ಸರ್ಕಾರಿ ಜಾಗ ಒತ್ತುವರಿ ಹಾಗೂ ಮನೆ ಕಟ್ಟಿಕೊಂಡವರಿಗೆ ರಾತ್ರೋ-ರಾತ್ರಿ ಹೊಸ ರೂಲ್ಸ್!
ಸರ್ಕಾರಿ ಜಮೀನಿಗೆ (government land) ಸಂಬಂಧಪಟ್ಟ ಹಾಗೆ ಅಕ್ರಮ ನಡೆಯುತ್ತಿರುವುದನ್ನು ಗಮನಿಸಿರುವ ಸರ್ಕಾರ ಇದೀಗ ಈ ಬಗ್ಗೆ ಹೆಚ್ಚು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
ಸರ್ಕಾರ ಈಗಾಗಲೇ ತಿಳಿಸಿರುವಂತೆ, ಯಾವುದೇ ಸರ್ಕಾರಿ ಭೂಮಿಯನ್ನು (Govt Property) ಒತ್ತುವರಿ ಮಾಡಿಕೊಂಡಿದ್ದರೆ ಅಂತಹ ಒತ್ತುವರಿ ತೆರವು ಗೊಳಿಸಲು ಬೀಟ್ ವ್ಯವಸ್ಥೆ ಜಾರಿಗೆ ತರಲಾಗಿದೆ.
ಉಚಿತ ಕರೆಂಟ್ ಪಡೆಯುತ್ತಿರುವ ಬೆನ್ನಲ್ಲೇ ಗೃಹಜ್ಯೋತಿ ಯೋಜನೆಯಲ್ಲಿ ಬದಲಾವಣೆ
ಕಂದಾಯ ಇಲಾಖೆಯ ಸಚಿವ ಕೃಷ್ಣ ಭೈರೇಗೌಡ (revenue minister Krishna bairagowda) ನೀಡಿರುವ ಮಾಹಿತಿಯ ಪ್ರಕಾರ, ಸರ್ಕಾರಿ ಜಮೀನು ಒತ್ತುವರಿ (Government land encroachment) ಮಾಡಿಕೊಂಡಿರುವುದನ್ನು ತೆರವುಗೊಳಿಸುವುದು ಮಾತ್ರವಲ್ಲದೆ ಸರ್ಕಾರಿ ಜಮೀನಿನಲ್ಲಿ ಹೇಳದೆ ಕೇಳದೆ ದಾರಿ ನಿರ್ಮಾಣ ಮಾಡಿ ಕೊಂಡಿದ್ದರೆ ಅಂತಹ ದಾರಿ ತೆರವುಗೊಳಿಸುವ ಕಾರ್ಯವನ್ನು ಕೂಡ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸರ್ಕಾರಿ ದಾರಿ ಒತ್ತುವರಿ ತೆರವು ಮಾಡಲು ಅಧಿಕಾರಿಗಳಿಗೆ ಆದೇಶ!
ರಾಜ್ಯದಲ್ಲಿ ಸರ್ಕಾರಿ ದಾರಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರನ್ನು ಸ್ವೀಕರಿಸಿರುವ ಸರ್ಕಾರ ಇದೀಗ ಎಚ್ಚೆತ್ತುಕೊಂಡಿದ್ದು ಇಂತಹ ದಾರಿ ತೆರವು ಕಾರ್ಯ ನಡೆಸಲು ಮುಂದಾಗಿದೆ.
ಯಾವುದೇ ಅಧಿಕಾರಿ ಇಲ್ಲ ಸಲ್ಲದ ನೆಪ ಹೇಳಿ ತೆರವು ಕಾರ್ಯವನ್ನು ಮುಂದೂಡುವಂತಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಖಡಕ್ ಆದೇಶ ಹೊರಡಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆಗೆ ಸರ್ಕಾರ ಹೊಸ ಪ್ಲಾನ್! ಮಹತ್ವದ ಬದಲಾವಣೆ
ರೈತರಿಗೆ ದಾರಿ ನೀಡುವುದು!
ಸರ್ಕಾರಿ ದಾರಿಯನ್ನು ನಕ್ಷೆಯಲ್ಲಿ ಇರುವ ಪ್ರಕಾರ ಇರದೇ ಅದನ್ನು ಒತ್ತುವರಿ ಮಾಡಿಕೊಂಡಿದ್ದರೆ, ಅಂತಹ ರಸ್ತೆಯನ್ನು ತೆರೆವು ಗೊಳಿಸಲಾಗುವುದು. ಆದರೆ ರೈತರು ತಮ್ಮ ಜಮೀನಿಗೆ (Agriculture Land) ಹೋಗಲು ದಾರಿ ಮಾಡಿಕೊಂಡಿದ್ದರೆ ಅಂತಹ ದಾರಿಯನ್ನು ಮುಚ್ಚುವುದಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ರೈತರು (farmers) ತಮ್ಮ ಜಮೀನಿಗೆ ಹೋಗುವ ದಾರಿ ಇರುವುದಿಲ್ಲ ಎನ್ನುವ ಚಿಂತೆ ಮಾಡುವ ಅಗತ್ಯ ಇಲ್ಲ.
ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗೆ ಹೊಸ ರೂಲ್ಸ್! ಇಂತಹವರಿಗೆ ಹಣ ಜಮಾ ಆಗೋಲ್ಲ
ರೈತರ ಮನೆ ತೆರವು ಮಾಡುವುದಿಲ್ಲ
ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಸಕ್ರಮ ಹಕ್ಕು ಪತ್ರ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದರೆ ಅಂತವರು ತಮ್ಮ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದರೆ ಅದನ್ನು ತೆರವು ಗೊಳಿಸುವುದಿಲ್ಲ ಎಂದು ಕೃಷ್ಣ ಬೈರೇಗೌಡ ಸ್ಪಷ್ಟನೆ ನೀಡಿದ್ದಾರೆ.
ಹಾಗಾಗಿ ರೈತರು ಇದಕ್ಕೆ ಚಿಂತೆ ಮಾಡುವ ಅಗತ್ಯ ಇಲ್ಲ. ರೈತರ ಜಮೀನು ಹಾಗೂ ದಾರಿಯನ್ನು ಹೊರತುಪಡಿಸಿ ಇತರ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಸರ್ಕಾರಿ ಜಮೀನು ಹಾಗೂ ದಾರಿ ಒತ್ತುವರಿ ಮಾಡಿಕೊಂಡಿದ್ದರೆ ತಕ್ಷಣ ಅದನ್ನು ತೆರವುಗೊಳಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಸಚಿವರು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಮರು-ಪರಿಶೀಲನೆ! 26,000 ಮಹಿಳೆಯರಿಗೆ ಸಿಗೋದಿಲ್ಲ ಹಣ
Government land encroachment and new rules for those who have built houses