ರೇಷನ್ ಕಾರ್ಡ್-ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಗಡುವು ವಿಸ್ತರಣೆ! ಇಲ್ಲಿದೆ ಮಾಹಿತಿ

Story Highlights

ಆಧಾರ್ ಕಾರ್ಡ್ ಪಡಿತರ ಚೀಟಿ ಲಿಂಕ್ ಮಾಡಲು ಸರ್ಕಾರ ಸೂಚಿಸಿತ್ತು. ಆದರೂ ಕೆಲವೊಬ್ಬರು ಇಲ್ಲಿಯವರೆಗೂ ಲಿಂಕ್ ಮಾಡಿಸಿಕೊಂಡಿಲ್ಲ

ಭಾರತದಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಯು ಈ ದೇಶದ ಪ್ರಜೆ ಎನ್ನುವ ಕೆಲವೊಂದು ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಅವುಗಳಲ್ಲಿ ಆಧಾರ್ ಕಾರ್ಡ್ (Aadhaar Card) , ಪಾನ್ ಕಾರ್ಡ್ (PAN Card), ಓಟರ್ ಐಡಿ ಹೀಗೆ ಕೆಲವೊಂದು ದಾಖಲೆಗಳನ್ನು ಹೊಂದಿರುವುದು ಅನಿವಾರ್ಯ..

ಇದೇ ಸಾಲಿಗೆ ಪಡಿತರ ಚೀಟಿಯು ಸೇರುತ್ತದೆ. ಪಡಿತರ ಚೀಟಿಯಲ್ಲಿಯಲ್ಲಿ ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಎಪಿಎಲ್ ಪಡಿತರ ಚೀಟಿ (APL Card) , ಬಿಪಿಎಲ್ ಪಡಿತರ ಚೀಟಿ (BPL Ration card) ಎಂದು ವಿಭಾಗಿಸಲಾಗಿದೆ.

ಆಧಾರ್ ಕಾರ್ಡ್ ಪಡಿತರ ಚೀಟಿ ಲಿಂಕ್ ಮಾಡಲು ಸರ್ಕಾರ ಸೂಚಿಸಿತ್ತು. ಆದರೂ ಕೆಲವೊಬ್ಬರು ಇಲ್ಲಿಯವರೆಗೂ ಲಿಂಕ್ ಮಾಡಿಸಿಕೊಂಡಿಲ್ಲ. ಇದೀಗ ಕೊನೆಯ ಅವಕಾಶ ನೀಡಿದೆ.

ನಿಮ್ಮ ಜಮೀನಿನ ಪಹಣಿಯಲ್ಲಿ ಯಾವುದೇ ಲೋಪದೋಷ ಸರಿಮಾಡಿಕೊಳ್ಳಲು ಅವಕಾಶ

ಹಾಗಾದರೆ ಎಲ್ಲಿಯವರೆಗೆ ಅವಕಾಶ ಇದೆ ಎಂದು ಈಗ ತಿಳಿದುಕೊಳ್ಳೊಣ

ಆಧಾರ್ ಕಾರ್ಡ್ಗೆ ಪಡಿತರ ಚೀಟಿ ಲಿಂಕ್ ಮಾಡುವ ಗಡುವನ್ನು ರಾಜ್ಯ ಸರ್ಕಾರವು ಫೆ.28ರ ವರೆಗೆ ವಿಸ್ತರಣೆ ಮಾಡಿದೆ. ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಇ-ಕೆವೈಸಿ ಮಾಡಿಸಬೇಕು. ಮತ್ತು ಪಡಿತರ ಚೀಟಿಯಲ್ಲಿ ಮೊಬೈಲ್ ಸಂಖ್ಯೆ ಸೇರಿಸಲು ಫೆ.28ರ ವರೆಗೆ ಅವಕಾಶ ನೀಡಲಾಗಿದೆ. ಈ ಕುರಿತು ರಾಜ್ಯ ಸರ್ಕಾರದ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.

