60 ವರ್ಷ ಮೇಲ್ಪಟ್ಟವರಿಗೆ ಬಿಗ್ ಅಪ್ಡೇಟ್! ಸಿಗಲಿದೆ ಫಿಕ್ಸೆಡ್ ಡೆಪಾಸಿಟ್ ಮೇಲೆ ಹೆಚ್ಚು ಬಡ್ಡಿ

Fixed Deposit : ಭವಿಷ್ಯದ ದೃಷ್ಟಿಯಿಂದ ಉತ್ತಮ ಆದಾಯ (income ) ಪಡೆದುಕೊಳ್ಳಲು ಬ್ಯಾಂಕ್ಗಳಲ್ಲಿ ಎಫ್ ಡಿ (Fixed deposit) ಇಡುವುದು ಅತ್ಯುತ್ತಮ ಆಯ್ಕೆ ಆಗಿದೆ. ಅದರಲ್ಲೂ 60 ವರ್ಷ ಮೇಲ್ಪಟ್ಟವರು.. ಅಂದರೆ ಹಿರಿಯ ನಾಗರಿಕರು ಬ್ಯಾಂಕ್ಗಳಲ್ಲಿ ಸ್ಥಿರ ಠೇವಣಿ ಇದ್ದರೆ ಅದಕ್ಕೆ ಅತಿ ಹೆಚ್ಚು ಬಡ್ಡಿ (rate of interest) ನೀಡಲಾಗುತ್ತದೆ. ಹೀಗೆ ಉತ್ತಮ ಬಡ್ಡಿ ನೀಡಬಹುದಾದ ಬ್ಯಾಂಕ್ ಗಳ (Banks) ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ – Unity Small Finance Bank 

ಈ ಬ್ಯಾಂಕ್ ಹಿರಿಯ ನಾಗರಿಕರಿಗೆ ಎಫ್ಡಿ ಹೂಡಿಕೆ ಮಾಡಲು ಅತ್ಯುತ್ತಮ ಬ್ಯಾಂಕ್ ಎನಿಸಿಕೊಂಡಿದೆ. 1001 ದಿನಗಳ ಎಫ್ ಡಿ ಹೂಡಿಕೆ ಮೇಲೆ ಹಿರಿಯ ನಾಗರಿಕರು 9.50% ಬಡ್ಡಿ ಪಡೆಯಬಹುದು.

ಕೋಳಿ ಫಾರ್ಮ್ ಮಾಡೋರಿಗೆ ಸರ್ಕಾರದಿಂದಲೇ ಸಿಗಲಿದೆ 25 ಲಕ್ಷ! ಅರ್ಜಿ ಸಲ್ಲಿಸಿ

ಉತ್ಕರ್ಷ ಸ್ಮಾಲ್ ಫೈನಾನ್ಸ್ ಬ್ಯಾಂಕ್ – Utkarsh Small Finance Bank

ಹಿರಿಯ ನಾಗರಿಕರು ಈ ಫೈನಾನ್ಸ್ ನಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಪಡೆಯಬಹುದಾಗಿದೆ. ಎರಡರಿಂದ ಮೂರು ವರ್ಷಗಳ ಎಫ್ ಡಿ ಮೇಲೆ 9.10% ನಷ್ಟು ಬಡ್ಡಿ ನೀಡಲಾಗುತ್ತದೆ.

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ – Suryodaya Small Finance Bank

ಅತ್ಯಂತ ಜನಪ್ರಿಯ ಬ್ಯಾಂಕ್ ಆಗಿರುವ ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಹಿರಿಯ ನಾಗರಿಕರಿಗೆ ಅತ್ಯುತ್ತಮ ಸೇವೆಗಳನ್ನು ಒದಗಿಸುತ್ತಿದೆ. ಎರಡು ವರ್ಷಕ್ಕಿಂತ ಹೆಚ್ಚು ಹಾಗೂ ಮೂರು ವರ್ಷಗಳ ಅವಧಿಯ ಸ್ಥಿರ ಠೇವಣಿಯ ಮೇಲೆ 9.10% ನಷ್ಟು ಬಡ್ಡಿ ದರವನ್ನು ನಿಗದಿಪಡಿಸಿದೆ.

