ಇನ್ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಪಡೆಯೋಕೆ 4 ಹೊಸ ನಿಯಮ ಜಾರಿ ತಂದ ಸರ್ಕಾರ

ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ೨೦೦೦ ರೂ. ನೀಡುವ ಗೃಹ ಲಕ್ಷ್ಮಿ ಯೋಜನೆಯೂ (Gruha Lakshmi Scheme) ಒಂದಾಗಿದೆ. ಈಗಾಗಲೇ ರಾಜ್ಯದ ಕೊಟ್ಯಂತರ ಮಹಿಳೆಯರು ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ.

ಆದರೆ ಇನ್ನು ಲಕ್ಷಾಂತರ ಮಹಿಳೆಯರು ಅರ್ಜಿ ಸಲ್ಲಿಸಿ ಹಣ ಜಮಾ ಆಗುತ್ತದೆ ಎಂದು ಕಾಯುತ್ತಿದ್ದಾರೆ. ತಾಂತ್ರಿಕ ತೊಂದರೆಯಿಂದ ಅವರ ಖಾತೆಗೆ ಹಣ (Bank Account) ಜಮಾ ಆಗಿಲ್ಲ.

ಇಂತಹವರ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಲಿದೆ! ಸರ್ಕಾರ ಖಡಕ್ ವಾರ್ನಿಗ್

ಇದನ್ನು ಸರಿ ಪಡಿಸಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಣ ಜಮಾ (Money Deposit) ಮಾಡಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಜೊತೆಗೆ ಈ ತಿಂಗಳಿನಿಂದ ನಾಲ್ಕು ನಿಯಮಗಳನ್ನು ಜಾರಿ ಮಾಡಲಾಗಿದೆ. ಹಾಗದರೆ ಅವು ಯಾವುದು ಎಂದು ಈಗ ನೋಡೋಣ.

ಇ-ಕೆವೈಸಿ ಮಾಡಿಸಿ

ಈಗಾಗಲೇ ಇ-ಕೆವೈಸಿ ಮಾಡಿಸಿದವರು ಇದನ್ನು ಪುನಃ ಮಾಡಿಸುವ ಅಗತ್ಯ ಇರುವುದಿಲ್ಲ. ಇಲ್ಲಿಯವರೆಗೆ ಯಾರು ಇ-ಕೆವೈಸಿ ಮಾಡಿಸಿಲ್ಲವೋ ಅವರು ಇ-ಕೆವೈಸಿ ಮಾಡಿಸಬೇಕಾಗುತ್ತದೆ. ಇದಕ್ಕಾಗಿ ಹತ್ತಿರದ ಬಾಪೂಜಿ ಸೇವಾ ಕೇಂದ್ರ ಇಲ್ಲವೇ ಗ್ರಾಮ್ ಒನ್ಗೆ ಭೇಟಿ ನೀಡಿ ಅಲ್ಲಿ ನಿಮ್ಮ ಆಧಾರ್ ಕಾರ್ಡ್, ಪಡಿತರ ಚೀಟಿ, ಪಾಸ್ಬುಕ್, ಮೊಬೈಲ್ ನಂಬರ್ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು.

ರೈತರಿಗೆ ಗುಡ್ ನ್ಯೂಸ್; ಈ ಬ್ಯಾಂಕುಗಳಲ್ಲಿ ಮಾಡಿದ ಸಾಲದ ಮೇಲಿನ ಬಡ್ಡಿ ಮನ್ನಾ

ಎನ್ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳಿ:

