ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ; ಕಲಿಕಾ ಭಾಗ್ಯ ಯೋಜನೆ

ಕಲಿಕಾ ಭಾಗ್ಯ ಯೋಜನೆ ಜಾರಿಗೆ ತರಲಾಗಿದ್ದು ಈ ಯೋಜನೆಯ ಮೂಲಕ ಮಕ್ಕಳಿಗೆ ವಿದ್ಯಾರ್ಥಿ ವೇತನ (Education scholarship) ನೀಡಲಾಗುವುದು.

ಶಿಕ್ಷಣ (Education) ಎನ್ನುವುದು ಪ್ರತಿಯೊಬ್ಬರ ಹಕ್ಕು. ಇದು ಎಲ್ಲರಿಗೂ ಸರಿಯಾಗಿ ಸಿಗಬೇಕು. ಆದರೆ ದುರದೃಷ್ಟವಶಾತ್ ಎಲ್ಲರೂ ಕೂಡ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಕೆಲವರು ಬಡತನದ ಕಾರಣಕ್ಕೆ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ಇಂಥವರಿಗಾಗಿ ರಾಜ್ಯ ಸರ್ಕಾರ ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ.

ಕಲಿಕಾ ಭಾಗ್ಯ ಯೋಜನೆ (Kalika bhagya Yojana)

ಕರ್ನಾಟಕ ಕಟ್ಟಡ ಮತ್ತು ಇತರ ಕಾರ್ಮಿಕರ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಮಿಕ ಮಕ್ಕಳಿಗೆ (labour’s children) ವಿದ್ಯಾಭ್ಯಾಸ ಒದಗಿಸುವ ಕಲಿಕಾ ಭಾಗ್ಯ ಯೋಜನೆ ಜಾರಿಗೆ ತರಲಾಗಿದ್ದು ಈ ಯೋಜನೆಯ ಮೂಲಕ ಮಕ್ಕಳಿಗೆ ವಿದ್ಯಾರ್ಥಿ ವೇತನ (Education scholarship) ನೀಡಲಾಗುವುದು.

ಅತಿ ಸಣ್ಣ ವಯಸ್ಸಿನಿಂದ ಅಂದರೆ ಆರಂಭಿಕ ಶಿಕ್ಷಣದಿಂದ ಉನ್ನತ ಶಿಕ್ಷಣ ಪಡೆದುಕೊಳ್ಳುವ ವರೆಗೆ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರ ಕುಟುಂಬದ ಮಕ್ಕಳಿಗೆ, ಅಗತ್ಯ ಇರುವ ಆರ್ಥಿಕ ನೆರವು ಒದಗಿಸುವ ಸಲುವಾಗಿ ಈ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದು.

The central government brought a new scholarship scheme for students

ಹೆಣ್ಣು ಮಕ್ಕಳಿಗೆ ಸಿಗಲಿದೆ 2 ಲಕ್ಷ ರೂಪಾಯಿ; ಸರ್ಕಾರದ ಈ ಯೋಜನೆ ಬಗ್ಗೆ ತಿಳಿಯಿರಿ!

ಕಲಿಕಾ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ವಿದ್ಯಾರ್ಥಿಗಳು ಸಂಬಂಧಪಟ್ಟ ಕಚೇರಿಗೆ ಹೋಗಿ ನೇರವಾಗಿ ಅಗತ್ಯ ಇರುವ ದಾಖಲೆ ನೀಡಿ ಅರ್ಜಿ ಸಲ್ಲಿಸಬಹುದು. ಕಟ್ಟಡ ಕೆಲಸದಲ್ಲಿ ತೊಡಗಿಕೊಂಡಿರುವ ಕುಟುಂಬದ ದೃಢಿಕರಣ ಪ್ರಮಾಣ ಪತ್ರ ನೀಡಿ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಪಡೆಯಬಹುದು.

Education scholarshipಎಷ್ಟು ಸ್ಕಾಲರ್ಶಿಪ್ ಹಣ ನಿಗದಿಪಡಿಸಲಾಗಿದೆ ಗೊತ್ತಾ? (Scholarship amount)

ಹೊಸ ಯೋಜನೆ! ಇಂತಹ ಮಹಿಳೆಯರಿಗೆ ಸಿಗಲಿದೆ ಬಡ್ಡಿ ಇಲ್ಲದೆ 5 ಲಕ್ಷಗಳ ಸಾಲ!

ಮೂರರಿಂದ ಐದು ವರ್ಷದ ನರ್ಸರಿ ಮಕ್ಕಳಿಗೆ ವಾರ್ಷಿಕ ರೂ. 5,000
ಒಂದರಿಂದ ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ ರೂಪಾಯಿ 5,000
5ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ರೂಪಾಯಿ 8,000
9 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ರೂಪಾಯಿ 12,000
PUC ವಿದ್ಯಾರ್ಥಿಗಳಿಗೆ ರೂಪಾಯಿ 15,000
ಡಿಪ್ಲೋಮೋ ವಿದ್ಯಾರ್ಥಿಗಳಿಗೆ ರೂಪಾಯಿ 20,000
ಡಿ ಎಡ್ ವಿದ್ಯಾರ್ಥಿಗಳಿಗೆ ರೂ. 25,000
ಬಿ ಎಡ್ ವಿದ್ಯಾರ್ಥಿಗಳಿಗೆ ರೂಪಾಯಿ 35000
ಪದವಿ (ಯಾವುದೇ ಕೋರ್ಸ್) ವಿದ್ಯಾರ್ಥಿಗಳಿಗೆ ರೂ. 25000.
ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರೂಪಾಯಿ 60,000.
IIT, IIM ಮೊದಲಾದ ಕೋರ್ಸ್ ಗಳಿಗೆ ಪಾವತಿಸಲಾಗಿರುವ ಬೋಧನಾ ಶುಲ್ಕವನ್ನು ವಿದ್ಯಾರ್ಥಿವೇತನವಾಗಿ ನೀಡಲಾಗುವುದು.

ಯಾವುದೇ ಬ್ಯಾಂಕ್ ನ ಎಟಿಎಂ ಕಾರ್ಡ್ ಇದ್ದವರಿಗೆ ಬಂಪರ್ ಗುಡ್ ನ್ಯೂಸ್

Such students will get scholarship through Kalika Bhagya Yojana

Related Stories