ಕೇಂದ್ರ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ವಿತರಣೆ; ಈಗಲೇ ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರದಿಂದ ಹೊಲಿಗೆ ಯಂತ್ರ (Sewing machine) ಖರೀದಿಗೆ ಸಹಾಯಧನ ಪಡೆದುಕೊಳ್ಳುವುದು ಹೇಗೆ ತಿಳಿಯಿರಿ

ನೀವು ನಿಮ್ಮ ಸ್ವಂತ ಉದ್ಯಮ (own business) ಆರಂಭಿಸಬೇಕು ಅಂದುಕೊಂಡಿದ್ದೀರಾ? ಅದರಲ್ಲೂ ನಿಮಗೆ ಬಟ್ಟೆ ಹೊಲಿಯುವ ಕಲೆ ಚೆನ್ನಾಗಿ ಗೊತ್ತಿದ್ದು, ಸ್ವಂತ ಶಾಪ್ ಆರಂಭಿಸಬೇಕು ಎಂದು ಕೊಂಡಿದ್ದೀರಾ? ಹಾಗಾದರೆ ಚಿಂತೆ ಬೇಡ, ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆಯ ಅಂಗವಾಗಿ ಉಚಿತ ಹೊಲಿಗೆ ಮಷೀನ್ ವಿತರಣೆ ಮಾಡುತ್ತಿದೆ.

ಹೊಲಿಗೆ ಯಂತ್ರ ಖರೀದಿಗೆ 15,000!

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು, ಈ ಯೋಜನೆಯ ಅಡಿಯಲ್ಲಿ ಸ್ವಂತ ಹೊಲಿಗೆ ಯಂತ್ರ ಇಟ್ಟುಕೊಂಡು ತಮ್ಮದೇ ಆಗಿರುವ ಉದ್ಯಮ ಆರಂಭಿಸಲು ಬಯಸುವವರಿಗೆ 15,000ಗಳನ್ನು ಕೇಂದ್ರ ಸರ್ಕಾರ ನೇರವಾಗಿ ಖಾತೆಗೆ (Bank Account) ಜಮಾ ಮಾಡಲಿದೆ.

ಬೆಂಗಳೂರಿನ ಈ ಏರಿಯಾಗಳಲ್ಲಿ ಸಿಗುತ್ತೆ ಕಡಿಮೆ ಬಾಡಿಗೆಯಲ್ಲಿ ಬಾಡಿಗೆ ಮನೆಗಳು

ಕೇಂದ್ರ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ವಿತರಣೆ; ಈಗಲೇ ಅರ್ಜಿ ಸಲ್ಲಿಸಿ - Kannada News

ಇದರ ಜೊತೆಗೆ 20,000 ಸಾಲವನ್ನು (Loan) ಕೂಡ ಪಡೆದುಕೊಳ್ಳಬಹುದು. ಕೇಂದ್ರ ಸರ್ಕಾರದಿಂದ ಹೊಲಿಗೆ ಯಂತ್ರ (Sewing machine) ಖರೀದಿಗೆ ಸಹಾಯಧನ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ.

ಹೊಲಿಗೆ ಯಂತ್ರ ಖರೀದಿಗೆ ಸಹಾಯಧನ ಪಡೆದುಕೊಳ್ಳಲು ಯಾರು ಅರ್ಹರು?

*ಭಾರತೀಯ ಪ್ರಜೆಯಾಗಿರಬೇಕು
*ಮಹಿಳೆ ಅಥವಾ ಪುರುಷ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು
*ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಟೈಲರಿಂಗ್ ವೃತ್ತಿ ಮಾಡಲು ನೋಂದಾಯಿಸಿಕೊಂಡಿರುವವರಾಗಿರಬೇಕು.
*ಟೈಲರಿಂಗ್ (tailoring) ವೃತ್ತಿಯನ್ನು ಈಗಾಗಲೇ ಮಾಡುತ್ತಿದ್ದು, ಹೊಸ ಹೊಲಿಗೆ ಯಂತ್ರ ಪಡೆಯಲು ಬಯಸಿದರೆ ಅರ್ಜಿ ಸಲ್ಲಿಸಬಹುದು
*18 ವರ್ಷಕ್ಕಿಂತ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು.

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ; ಕಲಿಕಾ ಭಾಗ್ಯ ಯೋಜನೆ

free sewing machineಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

ಆಧಾರ್ ಕಾರ್ಡ್
ವಿಳಾಸದ ಪುರಾವೆ
ವಿಶ್ವಕರ್ಮ ಐಡಿ
ಜಾತಿ ಪ್ರಮಾಣ
ಆದಾಯ ಪ್ರಮಾಣ ಪತ್ರ
ವೃತ್ತಿ ಬಗ್ಗೆ ದೃಢೀಕರಣ ಪ್ರಮಾಣ ಪತ್ರ
ಪಾಸ್ಪೋರ್ಟ್ ಗಾತ್ರದ ಫೋಟೋ

ಹೆಣ್ಣು ಮಕ್ಕಳಿಗೆ ಸಿಗಲಿದೆ 2 ಲಕ್ಷ ರೂಪಾಯಿ; ಸರ್ಕಾರದ ಈ ಯೋಜನೆ ಬಗ್ಗೆ ತಿಳಿಯಿರಿ!

ಅರ್ಜಿ ಸಲ್ಲಿಸುವುದು ಹೇಗೆ?

https://pmvishwakarma.gov.in/ ಈ ವೆಬ್ ಸೈಟ್ ಗೆ ಹೋಗಿ, ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಹತ್ತಿರದ CSC ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ. ಕೇಂದ್ರ ಸರ್ಕಾರದಿಂದ ಏಪ್ರಿಲ್ ತಿಂಗಳಿನಲ್ಲಿ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು 15,000ಗಳನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುವುದು.

ಸ್ವಾವಲಂಬನೆ ಜೀವನ ಕಟ್ಟಿಕೊಡುವ ಪುರುಷರು ಮಾತ್ರವಲ್ಲದೆ ಮಹಿಳೆಯರು ಕೂಡ ಉಚಿತ ಹೊಲಿಗೆ ಯಂತ್ರ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸರ್ಕಾರದಿಂದ ಸಹಾಯಧನ ಪಡೆದುಕೊಳ್ಳಬಹುದು. 15000 ಜೊತೆಗೆ ಹೊಲಿಗೆ ಯಂತ್ರ ಖರೀದಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ 20,000 ರೂಪಾಯಿಗಳ ಸಾಲ ಸೌಲಭ್ಯವು ಸಿಗಲಿದೆ. ಇದರ ಪ್ರಯೋಜನವನ್ನೂ ಪಡೆದುಕೊಳ್ಳಿ.

ಹೊಸ ಯೋಜನೆ! ಇಂತಹ ಮಹಿಳೆಯರಿಗೆ ಸಿಗಲಿದೆ ಬಡ್ಡಿ ಇಲ್ಲದೆ 5 ಲಕ್ಷಗಳ ಸಾಲ!

Distribution of free sewing machines by Central Government, Apply now

Follow us On

FaceBook Google News

Distribution of free sewing machines by Central Government, Apply now