ಸರ್ಕಾರದಿಂದಲೇ ಪಡೆಯಿರಿ 50,000 ಸಾಲ; ಯಾವ ಅಡಮಾನವು ಕೊಡಬೇಕಿಲ್ಲ!
ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯ ಅಡಿಯಲ್ಲಿ 60,03,816 ವ್ಯಾಪಾರಿಗಳು ಸಾಲ ಸೌಲಭ್ಯ (Loan) ಪಡೆದುಕೊಂಡಿದ್ದಾರೆ.
2020 ರ Covid 19 ಸಮಯ ಎಲ್ಲರಿಗೂ ಚೆನ್ನಾಗಿ ನೆನಪಿರಬಹುದು. ಈ ಸಂದರ್ಭದಲ್ಲಿ ಸಾವು ನೋವುಗಳ ಜೊತೆಗೆ ಅತಿ ಹೆಚ್ಚಿನ ಪರಿಣಾಮ ಬೀರಿದ್ದು ಬೀದಿ ಬೀದಿಗಳಲ್ಲಿ ವ್ಯಾಪಾರ (Street vendors) ಮಾಡಿಕೊಂಡಿದ್ದ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ.
ಅಂತವರು ಸಂಪೂರ್ಣವಾಗಿ ತಮ್ಮ ದುಡಿಮೆಯನ್ನು ಕಳೆದುಕೊಳ್ಳುವಂತೆ ಆಗಿತ್ತು. ಅಂತಹ ಬೀದಿ ಬದಿಯ ವ್ಯಾಪಾರಿಗಳ ಸ್ವಾವಲಂಬನೆಯ ಬದುಕನ್ನು ಮತ್ತೆ ಕಟ್ಟಿಕೊಡುವ ಸಲುವಾಗಿ, ಪ್ರಧಾನ ಮಂತ್ರಿ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ್ ನಿಧಿ (PM Street vendors Vendors Atmanirbhar Nidhi scheme) ಯೋಜನೆಯನ್ನು ಆರಂಭಿಸಲಾಯಿತು.
60 ವರ್ಷ ಮೇಲ್ಪಟ್ಟವರಿಗೆ ಬಿಗ್ ಅಪ್ಡೇಟ್! ಸಿಗಲಿದೆ ಫಿಕ್ಸೆಡ್ ಡೆಪಾಸಿಟ್ ಮೇಲೆ ಹೆಚ್ಚು ಬಡ್ಡಿ
ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ (PM SVANidhi schem)
ಇಡಿ ಬದಿಯ ವ್ಯಾಪಾರಸ್ಥರಿಗೆ 50,000 ವರೆಗೆ ಯಾವುದೇ ಗ್ಯಾರೆಂಟಿ ಹಾಗೂ ಇಲ್ಲದೆ ಸಾಲ ಸೌಲಭ್ಯ (Loan) ನೀಡಬಹುದಾದ ಯೋಜನೆ ಇದಾಗಿದೆ. ಆರಂಭಿಕ ಹಂತದಲ್ಲಿ 10,000ಗಳನ್ನು ಸಾಲವಾಗಿ ಪಡೆಯಬಹುದು. ಈ ಹಣವನ್ನು ಮರುಪಾವತಿ ಮಾಡಿದ ನಂತರ ಮತ್ತೆ 20,000 ಪಡೆಯಬಹುದು. ಹಣವನ್ನು ಹಿಂತಿರುಗಿಸಿದ ನಂತರ 50000 ವರೆಗೆ ಸಾಲ (Loan) ಪಡೆದುಕೊಳ್ಳಲು ಅವಕಾಶವಿದೆ.
ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯ ಅಡಿಯಲ್ಲಿ 60,03,816 ವ್ಯಾಪಾರಿಗಳು ಸಾಲ ಸೌಲಭ್ಯ (Loan) ಪಡೆದುಕೊಂಡಿದ್ದಾರೆ. ಸಾಮಾನ್ಯವಾಗಿ ಬೀದಿ ಬದಿಯ ವ್ಯಾಪಾರಿಗಳು ತಮ್ಮ ದೈನಂದಿನ ಬಂಡವಾಳಕ್ಕಾಗಿ ಫೈನಾನ್ಸ್ ನಲ್ಲಿ ಅಥವಾ ಬಡ್ಡಿಗೆ ಸಾಲ ನೀಡುವವರ ಬಳಿ ಹಣ ಪಡೆದುಕೊಳ್ಳುತ್ತಾರೆ. ಇದರ ಬಡ್ಡಿದರ ಸಿಕ್ಕಾಪಟ್ಟೆ ಜಾಸ್ತಿ ಇರುವ ಹಿನ್ನೆಲೆಯಲ್ಲಿ ದುಡಿದ ಹಣವನ್ನೆಲ್ಲ ಬಡ್ಡಿಗೆ ಕಟ್ಟಬೇಕು. ಇದೇ ಕಾರಣಕ್ಕೆ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ ಜಾರಿಗೆ ತರಲಾಗಿದ್ದು, ಸರ್ಕಾರದಿಂದಲೇ ಗ್ಯಾರಂಟಿ ಸಾಲವನ್ನು ಪಡೆದುಕೊಂಡು ವ್ಯಾಪಾರ ಮಾಡಬಹುದು.
ಕೋಳಿ ಫಾರ್ಮ್ ಮಾಡೋರಿಗೆ ಸರ್ಕಾರದಿಂದಲೇ ಸಿಗಲಿದೆ 25 ಲಕ್ಷ! ಅರ್ಜಿ ಸಲ್ಲಿಸಿ
ಸಾಲ ಮರುಪಾವತಿ ಅವಧಿ!
