ಕೋಳಿ ಫಾರ್ಮ್ ಮಾಡೋರಿಗೆ ಸರ್ಕಾರದಿಂದಲೇ ಸಿಗಲಿದೆ 25 ಲಕ್ಷ! ಅರ್ಜಿ ಸಲ್ಲಿಸಿ
Poultry Farming : ಸ್ವ-ಉದ್ಯೋಗ (Own Business) ಮಾಡುವವರಿಗೆ ಕೋಳಿ ಸಾಕಾಣಿಕೆ (Poultry Farming) ಲಾಭದಾಯದ ಉದ್ಯೋಗವಾಗಿದೆ.
Poultry Farming : ಇಂದಿನ ದಿನದಲ್ಲಿ ಎಲ್ಲರೂ ಕಡಿಮೆ ಎಂದರೂ ಪದವಿಯವರೆಗೆ ಓದಿರುತ್ತಾರೆ. ಆದರೆ ವಿದ್ಯಾಭ್ಯಾಸದ ನಂತರ ಮುಂದೇನು ಮಾಡುವುದು ಹಲವರಿಗೆ ತಿಳಿಯುವುದಿಲ್ಲ.
ಕೆಲವರು ಸರ್ಕಾರಿ ಉದ್ಯೋಗಕ್ಕೆ ಸೇರಿಕೊಂಡರೆ ಇನ್ನು ಕೆಲವರು ಖಾಸಗಿ ಕಂಪನಿಗಳಿಗೆ ಉದ್ಯೋಗಕ್ಕೆ ಸೇರಿಕೊಳ್ಳುತ್ತಾರೆ. ಆದರೆ ವಿದ್ಯಾಭ್ಯಾಸದ ನಂತರ ಸ್ವ-ಉದ್ಯೋಗ ಆರಂಭಿಸುವುದು ಒಳಿತು. ಯಾಕೆಂದರೆ ಆಗ ನಿಮ್ಮ ವಯಸ್ಸು ಸಣ್ಣದಿರುತ್ತದೆ. ಹಾಗಾಗಿ ನೀವು ಜೀವನದಲ್ಲಿ ಬೇಗ ಆರ್ಥಿಕವಾಗಿ ಸಬಲರಾಗಬಹುದು.
ಇನ್ನು ಕೆಲವರು ಖಾಸಗಿ ಕಂಪನಿಗಳಲ್ಲಿ ಉದ್ಯೋಗದಲ್ಲಿ ಬೇಸರಗೊಂಡು ಸ್ವ-ಉದ್ಯೋಗದತ್ತ ವಾಲಿಕೊಳ್ಳುತ್ತಾರೆ. ಹೀಗೆ ಸ್ವ-ಉದ್ಯೋಗ (Own Business) ಮಾಡುವವರಿಗೆ ಕೋಳಿ ಸಾಕಾಣಿಕೆ (Poultry Farming) ಲಾಭದಾಯದ ಉದ್ಯೋಗವಾಗಿದೆ.
ಜಮೀನು, ಆಸ್ತಿ ಖರೀದಿ ವಿಚಾರದಲ್ಲಿ ಕೇಂದ್ರದಿಂದ ಹೊಸ ರೂಲ್ಸ್ ಜಾರಿ! ಇಲ್ಲಿದೆ ಮಾಹಿತಿ
ಈ ಉದ್ಯಮ ಪ್ರಾರಂಭಿಸಲು ಸರ್ಕಾರವು 25 ಲಕ್ಷ ರೂ. ಸಹಾಯಧನ ನೀಡುತ್ತದೆ. ಹಾಗಾದರೆ ಅರ್ಜಿ ಸಲ್ಲಿಸುವುದು ಹೇಗೆ? ಯಾವ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ ಎಂದು ತಿಳಿದುಕೊಳ್ಳೋಣ.
ಸ್ವಂತದ್ದಾಗಿ ಉದ್ಯೋಗ ಪ್ರಾರಂಭಿಸಬೇಕು, ಹೆಚ್ಚಿನ ಲಾಭ ಗಳಿಸಬೇಕು ಎಂದು ಹೇಳುವವರಿಗೆ ಕೋಳಿ ಸಾಕಾಣಿಕೆ ಒಂದು ಒಳ್ಳೆಯ ಲಾಭದಾಯಕ ಉದ್ಯಮ ಎಂದು ಹೇಳಬಹುದು.
