ಆಧಾರ್ ಕಾರ್ಡ್ ಕುರಿತು ರಾತ್ರೋ-ರಾತ್ರಿ ಮಹತ್ವದ ಬದಲಾವಣೆ! ತಕ್ಷಣ ಈ ಕೆಲಸ ಮಾಡಿ
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ UIDAI ಆಧಾರ್ ಕಾರ್ಡ್ ಅಥೆಂಟಿಕೇಷನ್ (authentication) ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ UIDAI ಆಧಾರ್ ಕಾರ್ಡ್ ಅಥೆಂಟಿಕೇಷನ್ (authentication) ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಆಧಾರ್ ಕಾರ್ಡ್ ಅನ್ನು ಅತಿಯಾಗಿ ಬಳಸುವ ನಾವು, ಯಾವ ಸಂದರ್ಭದಲ್ಲಿ ನಮ್ಮ ಆಧಾರ್ ಕಾರ್ಡ್ ದುರುಪಯೋಗ ಆಗುತ್ತಿದೆ ಎನ್ನುವುದರ ಬಗ್ಗೆ ಯೋಚನೆಯನ್ನೇ ಮಾಡುವುದಿಲ್ಲ.
ಇದೀಗ ಯುಐಡಿಎಐ ಆಧಾರ್ ಕಾರ್ಡ್ ಸೇಫ್ಟಿ ವಿಚಾರಕ್ಕೆ ಕೆಲವು ಪ್ರಮುಖ ವಿಷಯಗಳನ್ನು ತಿಳಿಸಿದೆ.
ಸರ್ಕಾರದ ಹೊಸ ಯೋಜನೆ; ಇನ್ಮುಂದೆ 300 ಯೂನಿಟ್ ಗಳವರೆಗೆ ಉಚಿತ ವಿದ್ಯುತ್!
ಆಧಾರ್ ಅಥೆಂಟಿಕೇಶನ್! (Aadhar authentication)
ನಾವು ನಮ್ಮ ಯಾವುದೇ ಡಾಕ್ಯೂಮೆಂಟ್ಸ್ (documents) ಬಳಕೆ ಮಾಡಿದರು ಕೂಡ ಅದರ ಗೌಪ್ಯತೆಯ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು. ಎಷ್ಟೋ ಬಾರಿ ನಮ್ಮ ಆಧಾರ್ ಕಾರ್ಡ್ ಎಲ್ಲಿ ಅಥೆಂಟಿಕೇಶನ್ ಮೂಲಕ ಬಳಕೆ ಆಗಿದೆ ಎಂಬುದರ ಬಗ್ಗೆ ಮಾಹಿತಿ ಇರುವುದಿಲ್ಲ.
ಎಲ್ಲಾ ಕೆಲಸಕ್ಕೂ ಆಧಾರ್ ಕಾರ್ಡ್ ಬಳಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಬಾರಿ ಅದರ ದುರುಪಯೋಗ ಕೂಡ ಆಗುತ್ತದೆ. ಉದಾಹರಣೆಗೆ ಸಿಮ್ ಕಾರ್ಡ್ ಖರೀದಿ ಮಾಡುವಾಗ ನಮ್ಮ ಬಯೋಮೆಟ್ರಿಕ್ ಆಥೆಂಟಿಕೇಷನ್ ಮೂಲಕ ಸಿಮ್ ಕಾರ್ಡ್ (Sim Card) ಖರೀದಿ ಮಾಡುತ್ತೇವೆ. ಆದರೆ ಈ ಬಯೋಮೆಟ್ರಿಕ್ ಅನ್ನು ನಾವು ಲಾಕ್ ಮಾಡದೆ ಇರುವುದರಿಂದ ಅದರ ದುರ್ಬಳಕೆ ಆಗುವ ಸಾಧ್ಯತೆ ಇರುತ್ತದೆ.
ಪೋಸ್ಟ್ ಆಫೀಸ್ ಸ್ಕೀಮ್! ಸ್ವಲ್ಪ ಹೂಡಿಕೆ ಮಾಡಿ ಸಾಕು ಲಕ್ಷ ಲಕ್ಷ ಆದಾಯ ಗಳಿಸಿ
ಆಧಾರ್ ಕಾರ್ಡ್ ಸುರಕ್ಷಿತಗೊಳಿಸುವುದು ಹೇಗೆ?
