Karnataka NewsBangalore News

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ; ರಾಜ್ಯದ ಜನತೆಗೆ ಗುಡ್ ನ್ಯೂಸ್

ಪಡಿತರ ಚೀಟಿ (Ration Card) ದಿನದಿಂದ ದಿನಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ, ಸರ್ಕಾರದ ಗ್ಯಾರಂಟಿ ಯೋಜನೆ (guarantee schemes) ಗಳಾದ ಅನ್ನಭಾಗ್ಯ ಯೋಜನೆ (Annabhagya scheme) ಹಾಗೂ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಪ್ರಯೋಜನ ಪಡೆದುಕೊಳ್ಳಲು ಪಡಿತರ ಚೀಟಿ (Ration Card) ಪ್ರಮುಖವಾಗಿರುವ ದಾಖಲೆ ಆಗಿರುವ ಹಿನ್ನೆಲೆಯಲ್ಲಿ, ಸಾಕಷ್ಟು ಜನ ರೇಷನ್ ಕಾರ್ಡ್ ಇಲ್ಲದೆ ಈ ಯೋಜನೆಯಿಂದ ವಂಚಿತರಾಗಿದ್ದಾರೆ.

ಆಸ್ತಿ, ಜಮೀನು ಖರೀದಿ ಮಾಡುವವರಿಗೆ ಹೊಸ ನಿಯಮ; ಶುಲ್ಕ ಇನ್ನಷ್ಟು ಹೆಚ್ಚಳ!

Ration card correction allowed again, Here is the information

ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅವಕಾಶ (New ration card application)

ಕೆಲವು ತುರ್ತು ಅಗತ್ಯಗಳಿಗಾಗಿ ಮತ್ತೆ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಮಾಡಿಕೊಡುತ್ತಿದೆ. ಹೊಸದಾಗಿ ರೇಷನ್ ಕಾರ್ಡ್ ಗೆ ಯಾರು ಅರ್ಜಿ ಸಲ್ಲಿಸಬಹುದು ಎಂದರೆ, ಈಗ ತಾನೆ ಮದುವೆ ಆಗಿ ಹೊಸದಾಗಿ ಸಂಸಾರ ಆರಂಭಿಸುವ ದಂಪತಿಗಳು, ಕುಟುಂಬದಿಂದ ಬೇರೆಯಾಗಿ ಜೀವನ ನಡೆಸುತ್ತಿರುವ ದಂಪತಿಗಳು ಅರ್ಜಿ ಸಲ್ಲಿಸಬಹುದು.

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ! (Ration card correction)

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದರ ಜೊತೆಗೆ ರೇಷನ್ ಕಾರ್ಡ್ ತಿದ್ದುಪಡಿಗು ಅವಕಾಶ ನೀಡಲಾಗಿದೆ. ಹೊಸದಾಗಿ ಮನೆಗೆ ಸೊಸೆ ಬಂದಿದ್ದರೆ ಅಥವಾ ಮಗುವಿನ ಜನನ ಆಗಿದ್ದರೆ ಅವರ ಹೆಸರು ನಿಮ್ಮ ರೇಷನ್ ಕಾರ್ಡ್ ನಲ್ಲಿ ಸೇರಿಸಲು ಕೂಡ ಅವಕಾಶವಿದೆ.

ಸಿಹಿ ಸುದ್ದಿ! ಗೃಹಜ್ಯೋತಿ ಫ್ರೀ ಕರೆಂಟ್; ಬಾಡಿಗೆ ಮನೆಯಲ್ಲಿರುವವರಿಗೆ ಫುಲ್ ಖುಷ್!

BPL Ration Cardಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್, ಹಾಗೂ ಮತ್ತೆ ಸೇವಾ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ. ಇನ್ನು ಯಾವಾಗ ಅರ್ಜಿ ಸಲ್ಲಿಸಬಹುದು ಎಂದರೆ, ಈಗಾಗಲೇ ಎರಡು ದಿನಗಳ ಹಿಂದೆ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ.

ಇಲ್ಲಿ ಗಮನಿಸಬೇಕಾಗಿರುವ ಮುಖ್ಯವಾಗಿರುವ ಅಂಶವೆಂದರೆ ಆನ್ಲೈನ್ (online) ಮೂಲಕ ಸೇವಾಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು. ಆದರೆ ಎಲ್ಲಾ ಸಮಯದಲ್ಲಿಯೂ ಆನ್ಲೈನ್ ಪೋರ್ಟಲ್ ತೆರೆದಿರುವುದಿಲ್ಲ. ಹಾಗಾಗಿ ನೀವು ಸೇವ ಕೇಂದ್ರದ ಸಿಬ್ಬಂದಿಗಳ ಬಳಿ ಮಾಹಿತಿ ಪಡೆದುಕೊಂಡು ಆ ಸಮಯಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಹೊಸ ಯಶಸ್ವಿನಿ ಕಾರ್ಡ್ ಮಾಡಿಸಲು ಮತ್ತೆ ಅವಕಾಶ; ಈ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ!

ಹೊಸ ರೇಷನ್ ಕಾರ್ಡ್ ವಿಲೇವಾರಿ ಯಾವಾಗ!

ಕಳೆದ ಎರಡುವರೆ ವರ್ಷಗಳಿಂದ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿರುವ ಅರ್ಜಿಗಳನ್ನು ವಿಲೇವಾರಿ ಮಾಡಿಲ್ಲ ಸರ್ಕಾರ! ಹಾಗಾಗಿ ಈ ಬಗ್ಗೆ ಈಗ ಮಾಹಿತಿ ನೀಡಲಾಗಿದ್ದು ಸದ್ಯದಲ್ಲಿಯೇ ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.

opportunity to apply for new ration card, Here is the Details

Our Whatsapp Channel is Live Now 👇

Whatsapp Channel

Related Stories