ಈ ರೇಷನ್ ಕಾರ್ಡ್ ಇದ್ದೋರಿಗೆ ಇನ್ಮುಂದೆ ಸಿಗಲಿದೆ ಇನ್ನಷ್ಟು ಬೆನಿಫಿಟ್! ಇಲ್ಲಿದೆ ಮಾಹಿತಿ

ದೇಶದಲ್ಲಿ ವಾಸಿಸುವ ಬಡವರ್ಗದ ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಕೇಂದ್ರ ಸರ್ಕಾರ (Central government) ಪರಿಚಯಿಸುತ್ತದೆ. ರಾಜ್ಯ ಸರ್ಕಾರ ಈ ಯೋಜನೆಗಳನ್ನು ರಾಜ್ಯದ ಜನತೆಗೆ ತಲುಪಿಸುವ ಕೆಲಸ ಮಾಡುತ್ತದೆ
ಹೀಗೆ ಕೇಂದ್ರ ಸರ್ಕಾರದಿಂದ ಅನುಮೋದನೆಗೊಂಡ ಹಾಗೂ ರಾಜ್ಯ ಸರ್ಕಾರ (State government) ದಿಂದ ಜನರಿಗೆ ಲಭ್ಯವಾಗುತ್ತಿರುವ ಯೋಜನೆಗಳಲ್ಲಿ ಪಡಿತರ ಚೀಟಿ ವಿತರಣೆ ಕೂಡ ಒಂದು.
ದೇಶದಲ್ಲಿ ವಾಸಿಸುವ ಅದೆಷ್ಟೋ ಜನ ಇಂದು ಪಡಿತರ ಚೀಟಿ (Ration card) ಹೊಂದಿರುವ ಕಾರಣಕ್ಕೆ ಉಚಿತವಾಗಿ ಅಥವಾ ಅತಿ ಕಡಿಮೆ ಬೆಲೆಗೆ ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.
ಕೇಂದ್ರ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ವಿತರಣೆ; ಈಗಲೇ ಅರ್ಜಿ ಸಲ್ಲಿಸಿ
ಅಂತ್ಯೋದಯ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ, ಯಾವುದೇ ಸ್ಥಿರ ಆದಾಯ ಹೊಂದಿರದೆ ಇರುವ ಕುಟುಂಬಗಳಿಗೆ ಅಂತ್ಯೋದಯ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಈ ಕಾರ್ಡ್ ಹೊಂದಿರುವ ಕುಟುಂಬಗಳು ಅಕ್ಕಿಯ ಜೊತೆಗೆ ಇತರ ಪಡಿತರ ವಸ್ತುಗಳನ್ನು ಕೂಡ ಉಚಿತವಾಗಿ ಪಡೆದುಕೊಳ್ಳಲು ಸಾಧ್ಯವಿದೆ.
ಮುಂದುವರೆಯಲಿದೆ ಕೇಂದ್ರ ಸರ್ಕಾರದ ಈ ಯೋಜನೆ!
ಕಳೆದ ಎರಡು ವರ್ಷಗಳಿಂದ ಅಂತ್ಯೋದಯ ಕಾರ್ಡ್ (Antyodaya card) ಹೊಂದಿರುವವರಿಗೆ ವಿಶೇಷ ಸೌಲಭ್ಯ ನೀಡಿರುವ ಕೇಂದ್ರ ಸರ್ಕಾರ ಈ ಯೋಜನೆಯನ್ನು ಮುಂದುವರೆಸಲು ನಿರ್ಧರಿಸಿದೆ. ಅಂತ್ಯೋದಯ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಂಗವಿಕಲರು ಪ್ರಯೋಜನ ಪಡೆಯಬಹುದು ಜೊತೆಗೆ ಯಾವುದೇ ಶಾಶ್ವತ ಆದಾಯ ಇಲ್ಲದ ಹಾಗೂ 60 ವರ್ಷ ಮೇಲ್ಪಟ್ಟವರು ಕೂಡ ಈ ಪಡಿತರ ಚೀಟಿ ಪಡೆಯಬಹುದಾಗಿದೆ.
ಅಂತ್ಯೋದಯ ಕಾರ್ಡ್ ಗುಲಾಬಿ ಬಣ್ಣದಲ್ಲಿ ಇದ್ದು, ಇದರ ಮೂಲಕ ಅರ್ಹರನ್ನು ಗುರುತಿಸಲಾಗುತ್ತದೆ. ದೇಶದಲ್ಲಿ 1.89 ಕೋಟಿ ಕುಟುಂಬಗಳು ಅಂತ್ಯೋದಯ ಕಾರ್ಡ್ ಹೊಂದಿದ್ದಾರೆ. ಈ ಕಾರ್ಡ್ ಹೊಂದಿರುವವರು ಉಚಿತ ಅಕ್ಕಿಯ ಜೊತೆಗೆ ಗೋಧಿ ಸಕ್ಕರೆ ಮತ್ತಿತರ ಪಡಿತರ ವಸ್ತುಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ.
ಬೆಂಗಳೂರಿನ ಈ ಏರಿಯಾಗಳಲ್ಲಿ ಸಿಗುತ್ತೆ ಕಡಿಮೆ ಬಾಡಿಗೆಯಲ್ಲಿ ಬಾಡಿಗೆ ಮನೆಗಳು
ಅಂತ್ಯೋದಯ ಕಾರ್ಡ್ ಯಾರಿಗೆ ಮೀಸಲು?
*ಭೂ ರಹಿತ ಕಾರ್ಮಿಕರು
*ಸಣ್ಣ ರೈತರು
*ಪೌರ ಕಾರ್ಮಿಕರು
*ಆಟೋ ಚಾಲಕರು
*ಕೊಳಗೇರಿಯಲ್ಲಿ ವಾಸ ಮಾಡುವ ಕುಟುಂಬ ಮುಂತಾದವರು.
*ಯಾವುದೇ ಆದಾಯದ ಮೂಲ ಇಲ್ಲದ 60 ವರ್ಷ ಮೇಲ್ಪಟ್ಟ ವಿಧವಾ ಮಹಿಳೆಯರು
*ವಾರ್ಷಿಕ 20,000 ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿರುವವರು
ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ; ಕಲಿಕಾ ಭಾಗ್ಯ ಯೋಜನೆ
ಅಂತ್ಯೋದಯ ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು! (Needed documents)
ಆಧಾರ್ ಕಾರ್ಡ್
ಪಾಸ್ಪೋರ್ಟ್ ಅಳತೆಯ ಫೋಟೋ
ವಿಳಾಸದ ಪುರಾವೆ
ಆದಾಯ ಪ್ರಮಾಣ
ಜಾತಿ ಪ್ರಮಾಣ ಪತ್ರ.
ಹೆಣ್ಣು ಮಕ್ಕಳಿಗೆ ಸಿಗಲಿದೆ 2 ಲಕ್ಷ ರೂಪಾಯಿ; ಸರ್ಕಾರದ ಈ ಯೋಜನೆ ಬಗ್ಗೆ ತಿಳಿಯಿರಿ!
ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ! (Ration card correction)
ತುರ್ತು ಮೆಡಿಕಲ್ ಎಮರ್ಜೆನ್ಸಿ (medical emergency) ಕಾರಣಕ್ಕಾಗಿ 6 ಮತ್ತು 7 ಫೆಬ್ರವರಿ 2024, ಈ ಎರಡು ದಿನಗಳ ಕಾಲ ಪಡಿತರ ಚೀಟಿ ತಿದ್ದುಪಡಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಅಂದರೆ ಇಂದು ನೀವು ಬೆಳಿಗ್ಗೆ 10:00 ಯಿಂದ ಸಂಜೆ ನಾಲ್ಕು ಗಂಟೆಗಳ ವರೆಗೆ ಹತ್ತಿರದ ಸೇವಾ ಕೇಂದ್ರಕ್ಕೆ ಹೋಗಿ ಅಗತ್ಯ ಇರುವ ತಿದ್ದುಪಡಿಯನ್ನು ನಿಮ್ಮ ರೇಷನ್ ಕಾರ್ಡ್ ನಲ್ಲಿ ಮಾಡಿಸಿಕೊಳ್ಳಬಹುದು.
ಈ ದಿನ ಅಂದರೆ 7ನೇ ತಾರೀಖಿನಂದು, ಉತ್ತರ ಕನ್ನಡ, ಮೈಸೂರು, ಮಂಡ್ಯ, ಹಾವೇರಿ, ಕೊಡಗು, ಗದಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಚಾಮರಾಜನಗರ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಹಾಸನ ಈ ಜಿಲ್ಲೆಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಇದೆ. ಹಾಗೂ ಇತರ ಜಿಲ್ಲೆಗಳಿಗೆ ನಿನ್ನೆ ಅಂದರೆ 6ನೇ ತಾರೀಕಿನಂದು ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು.
ಹೊಸ ಯೋಜನೆ! ಇಂತಹ ಮಹಿಳೆಯರಿಗೆ ಸಿಗಲಿದೆ ಬಡ್ಡಿ ಇಲ್ಲದೆ 5 ಲಕ್ಷಗಳ ಸಾಲ!
Those who have this ration card will get more benefits from now
ಅಂತ್ಯೋದಯ ಕಾರ್ಡ್ ಯಾರಿಗೆ ಮೀಸಲು?



