ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ 5 ಕಂತಿನ ಹಣ, ಅಂದರೆ 10,000ಗಳನ್ನು ಮಹಿಳೆಯರು ಈಗಾಗಲೇ ಪಡೆದುಕೊಂಡು, ಸಂತಸ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ 6ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗಬಹುದು ಎನ್ನುವ ನಿರೀಕ್ಷೆ ಮಹಿಳೆಯರಲ್ಲಿ ಇತ್ತು.

ಇದೀಗ ಬಂದಿರುವ ಮಾಹಿತಿಯ ಪ್ರಕಾರ ಫೆಬ್ರವರಿ ಮೊದಲ ವಾರದಲ್ಲಿಯೇ 6ನೇ ಕಂತಿನ ಹಣ ಕೆಲವು ಮಹಿಳೆಯರ ಖಾತೆಗೆ (Bank Account) ಮಾತ್ರ ಜಮಾ ಆಗಿದೆ.

These 4 rules are mandatory to get Gruha Lakshmi money

ಹೌದು, ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಒಂದಿಷ್ಟು ಮಹಿಳೆಯರಿಗೆ ಮಾತ್ರ ಹಣ ಬಿಡುಗಡೆ ಮಾಡುವ ಮೂಲಕ ಟೆಸ್ಟಿಂಗ್ DBT ಮಾಡಲಾಗಿದೆ. ಹಾಗಾಗಿ ಕೋಟ್ಯಾಂತರ ಫಲಾನುಭವಿ ಮಹಿಳೆಯರ ಪೈಕಿ ಸುಮಾರು 20ರಿಂದ 30,000 ಮಹಿಳೆಯರಿಗೆ ರಾಜ್ಯದ ಬೇರೆ ಬೇರೆ ಜಿಲ್ಲೆಯ ಕೆಲವು ಮಹಿಳೆಯರಿಗೆ 6ನೇ ಕಂತಿನ ಹಣವು ಕೂಡ ಬಿಡುಗಡೆ ಆಗಿದೆ. ಫೆಬ್ರುವರಿ 20ರ ಒಳಗೆ ಪ್ರತಿಯೊಬ್ಬರ ಖಾತೆಗೂ ಆರನೇ ಕಂತಿನ ಹಣವು ಬಂದು (Money Deposit) ತಲುಪಲಿದೆ.

ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರದ ಮಹತ್ವದ ಅಪ್ಡೇಟ್!

ಗೃಹಲಕ್ಷ್ಮಿ ಯೋಜನೆ ಹಣ

ಸರ್ಕಾರ ಈಗ ಗೃಹಲಕ್ಷ್ಮಿ ಯೋಜನೆಯ ವಿಚಾರದಲ್ಲಿಯೂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಅನರ್ಹರು ಯಾವುದೇ ಕಾರಣಕ್ಕೂ ಉಚಿತ ಹಣ ಪಡೆದುಕೊಳ್ಳಬಾರದು ಹಾಗೂ ಅರ್ಹರಿಗೆ ಯಾವುದೇ ಕಾರಣಕ್ಕೂ ಹಣ ಮಿಸ್ ಆಗಬಾರದು ಎನ್ನುವ ಕಾರಣಕ್ಕೆ ಬೇರೆ ಬೇರೆ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ ಅವುಗಳಲ್ಲಿ ಈ ಕೆಳಗಿನ ಎರಡು ನಿಯಮಗಳು ಕಡ್ಡಾಯವಾಗಿವೆ.

