗೂ ಅಲ್ಲಿಂದ ಪ್ರಧಾನ ಕಚೇರಿಗೆ ನಿಮ್ಮ ಅರ್ಜಿಯನ್ನು ರವಾನಿಸಲಾಗುತ್ತದೆ. ನಂತರ ಸರ್ಕಾರದ ಡೇಟಾಬೇಸ್ ನಲ್ಲಿ ನಿಮ್ಮ ಹೆಸರನ್ನು ಅಪ್ಡೇಟ್ ಮಾಡಿ ಐಟಿ/ಜಿಎಸ್‌ಟಿ ಪಾವತಿದಾರರ ಲಿಸ್ಟ್ ನಿಂದ ನಿಮ್ಮ ಹೆಸರನ್ನು ತೆಗೆದುಹಾಕಲಾಗುತ್ತದೆ. ಅಲ್ಲಿಂದ ನಿಮ್ಮ ಖಾತೆಗೂ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಲು ಆರಂಭವಾಗುತ್ತದೆ.
ಸಿಹಿ ಸುದ್ದಿ! ಗೃಹಜ್ಯೋತಿ ಫ್ರೀ ಕರೆಂಟ್; ಬಾಡಿಗೆ ಮನೆಯಲ್ಲಿರುವವರಿಗೆ ಫುಲ್ ಖುಷ್!
6ನೇ ಕಂತಿನ ಹಣ ಬರಬೇಕು ಅಂದ್ರೆ ಈ ಕೆಲಸ ಮಾಡಿ!
ಈಗಾಗಲೇ ಸರ್ಕಾರ 6ನೇ ಕಂತಿನ ಹಣ ಬಿಡುಗಡೆ ಪ್ರಕ್ರಿಯೆಯನ್ನು ಆರಂಭಿಸಿದೆ ಕೆಲವು ಜಿಲ್ಲೆಗಳ ಕೆಲವು ಮಹಿಳೆಯರ ಖಾತೆಗೆ ಮಾತ್ರ ಆರನೇ ಕಂತಿರ ಹಣ ಸಂದಾಯವಾಗಿದೆ ಎನ್ನುವ ವರದಿ ಲಭ್ಯವಾಗಿದೆ. ಫೆಬ್ರವರಿ ತಿಂಗಳು ಮುಗಿಯುವುದರ ಒಳಗೆ 6ನೇ ಕಂತಿನ ಹಣವು ಕೂಡ ಪ್ರತಿಯೊಬ್ಬ ಮಹಿಳೆಯರ ಖಾತೆಗೆ ಜಮಾ ಆಗಬಹುದು.
ಆದರೆ ಸರ್ಕಾರ ಈಗಾಗಲೇ ತಿಳಿಸಿರುವಂತೆ, ನೀವು ನಿಮ್ಮ ಬ್ಯಾಂಕ್ ಗೆ ಹೋಗಿ ಈ ಕೆವೈಸಿ (EKYC)ಪರಿಶೀಲನೆ ಮಾಡಿಕೊಳ್ಳಿ ಇದರ ಜೊತೆಗೆ, ಎನ್‌ಪಿಸಿಐ ಮ್ಯಾಪಿಂಗ್ (NPCI mapping) ಕೂಡ ಮಾಡಿಸಬೇಕು. ಒಂದು ವೇಳೆ ನಿಮಗೆ 5 ಕಂತಿನ ಹಣ ಬಂದಿದ್ದರೆ ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳುವ ಅಗತ್ಯ ಇಲ್ಲ. ಅದು ಆಟೋಮ್ಯಾಟಿಕ್ ಆಗಿ ಬ್ಯಾಂಕ್ ನಲ್ಲಿ ಮಾಡಲಾಗುತ್ತದೆ. ಆದರೆ ಇಲ್ಲಿಯವರೆಗೆ ಹಣ ಸಂದಾಯ ಆಗದೇ ಇದ್ದರೆ ಮಾತ್ರ ತಕ್ಷಣ ಹೋಗಿ ಬ್ಯಾಂಕ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಪ್ರತಿ ಒದಗಿಸಿ ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳಿ.
ಹೊಸ ಯಶಸ್ವಿನಿ ಕಾರ್ಡ್ ಮಾಡಿಸಲು ಮತ್ತೆ ಅವಕಾಶ; ಈ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ!
ಒಂದೇ ಒಂದು ಕ್ಲಿಕ್ ನಲ್ಲಿ ಗೃಹಲಕ್ಷ್ಮಿ ಸ್ಟೇಟಸ್ ತಿಳಿದುಕೊಳ್ಳಿ!
ಇದಕ್ಕಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಗೆ ಹೋಗಿ DBT Karnataka ಎನ್ನುವ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿ.
ಮುಂದಿನ ಹಂತದಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು. ಒಂದು ಓಟಿಪಿ ನಿಮ್ಮ ಮೊಬೈಲ್ ಗೆ ಬರುತ್ತದೆ ಅದನ್ನು ನಮೂದಿಸಿ. ಈಗ ನಾಲ್ಕು ಅಂಕೆಯ mPIN ಹಾಕಿ ಲಾಗಿನ್ ಆದರೆ, ನಿಮ್ಮ ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ಪಡೆಯಬಹುದು.
Great news for women who will get 2 thousand Rupees under Gruha Lakshmi Yojana