ಸರ್ಕಾರದ ಹೊಸ ಯೋಜನೆ; ಇನ್ಮುಂದೆ 300 ಯೂನಿಟ್ ಗಳವರೆಗೆ ಉಚಿತ ವಿದ್ಯುತ್!

Story Highlights

ಕೇಂದ್ರ ಸರ್ಕಾರದ ಸೂರ್ಯೋದಯ ಯೋಜನೆ; ಸೋಲಾರ್ ಸಬ್ಸಿಡಿ 60% ಗೆ ಹೆಚ್ಚಳ!

ಕೇಂದ್ರ ಸರ್ಕಾರ ಮಧ್ಯಂತರದ ಬಜೆಟ್ (Central Government budget) ಘೋಷಿಸಿದ್ದು, ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಸಾಕಷ್ಟು ಯೋಜನೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅವುಗಳಲ್ಲಿ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಕೂಡ ಒಂದು.

ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ (Pradhanmantri suryodaya scheme)

ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಈಗಾಗಲೇ ತಿಳಿಸಿರುವಂತೆ ಕೇಂದ್ರ ಸರ್ಕಾರ ಒಂದು ಕೋಟಿಗೂ ಅಧಿಕ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ (solar panel) ಅಳವಡಿಸಲು ಯೋಜನೆ ರೂಪಿಸಿದೆ. ಇದರಿಂದಾಗಿ ಸಾಕಷ್ಟು ಮನೆಗಳು ಇನ್ನು ಮುಂದೆ 300 ಯೂನಿಟ್ ಗಿಂತಲೂ ಅಧಿಕ ವಿದ್ಯುತ್ ಉಚಿತವಾಗಿ ಬಳಸಬಹುದಾಗಿದೆ. ಅಷ್ಟೇ ಅಲ್ಲದೆ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಸರ್ಕಾರದಿಂದ ಸಿಗುತ್ತಿದ್ದ ಸಬ್ಸಿಡಿ ದರವನ್ನು ಇನ್ನಷ್ಟು ಹೆಚ್ಚಿಸಲಾಗಿದೆ.

ಪೋಸ್ಟ್ ಆಫೀಸ್ ಸ್ಕೀಮ್! ಸ್ವಲ್ಪ ಹೂಡಿಕೆ ಮಾಡಿ ಸಾಕು ಲಕ್ಷ ಲಕ್ಷ ಆದಾಯ ಗಳಿಸಿ

ಸಬ್ಸಿಡಿ ಹೆಚ್ಚಳ! (Subsidy increased)

ಮಾನ್ಯ ಇಂಧನ ಸಚಿವ ಆರ್. ಕೆ ಸಿಂಗ್ ಅವರು ಸೋಲಾರ್ ಸಬ್ಸಿಡಿ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಸಬ್ಸಿಡಿ ಯೋಜನೆಯಲ್ಲಿ ಗ್ರಾಹಕರಿಗೆ ನೆರವು ನೀಡುವ ಸಲುವಾಗಿ 300 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ, 60% ನಷ್ಟು ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ.

ಸೋಲಾರ್ ಪ್ಯಾನೆಲ್ ಅಳವಡಿಸಲು ಸರ್ಕಾರದಿಂದ ಬೆಂಬಲ ಇದ್ದರೂ ಕೂಡ ಬ್ಯಾಂಕ್ ಗಳು ಸುಲಭವಾಗಿ ಸಾಲ ಸೌಲಭ್ಯ ನೀಡುವುದಿಲ್ಲ. ಇದರಿಂದಾಗಿ ಸರ್ಕಾರ 40% ನಷ್ಟು ಇದ್ದ ಸಬ್ಸಿಡಿ ದರವನ್ನು 60% ಗೆ ಏರಿಕೆ ಮಾಡಿದೆ.

ಸರ್ಕಾರದಿಂದಲೇ ಪಡೆಯಿರಿ 50,000 ಸಾಲ; ಯಾವ ಅಡಮಾನವು ಕೊಡಬೇಕಿಲ್ಲ!

ಕೇಂದ್ರ ಸರ್ಕಾರ ಸಬ್ಸಿಡಿ ದರವನ್ನು ಏರಿಕೆ ಮಾಡಿರುವುದರಿಂದ ಸಾಕಷ್ಟು ಮನೆಗಳು ಸುಲಭವಾಗಿ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಕೆ ಮಾಡಬಹುದು. ಪ್ರತಿ ರಾಜ್ಯಕ್ಕೆ ನಿಗದಿಪಡಿಸಲಾದ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (CPSEs) ವಿಶೇಷ ಉದ್ದೇಶದ ವಾಹನಗಳ (SPVs) ಮೂಲಕ ಸೋಲಾರ್ ಪ್ಯಾನೆಲ್ ಅಳವಡಿಕೆ ಮಾಡಿಕೊಡಲಿವೆ. SPV ಸ್ಥಾಪಿಸಿ ಸಾಲ ನೀಡುವುದರ ಮೂಲಕ ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡಲಿದೆ. ಇದರಿಂದಾಗಿ ಹತ್ತು ವರ್ಷಗಳ ಅವಧಿಯ ಬಳಿಕ ಉಚಿತ ವಿದ್ಯುತ್ ಅನ್ನು ಪ್ರತಿ ಮನೆ ಉತ್ಪಾದಿಸುವುದು ಮಾತ್ರವಲ್ಲದೆ ಗ್ರಿಡ್ ಗೆ ಮಾರಾಟ ಮಾಡಬಹುದು ಎಂದು ಸಚಿವರು ತಿಳಿಸಿದ್ದಾರೆ.

solar panelಅರ್ಹ ಕುಟುಂಬಗಳು ಉಚಿತ ವಿದ್ಯುತ್ ಬಳಕೆ ಮಾಡಿಕೊಳ್ಳಲು, 60% ಸಬ್ಸಿಡಿ ನೀಡಲಾಗುತ್ತದೆ ಹಾಗೂ ಉಳಿದ ಹಣವನ್ನು ಸಾಲ (Loan) ಪಡೆದುಕೊಳ್ಳಲಾಗುತ್ತದೆ.

300 ಯೂನಿಟ್ ಗಿಂತ ಹೆಚ್ಚಿನ ವಿದ್ಯುತ್ (Electricity) ಅನ್ನು ಮಾರಾಟ ಮಾಡಿ ಸಾಲ ಮರುಪಾವತಿ (Loan Re Payment) ಮಾಡಲಾಗುವುದು. ಹೀಗಾಗಿ ಒಂದೇ ಒಂದು ರೂಪಾಯಿಗಳನ್ನು ಕೂಡ ಜನರು ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಖರ್ಚು ಮಾಡಬೇಕಾದ ಅಗತ್ಯ ಇಲ್ಲ. ಅದರ ಬದಲು ಉಚಿತ ವಿದ್ಯುತ್ ಬಳಕೆ ಮಾಡುವುದು ಮಾತ್ರವಲ್ಲದೆ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿ ಹಣ ಗಳಿಕೆ ಮಾಡಲು ಸಾಧ್ಯವಿದೆ.

60 ವರ್ಷ ಮೇಲ್ಪಟ್ಟವರಿಗೆ ಬಿಗ್ ಅಪ್ಡೇಟ್! ಸಿಗಲಿದೆ ಫಿಕ್ಸೆಡ್ ಡೆಪಾಸಿಟ್ ಮೇಲೆ ಹೆಚ್ಚು ಬಡ್ಡಿ

ಸೂರ್ಯೋದಯ ಯೋಜನೆಗೆ ಕೇಂದ್ರ ಸರ್ಕಾರ ಸದ್ಯ ಎಷ್ಟು ಹಣ ಮೀಸಲಿಟ್ಟಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಜನರ ಅನುಕೂಲಕ್ಕಾಗಿ ಹಾಗೂ ಸೌರಶಕ್ತಿ ವಿದ್ಯುತ್ ಜನರು ಪಡೆದುಕೊಳ್ಳುವುದಕ್ಕೆ, ಕೋಟ್ಯಾಂತರ ರೂಪಾಯಿಗಳನ್ನು ಕೇಂದ್ರ ಸರ್ಕಾರ ಮೀಸಲಿಡಲು ನಿರ್ಧರಿಸಿದೆ.

Government New Scheme, Up to 300 units of free electricity from now on

Related Stories