ಎನ್ ಪಿ ಸಿ ಐ ಮಾಡಿಸಿಕೊಳ್ಳಿ! (NPCI mapping)

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎನ್‌ಪಿಸಿಐ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ನಿಮ್ಮ ಖಾತೆಗೆ ಮಾಡಿಸಿಕೊಂಡರೆ ಮಾತ್ರ ಸಾಲುವುದಿಲ್ಲ. ಅದರ ಜೊತೆಗೆ ಎನ್‌ಪಿಸಿಐ ಆಗಿರಬೇಕು. ಆದರೆ ಇಲ್ಲಿ ನೀವು ಗಮನಿಸಬೇಕಾದ ಒಂದು ವಿಚಾರ ಏನೆಂದರೆ, ನಿಮಗೆ ಈವರೆಗೆ ಐದು ಕಂತಿನ ಹಣ ಬಂದಿದ್ದರೆ, ಆಟೋಮ್ಯಾಟಿಕ್ ಆಗಿ ನಿಮ್ಮ ಖಾತೆಗೆ ಎನ್ ಪಿ ಸಿ ಐ ಕೂಡ ಆಗಿರುತ್ತದೆ. ಹಾಗಾಗಿ ಮುಂದಿನ ಕಂತಿನ ಹಣ ಬರುವುದಿಲ್ಲವೇನೋ ಎನ್ನುವ ಚಿಂತೆ ನಿಮಗೆ ಬೇಡ.

ಗೃಹಜ್ಯೋತಿ ಯೋಜನೆಯ ಉಚಿತ ಕರೆಂಟ್ ಬಳಕೆದಾರರಿಗೆ ಬಿಗ್ ಅಪ್ಡೇಟ್! ಇಲ್ಲಿದೆ ಮಾಹಿತಿ

Gruha Lakshmi Yojanaಆದರೆ ಯಾವ ಮಹಿಳೆಯರ ಖಾತೆಗೆ ಬಿಡುಗಡೆಯಾದ ಎಲ್ಲಾ ಕಂತಿನ ಹಣವು ಬಂದು ಸೇರಿಲ್ಲವೋ ಅಂತವರು ಖಂಡಿತವಾಗಿಯೂ ತಮ್ಮ ಬ್ಯಾಂಕ್ ಶಾಖೆಗೆ ಹೋಗಿ ಬ್ಯಾಂಕ್ ಪಾಸ್ ಬುಕ್ ವಿವರ ಹಾಗೂ ಆಧಾರ್ ಕಾರ್ಡ್ ವಿವರಗಳನ್ನು ನೀಡಿ NPCI ಮಾಡಿಸಬೇಕು.

NPCI ಮಾಡಿಸುವುದು ಹೇಗೆ? (How to do NPCI?)

NPCI ಮಾಡಿಸಲು ನೀವು ನಿಮ್ಮ ಬ್ಯಾಂಕ್ ಪಾಸ್ ಬುಕ್ ಹಾಗೂ ಆಧಾರ್ ಕಾರ್ಡ್ ಪ್ರತಿ ತೆಗೆದುಕೊಂಡು ಬ್ಯಾಂಕ್ ಶಾಖೆಗೆ ಹೋಗಿ ಅದು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುವ ಬ್ಯಾಂಕ್ ಶಾಖೆಯೇ ಆಗಿರಬೇಕು. ಈಗ ನೀವು ಬ್ಯಾಂಕ್ ಗೆ ಹೋಗಿ ಅಲ್ಲಿ ಸಿಬ್ಬಂದಿಗಳ ಬಳಿ NPCI ಮಾಡಿಸಬೇಕು ಎಂದು ಕೇಳಿಕೊಳ್ಳಿ. ಅಲ್ಲಿ ಎನ್‌ಪಿಸಿಐ ಮ್ಯಾಪಿಂಗ್ ಎನ್ನುವ ಒಂದು ಅರ್ಜಿ ಫಾರಂ ಇರುತ್ತದೆ. ಅದನ್ನ ನಿಮಗೆ ಕೊಡುತ್ತಾರೆ. ನೀವು ಅರ್ಜಿ ಫಾರಂ ಭರ್ತಿ ಮಾಡಿ. ಅಗತ್ಯ ಇರುವ ದಾಖಲೆಗಳನ್ನು ನೀಡಿ NPCI ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಿ.

ಇಂತಹ ರೈತರಿಗೆ ಕೃಷಿ ನವೋದ್ಯಮ ಯೋಜನೆಯ ಅಡಿಯಲ್ಲಿ 20 ಲಕ್ಷ ಸಹಾಯಧನ!

ಆಧಾರ್ ಕಾರ್ಡ್ ಅಪ್ಡೇಟ್! (Aadhar Card update)

ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂದಿನ ಹಣ ನಿಮ್ಮ ಖಾತೆಗೆ ಬರಬೇಕು ಅಂದ್ರೆ, ಇದು ಕೂಡ ಕಡ್ಡಾಯವಾಗಿರುವ ನಿಯಮವಾಗಿದೆ. ನಿಮ್ಮ ಬಳಿ 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಇದ್ರೆ ತಕ್ಷಣ ಅಪ್ಡೇಟ್ ಮಾಡಿಸಿಕೊಳ್ಳಿ. ಒಂದು ವೇಳೆ ನೀವು ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡದೇ ಇದ್ದರೆ ಮುಂದಿನ ಕಂತಿನ ಗೃಹಲಕ್ಷ್ಮಿ ಹಣ ಮಾತ್ರವಲ್ಲ, ಸರ್ಕಾರದ ಇತರ ಯಾವ ಯೋಜನೆಯ ಪ್ರಯೋಜನವೂ ಕೂಡ ನಿಮಗೆ ಸಿಗುವುದಿಲ್ಲ.

26,000 ಅರ್ಹ ಮಹಿಳೆಯರಿಗೂ ಹಣ ಜಮಾ ಆಗಿಲ್ಲ ಯಾಕೆ?

ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕು ಅಂದ್ರೆ ಸರ್ಕಾರ ಕೆಲವೊಂದು ಮಾನದಂಡಗಳನ್ನು ನಿಗದಿ ಮಾಡಿದೆ. ಇದು ನಿಮಗೂ ಗೊತ್ತು. ಆದರೆ ಅದೆಷ್ಟೋ ಜನ ಈ ಮಾನದಂಡಗಳನ್ನು ಮೀರಿ ಅರ್ಜಿ ಸಲ್ಲಿಸಿದ್ದು, ಅಂತಹ ಅರ್ಜಿಗಳನ್ನ ಸರ್ಕಾರ ರದ್ದು ಮಾಡಿದೆ. ಆದರೆ ದುರದೃಷ್ಟವಶಾತ್ ಅರ್ಹ ಮಹಿಳೆಯರ ಅರ್ಜಿಯೂ ಕೂಡ ರದ್ದಾಗಿದ್ದು, ಅಂಥವರ ಖಾತೆಗೆ 5ನೇ ಕಂತಿನ ಹಣ ಬಂದಿಲ್ಲ.

ಇನ್ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಪಡೆಯೋಕೆ 4 ಹೊಸ ನಿಯಮ ಜಾರಿ ತಂದ ಸರ್ಕಾರ

ಆದರೆ ಸರ್ಕಾರ ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದೆ. ತಾಂತ್ರಿಕ ದೋಷ (technical issues) ದಿಂದ 26,000 ಮಹಿಳೆಯರ ಅರ್ಜಿ ರದ್ದಾಗಿದೆ ಆದರೆ ಅವರು ನಿಜವಾಗಿ ಅರ್ಹ ಫಲಾನುಭವಿಗಳಾಗಿದ್ದು, 6 ಮತ್ತು 7ನೇ ಕಂತಿನ ಹಣವನ್ನು ಒಟ್ಟಾಗಿ ಅಂತಹ ಮಹಿಳೆಯರ ಖಾತೆಗೆ ಜಮಾ ಮಾಡುವುದಾಗಿ ಭರವಸೆ ನೀಡಲಾಗಿದೆ.

Here is the big update on Gruha Lakshmi Yojana Next Installment