Story Highlights
ಯಾರಾದರೂ ಜಮೀನು ಖರೀದಿ (Buy Property) ಮಾಡುವವರಿದ್ದರೆ ಈ ಹೊಸ ನಿಯಮಗಳ ಅರಿವು ನಿಮಗೆ ಇರಬೇಕಾಗುತ್ತದೆ
ದೇಶದಲ್ಲಿ ತಂತ್ರಜ್ಞಾನ ಮುಂದುವರಿದಂತೆ ಅದನ್ನು ಒಳ್ಳೆಯ ಕೆಲಸಕ್ಕೆ ಬಳಸುವವರಿಗಿಂತ ಕೆಟ್ಟ ಕೆಲಸಗಳಿಗೆ, ಇಲ್ಲವೇ ಮೋಸ ಮಾಡಲು ಬಳಕೆ ಮಾಡುವವರೇ ಹೆಚ್ಚಾಗಿದ್ದಾರೆ.
ನಾವು ಈ ವಿಚಾರಗಳನ್ನು ದಿನನಿತ್ಯವೂ ಸಾಮಾಜಿಕ ಜಾಲತಾಣ ಹಾಗೂ ನ್ಯೂಸ್ ಚಾನೆಲ್ಗಳಲ್ಲಿ ನೋಡಿರುತ್ತೇವೆ. ಪತ್ರಿಕೆಗಳಲ್ಲಿ ಓದಿರುತ್ತೇವೆ. ಅದರಲ್ಲೂ ಜಮೀನು ಮಾರಾಟದ (Property Sale) ವಿಚಾರದಲ್ಲಿ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಸಿಹಿ ಸುದ್ದಿ! ಸಬ್ಸಿಡಿ ವಿಚಾರದಲ್ಲಿ ಹೊಸ ಅಪ್ಡೇಟ್
ಇದನ್ನು ತಡೆಯುವ ಸಲುವಾಗಿ ಕೇಂದ್ರ ಸರ್ಕಾರವು ಹೊಸ ನಿಯಮವನ್ನು ಜಾರಿಗೆ ತಂದಿದೆ. ಯಾರಾದರೂ ಜಮೀನು ಖರೀದಿ (Buy Property) ಮಾಡುವವರಿದ್ದರೆ ಈ ಹೊಸ ನಿಯಮಗಳ ಅರಿವು ನಿಮಗೆ ಇರಬೇಕಾಗುತ್ತದೆ. ಹಾಗಾದರೆ ಕೇಂದ್ರ ಸರ್ಕಾರ ಯಾವ ನಿಯಮ ತಂದಿದೆ. ಆ ನಿಯಮದಿಂದ ಆಸ್ತಿ ಕೊಳ್ಳುವವರಿಗೆ ಏನು ಲಾಭ ಈ ವಿಚಾರಗಳ ಕುರಿತ ಮಾಹಿತಿ ಇಲ್ಲಿದೆ.
ಆಸ್ತಿ ಖರೀದಿ ವೇಳೆ ಈ ಕೆಲಸ ಕಡ್ಡಾಯವಾಗಿ ಮಾಡಿ:
ಆಸ್ತಿ ಇಲ್ಲವೇ ಮನೆ ಖರೀದಿ ಮಾಡಿದ ನಂತರ ಅದನ್ನು ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಈ ಕೆಲಸವನ್ನು ಮಾಡಿಯೇ ಮಾಡುತ್ತಾರೆ. ಆದರೆ ಕೇವಲ ಆಸ್ತಿ ನೋಂದಣಿ ಆದ ಮಾತ್ರಕ್ಕೆ ನೀವು ಕೊಂಡುಕೊಂಡ ಆಸ್ತಿಯ ಸಂಪೂರ್ಣ ಹಕ್ಕು ನಿಮಗೆ ಸಿಗುವುದಿಲ್ಲ ಎನ್ನುವುದು ನಿಮ್ಮ ಅರಿವಿನಲ್ಲಿರಬೇಕು.
ಚಿನ್ನದ ಬೆಲೆ ಸ್ಥಿರ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ಗೋಲ್ಡ್ ರೇಟ್
ಜಮೀನು ಇಲ್ಲವೇ ಮನೆ ಮಾರಾಟದ ವಿಚಾರದಲ್ಲಿ ಅನೇಕ ವಂಚನೆಗಳು ನಡೆದಿವೆ. ನೀವು ಕೊಂಡುಕೊಂಡ ಜಮೀನಿನ ಮೇಲೆ ಸಾಲಗಳು (Loan) ಇವೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ಯಾಕೆಂದರೆ ಯಾರು ಸಾಲ (Loan) ಇರುವ ಜಮೀನನ್ನು ಖರೀದಿಸಿರುತ್ತಾನೋ ಆತ ಆ ಸಾಲವನ್ನು ತುಂಬಬೇಕಾಗುತ್ತದೆ. ಇಷ್ಟೇ ಅಲ್ಲದೆ ಆಸ್ತಿ ನೋಂದಣಿ ನಂತರ ಸಾಕಷ್ಟು ದಾಖಲೆಗಳನ್ನು ನೀವು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಇಲ್ಲದೆ ಇದ್ದಲ್ಲಿ ಆಸ್ತಿ ನಿಮ್ಮ ಹೆಸರಿಗೆ ಬದಲಾವಣೆ ಆಗುವುದಿಲ್ಲ.
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟಿದೆ ಹಣ! ಅಷ್ಟಕ್ಕೂ ಲಿಮಿಟ್ ಎಷ್ಟು? ಇಲ್ಲಿದೆ ಮಾಹಿತಿ
ಆಸ್ತಿ ರೂಪಾಂತರ ಪರಿಶೀಲನೆ ಮಾಡಿಕೊಳ್ಳಿ:
ಹೆಚ್ಚಿನ ಜನರು ಸೇಲ್ ಡೀಡ್ ಹಾಗೂ ನೋಂದಣಿ ಒಂದೇ ಎಂದು ಭಾವಿಸಿದ್ದಾರೆ. ಆದರೆ ಅವೆರಡು ಬೇರೆ ಬೇರೆ. ನೀವು ಆಸ್ತಿ ನೋಂದಣಿ ಮಾಡಿದ್ದರೂ ಆ ಆಸ್ತಿಯ ಮೇಲೆ ಸಂಪೂರ್ಣ ಹಕ್ಕು ಪಡೆದುಕೊಂಡಿರುವುದಿಲ್ಲ. ಹಾಗಾಗಿ ಜಮೀನು ಇಲ್ಲವೇ ಸೈಟ್ ಖರೀದಿಸುವ ಮುನ್ನ ಆ ಜಾಗ ಯಾರ ಹೆಸರಿನಲ್ಲಿದೆ? ಆ ಜಾಗದ ಮೇಲೆ ಎಷ್ಟು ಸಾಲ ಮಾಡಲಾಗಿದೆ? ಜಾಗದ ನಿಜವಾದ ಮಾಲೀಕರು ಯಾರು ಎನ್ನುವ ವಿವರಗಳನ್ನು ಮರೆಯದೆ ತಿಳಿದುಕೊಳ್ಳಬೇಕು.
ನಿಮಗೆ ಗಡಿಬಿಡಿ ಎಂದು ಈ ವಿಚಾರಗಳನ್ನು ತಿಳಿದುಕೊಳ್ಳದೆ ಹಣ ನೀಡಿ ನೋಂದಣಿ ಮಾಡಿಸಿಕೊಂಡರೆ ನಂತರ ನೀವು ಮೋಸ ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಸೈಟ್ ಅಥವಾ ಜಮೀನು ಖರೀದಿ ಮಾಡುವ ಮುನ್ನ ನೂರು ಬಾರಿ ಯೋಚಿಸುವುದು ಒಳಿತು.
ಹಣ ಇದೆ ಎನ್ನುವ ಒಂದೇ ಕಾರಣಕ್ಕೆ ತರಾತುರಿಯಲ್ಲಿ ಖರೀದಿ ಮಾಡಿದರೆ ನಂತರ ಮೋಸ ಹೋಗಿ ನೀವೆ ಪಶ್ಚಾತಾಪ ಪಡಬೇಕಾಗುತ್ತದೆ. ನೀವು ಹಣವನ್ನು ಕಷ್ಟಪಟ್ಟು ಗಳಿಸಿರುತ್ತೀರಿ. ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಿ.
ಸ್ವಂತ ಮನೆ ಕಟ್ಟಿಕೊಳ್ಳಲು ಈ 5 ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿಗೆ ಸಿಗುತ್ತಿದೆ ಗೃಹ ಸಾಲ
Implementation of new rules from the center in the matter of land and property purchase