ಯಾವುದೇ ಬ್ಯಾಂಕ್ ನ ಎಟಿಎಂ ಕಾರ್ಡ್ ಇದ್ದವರಿಗೆ ಬಂಪರ್ ಗುಡ್ ನ್ಯೂಸ್

ಜೀವವಿಮೆ (Life Insurance) ಅಥವಾ ಅಪಘಾತ ವಿಮೆ ಮಾಡಿಸಿಕೊಳ್ಳುವುದು ಕೂಡ ಭವಿಷ್ಯದ ದೃಷ್ಟಿಯಿಂದ ಅಷ್ಟೇ ಮುಖ್ಯ.

ನಾವು ನಮ್ಮ ಭವಿಷ್ಯದ ದೃಷ್ಟಿಯಿಂದ ಎಷ್ಟು ಹೂಡಿಕೆ (Investment) ಮಾಡುತ್ತೇವೆಯೋ, ಅದೇ ರೀತಿ ಜೀವವಿಮೆ (Life Insurance) ಅಥವಾ ಅಪಘಾತ ವಿಮೆ ಮಾಡಿಸಿಕೊಳ್ಳುವುದು ಕೂಡ ಭವಿಷ್ಯದ ದೃಷ್ಟಿಯಿಂದ ಅಷ್ಟೇ ಮುಖ್ಯ.

ಕೆಲವರು ತಪ್ಪದೇ ಲೈಫ್ ಇನ್ಸೂರೆನ್ಸ್ ಮಾಡಿಸಿಕೊಂಡರೆ ಇನ್ನೂ ಕೆಲವರು ಇದು ಬಹಳ ದುಬಾರಿ ಆಗಿರುವುದರಿಂದ ಪ್ರೀಮಿಯಂ ಪಾವತಿಸುವುದಕ್ಕೆ ರೆಡಿ ಇರುವುದಿಲ್ಲ. ನಿಮಗೆ ಗೊತ್ತಿಲ್ಲದೆ ಇರಬಹುದು, ನೀವು ಒಂದು ರೂಪಾಯಿ ಕೂಡ ಪ್ರೀಮಿಯಂ (premium) ಪಾವತಿ ಮಾಡದೆ ಮೂರು ಕೋಟಿ ರೂಪಾಯಿಗಳವರೆಗೂ ಕೂಡ ಇನ್ಸೂರೆನ್ಸ್ ಪ್ರಯೋಜನ ಪಡೆಯಬಹುದು.

ಆಧಾರ್ ಕಾರ್ಡ್ ಕುರಿತು ರಾತ್ರೋ-ರಾತ್ರಿ ಮಹತ್ವದ ಬದಲಾವಣೆ! ತಕ್ಷಣ ಈ ಕೆಲಸ ಮಾಡಿ

ಯಾವುದೇ ಬ್ಯಾಂಕ್ ನ ಎಟಿಎಂ ಕಾರ್ಡ್ ಇದ್ದವರಿಗೆ ಬಂಪರ್ ಗುಡ್ ನ್ಯೂಸ್ - Kannada News

ಡೆಬಿಟ್ ಕಾರ್ಡ್ ಇನ್ಶೂರೆನ್ಸ್! (Debit card insurance)

ಹೌದು, ಕೇಳಿದರೆ ನಿಮಗೆ ಆಶ್ಚರ್ಯ ಆಗಬಹುದು ಆದರೆ ಇದು ಸತ್ಯ. ನಾವು ಬ್ಯಾಂಕಿಂದ ವ್ಯವಹಾರಕ್ಕೆ ಅಥವಾ ದಿನನಿತ್ಯದ ವ್ಯವಹಾರಕ್ಕೆ ಬಳಸುವ ಎಷ್ಟೋ ವಸ್ತುಗಳು ಇನ್ಸೂರೆನ್ಸ್ ಹೊಂದಿರುತ್ತವೆ. ಅದರ ಪ್ರಯೋಜನವನ್ನು ನಾವು ಅಗತ್ಯ ಸಂದರ್ಭದಲ್ಲಿ ಪಡೆದುಕೊಳ್ಳಬಹುದು. ಉದಾಹರಣೆಗೆ ನಿಮ್ಮ ಬಳಿ ಎಟಿಎಂ ಕಾರ್ಡ್ ಇದ್ರೆ ಅದಕ್ಕೆ 3 ಕೋಟಿ ರೂಪಾಯಿಗಳ ಹೊರಗೂ ಕೂಡ ಇನ್ಸೂರೆನ್ಸ್ ನೀಡಲಾಗುತ್ತದೆ ಇದಕ್ಕೆ ನೀವು ಒಂದೇ ಒಂದು ರೂಪಾಯಿಗಳ ಪ್ರೀಮಿಯಂ ಪಾವತಿ ಮಾಡಬೇಕಾಗಿಲ್ಲ .

ವಿಮಾ ಮೊತ್ತ ಬ್ಯಾಂಕಿನಿಂದ ಬ್ಯಾಂಕ್ ಗೆ ಬೇರೆ ಆಗಿರುತ್ತದೆ!