ಇದುವರೆಗೂ ಆಧಾರ್ ಕಾರ್ಡ್ಗೆ ಪಡಿತರ ಕಾರ್ಡ್ ಲಿಂಕ್ ಮಾಡದ ಹಾಗೂ ಇ-ಕೆವೈಸಿ (E KYC) ಮಾಡಿಸಿಕೊಳ್ಳದ ಗ್ರಾಹಕರಿಗಾಗಿ ಕೊನೆಯ ಅವಕಾಶವನ್ನು ಸರ್ಕಾರ ನೀಡಿದೆ. ಹೀಗಾಗಿ ಜನರಿಗೆ ಒಳ್ಳೆಯದಾಗಲಿ. ಹೆಚ್ಚಿನ ಜನರು ಉಪಯೋಗ ಪಡೆದುಕೊಳ್ಳಲಿ ಎನ್ನುವ ಸಲುವಾಗಿ ರಾಜ್ಯ ಸರ್ಕಾರದ ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಈ ಆದೇಶ ಹೊರಡಿಸಿದೆ.

26 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಕ್ಯಾನ್ಸಲ್! ಇಲ್ಲಿದೆ ಕಾರಣ

Ration Card, Aadhaar Card Linkಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ (transparency) ಇರಬೇಕು ಎನ್ನುವ ಸಲುವಾಗಿ ಇಲಾಖೆಯು ಈ ನಿರ್ಧಾರ ಕೈಗೊಂಡಿದೆ. ಒಂದು ವೇಳೆ ಈ ಬಾರಿಯೂ ಗ್ರಾಹಕರು ತಮ್ಮ ಆಧಾರ್ ಕಾರ್ಡ್ಗೆ ಪಡಿತರ ಕಾರ್ಡ್ ಲಿಂಕ್ ಮಾಡದೇ ಇದ್ದಲ್ಲಿ ಅಂತಹ ಕಾರ್ಡ್ಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ನಿಬಂಧ ತೆರವು ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಹೊಸ ರೇಷನ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರದ ಮಹತ್ವದ ಅಪ್ಡೇಟ್! ಇಲ್ಲಿದೆ ಮಾಹಿತಿ

ಪಡಿತರ ಚೀಟಿಯಲ್ಲಿ ನಮೂದಿಸಲಾದ ಹೆಸರು, ಜನ್ಮದಿನಾಂಕ, ಲಿಂಗವನ್ನು ಆಧಾರ್ ಕಾರ್ಡ್ನಲ್ಲಿ ಇರುವಂತೆಯೇ ಇದೆ ಎನ್ನುವುದನ್ನು ಇ-ಕೆವೈಸಿ ಮಾಡುವುದರಿಂದ ಖಚಿತಪಡುತ್ತದೆ. ಇದರಿಂದ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರಲಿದೆ. ಇಲ್ಲಿಯ ವರೆಗೂ ಇ -ಕೆವೈಸಿ ಮಾಡಿಸಿಕೊಳ್ಳದವರು ತಮ್ಮ ಹತ್ತಿರದ ಪಡಿತರ ಅಂಗಡಿಗೆ ಭೇಟಿ ನೀಡಿ ಅಲ್ಲಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು.

ಅಧಿಕಾರಿಗಳು ಸಹ ಯಾವುದೇ ತೊಂದರೆ ನೀಡದೆ, ನೆಪ ಹೇಳದೆ ಗ್ರಾಹಕರಿಗೆ ಕೂಡಲೇ ಇ-ಕೆವೈಸಿ ಮಾಡಿಕೊಡಬೇಕು. ಗ್ರಾಹಕರಿಗೆ ತೊಂದರೆಯಾದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರವು ತಿಳಿಸಿದೆ. ಹಾಗಾಗಿ ಜನರು ಸಹ ಸರ್ಕಾರದ ಸೂಚನೆ ಪಾಲಿಸಿ ಯಾರು ಇದುವರೆಗೂ ಇ-ಕೆವೈಸಿ ಮಾಡಿಸಿಕೊಂಡಿಲ್ಲವೋ ಕೂಡಲೇ ಹೋಗಿ ಮಾಡಿಸಿಕೊಳ್ಳುವುದು ಒಳಿತು. https://epds.hp.gov.in/ ಈ ವೆಬ್ ಸೈಟ್ ನಲ್ಲಿ ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡಿಸಬಹುದು.

ರದ್ದಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ! ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ ಚೆಕ್ ಮಾಡಿ

Extension of deadline for linking Ration Card with Aadhaar Card

Related Stories