ಹೆಣ್ಣು ಮಕ್ಕಳಿಗೆ ಸಿಗಲಿದೆ 2 ಲಕ್ಷ ರೂಪಾಯಿ; ಸರ್ಕಾರದ ಈ ಯೋಜನೆ ಬಗ್ಗೆ ತಿಳಿಯಿರಿ!

ಭಾಗ್ಯಲಕ್ಷ್ಮಿ ಬಾಂಡ್ ಪಡೆದುಕೊಳ್ಳಲು ನಿಮ್ಮ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದ ತಕ್ಷಣ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ನೊಂದಾಯಿಸಿಕೊಳ್ಳಬೇಕು.

ಕೇಂದ್ರ ಸರ್ಕಾರ (Central government) ಹಾಗೂ ರಾಜ್ಯ ಸರ್ಕಾರ ದೇಶದಲ್ಲಿ ವಾಸಿಸುವ ಮಹಿಳೆಯರ ಸಬಲೀಕರಣ (women empowerment) ಕ್ಕಾಗಿ ಹಲವಾರು ಯೋಜನೆಗಳನ್ನು ಪರಿಚಯಿಸಿವೆ. ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಬೇಕಾಗುವ ಬೇರೆ ಬೇರೆ ರೀತಿಯ ಸೌಲಭ್ಯಗಳನ್ನು ಕೂಡ ಮಾಡಿಕೊಡಲಾಗಿದೆ. ಇದರ ಜೊತೆ ಜೊತೆಯಲಿ ಹೆಣ್ಣು ಮಗುವಿನ ಭ್ರೂಣ ಹತ್ಯೆ ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಒಂದು ಮಹತ್ವದ ಯೋಜನೆಯನ್ನು ಹಮ್ಮಿಕೊಂಡಿದೆ.

ಹೊಸ ಯೋಜನೆ! ಇಂತಹ ಮಹಿಳೆಯರಿಗೆ ಸಿಗಲಿದೆ ಬಡ್ಡಿ ಇಲ್ಲದೆ 5 ಲಕ್ಷಗಳ ಸಾಲ!

ಹೌದು, ಹೆಣ್ಣು ಮಗು ಕುಟುಂಬಕ್ಕೆ ಭಾರ ಎನ್ನುವ ಮನಸ್ಥಿತಿ ಉಳ್ಳವರು ಈಗಲೂ ಇದ್ದಾರೆ ಎಂದರೆ ನಿಜಕ್ಕೂ ವಿಷಾದನೀಯ! ಇಂಥವರು ಹೆಣ್ಣು ಮಗುವನ್ನು ಯಾವಾಗಲೂ ತಿರಸ್ಕರಿಸುತ್ತಾರೆ. ಈ ಒಂದು ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಸಲುವಾಗಿ ಹೆಣ್ಣು ಮಗುವಿನ ಜವಾಬ್ದಾರಿಯನ್ನು ಸರ್ಕಾರ ಹೊತ್ತುಕೊಳ್ಳುವುದು ಮಾತ್ರವಲ್ಲದೆ ಹೆಣ್ಣು ಮಗುವಿನ ಮದುವೆಯ ಸಂದರ್ಭದಲ್ಲಿ ಅಗತ್ಯ ಇರುವ ಹಣ ಒದಗಿಸುವ ಯೋಜನೆಯನ್ನು ಜಾರಿಗೆ ತಂದಿದೆ ಅದುವೇ ಭಾಗ್ಯ ಲಕ್ಷ್ಮಿ ಯೋಜನೆ!

ಹೆಣ್ಣು ಮಕ್ಕಳಿಗೆ ಸಿಗಲಿದೆ 2 ಲಕ್ಷ ರೂಪಾಯಿ; ಸರ್ಕಾರದ ಈ ಯೋಜನೆ ಬಗ್ಗೆ ತಿಳಿಯಿರಿ! - Kannada News

ಏನಿದು ಭಾಗ್ಯಲಕ್ಷ್ಮಿ ಯೋಜನೆ? (Bhagyalakshmi scheme)

ಭಾಗ್ಯಲಕ್ಷ್ಮಿ ಯೋಜನೆ, ರಾಜ್ಯದಲ್ಲಿ ಜನಿಸುವ ಹೆಣ್ಣು ಮಗುವಿಗಾಗಿಯೇ ಇರುವ ಯೋಜನೆಯಾಗಿದ್ದು, ಯಾವುದೇ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದ ತಕ್ಷಣ ಆ ಮಗುವಿನ ಹೆಸರಿನಲ್ಲಿ 50 ಸಾವಿರ ರೂಪಾಯಿಗಳ ಬಾಂಡ್ ನೀಡುತ್ತದೆ.

ಇದನ್ನು ಪಡೆದುಕೊಂಡಿರುವ ಹೆಣ್ಣು ಮಗು ಮದುವೆಯ ವಯಸ್ಸಿಗೆ ಬಂದಾಗ ಅಥವಾ ಆಕೆಗೆ 21 ವರ್ಷ ವಯಸ್ಸು ಆದಾಗ 2 ಲಕ್ಷ ರೂಪಾಯಿಗಳನ್ನು ಸರ್ಕಾರ ನೀಡುತ್ತದೆ. ಈ ಹಣವನ್ನು ಹೆಣ್ಣು ಮಗುವಿನ ಮದುವೆ ಅಥವಾ ಉನ್ನತ ವಿದ್ಯಾಭ್ಯಾಸಕ್ಕೆ ಪಾಲಕರು ಬಳಸಿಕೊಳ್ಳಬಹುದು.

ಯಾವುದೇ ಬ್ಯಾಂಕ್ ನ ಎಟಿಎಂ ಕಾರ್ಡ್ ಇದ್ದವರಿಗೆ ಬಂಪರ್ ಗುಡ್ ನ್ಯೂಸ್

Government Schemeಯಾರಿಗೆ ಸಿಗಲಿದೆ ಭಾಗ್ಯಲಕ್ಷ್ಮಿ ಬಾಂಡ್!

*ಒಂದು ಮನೆಯಲ್ಲಿ ಜನಿಸಿದ ಎರಡು ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ನೀಡಲಾಗುವುದು.

*ಇದು ಐವತ್ತು ಸಾವಿರ ರೂಪಾಯಿಗಳ ಬಾಂಡ್ ಆಗಿದ್ದು 18 ವರ್ಷಕ್ಕಿಂತ ಮೊದಲು ಮದುವೆ ಮಾಡುವ ಹೆಣ್ಣು ಮಕ್ಕಳಿಗೆ ಕೊಡಲಾಗುವುದಿಲ್ಲ.

*ಮನೆಯ ಇಬ್ಬರು ಹೆಣ್ಣು ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆಯಬಹುದು.

*ಮಾರ್ಚ್ 31 2006ರ ನಂತರ ಜನಿಸಿದ ಹೆಣ್ಣು ಮಕ್ಕಳು ಈ ಬಾಂಡ್ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

*ಕುಟುಂಬದವ ವಾರ್ಷಿಕ ಆದಾಯ ಎರಡು ಲಕ್ಷ ಮೀರಬಾರದು.

ಆಧಾರ್ ಕಾರ್ಡ್ ಕುರಿತು ರಾತ್ರೋ-ರಾತ್ರಿ ಮಹತ್ವದ ಬದಲಾವಣೆ! ತಕ್ಷಣ ಈ ಕೆಲಸ ಮಾಡಿ

ಭಾಗ್ಯಲಕ್ಷ್ಮಿ ಬಾಂಡ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು!

*ಪೋಷಕರ ಆಧಾರ್ ಕಾರ್ಡ್
*ಪೋಷಕರ ಬ್ಯಾಂಕ್ ಪಾಸ್ ಬುಕ್ ಪ್ರತಿ
*ಆದಾಯ ಪ್ರಮಾಣ ಪತ್ರ
*ಜಾತಿ ಪ್ರಮಾಣ ಪತ್ರ
*ಮಗುವಿನ ಹಾಗೂ ಪೋಷಕರ ಪಾಸ್ಪೋರ್ಟ್ ಅಳತೆಯ ಫೋಟೋ
*ವಿಳಾಸದ ಪುರಾವೆ
*ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ.

ಭಾಗ್ಯಲಕ್ಷ್ಮಿ ಬಾಂಡ್ ಪಡೆದುಕೊಳ್ಳಲು ನಿಮ್ಮ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದ ತಕ್ಷಣ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ನೊಂದಾಯಿಸಿಕೊಳ್ಳಬೇಕು. ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಈ ಡೇಟಾವನ್ನು ಸರ್ಕಾರಕ್ಕೆ ತಲುಪಿಸಿ ಭಾಗ್ಯಲಕ್ಷ್ಮಿ ಬಾಂಡ್ ನಿಮ್ಮ ಕೈ ಸೇರುವಂತೆ ಮಾಡುತ್ತಾರೆ. ಒಮ್ಮೆ ನಿಮ್ಮ ಮಗುವಿನ ಹೆಸರಿಗೆ ಬಾಂಡ್ ಮಾಡಿಸಿದ ನಂತರ ಆ ಹೆಣ್ಣು ಮಗು 21 ವರ್ಷ ವಯಸ್ಸಿಗೆ ಬರುವವರೆಗೂ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಆಕೆಗೆ 21 ವರ್ಷ ಆದ ನಂತರವಷ್ಟೇ ಸರ್ಕಾರದಿಂದ ಎರಡು ಲಕ್ಷ ರೂಪಾಯಿಗಳನ್ನು ಪಡೆಯಬಹುದು.

ಪೋಸ್ಟ್ ಆಫೀಸ್ ಸ್ಕೀಮ್! ಸ್ವಲ್ಪ ಹೂಡಿಕೆ ಮಾಡಿ ಸಾಕು ಲಕ್ಷ ಲಕ್ಷ ಆದಾಯ ಗಳಿಸಿ

Girl Child will get Rs 2 lakh by this government scheme

Follow us On

FaceBook Google News

Girl Child will get Rs 2 lakh by this government scheme