50,000ಕ್ಕೆ ಕೇವಲ 7% ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. 10,000ಗಳನ್ನು ಸಾಲ ಪಡೆದುಕೊಂಡರೆ, ಒಂದು ವರ್ಷಗಳ ಅವಧಿಯಲ್ಲಿ ಹಿಂತಿರುಗಿಸಬೇಕು. 20 ಅಥವಾ 50 ಸಾವಿರ ರೂಪಾಯಿಗಳ ಸಾಲ ಮರುಪಾವತಿಗೆ ಎರಡು ವರ್ಷಗಳ ಅವಧಿ ಇರುತ್ತದೆ. ತರಕಾರಿ ಮಾರಾಟ ಮಾಡುವವರು, ಹಣ್ಣಿನ ಅಂಗಡಿಯವರು, ಪಾನ್ ಮಾರಾಟ ಮಾಡುವವರು, ಚಮ್ಮಾರರು ಹೀಗೆ ಮೊದಲಾದ ಬೀದಿ ಬದಿಯ ವ್ಯಾಪಾರಿಗಳು ಯೋಜನೆಯ ಪ್ರಯೋಜನ ಪಡೆಯಬಹುದು.
ಯಾರು ಅರ್ಜಿ ಸಲ್ಲಿಸಬಹುದು?
ಸ್ಥಳೀಯ ಆಡಳಿತದ ಸರ್ವೆಯಲ್ಲಿ ಗುರುತಿಸಿಕೊಂಡಿರಬೇಕು ಹಾಗೂ ವ್ಯಾಪಾರದ ID ಹೊಂದಿರಬೇಕು. ಇನ್ನು ಯಾವುದೇ ಸಾರ್ವಜನಿಕ ಖಾಸಗಿ ಬ್ಯಾಂಕ್ ಗಳಲ್ಲಿ, ಕೋ ಆಪರೇಟಿವ್ ಸೊಸೈಟಿಗಳಲ್ಲಿ, ಸಣ್ಣ ಹಣಕಾಸು ಬ್ಯಾಂಕ್ಗಳಲ್ಲಿ, NBFC ಗಳಲ್ಲಿ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯ ಸಾಲ ಸೌಲಭ್ಯ ಪಡೆಯಬಹುದು.
ಜಮೀನು, ಆಸ್ತಿ ಖರೀದಿ ವಿಚಾರದಲ್ಲಿ ಕೇಂದ್ರದಿಂದ ಹೊಸ ರೂಲ್ಸ್ ಜಾರಿ! ಇಲ್ಲಿದೆ ಮಾಹಿತಿ
ಬೇಕಾಗಿರುವ ದಾಖಲೆಗಳು!
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ವಿಳಾಸದ ಪುರಾವೆ
ನರೇಗಾ ಕಾರ್ಡ್
ವ್ಯಾಪಾರದ ಬಗ್ಗೆ ಮಾಹಿತಿ
ಅರ್ಜಿ ಸಲ್ಲಿಸುವುದು ಹೇಗೆ?
ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯ ಅಡಿಯಲ್ಲಿ, ಆಫ್ ಲೈನ್ ಮೂಲಕ ಹಾಗೂ ಆನ್ಲೈನ್ ಮೂಲಕ ಸಾಲ ಪಡೆಯಬಹುದು. ಅಗತ್ಯ ಇರುವ ಎಲ್ಲಾ ದಾಖಲೆಗಳನ್ನು ಹತ್ತಿರದ ಮೇಲೆ ತಿಳಿಸಲಾಗಿರುವ ಬ್ಯಾಂಕ್ ಗಳಿಗೆ ತೆಗೆದುಕೊಂಡು ಹೋಗಿ, ಅರ್ಜಿ ಫಾರ್ಮ್ ಭರ್ತಿ ಮಾಡಿ ಸಾಲ ಪಡೆಯಬಹುದು. ಫಲಾನುಭವಿಗಳಿಗೆ ತಕ್ಷಣವೇ ಸಾಲ ಮಂಜೂರು ಮಾಡಲಾಗುತ್ತದೆ.
ಚಿನ್ನದ ಬೆಲೆ ಸ್ಥಿರ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ಗೋಲ್ಡ್ ರೇಟ್
ಇನ್ನು ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ, https://pmsvanidhi.mohua.gov.in/ ಅಧಿಕೃತ ವೆಬ್ಸೈಟ್ ಗೆ ಹೋಗಿ, ಲಾಗಿನ್ ಆಗಿ. ನಂತರ ನಿಮಗೆ ಬೇಕಾಗಿರುವ ಸಾಲದ ಮೊತ್ತವನ್ನು ಆಯ್ಕೆ ಮಾಡಿ. ಅಗತ್ಯ ಇರುವ ಮಾಹಿತಿ ಮತ್ತು ದಾಖಲೆಗಳನ್ನು ನೀಡಿದ ನಂತರ ನೀವು ಅರ್ಹರಾಗಿದ್ದರೆ ಸಾಲ ಮಂಜೂರಾಗುತ್ತದೆ.
ಹೀಗೆ ಸಣ್ಣ ಪುಟ್ಟ ವ್ಯಾಪಾರಿಗಳು ಕೂಡ ತಮ್ಮ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ ನಿಜಕ್ಕೂ ಸಹಾಯಕಾರಿಯಾಗಿದೆ ಎನ್ನಬಹುದು.
Get 50,000 loan from the government for your own business