ನೀವು ಯಾವುದೇ ಬ್ಯಾಂಕ್ ನ (Bank) ಎಟಿಎಂ ಕಾರ್ಡ್ (ATM Card) ಬಳಕೆ ಮಾಡುತ್ತಿದ್ದರೆ ಆ ಕಾರ್ಡ್ ನಲ್ಲಿ ನಿಮಗೆ ಅಪಘಾತ ವಿಮೆ ರಕ್ಷಣೆಯನ್ನು ನೀಡಲಾಗುತ್ತದೆ. ಇದರ ಬಗ್ಗೆ ಎಷ್ಟೋ ಬ್ಯಾಂಕುಗಳು ಗ್ರಾಹಕರಿಗೆ ತಿಳಿಸುವುದಿಲ್ಲ. ಹಾಗಾಗಿ ಅಪಘಾತದ ಸಂದರ್ಭದಲ್ಲೂ ಕೂಡ ಗ್ರಾಹಕರು ವಿಮೆ ಕ್ಲೈಮ್ ಮಾಡುವುದನ್ನು ಸಾಧ್ಯವಾಗುವುದಿಲ್ಲ. ಇದೀಗ ನಾವು ಲೇಖನದ ಮೂಲಕ ಎ ಟಿ ಎಂ (ಎಟಿಎಂ) ನ ಸುರಕ್ಷಿತ ವಿಮೆ ಬಗ್ಗೆ ತಿಳಿಸಿ ಕೊಡುತ್ತೇವೆ.

ಸರ್ಕಾರದ ಹೊಸ ಯೋಜನೆ; ಇನ್ಮುಂದೆ 300 ಯೂನಿಟ್ ಗಳವರೆಗೆ ಉಚಿತ ವಿದ್ಯುತ್!

Life insurance Policies
Image Source: Mint

ಯಾವಾಗ ಎಟಿಎಂ ಇನ್ಸೂರೆನ್ಸ್ ಲಭ್ಯವಾಗುತ್ತೆ ಗೊತ್ತಾ?

ನೀವು ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಅದಕ್ಕೆ ಅಪಘಾತ ಇರುತ್ತದೆ ಆದರೆ ಇದಕ್ಕೆ ನೀವು ಕೆಲವು ಬ್ಯಾಂಕಿನ ನಿಯಮಗಳನ್ನು ಪಾಲನೆ ಮಾಡಬೇಕು. ನೀವು ಯಾವುದೇ ಎಟಿಎಂ ಕಾರ್ಡ್ ಬಳಕೆ ಮಾಡುತ್ತಿದ್ದರೆ ಪ್ರತಿ ತಿಂಗಳಿಗೆ 500 ರೂಪಾಯಿಗಳ ಎರಡು ವಹಿವಾಟನ್ನಾದರೂ ಮಾಡಬೇಕು.

HDFC ಯ ಮಿಲಿನಿಯ ಕಾರ್ಡ್ ನೀವು ಹೊಂದಿದ್ದರೆ ದೇಶಿಯ ಪ್ರಯಾಣಕ್ಕೆ 5 ಲಕ್ಷ ಹಾಗೂ ವಿದೇಶಿ ಪ್ರಯಾಣಕ್ಕೆ ಒಂದು ಕೋಟಿ ರೂಪಾಯಿಗಳ ವರೆಗೆ ಅಪಘಾತ ವಿಮೆ ಪಡೆಯಬಹುದು. ಆದರೆ ನೀವು ಪ್ರತಿ ತಿಂಗಳು ಕನಿಷ್ಠ ಒಂದು ಬಾರಿಯಾದರೂ ಹಣಕಾಸಿನ ವಹಿವಾಟು ನಡೆಸಬೇಕು. ಇನ್ಫಿನಿಟಿ ಕಾರ್ಡ್ ಹೊಂದಿದ್ದರೆ 90 ದಿನಗಳ ಅವಧಿಯಲ್ಲಿ ಕನಿಷ್ಠ ಒಂದು ಬಾರಿ ಹಣಕಾಸು ವ್ಯವಹಾರ ಮಾಡಿರಬೇಕು.

ಪೋಸ್ಟ್ ಆಫೀಸ್ ಸ್ಕೀಮ್! ಸ್ವಲ್ಪ ಹೂಡಿಕೆ ಮಾಡಿ ಸಾಕು ಲಕ್ಷ ಲಕ್ಷ ಆದಾಯ ಗಳಿಸಿ

ಯುಪಿಐ ಪೇಮೆಂಟ್ ಗೆ ಇನ್ಸೂರೆನ್ಸ್ ಇಲ್ಲ! (No insurance for UPI transaction)

ವರದಿಯ ಪ್ರಕಾರ ಯುಪಿಐ ಮೂಲಕ ವಹಿವಾಟು ನಡೆಸಿದರೆ ವಿಮಾ ಸೌಲಭ್ಯ ನೀಡಲಾಗುವುದಿಲ್ಲ. ಆನ್ಲೈನ್ ಮೂಲಕ ಇ -ಪ್ಲ್ಯಾಟ್ ಫಾರ್ಮ್ ವೇದಿಕೆಯಲ್ಲಿ ವಹಿವಾಟು ನಡೆಸಿದರೆ ವೀಣಾ ಸೌಲಭ್ಯ ನೀಡಲಾಗುವುದು. ಬೇರೆ ಬೇರೆ ಬ್ಯಾಂಕ್ಗಳಲ್ಲಿ ಈ ಜೀವ ವಿಮೆ ಅಥವಾ ಅಪಘಾತದ ವಿಮೆ ಮೊತ್ತ ಹಾಗೂ ನಿಯಮಗಳು ಕೂಡ ವಿಭಿನ್ನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಬ್ಯಾಂಕ್ ಶಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಅಥವಾ ನೇರವಾಗಿ ಬ್ಯಾಂಕಿಗೆ ಹೋಗಿ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಳ್ಳಬಹುದು.

ಸರ್ಕಾರದಿಂದಲೇ ಪಡೆಯಿರಿ 50,000 ಸಾಲ; ಯಾವ ಅಡಮಾನವು ಕೊಡಬೇಕಿಲ್ಲ!

Bumper good news for ATM card holders of any bank

Follow us On

FaceBook Google News

Bumper good news for ATM card holders of any bank