Kannada News Business News

ಹೊಸ ಯೋಜನೆ! ಇಂತಹ ಮಹಿಳೆಯರಿಗೆ ಸಿಗಲಿದೆ ಬಡ್ಡಿ ಇಲ್ಲದೆ 5 ಲಕ್ಷಗಳ ಸಾಲ!

5 lakh interest free loan for women, Loan scheme of Modi government

Story Highlights

ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಬಡ್ಡಿ ರಹಿತ 5 ಲಕ್ಷ ರೂಪಾಯಿಗಳ ಸಾಲ ಸೌಲಭ್ಯ (Loan) ಪಡೆಯಬಹುದು.

ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಮಹಿಳೆ (women) ತನ್ನ ಸ್ವಂತ ಜೀವನ ಕಟ್ಟಿಕೊಳ್ಳಲು ಅಗತ್ಯ ಇರುವಷ್ಟು ಹಣವನ್ನು ಆಕೆಯೇ ಸಂಪಾದನೆ ಮಾಡಿಕೊಳ್ಳಬೇಕು, ಜೊತೆಗೆ ಆಕೆ ಸ್ವಾವಲಂಬನೆ (independent life) ಯಿಂದ ಜೀವನ ನಡೆಸಬೇಕು ಎನ್ನುವುದು ಸರ್ಕಾರದ ಮೂಲ ಉದ್ದೇಶವಾಗಿದ್ದು, ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಬೇರೆ ಬೇರೆ ಮಹಿಳಾ ಸಬಲೀಕರಣ (women empowerment) ದ ಯೋಜನೆಗಳನ್ನು ಪರಿಚಯಿಸಿದೆ.

ಇತ್ತೀಚಿಗೆ ಅಂದರೆ ಫೆಬ್ರವರಿ 1, 2024 ಮಧ್ಯಂತರ ಕೇಂದ್ರ ಬಜೆಟ್ (Central budget) ಘೋಷಣೆ ಮಾಡಲಾಗಿದೆ, ಈ ಸಂದರ್ಭದಲ್ಲಿ ನಿರ್ಮಲ ಸೀತಾರಾಮನ್ (Nirmala sitaraman) ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಯಾವುದೇ ಬ್ಯಾಂಕ್ ನ ಎಟಿಎಂ ಕಾರ್ಡ್ ಇದ್ದವರಿಗೆ ಬಂಪರ್ ಗುಡ್ ನ್ಯೂಸ್

ಮಹಿಳೆಯರಿಗಾಗಿ ಲಕ್ಪತಿ ದೀದಿ ಯೋಜನೆ (Lakhpati Didi)

ಸ್ವ ಸಹಾಯ ಗುಂಪುಗಳು (self help group) ಹಾಗೂ ಆ ಗುಂಪುಗಳ ಸಹಾಯದಿಂದ ಜೀವನ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಮಹಿಳೆಯರಿಗಾಗಿ ಲಕ್ಪತಿ ದೀದಿ ಯೋಜನೆ ಆರಂಭಗೊಂಡಿದೆ. ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಬಡ್ಡಿ ರಹಿತ 5 ಲಕ್ಷ ರೂಪಾಯಿಗಳ ಸಾಲ ಸೌಲಭ್ಯ (Loan) ಪಡೆಯಬಹುದು.

ಆಧಾರ್ ಕಾರ್ಡ್ ಕುರಿತು ರಾತ್ರೋ-ರಾತ್ರಿ ಮಹತ್ವದ ಬದಲಾವಣೆ! ತಕ್ಷಣ ಈ ಕೆಲಸ ಮಾಡಿ

ಲಕ್ಪತಿ ದೀದಿ ಯೋಜನೆಯ ಪ್ರಯೋಜನೆಗಳು!

Loan Schemeನಮ್ಮ ದೇಶದಲ್ಲಿ ಸುಮಾರು 83 ಲಕ್ಷ ಸ್ವಸಹಾಯ ಸಂಘಗಳು ಇದ್ದು ಇವುಗಳಲ್ಲಿ 9 ಕೋಟಿ ಮಹಿಳೆಯರು ಸದಸ್ಯತ್ವ ಪಡೆದುಕೊಂಡಿದ್ದಾರೆ. ಮಹಿಳೆಯರ ವಾರ್ಷಿಕ ಆದಾಯ ಸಹಜವಾಗಿಯೇ ಕಡಿಮೆ ಇರುತ್ತದೆ. ಆದರೆ ಅದನ್ನು ಕನಿಷ್ಠ ಒಂದು ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಲಕ್ಪತಿ ದೀದಿ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ 5 ಲಕ್ಷ ರೂ. ಗಳ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ಜೊತೆಗೆ ಮಹಿಳೆಯರಿಗೆ ಅಗತ್ಯ ಇರುವ ತರಬೇತಿ (training) ಯನ್ನು ಕೂಡ ಕೊಡಲಾಗುತ್ತದೆ.

ಸರ್ಕಾರದ ಹೊಸ ಯೋಜನೆ; ಇನ್ಮುಂದೆ 300 ಯೂನಿಟ್ ಗಳವರೆಗೆ ಉಚಿತ ವಿದ್ಯುತ್!

ಯಾವುದೇ ಮೇಳಗಳಲ್ಲಿ ಅಥವಾ ಡಿಪಾರ್ಟ್ಮೆಂಟ್ ಸ್ಟೋರ್ ಗಳಲ್ಲಿ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಿ ಆ ಹಣವನ್ನು ಮಹಿಳೆಯರಿಗೆ ಆದಾಯದ ರೂಪದಲ್ಲಿ ಒದಗಿಸಲಾಗುತ್ತದೆ. ಮಹಿಳೆಯರು ಸ್ವಂತ ದುಡಿಮೆ ಮಾಡಿ ಅದರಿಂದ ಸ್ವಾವಲಂಬನೆಯ ಜೀವನ ನಡೆಸಬೇಕು ಎನ್ನುವುದು ಲಕ್ಪತಿ ದೀದಿ ಯೋಜನೆಯ ಉದ್ದೇಶವಾಗಿದೆ. ಈಗಾಗಲೇ ಉತ್ತರ ಭಾರತದಲ್ಲಿ ಮಾತ್ರ ಜಾರಿಯಲ್ಲಿ ಇದ್ದ ಯೋಜನೆ, ದೇಶಾದ್ಯಂತ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

New Scheme, Such women will get a loan of 5 lakhs without interest