ಇದಕ್ಕಾಗಿ ನೀವು ಮೊದಲು, https://resident.uidai.gov.in/ ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಆಧಾರ ಅಂಥೆಂಕೇಷನ್ ಹಿಸ್ಟರಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಗೂ ಸೀಕ್ರೆಟ್ ಕೋಡ್ ಹಾಕಿ ನಂತರ ಜನರೇಟ್ ಓಟಿಪಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ. ಅದನ್ನು ನಮೂದಿಸಿ. ಈಗ ನೀವು ವೆಬ್ಸೈಟ್ ಪುಟದಲ್ಲಿ ಬೇರೆ ಬೇರೆ ಆಯ್ಕೆಗಳನ್ನು ಕಾಣುತ್ತೀರಿ. ಅದರಲ್ಲಿ ನಿಮಗೆ ಬೇಕಾಗಿರುವ ವಿವರಗಳನ್ನು ತಿಳಿದುಕೊಳ್ಳಲು ಅಗತ್ಯ ಇರುವ ಮಾಹಿತಿಗಳನ್ನು ಭರ್ತಿ ಮಾಡಬೇಕು. ಈಗ ನೀವು ನಿಮ್ಮ ಆಧಾರ್ ಅಥೆಂಟಿಫಿಕೇಶನ್ ಹಿಸ್ಟರಿ ತಿಳಿಯಬಹುದು.
ಆಧಾರ್ ಹಿಸ್ಟರಿ ಹೀಗೂ ತಿಳಿಯಬಹುದು!
http://uidai.gov.in/ ಈ ವೆಬ್ ಸೈಟ್ ಗೆ ಹೋಗಿ ಮೈ ಆಧಾರ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆದರೆ ಸರ್ವಿಸಸ್ ಎನ್ನುವ ಆಯ್ಕೆಯಲ್ಲಿ ಆಧಾರ್ ಅಥೆಂಟಿಫಿಕೇಶನ್ ಹಿಸ್ಟರಿಯನ್ನು ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.
ಸರ್ಕಾರದಿಂದಲೇ ಪಡೆಯಿರಿ 50,000 ಸಾಲ; ಯಾವ ಅಡಮಾನವು ಕೊಡಬೇಕಿಲ್ಲ!
ಈಗ ನೀವು ನಿಮ್ಮ ಆಧಾರ್ ಸಂಖ್ಯೆ (Aadhaar Number) ಹಾಗೂ ಸೀಕ್ರೆಟ್ ಕೋಡ್ ಅನ್ನು ನಮೂದಿಸಿ ಬಳಿಕ ನಿಮ್ಮ ಮೊಬೈಲ್ಗೆ ಓಟಿಪಿ ಬರುತ್ತದೆ ಅದನ್ನು ಇಲ್ಲಿ ನಮೂದಿಸಬೇಕು. ಈಗ ನಿಮಗೆ ಆಧಾರ್ ಹಿಸ್ಟರಿ ಪುಟದಲ್ಲಿ ಕಾಣಿಸುತ್ತದೆ. ಈ ಹಿಸ್ಟರಿಯನ್ನು ನೀವು ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು.
ಇದರಿಂದ ಆಧಾರ್ ಕಾರ್ಡ್ ಅನ್ನು ನಿಮ್ಮನ್ನು ಹೊರತುಪಡಿಸಿ ಬೇರೆ ಯಾರಾದರೂ ಬಳಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತದೆ. ಈ ಹಿಸ್ಟರಿ ಚೆಕ್ ಮಾಡುವಾಗ ನಿಮ್ಮ ಆಧಾರ್ ಕಾರ್ಡ್ ಬೇರೆ ಯಾರಾದರೂ ತಪ್ಪಾಗಿ ಬಳಕೆ ಮಾಡಿದ್ದು ಕಂಡು ಬಂದಲ್ಲಿ ತಕ್ಷಣ ಈ ಕೆಳಗಿನ ನಂಬರ್ಗೆ ಕರೆ ಮಾಡಿ ದೂರು ಸಲ್ಲಿಸಿ. ಯು ಐ ಡಿ ಎ ಐ ತಕ್ಷಣ ಕ್ರಮ ಕೈಗೊಳ್ಳುತ್ತದೆ.
ಟೋಲ್ ಫ್ರೀ ನಂಬರ್ 1947 ಹೆಲ್ಪ್ ಲೈನ್ : help@uidai.gov.in
Important changes about Aadhaar card authentication