ಇದುವರೆಗೂ ಒಂದೂ ಕಂತಿನ ಹಣ ಪಡೆಯದ ಫಲಾನುಭವಿಗಳಿಗೆ ಮಾತ್ರ ಈ ಎನ್ಪಿಸಿಐ ಮ್ಯಾಪಿಂಗ್ ಮಾಡುವುದು ಅನ್ವಯಿಸುತ್ತದೆ. ಈಗಾಗಲೇ ೫ ಕಂತಿನ ಹಣ ಪಡೆದುಕೊಂಡವರಿಗೆ ಇದು ಅನ್ವಯಿಸುವುದಿಲ್ಲ. ಗೃಹ ಲಕ್ಷ್ಮಿ ಯೋಜನೆಗಾಗಿ ಅರ್ಜಿ ಸಲ್ಲಿಸುವ ವೇಳೆ ಯಾವ ಬ್ಯಾಂಕ್ ಖಾತೆಯ (Bank Account) ಸಂಖ್ಯೆ ನೀಡಿದ್ದೀರೋ ಆ ಬ್ಯಾಂಕ್ಗೆ ಖುದ್ದಾಗಿ ತೆರಳಿ ಎನ್ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳಬಹುದು. ಇಲ್ಲದೆ ಇದ್ದಲ್ಲಿ ಹತ್ತಿರದ ಗ್ರಾಮ್ ಒನ್, ಬಾಪೂಜಿ ಸೇವಾ ಕೇಂದ್ರ, ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ತೆರಳಿ ಸಹ ಎನ್ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳಬಹುದಾಗಿದೆ.

ರೇಷನ್ ಕಾರ್ಡ್-ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಗಡುವು ವಿಸ್ತರಣೆ! ಇಲ್ಲಿದೆ ಮಾಹಿತಿ

Gruha Lakshmi Yojana ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದಲ್ಲಿ ಬೇರೆ ಬ್ಯಾಂಕ್ ಖಾತೆ ನೀಡಿ:

ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗದಿರಲು ಬ್ಯಾಂಕ್ ಖಾತೆಯಲ್ಲಿ ಇರುವ ತಾಂತ್ರಿಕ ದೋಷಗಳು ಪ್ರಮುಖ ಕಾರಣವಾಗಿದೆ. ಹೆಚ್ಚಿನ ಜನರು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿರುವುದಿಲ್ಲ. ಇನ್ನು ಕೆಲವರು ಮೊಬೈಲ್ ಸಂಖ್ಯೆ ಜೋಡಣೆ ಮಾಡಿರುವುದಿಲ್ಲ.

ಹೀಗೆ ಹಲವಾರು ಕಾರಣಗಳಿಂದಾಗಿ ನಿಮ್ಮ ಖಾತೆಗೆ ಗೃಹ ಲಕ್ಷ್ಮಿ ಹಣ ಜಮಾ ಆಗಿರುವುದಿಲ್ಲ. ಆದ್ದರಿಂದ ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದವರು ಬೇರೆ ಸರಿಯಾಗಿರುವ ಬ್ಯಾಂಕ್ ಖಾತೆ ನೀಡಿ ಹಣ ಜಮಾ ಆಗುವಂತೆ ಮಾಡಿಕೊಳ್ಳಬಹುದಾಗಿದೆ.

26 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಕ್ಯಾನ್ಸಲ್! ಇಲ್ಲಿದೆ ಕಾರಣ

ಸ್ಟೇಟಸ್ ಸಮಸ್ಯೆ ಪರಿಹರಿಸಿಕೊಳ್ಳಿ:

ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಹಲವಾರು ಮಹಿಳೆಯರ ಬ್ಯಾಂಕ್ ಖಾತೆಗಳು ನಿಷ್ಕ್ರಿಯಗೊಂಡಿದೆ. ಇದರಿಂದಾಗಿ ಅವರ ಖಾತೆ ಹಣ ಜಮಾ ಮಾಡಲು ಆಗುತ್ತಿಲ್ಲ. ಹಾಗಾಗಿ ಬ್ಯಾಂಕ್ ಖಾತೆಯ ಸ್ಟೇಟಸ್ ಸಮಸ್ಯೆ ಇದ್ದವರು ಕೂಡಲೇ ಬ್ಯಾಂಕ್ ತೆರಳಿ ಪರಿಶೀಲನೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.

Government has implemented 4 new rules to get Gruha Lakshmi Yojana money

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories