ಹೊಸ ರೇಷನ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರದ ಮಹತ್ವದ ಅಪ್ಡೇಟ್! ಇಲ್ಲಿದೆ ಮಾಹಿತಿ
ಇನ್ನೂ ಕೆಲವೇ ದಿನಗಳಲ್ಲಿ ಹೊಸ ಪಡಿತರ ಚೀಟಿ (new ration card) ಪಡೆದುಕೊಳ್ಳಬಹುದು ಎನ್ನುವ ಸುದ್ದಿ ಸಿಕ್ಕಿದೆ.
ಹೊಸ ರೇಷನ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇಷ್ಟು ದಿನ ಹೊಸ ಬಿಪಿಎಲ್ ಕಾರ್ಡ್ (BPL card) ಪಡೆದುಕೊಳ್ಳಲು ಕಾದು ಕುಳಿತವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇನ್ನೂ ಕೆಲವೇ ದಿನಗಳಲ್ಲಿ ಹೊಸ ಪಡಿತರ ಚೀಟಿ (new ration card) ಪಡೆದುಕೊಳ್ಳಬಹುದು ಎನ್ನುವ ಸುದ್ದಿ ಸಿಕ್ಕಿದೆ.
ಪಡಿತರ ಚೀಟಿ ರದ್ದುಪಡಿ! (Ration card cancellation)
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ನಂತರ ರೇಷನ್ ಕಾರ್ಡ್ ಬಹಳ ಪ್ರಮುಖ ದಾಖಲೆ ಎನಿಸಿಕೊಂಡಿದೆ. ಯಾಕಂದರೆ ಬಡತನ ರೇಖೆಗಿಂತ ಕೆಳಗಿರುವ ಅವರನ್ನು ಗುರುತಿಸಲು ರೇಷನ್ ಕಾರ್ಡ್ ಪ್ರಮುಖ ಮಾನದಂಡವಾಗಿರುತ್ತದೆ.
ಹಾಗಾಗಿ ಸರ್ಕಾರದ ಉಚಿತ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ರೇಷನ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯ. ಆದರೆ ದುರದೃಷ್ಟವಶಾತ್, ನಿಜವಾಗಿ ಯಾರು ಅರ್ಹರು ಅವರಿಗಿಂತ ಅನರ್ಹರು ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಪಡೆದುಕೊಂಡಿರುವುದೇ ಹೆಚ್ಚು. ಇದನ್ನು ಗಮನದಲ್ಲಿ ಇಟ್ಟು ಕೊಂಡಿರುವ ಸರ್ಕಾರ ಇಂತಹ ರೇಷನ್ ಕಾರ್ಡನ್ನು ರದ್ದುಪಡಿ ಮಾಡುತ್ತಿದೆ.
ರದ್ದಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ! ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ ಚೆಕ್ ಮಾಡಿ
ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರತಿ ತಿಂಗಳು ಜಿಲ್ಲಾವಾರು, ಕ್ಯಾನ್ಸಲ್ ಆಗಿರುವ ರೇಷನ್ ಕಾರ್ಡ್ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಈ ಲಿಸ್ಟಲ್ಲಿ ನೀವು ನಿಮ್ಮ ಹೆಸರು ಇದೆಯಾ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ. ನಿಮ್ಮ ಹೆಸರು ಕೂಡ ಇದ್ರೆ ಮುಂದಿನ ಯಾವುದೇ ಸರ್ಕಾರದ ಯೋಜನೆ ಪ್ರಯೋಜನವನ್ನು ನೀವು ಪಡೆದುಕೊಳ್ಳಲು ಸಾಧ್ಯವಿಲ್ಲ.
ಮತ್ತೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ!
ಸರ್ಕಾರದ ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ರೇಷನ್ ಕಾರ್ಡ್ ಹೊಂದಿರುವವರು ತಮ್ಮ ಕಾರ್ಡ್ ನಲ್ಲಿ ಕೆಲವೊಂದಿಷ್ಟು ತಿದ್ದುಪಡಿ ಮಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ಸರ್ಕಾರ ನಾಲ್ಕು ಬಾರಿ ತಿದ್ದುಪಡಿಗೆ ಅವಕಾಶ ನೀಡಿದೆ.
ಆದರೂ ಎಲ್ಲಾ ಫಲಾನುಭವಿ ರೇಷನ್ ಕಾರ್ಡ್ ದಾರರ, ಕಾರ್ಡ್ ತಿದ್ದುಪಡಿ ಆಗಿಲ್ಲ ಇದಕ್ಕೆ ಮುಖ್ಯವಾಗಿರುವ ಕಾರಣ ಸರ್ವರ್ ಸಮಸ್ಯೆ. ಎಷ್ಟೇ ಬಾರಿ ಸೇವಾ ಕೇಂದ್ರಗಳಿಗೆ ಹೋದರೂ ಕೂಡ ಸರ್ವರ್ ಸಮಸ್ಯೆ ಇರುವ ಕಾರಣದಿಂದ ಹಲವರ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.
ಇದೇ ಕಾರಣಕ್ಕೆ ಮತ್ತೆ ತಿದ್ದುಪಡಿಗೆ ಸರ್ಕಾರ ಅವಕಾಶ ಮಾಡಿಕೊಡುತ್ತಿದೆ. ಅಧಿಕೃತ ದಿನಾಂಕ ಘೋಷಣೆ ಆಗುತ್ತಿದ್ದ ಹಾಗೆ ನಿಮಗೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಅಗತ್ಯವಿದ್ದರೆ ಮಾಡಿಸಿಕೊಳ್ಳಬಹುದು.
ಗೃಹಜ್ಯೋತಿ ಉಚಿತ ಕರೆಂಟ್ ಬಳಕೆದಾರರಿಗೆ ಇನ್ನೊಂದು ಸಿಹಿಸುದ್ದಿ! ಈಗ ಇನ್ನಷ್ಟು ಫ್ರೀ
ಹೊಸ ರೇಷನ್ ಕಾರ್ಡ್ ವಿತರಣೆ ಯಾವಾಗ!
ರಾಜ್ಯ ಸರ್ಕಾರಕ್ಕೆ ಹೊಸ ರೇಷನ್ ಕಾರ್ಡ್ ವಿತರಣೆ ದೊಡ್ಡ ತಲೆ ನೋವಾಗಿದೆ. ಒಂದು ಕಡೆ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಿ ಎಂದು ಫಲಾನುಭವಿಗಳು ಆಗ್ರಹಿಸುತ್ತಿದ್ದರೆ, ಇನ್ನೊಂದು ಕಡೆ ಅನರ್ಹರು ಕೂಡ ಪಡಿತರ ಚೀಟಿ ಪಡೆದುಕೊಂಡು, ಇಷ್ಟು ದಿನ ಅದರ ಪ್ರಯೋಜನ ಪಡೆದಿದ್ದಾರೆ ಅಂತವರನ್ನು ಗುರುತಿಸಿ ಅವರ ಕಾರ್ಡ್ ರದ್ದುಪಡಿ ಮಾಡುವುದು ಕೂಡ ಸರ್ಕಾರಕ್ಕೆ ದೊಡ್ಡ ಟಾಸ್ಕ್ ಆಗಿದೆ.
ಈಗಾಗಲೇ ರೇಷನ್ ಕಾರ್ಡ್ ರದ್ದುಪಡಿ ಕಾರ್ಯ ಆರಂಭವಾಗಿದ್ದು, ಲಕ್ಷಾಂತರ ಕಾರ್ಡ್ ರದ್ದುಪಡಿಸಲಾಗಿದೆ. ಇದೀಗ ಹೊಸ ರೇಷನ್ ಕಾರ್ಡ್ ಅರ್ಜಿಗಳನ್ನು ಪರಿಶೀಲಿಸಿ ಸದ್ಯದಲ್ಲಿಯೇ ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ತಿಳಿಸಿದ್ದಾರೆ. ಜನರ ನಿರೀಕ್ಷೆಯಂತೆ ಬಹುಶಹ ಇದೇ ಫೆಬ್ರವರಿ ತಿಂಗಳಲ್ಲಿ ಹೊಸ ರೇಷನ್ ಕಾರ್ಡ್ ವಿತರಣೆ ಕೆಲಸ ಆರಂಭವಾಗಬಹುದು.
ರೇಷನ್ ಕಾರ್ಡ್ ಇರೋರಿಗೆ ಇನ್ನೊಂದು ಹೊಸ ಸೌಲಭ್ಯ! ಮಹತ್ವದ ನಿರ್ಧಾರ
ಹೊಸ ರೇಷನ್ ಕಾರ್ಡ್ ಗೆ ಯಾವಾಗ ಅರ್ಜಿ ಸಲ್ಲಿಸಬಹುದು?
ಸದ್ಯ ಸರ್ಕಾರ ಈ ಬಗ್ಗೆ ಚಕಾರವನ್ನು ಎತ್ತಿಲ್ಲ. ಯಾಕಂದ್ರೆ ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆಗಿದ್ದು, ಇವುಗಳ ವಿತರಣೆ ಆಗುವವರೆಗೂ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಒಂದು ಜಿಲ್ಲೆಗೆ ಇಷ್ಟೇ ರೇಷನ್ ಕಾರ್ಡ್ ವಿತರಣೆ ಮಾಡಬೇಕು ಎನ್ನುವ ನಿಯಮ ಇರುತ್ತದೆ. ಹಾಗಾಗಿ ಅನರ್ಹರು ರೇಷನ್ ಕಾರ್ಡ್ ಪಡೆದುಕೊಂಡಿದ್ದರೆ ಅವರ ರೇಷನ್ ಕಾರ್ಡ್ ರದ್ದುಪಡಿ ಮಾಡಿ ಅರ್ಹರಿಗೆ ಪಡಿತರ ಚೀಟಿ ವಿತರಣೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಹಣಕ್ಕೆ ಮತ್ತೊಂದು ರೂಲ್ಸ್; ಹೊಸ ಅಪ್ಡೇಟ್
Important update of the government about the distribution of new ration card