ಬೆಂಗಳೂರಿನ ಈ ಏರಿಯಾಗಳಲ್ಲಿ ಸಿಗುತ್ತೆ ಕಡಿಮೆ ಬಾಡಿಗೆಯಲ್ಲಿ ಬಾಡಿಗೆ ಮನೆಗಳು
ದೇಶದ ಐಟಿ ಹಬ್ (IT hub) ಹಾಗೂ ಸಿಲಿಕಾನ್ ವ್ಯಾಲಿ (silicon valley) ಎಂದು ಕರೆಸಿಕೊಳ್ಳುವಂತಹ ಬೆಂಗಳೂರು (Bengaluru) ನಮ್ಮ ಕರ್ನಾಟಕದ ರಾಜಧಾನಿ
ದೇಶದ ಐಟಿ ಹಬ್ (IT hub) ಹಾಗೂ ಸಿಲಿಕಾನ್ ವ್ಯಾಲಿ (silicon valley) ಎಂದು ಕರೆಸಿಕೊಳ್ಳುವಂತಹ ಬೆಂಗಳೂರು (Bengaluru) ನಮ್ಮ ಕರ್ನಾಟಕದ ರಾಜಧಾನಿ ಮಾತ್ರವಲ್ಲದೆ ನಮ್ಮ ಹೆಮ್ಮೆ ಎಂದು ಹೇಳಬಹುದಾಗಿದೆ.
ಇಷ್ಟೊಂದು ಅವಕಾಶಗಳನ್ನು ಹೊಂದಿರುವಂತಹ ಬೆಂಗಳೂರು ನಗರಿಯಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಯನ್ನು (Rent House) ಹುಡುಕುವುದು ಸ್ವಲ್ಪ ಮಟ್ಟಿಗೆ ಕಷ್ಟದ ಕೆಲಸ ಎಂದು ಹೇಳಬಹುದು.
ಇವತ್ತಿನ ಲೇಖನದಲ್ಲಿ ನಾವು ನಿಮಗೆ ಬೆಂಗಳೂರಿನ ಯಾವೆಲ್ಲ ಏರಿಯಾಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುತ್ತವೆ ಎಂಬುದನ್ನು ತಿಳಿಸುತ್ತಿದ್ದೇವೆ.
ಬೆಂಗಳೂರಿನ ಅತ್ಯಂತ ಕಡಿಮೆ ಬೆಲೆಯಲ್ಲಿ ಬಾಡಿಗೆ ಮನೆಗಳು ಸಿಗುವಂತಹ ಏರಿಯಾ ಗಳು ಇವು (cheapest rented area in Bengaluru)
ಗೃಹಜ್ಯೋತಿ ಉಚಿತ ವಿದ್ಯುತ್! ಬಾಡಿಗೆ ಮನೆಯಲ್ಲಿ ಇರುವವರಿಗೆ ಸಿಹಿ ಸುದ್ದಿ
1. ಕೆಂಗೇರಿ (kengeri)
ಬೆಂಗಳೂರಿನ ಪಶ್ಚಿಮ ಭಾಗದಲ್ಲಿರುವಂತಹ ಕೆಂಗೇರಿಯಲ್ಲಿ ಬಸ್ಸು ಹಾಗೂ ರೈಲಿನ ಸಂಪರ್ಕ ಸಂಪೂರ್ಣವಾಗಿ ಸಿಗುತ್ತದೆ. ಇನ್ನು ಇಲ್ಲಿ ಕೂಡ ಬಾಡಿಗೆ ಮನೆಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ ಉದಾಹರಣೆಗೆ, 1Bhk ರೂಮ್ ಅನ್ನು ನೀವು ಕೇವಲ ರೂ.5,000ಗಳ ಕಡಿಮೆ ಬೆಲೆಯ ಬಾಡಿಗೆಯಲ್ಲಿ ಪಡೆದುಕೊಳ್ಳಬಹುದಾಗಿದೆ.
2. ಎಲೆಕ್ಟ್ರಾನಿಕ್ ಸಿಟಿ (electronic City)
ಎಲೆಕ್ಟ್ರಾನಿಕ್ ಸಿಟಿಯನ್ನು ಬೆಂಗಳೂರಿನ ಐಟಿ ಸಿಟಿ ಎಂದು ಕರೆಯಬಹುದಾಗಿದೆ. ಔಟರ್ ರಿಂಗ್ ರೋಡ್ ಮತ್ತು ಟೋಲ್ ರಸ್ತೆಯ ಮೂಲಕ ಇದು ಬೆಂಗಳೂರಿನ ನಗರವನ್ನು ಕನೆಕ್ಟ್ ಮಾಡೋದಕ್ಕೆ ಸಮರ್ಪಕವಾಗಿರುವಂತಹ ಏರಿಯಾ ಆಗಿದೆ. ಇನ್ನು ಒಂದು ವೇಳೆ ನೀವು ಎಲೆಕ್ಟ್ರಾನಿಕ್ ಸಿಟಿಯಲ್ಲಿ 1Bhk ಪ್ಲಾಟ್ ಅನ್ನು ಬಾಡಿಗೆಗೆ ಪಡೆದುಕೊಳ್ಳಲು ಯೋಚಿಸಿದ್ದರೆ 7,000 ರೂಪಾಯಿ ಗಳಿಗೆ ನಿಮಗೆ ಸಿಗಬಹುದಾಗಿದೆ.
ರೈತರಿಗೆ ಹಸು, ಕುರಿ ಕೋಳಿ ಸಾಕಾಣಿಕೆಗೆ ಸಿಗಲಿದೆ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ
3. ಬಿಟಿಎಂ ಲೇಔಟ್ (BTM layout)
ಬಿಟಿಎಂ ಲೇಔಟ್ ಒಂದು ರೀತಿಯಲ್ಲಿ ಬೆಂಗಳೂರಿನ ಹೃದಯ ಭಾಗದಲ್ಲಿ ಇರುವಂತಹ ಒಂದು ಸರ್ವತೋಮುಖ ಸಂಪನ್ಮೂಲವನ್ನು ಹೊಂದಿರುವಂತಹ ಸಿಟಿ ಎಂದು ಹೇಳಬಹುದಾಗಿದೆ. ಸ್ಥಳೀಯ ಬಸ್ಸು ಮತ್ತು ರೈಲು ಸಂಪರ್ಕವನ್ನು ಕೂಡ ನೀವು ಈ ಸಿಟಿಯಲ್ಲಿ ಕಾಣಬಹುದಾಗಿದೆ. ಇನ್ನು ಬಿಎಂ ಲೇಔಟ್ ನಲ್ಲಿ 1Bhk ಫ್ಲ್ಯಾಟ್ ಅನ್ನು 8,000ಗಳಲ್ಲಿ ಪ್ರತಿ ತಿಂಗಳ ಬಾಡಿಗೆಗೆ ಪಡೆದುಕೊಳ್ಳಬಹುದಾಗಿದೆ.
ಗೃಹಲಕ್ಷ್ಮಿ ಮುಂದಿನ ಕಂತಿನ ಹಣ ಬರೋದಿಲ್ವಾ? ಇಲ್ಲಿದೆ ಯೋಜನೆಯ ಬಿಗ್ ಅಪ್ಡೇಟ್
4. HSR ಲೇಔಟ್ (HSR layout)
ಬೆಂಗಳೂರಿನ ಅತ್ಯಂತ ಜನಪ್ರಿಯ ನಗರಗಳಲ್ಲಿ ಎಚ್ಎಸ್ಆರ್ ಲೇಔಟ್ ಕೂಡ ಒಂದಾಗಿದೆ. ಎಲ್ಲಿಂದ ಬೇರೆ ಬೇರೆ ನಗರಗಳಿಗೆ ಹೋಗಲು ಸಾರಿಗೆ ಸಂಪರ್ಕ ಕೂಡ ಉತ್ತಮವಾಗಿದೆ. ಎಚ್ಎಸ್ಆರ್ ಲೇಔಟ್ ನಲ್ಲಿ ಬಾಡಿಗೆ ಮನೆಗಳು ಪ್ರತಿ ತಿಂಗಳಿಗೆ 8,500 ರೂಪಾಯಿಗಳ ಬೆಲೆಯಲ್ಲಿ ಪ್ರಾರಂಭವಾಗುತ್ತದೆ.
5. ವೈಟ್ ಫೀಲ್ಡ್ (Whitefield)
ಐಟಿ ಲೋಕದ ಮಾಯನಗರಿಯೆನ್ನುವುದಾಗಿ ವೈಟ್ಫೀಲ್ಡ್ ಅನ್ನು ಕರೆಯಬಹುದಾಗಿದೆ. ಬೆಂಗಳೂರಿನ ಪೂರ್ವಭಾಗದಲ್ಲಿರುವಂತಹ ಈ ನಗರದಲ್ಲಿ ದೊಡ್ಡ ದೊಡ್ಡ ಪ್ರತಿಷ್ಠಿತ ಐಟಿ ಕಂಪನಿಗಳು ಬೀಡು ಬಿಟ್ಟಿವೆ.
ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರದ ಮಹತ್ವದ ಅಪ್ಡೇಟ್!
6. ರಾಜರಾಜೇಶ್ವರಿ ನಗರ (RR Nagar)
ರಾಜರಾಜೇಶ್ವರಿ ನಗರದಲ್ಲಿ ಕೂಡ ಬಸ್ಸು ಮತ್ತು ಮೆಟ್ರೋ ಸಂಪರ್ಕವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಇಲ್ಲಿ ರೂಂ ಮಾಡಿಕೊಳ್ಳುವುದು ಕೂಡ ನಿಮಗೆ ಸಾಕಷ್ಟು ವಸ್ತು ಹಾಗೂ ಸೇವೆಗಳು ಕೈಗೆಟಕುವ ದೂರದಲ್ಲಿ ಸಿಗುತ್ತವೆ. ಇಲ್ಲಿನ ರೂಮ್ ಬಾಡಿಗೆ ಬೆಲೆ 9500 ರೂಪಾಯಿಗಳಿಂದ ಪ್ರಾರಂಭವಾಗಲಿದೆ.
ಈ ಸ್ಥಳಗಳಲ್ಲಿ ನೀವು ಕೆಲಸ ನಿರ್ವಹಿಸುತ್ತಿದ್ದರೆ ಅಥವಾ ಹತ್ತಿರದ ಏರಿಯಾ ಗಳಲ್ಲಿ ಕೆಲಸ ಮಾಡುತ್ತಿದ್ದರೆ ಕಡಿಮೆ ಬೆಲೆಗೆ ಬಾಡಿಗೆ ಮನೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
Houses are available at low rent in these areas of Bangalore