ಆಸ್ತಿ, ಜಮೀನು ಖರೀದಿ ಮಾಡುವವರಿಗೆ ಹೊಸ ನಿಯಮ; ಶುಲ್ಕ ಇನ್ನಷ್ಟು ಹೆಚ್ಚಳ!

ಹೊಸದಾಗಿ ಆಸ್ತಿ ಖರೀದಿ (Buy Property) ಮಾಡುವವರು ನೋಂದಣಿ (Property registration) ಸಮಯದಲ್ಲಿ ಮೊದಲಿಗಿಂತ ಹೆಚ್ಚಿನ ಸ್ಟ್ಯಾಂಪ್ ಡ್ಯೂಟಿ ಶುಲ್ಕ (stump duty fee) ಪಾವತಿ ಮಾಡಬೇಕು.

Bengaluru, Karnataka, India
Edited By: Satish Raj Goravigere

ರಾಜ್ಯ ಸರ್ಕಾರ (State government) ನೀಡಿರುವ ಉಚಿತ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುತ್ತಿರುವ ಜನರಿಗೆ ಈಗ ರಾಜ್ಯ ಸರ್ಕಾರದ ಕೆಲವು ಹೊಸ ನಿಯಮಗಳು ದೊಡ್ಡ ಹೊಡೆತ ಕೊಡಲಿದೆ ಎನ್ನಬಹುದು.

ಯಾಕಂದ್ರೆ ಕೆಲವು ನಿಯಮಗಳನ್ನು ಬದಲಾವಣೆ ಮಾಡಿರುವ ರಾಜ್ಯ ಸರ್ಕಾರ ಶುಲ್ಕ ಹೆಚ್ಚಳ ಮಾಡಿದೆ ಇದರಿಂದ ಸಾಕಷ್ಟು ಜನರಿಗೆ ಹೆಚ್ಚುವರಿ ಹಣ ಪಾವತಿ ಮಾಡುವ ಪರಿಸ್ಥಿತಿ ಎದುರಾಗಿದೆ.

Big update for those who have a house in government land

ಸಿಹಿ ಸುದ್ದಿ! ಗೃಹಜ್ಯೋತಿ ಫ್ರೀ ಕರೆಂಟ್; ಬಾಡಿಗೆ ಮನೆಯಲ್ಲಿರುವವರಿಗೆ ಫುಲ್ ಖುಷ್!

ಹೌದು, ಸರ್ಕಾರ, ಬರಿದಾಗುತ್ತಿರುವ ರಾಜ್ಯದ ಬೊಕ್ಕಸಕ್ಕೆ ಹಣ ತುಂಬಿಸಲು ಕೆಲವು ನಿಯಮಗಳ ಬದಲಾವಣೆ ಮಾಡಿದ್ದು ಇದರಿಂದ ಜನರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ. ಹೊಸದಾಗಿ ಆಸ್ತಿ ಖರೀದಿ (Buy Property) ಮಾಡುವವರು ನೋಂದಣಿ (Property registration) ಸಮಯದಲ್ಲಿ ಮೊದಲಿಗಿಂತ ಹೆಚ್ಚಿನ ಸ್ಟ್ಯಾಂಪ್ ಡ್ಯೂಟಿ ಶುಲ್ಕ (stump duty fee) ಅಥವಾ ಮುದ್ರಾಂಕ ಶುಲ್ಕವನ್ನು ಪಾವತಿ ಮಾಡಬೇಕು.

ಹೊಸ ಆಸ್ತಿ ಖರೀದಿ ಮಾಡುವವರಿಗೆ ಹೊಸ ನಿಯಮ! ( New rules for property purchase)

ಈ ಹಿಂದೆ ಉಭಯ ಸದನಗಳಲ್ಲಿ ಮುದ್ರಾಂಕ ಶುಲ್ಕ ಹೆಚ್ಚು ಮಾಡುವ ವಿಚಾರದ ಬಗ್ಗೆ ಚರ್ಚೆ ನಡೆಸಿ ನಂತರ ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು. ಇದೀಗ ರಾಜ್ಯಪಾಲರ ಅಂಕಿತದೊಂದಿಗೆ ಜನರು ಹೊಸದಾಗಿ ಆಸ್ತಿ ಖರೀದಿ ಮಾಡುವಾಗ ಶುಲ್ಕವನ್ನು ಮೊದಲಿಗಿಂತ ಹೆಚ್ಚು ಅವಧಿ ಮಾಡಬೇಕಾಗುತ್ತದೆ. ಹಾಗಾದ್ರೆ ತಿದ್ದುಪಡಿ ಪ್ರಕಾರ ಯಾವ ಆಸ್ತಿ ನೋಂದಣಿ ಮೇಲೆ ಯಾವ ರೀತಿಯ ಶುಲ್ಕ ವಿಧಿಸಲಾಗಿದೆ ಎನ್ನುವುದನ್ನು ನೋಡೋಣ.

ಹೊಸ ಯಶಸ್ವಿನಿ ಕಾರ್ಡ್ ಮಾಡಿಸಲು ಮತ್ತೆ ಅವಕಾಶ; ಈ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ!

Property documents*ದತ್ತು ಪತ್ರಗಳ ಮೇಲಿನ ಮುದ್ರಾಂಕ ಶುಲ್ಕವನ್ನು 500 ರಿಂದ ಸಾವಿರ ರೂಪಾಯಿಗಳಿಗೆ ಹೆಚ್ಚಿಸಿರುವುದಾಗಿ ರಾಜ್ಯ ಪತ್ರ ತಿದ್ದುಪಡಿಯಲ್ಲಿ ತಿಳಿಸಲಾಗಿದೆ.

*ಇನ್ನು ಮುಂದೆ ಅಫಿಡವಿಟ್ ಮಾಡಿಸಲು 20 ರೂಪಾಯಿಗಳ ಬದಲು 100 ಮುದ್ರಾಂಕ ಶುಲ್ಕ ಪಾವತಿಸಬೇಕು.

*ಪವರ್ ಆಫ್ ಅಟಾರ್ನಿ ಶುಲ್ಕ ನೂರು ರೂಪಾಯಿ ಇತ್ತು. ಈಗ 500 ರೂಪಾಯಿಗಳನ್ನು ಪಾವತಿಸಬೇಕು. 5 ಅಥವಾ 10 ಜನರು ಜಂಟಿಯಾಗಿ ಪವರ್ ಆಫ್ ಅಟಾರ್ನಿ ಮಾಡಿಸುವುದಾದರೆ 200 ರೂ. ಗಳಿಂದ 1000 ರೂಪಾಯಿ ಪಾವತಿಸಬೇಕು.

ಫ್ರೀ ಬಸ್ ಸೌಲಭ್ಯದ ಜೊತೆ ಮಹಿಳೆಯರಿಗೆ ಮತ್ತೊಂದು ಬೆನಿಫಿಟ್ ನೀಡಿದ ಸರ್ಕಾರ!

*ನಗರ ಪ್ರದೇಶಗಳಲ್ಲಿ ಆಸ್ತಿ ವಿಭಜನ ಪತ್ರಗಳ ಷೇರಿಗೆ ಸಾವಿರಾರು ರೂಪಾಯಿಗಳ ಬದಲು 5,000ಗಳನ್ನು ಮುದ್ರಾಂಕ ಶುಲ್ಕವಾಗಿ ಪಾವತಿಸಬೇಕು. ನಗರ ಪ್ರದೇಶಗಳಿಂದ ಹೊರಗೆ 500ರ ಬದಲು 3000ಗಳನ್ನು ಷೇರುಗಳ ಮೇಲಿನ ಮುದ್ರಾಂಕ ಶುಲ್ಕವಾಗಿ ನೀಡಬೇಕು. ಕೃಷಿ ಪತ್ರ ವಿಭಜನೆಯ ಪ್ರತಿ ಶೇರು 250 ರೂಪಾಯಿಗಳು ಇದ್ದಿದ್ದು ಈಗ 500 ರೂ. ಆಗಿದೆ.

*ವಿಚ್ಛೇದನ ಪತ್ರಗಳ ಮೇಲಿನ ಸ್ಟ್ಯಾಂಪ್ ಡ್ಯೂಟಿ ಶುಲ್ಕ ಕೂಡ ಜಾಸ್ತಿ ಆಗಿದ್ದು 100 ರೂ. 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಇದರ ಹೊರತಾಗಿ ಇನ್ನಷ್ಟು ಆಸ್ತಿ ಪತ್ರಗಳ ನೋಂದಣಿ ಮಾಡಿಸಿಕೊಳ್ಳಲು ಇನ್ನು ಮುಂದೆ ಹೆಚ್ಚಿನ ಮುದ್ರಾಂಕ ಶುಲ್ಕವನ್ನು ಪಾವತಿಸಬೇಕು.

New rules for property, land buyers