ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಹಣಕ್ಕೆ ಮತ್ತೊಂದು ರೂಲ್ಸ್; ಹೊಸ ಅಪ್ಡೇಟ್

ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಣ ಅಥವಾ ಅನ್ನಭಾಗ್ಯ ಯೋಜನೆ (Annabhagya scheme) ಯ ಹಣ ನಿಮ್ಮ ಖಾತೆಗೆ (Bank Account) ತಲುಪಬೇಕು ಅಂದ್ರೆ ಈ ಒಂದು ಕೆಲಸವನ್ನು ಮುಖ್ಯವಾಗಿ ಮಾಡಲೇಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಮುಂದಿನ ಕಂತಿನ ಹಣ ನಿಮ್ಮ ಖಾತೆಯನ್ನು ತಲುಪಲು ಬ್ಯಾಂಕಿಗೆ ಹೋಗಿ ಮೊದಲು ಈ ಕೆಲಸ ಮಾಡಿ.
ಗೃಹಲಕ್ಷ್ಮಿ ಯೋಜನೆ ಆರಂಭವಾಗಿ ಏಳು ತಿಂಗಳು ಕಳೆದಿದ್ದು, ಇಲ್ಲಿಯವರೆಗೆ ಐದು ಕಂತುಗಳಲ್ಲಿ ಮಹಿಳೆಯರಿಗೆ 10,000ಗಳನ್ನು ಖಾತೆಗೆ ಜಮಾ (DBT) ಮಾಡಲಾಗಿದೆ. ಇನ್ನೇನು ಸದ್ಯದಲ್ಲಿಯೇ 6ನೇ ಕಂತಿನ ಹಣ ಕೂಡ ಇದೇ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆ ಆಗಲಿದೆ (Money Deposit).
ಸರ್ಕಾರಿ ಜಾಗ ಒತ್ತುವರಿ ಹಾಗೂ ಮನೆ ಕಟ್ಟಿಕೊಂಡವರಿಗೆ ರಾತ್ರೋ-ರಾತ್ರಿ ಹೊಸ ರೂಲ್ಸ್!
ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ, ಗೃಹಲಕ್ಷ್ಮಿಯ ಆರನೇ ಕಂತಿನ ಹಣ ಫೆಬ್ರವರಿ 20ನೇ ತಾರೀಕಿನ ಒಳಗೆ ಗೃಹಿಣಿಯರ ಖಾತೆಯನ್ನು ತಲುಪಬಹುದು. ಆದರೆ ಮುಂದಿನ ಕಂತಿನ ಹಣ ನಿಮ್ಮ ಬ್ಯಾಂಕ್ ಅಕೌಂಟ್ (Bank account ) ಗೆ ಜಮಾ ಆಗಬೇಕು ಅಂದ್ರೆ ನೀವು ಈ ಕೆಲಸ ಮಾಡುವುದು ಕಡ್ಡಾಯ ಅದುವೇ ಎನ್ ಪಿಸಿಐ ಮಾಡಿಸುವುದು.
NPCI ಮಾಡಿಸುವುದು ಕಡ್ಡಾಯ!
National payments Corporation of India NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿದೆ. ದೇಶದಲ್ಲಿ ಸುಮಾರು 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು, ಆದರೆ ಇಂಥದ್ರಲ್ಲಿ ಸುಮಾರು ನಾಲ್ಕರಿಂದ ಐದು ಲಕ್ಷ ಜನರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲ.
ಇದಕ್ಕಾಗಿ ಸರ್ಕಾರ ಬೇರೆ ಬೇರೆ ರೀತಿಯ ಉಪಕ್ರಮ (initiative) ಗಳ ಮೂಲಕ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲು ಪ್ರಯತ್ನಿಸುತ್ತಿದೆ. ಇದೀಗ ಕೆವೈಸಿ (E-KYC) ಪ್ರಕ್ರಿಯೆ ಮುಗಿದಿದ್ದರೂ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಎನ್‌ಪಿಸಿಐ ಮಾಡಿಸಿದರೆ ಸುಲಭವಾಗಿ ಆಟೋಮ್ಯಾಟಿಕ್ ಆಗಿ ನಿಮ್ಮ ಖಾತೆಗೆ ಹಣ ಬರುವಂತೆ ಮಾಡಲು ಸಹಾಯವಾಗುತ್ತದೆ. ಹಾಗಾಗಿ npci ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿದೆ.
ಉಚಿತ ಕರೆಂಟ್ ಪಡೆಯುತ್ತಿರುವ ಬೆನ್ನಲ್ಲೇ ಗೃಹಜ್ಯೋತಿ ಯೋಜನೆಯಲ್ಲಿ ಬದಲಾವಣೆ
ಎನ್‌ಪಿಸಿಐ ಲಿಂಕ್ ಮಾಡಿಸುವುದು ಹೇಗೆ?
ಎನ್ ಪಿ ಸಿ ಐ ಮ್ಯಾಪಿಂಗ್ (NPCI mapping ) ಅನ್ನು ನಿಮ್ಮ ಖಾತೆಗೆ ಮಾಡಿಸಲು ನೀವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆ ಇರುವ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ನಿಮ್ಮ ಬ್ಯಾಂಕ್ ಪಾಸ್ ಬುಕ್ (bank passbook) ಹಾಗೂ ಆಧಾರ್ ಕಾರ್ಡ್ (Aadhaar Card) ಪ್ರತಿಯನ್ನು ತೆಗೆದುಕೊಂಡು ಹೋಗಿ.
ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಲು ಒಂದು ಅರ್ಜಿ ಫಾರ್ಮ್ ಕೊಡಲಾಗುವುದು. ಅದನ್ನು ಭರ್ತಿ ಮಾಡಿ. ಎಲ್ಲ ಮಾಹಿತಿಗಳು ಸರಿಯಾಗಿ ಇದ್ದರೆ ಎನ್‌ಪಿಸಿಐ ಮಾಡಿಸಲು ಏಳರಿಂದ ಹದಿನೈದು ದಿನಗಳ ಕಾಲಾವಕಾಶ ಬೇಕು. ಒಮ್ಮೆ ನೀವು ನಿಮ್ಮ ಖಾತೆಗೆ ಎಂಪಿಸಿಐ ಮಾಡಿಸಿಕೊಂಡರೆ ಸರ್ಕಾರದಿಂದ ಜಮಾ ಆಗುವ ಯಾವುದೇ DBT ಹಣ ಮಿಸ್ ಆಗದೆ ನಿಮ್ಮ ಖಾತೆಯನ್ನು ತಲುಪುತ್ತದೆ.
ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆಗೆ ಸರ್ಕಾರ ಹೊಸ ಪ್ಲಾನ್! ಮಹತ್ವದ ಬದಲಾವಣೆ
ಹಾಗಾಗಿ ಎಲ್ಲಾ ಮಹಿಳೆಯರು ಈ ವಿಚಾರವನ್ನು ನೆನಪಿಟ್ಟುಕೊಂಡು ಬ್ಯಾಂಕ್ ಗೆ ಹೋಗಿ ಎನ್‌ಪಿಸಿಐ ಕಡ್ಡಾಯವಾಗಿ ಮಾಡಿಸಿಕೊಳ್ಳಿ. ಇಲ್ಲವಾದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ.
Another Rules for Gruha Lakshmi Yojana 6th Installment, New update
ಎನ್‌ಪಿಸಿಐ ಲಿಂಕ್ ಮಾಡಿಸುವುದು ಹೇಗೆ?