ಫಿನ್ ಕೇರ್ ಸ್ಮಾಲ್ ಫೈನಾನ್ಸ್ – Fincare Small Finance Bank

ಈ ಫೈನಾನ್ಸ್ ಬ್ಯಾಂಕ್ ಕೂಡ ಹೂಡಿಕೆಗೆ ಅತ್ಯುತ್ತಮ ಆಯ್ಕೆಯಾಗಿದೆ ಇದರಲ್ಲಿ ಹಿರಿಯ ನಾಗರಿಕರು 9.10% ಬಡ್ಡಿ ದರದಲ್ಲಿ ಎರಡು ವರ್ಷದಿಂದ ಮೂರು ವರ್ಷಗಳ ಅವಧಿಗೆ ಎಫ್ ಡಿ ಠೇವಣಿ ಇಡಬಹುದು.

ಜಮೀನು, ಆಸ್ತಿ ಖರೀದಿ ವಿಚಾರದಲ್ಲಿ ಕೇಂದ್ರದಿಂದ ಹೊಸ ರೂಲ್ಸ್ ಜಾರಿ! ಇಲ್ಲಿದೆ ಮಾಹಿತಿ

Fixed Depositಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ – Equitas Small Finance Bank

ಇದು ಒಂದು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆಗಿದ್ದು ಇದರಲ್ಲಿ ಹಿರಿಯ ನಾಗರಿಕರು ಹಾಗೂ ಸಾಮಾನ್ಯ ನಾಗರಿಕರು ಎಫ್ ಡಿ ಇಟ್ಟರೆ ಉತ್ತಮ ಆದಾಯ ಪಡೆಯಬಹುದಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರು 444 ದಿನಗಳ ಸ್ಥಿರ ಠೇವಣಿಗೆ, 9% ನಷ್ಟು ಬಡ್ಡಿಯನ್ನು ಪಡೆದುಕೊಳ್ಳುತ್ತಾರೆ.

ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟಿದೆ ಹಣ! ಅಷ್ಟಕ್ಕೂ ಲಿಮಿಟ್ ಎಷ್ಟು? ಇಲ್ಲಿದೆ ಮಾಹಿತಿ

ಎಸ್ ಎ ಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ – ESAF Small Finance Bank

ಹಿರಿಯ ನಾಗರಿಕರು ಈ ಬ್ಯಾಂಕ್ ನಲ್ಲಿಯೂ ಕೂಡ ಹೂಡಿಕೆ ಮಾಡಬಹುದು. ಇಲ್ಲಿ ಎಫ್ ಡಿ ಹೂಡಿಕೆ ಮಾಡಿದರೆ, ಎರಡರಿಂದ ಮೂರು ವರ್ಷಗಳ ಅವಧಿಗೆ 9% ಬಡ್ಡಿ ದರವನ್ನು ಪಡೆದುಕೊಂಡು ಸ್ಥಿರ ಠೇವಣಿಯ ಮೇಲೆ ಉತ್ತಮ ಆದಾಯ ಗಳಿಸಬಹುದಾಗಿದೆ. ಈ ಎಫ್ ಡಿ ಬಡ್ಡಿದರ ಸಾಮಾನ್ಯ ನಾಗರಿಕರಿಗೆ ಸ್ವಲ್ಪ ಕಡಿಮೆ ಇರುತ್ತದೆ.

ಇವಿಷ್ಟು ರಾಷ್ಟ್ರೀಕೃತ ಅಲ್ಲದ ಬ್ಯಾಂಕ್ಗಳಾಗಿದ್ದು, ಇಲ್ಲಿ ನೀವು ಹೂಡಿಕೆ ಮಾಡಿದರೆ ವಿಶೇಷವಾಗಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹೂಡಿಕೆ ಮಾಡಿದರೆ ಅತ್ಯುತ್ತಮ ಬಡ್ಡಿ ದರದಲ್ಲಿ ಸ್ಥಿರ ಠೇವಣಿಯ ಮೇಲೆ ಉತ್ತಮ ಆದಾಯ ಪಡೆದುಕೊಳ್ಳಬಹುದು. ಯಾವುದೇ ಬ್ಯಾಂಕ್ ನಲ್ಲಿ (Bank) ಹೂಡಿಕೆ ಮಾಡುವುದಕ್ಕೂ ಮೊದಲು ಬ್ಯಾಂಕಿನ ಹಣಕಾಸಿನ ಸ್ಥಿತಿ ಹಾಗೂ ಬ್ಯಾಂಕಿನ ನೀತಿ ನಿಯಮಗಳ ಬಗ್ಗೆ ತಿಳಿದುಕೊಳ್ಳಿ..

ಬೀದಿ ಬದಿ ವ್ಯಾಪಾರಿಗಳಿಗೆ 50 ಸಾವಿರದವರೆಗೆ ಸಾಲ! ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ

Big update for over 60s, You will get more interest on fixed deposit

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories