ಹೊಸ ಯಶಸ್ವಿನಿ ಕಾರ್ಡ್ ಮಾಡಿಸಲು ಮತ್ತೆ ಅವಕಾಶ; ಈ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ!
ಪ್ರತಿ ಗ್ರಾಮದಲ್ಲಿರುವ ಸಹಕಾರಿ ಸಂಘದ ಸದಸ್ಯರ ಆರೋಗ್ಯ ರಕ್ಷಣೆಗಾಗಿ ಯಶಸ್ವಿನಿ ಕಾರ್ಡ್ (yashaswini card) ಅನ್ನು ರಾಜ್ಯ ಸರ್ಕಾರ (state government) ವಿತರಣೆ ಮಾಡಿದೆ. ಈ ಮೂಲಕ ಉಚಿತವಾಗಿ ಉತ್ತಮ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಸಹಕಾರಿ ಸಂಘ (cooperative society) ಅಥವಾ ಸ್ವ ಸಹಾಯ ಗುಂಪಿನಲ್ಲಿ ಇರುವ ಕುಟುಂಬದ ಒಬ್ಬ ಸದಸ್ಯರು ಗರಿಷ್ಠ ಐದು ಲಕ್ಷ ರೂಪಾಯಿಗಳ ವೈದ್ಯಕೀಯ ವೆಚ್ಚ (medical expenses) ವನ್ನು ಭರಿಸುತ್ತದೆ.
ಈ ಕಾರ್ಡ್ ನಿಮ್ಮ ಬಳಿ ಇದ್ರೆ ಸಿಗುತ್ತೆ ಸರ್ಕಾರದ ಎಲ್ಲಾ ಸೌಲಭ್ಯ; ತಕ್ಷಣ ಅಪ್ಲೈ ಮಾಡಿ!
ಈಗ ಹೊಸದಾಗಿ ಯಶಸ್ವಿನಿ ಕಾರ್ಡ್ ಪಡೆದುಕೊಳ್ಳಲು ಬಯಸಿದರೆ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ. ಜೊತೆಗೆ ಈಗಾಗಲೇ ನೀವು ಯಶಸ್ವಿನಿ ಕಾರ್ಡ್ ಹೊಂದಿದ್ದರೆ ಅದನ್ನ ರಿನಿವಲ್ ಕೂಡ ಮಾಡಿಸಿಕೊಳ್ಳಬಹುದು. ಹಾಗಾದ್ರೆ ಅರ್ಜಿ ಸಲ್ಲಿಸುವುದು ಹೇಗೆ ಬೇಕಾಗಿರುವ ದಾಖಲೆಗಳು ಯಾವುವು ನೋಡೋಣ.
ಯಶಸ್ವಿನಿ ಕಾರ್ಡ್ ಪಡೆದುಕೊಳ್ಳಲು ಯಾರು ಅರ್ಹರು? (Eligibilities)
ಯಾವುದೇ ಸಹಕಾರಿ ಅಥವಾ ಸ್ವ ಸಹಾಯ ಸಂಘಗಳ ಸದಸ್ಯರಾಗಿರಬೇಕು.
ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ 1959 ರ ಅಡಿಯಲ್ಲಿ ನೋಂದಣಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಸಂಘಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು ಹಾಗೂ 30,000ಗಳಿಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಫ್ರೀ ಬಸ್ ಸೌಲಭ್ಯದ ಜೊತೆ ಮಹಿಳೆಯರಿಗೆ ಮತ್ತೊಂದು ಬೆನಿಫಿಟ್ ನೀಡಿದ ಸರ್ಕಾರ!
ಯಶಸ್ವಿನಿ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹಾಗೂ ರಿನಿವಲ್ ಮಾಡಲು ಬೇಕಾಗಿರುವ ದಾಖಲೆಗಳು! (Needed Documents)
*ಸಹಕಾರಿ ಸಂಘದಲ್ಲಿ ಸದಸ್ಯರಾಗಿದ್ದರೆ ಅದರ ಐಡಿ ಕಾರ್ಡ್ ಒದಗಿಸಬೇಕು.
*ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
*ಕುಟುಂಬದ ಎಲ್ಲಾ ಸದಸ್ಯರ ಪಾಸ್ಪೋರ್ಟ್ ಅಳತೆಯ ಫೋಟೋ
*ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೆ ಜಾತಿ ಪ್ರಮಾಣ ಪತ್ರ.
*ಕುಟುಂಬದ ಆದಾಯ ಪ್ರಮಾಣ ಪತ್ರ
*ನಿವಾಸ ಅಥವಾ ವಿಳಾಸದ ಪುರಾವೆ
*ಮೊಬೈಲ್ ಸಂಖ್ಯೆ (ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಬೇಕು)
ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಟ್ವಿಸ್ಟ್; ಹಣ ಪಡೆಯೋಕೆ ಮತ್ತೊಂದು ರೂಲ್ಸ್
ಯಶಸ್ವಿನಿ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವುದು ಹೇಗೆ? (How to apply)
ನೀವು ಯಾವ ಸಹಕಾರಿ ಸಂಘದ ಸದಸ್ಯರಾಗಿರುತ್ತೀರೋ, ಅಲ್ಲಿಯೇ ಯಶಸ್ವಿನಿ ಕಾರ್ಡ್ಗಾಗಿ ನೋಂದಾಯಿಸಿಕೊಳ್ಳಬಹುದು. ಹಾಗೂ ವಾರ್ಷಿಕವಾಗಿ ರಿನಿವಲ್ ಮಾಡಿಕೊಳ್ಳಲು ಕೂಡ ಅವಕಾಶ ಇರುತ್ತದೆ.
ಈ ರೇಷನ್ ಕಾರ್ಡ್ ಇದ್ದೋರಿಗೆ ಇನ್ಮುಂದೆ ಸಿಗಲಿದೆ ಇನ್ನಷ್ಟು ಬೆನಿಫಿಟ್! ಇಲ್ಲಿದೆ ಮಾಹಿತಿ
ಯಶಸ್ವಿನಿ ಕಾರ್ಡ್ ನ ಪಾವತಿ ಶುಲ್ಕ!
ಗ್ರಾಮೀಣ ಸ್ವ ಸಹಾಯ ಸಂಘ ಅಥವಾ ಸಹಕಾರಿ ಸಂಘಗಳ ಸದಸ್ಯರು ಮನೆಯಲ್ಲಿ ನಾಲ್ಕು ಸದಸ್ಯರಿದ್ದಾರೆ 500 ವಾರ್ಷಿಕ ಶುಲ್ಕ ಪಾವತಿಸಬೇಕು. ನಾಲ್ಕಕ್ಕಿಂತ ಹೆಚ್ಚು ಜನ ಇದ್ದರೆ 20% ನಷ್ಟು ವಾರ್ಷಿಕ ಶುಲ್ಕವನ್ನು ಹೆಚ್ಚುವರಿಯಾಗಿ ಪಾವತಿಸಬೇಕು. ಅಂದರೆ ಪ್ರತಿ ಸದಸ್ಯರಿಗೆ 100 ರೂಪಾಯಿಗಳಷ್ಟು ಶುಲ್ಕ ಇರುತ್ತದೆ.
ಇನ್ನು ನಗರ ಭಾಗದಲ್ಲಿ ಆದರೆ ನಾಲ್ಕಕ್ಕಿಂತ ಹೆಚ್ಚು ಸದಸ್ಯರಿದ್ದರೆ ಪ್ರತಿ ಸದಸ್ಯರಿಗೆ 200 ರೂಪಾಯಿಗಳು ಹಾಗೂ ವಾರ್ಷಿಕವಾಗಿ ಸಾವಿರ ರೂಪಾಯಿಗಳ ಶುಲ್ಕ ಪಾವತಿಸಬೇಕು. ಇನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಥವಾ ಇತರ ಹಿಂದುಳಿದ ವರ್ಗದ ಜನರ ಶುಲ್ಕವನ್ನು ಸರ್ಕಾರವೇ ಪಾವತಿ ಮಾಡುತ್ತದೆ.
ಯಶಸ್ವಿನಿ ಕಾರ್ಡ್ ಹೊಂದಿರುವವರು ಹತ್ತಿರದ ಯಾವ ಆಸ್ಪತ್ರೆಗಳಲ್ಲಿ ಅನಿವಾರ್ಯ ಸಂದರ್ಭದಲ್ಲಿ ಚಿಕಿತ್ಸೆ ಅಥವಾ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬಹುದು ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳಲು https://sahakarasindhu.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
Apply for new Yashaswini card, Get these documents ready