ಯಾಕೆಂದರೆ ಈಗ ಹೆಚ್ಚಿನ ಜನರು ಚಿಕನ್ ತಿನ್ನಲು ಇಷ್ಟಪಡುತ್ತಾರೆ. ಹೆಚ್ಚಿನ ಜನರು ವಾರಕ್ಕೆ ಒಂದು ದಿನವಾದರೂ ಕೋಳಿ ಮಾಂಸ ತಿನ್ನಲು ಬಯಸುತ್ತಾರೆ. ಅಷ್ಟೇ ಅಲ್ಲದೆ ಕೋಳಿ ಮೊಟ್ಟೆಗೂ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಹಾಗಾಗಿ ಕೋಳಿ ಸಾಕಾಣಿಕೆ ಒಂದು ಫರ್ಫೆಕ್ಟ್ ಉದ್ಯೋಗ ಎಂದೇ ಹೇಳಬಹುದು.
ನಿಮಗೆ ಕೋಳಿ ಸಾಕಾಣಿಕೆಯಲ್ಲಿ ಇಷ್ಟವಿದ್ದರೆ ನಿಮ್ಮ ಬೆಂಬಲಕ್ಕೆ ಸರ್ಕಾರವೇ ಬರಲಿದೆ. ನೀವು ಹಣ ಇಲ್ಲ ಎಂದು ಬೇಸರಿಸುವುದು ಬೇಡ. ನೀವು ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಮೂಲಕ ಧನ ಸಹಾಯ ಪಡೆದು ಉದ್ಯಮ ಪ್ರಾರಂಭಿಸಬಹುದು.
ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಸಿಹಿ ಸುದ್ದಿ! ಸಬ್ಸಿಡಿ ವಿಚಾರದಲ್ಲಿ ಹೊಸ ಅಪ್ಡೇಟ್
ಕೋಳಿ ಸಾಕಾಣಿಕೆಗೆ ಸರ್ಕಾರ ನೀಡಲಿದೆ 25 ಲಕ್ಷ ರೂ.:
ಜಾನುವಾರು ಅಭಿಯಾನದಡಿಯಲ್ಲಿ ಕೋಳಿ ಸಾಕಾಣಿಕೆ ಮಾಡುವವರಿಗೆ ಶೇ.5೦ರ ಸಹಾಯಧನದಲ್ಲಿ ಸರ್ಕಾರವು ಸಾಲ (Loan) ನೀಡಲಿದೆ. ಇಷ್ಟೇ ಅಲ್ಲದೆ ಕೋಳಿ ಸಾಕಾಣಿಕೆಗೆ ನಬಾರ್ಡ್ನಿಂದ ಸಾಲ (Loan) ಸಹ ದೊರೆಯುತ್ತದೆ. ನೀವು ದೊಡ್ಡ ಪ್ರಮಾಣದಲ್ಲಿ ಕೋಳಿ ಸಾಕಾಣಿಕೆ ಮಾಡಬೇಕು ಎಂದುಕೊಂಡಿದ್ದರೆ ನೀವು ಜಾನುವಾರು ಮಿಷನ್ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ ಶೇ.5೦ರ ಸಹಾಯಧನದಲ್ಲಿ ಸಾಲ ಸಿಗಲಿದೆ.
ಕೋಳಿ ಸಾಕಾಣಿಕೆ ವೆಚ್ಚ ತಗ್ಗಿಸುವ ಉದ್ದೇಶದಿಂದ ಶೇ.೫೦ರ ಸಹಾಯಧನದಲ್ಲಿ ಗರಿಷ್ಟ 25 ಲಕ್ಷ ರೂ.ಗಳ ವರೆಗೆ ಸರ್ಕಾರವು ನಿಮಗೆ ನೀಡಲಿದೆ. ನೀವು ಸಹ ಈ ಯೋಜನೆ ಲಾಭ ಪಡೆದು ಕೋಳಿ ಸಾಕಾಣಿಕೆ ಆರಂಭಿಸಿ ಲಾಭ ಗಳಿಸಬಹುದು. ನೀವು ಆನ್ಲೈನ್ ಮೂಲಕವೂ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಚಿನ್ನದ ಬೆಲೆ ಸ್ಥಿರ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ಗೋಲ್ಡ್ ರೇಟ್
ಅರ್ಜಿ ಸಲ್ಲಿಸುವ ವಿಧಾನ:
ಮೊದಲು ಜಾನುವಾರು ಮಿಷನ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ನಂತರ ಅಲ್ಲಿ ಕೇಳಲಾಗುವ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.
For Poultry farming will get 25 lakhs from the government