Karnataka NewsBangalore News

ಗೃಹಲಕ್ಷ್ಮಿ ಯೋಜನೆ ಮರು-ಪರಿಶೀಲನೆ! 26,000 ಮಹಿಳೆಯರಿಗೆ ಸಿಗೋದಿಲ್ಲ ಹಣ

ಗೃಹಲಕ್ಷ್ಮಿ ಯೋಜನೆ (Gruha lakshmi scheme) ನೂರಕ್ಕೆ ನೂರರಷ್ಟು ಯಶಸ್ವಿಯಾಗಿದೆ. ಮಹಿಳೆಯರು ಐದು ಕಂತಿನ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಆದರೆ ಈಗ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ, ಆರನೇ ತಿಂಗಳಿನ ಹಣ ಸಾಕಷ್ಟು ಮಹಿಳೆಯರ ಖಾತೆಗೆ ಬರುವುದಿಲ್ಲ. ಇದಕ್ಕೆ ಕಾರಣ ಏನು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

ರೇಷನ್ ಕಾರ್ಡ್ ಇರೋರಿಗೆ ಇನ್ನಷ್ಟು ಬೆನಿಫಿಟ್! ನಾಳೆಯಿಂದ ಹೊಸ ಸೇವೆ ಆರಂಭ

Gruha Lakshmi money received only 2,000, Update About Pending Money

26,000 ಮಹಿಳೆಯರ ಖಾತೆಗೆ ಹಣ ಜಮಾ ಆಗುವುದಿಲ್ಲ!

ಸರ್ಕಾರ ಈ ಹಿಂದೆಯೇ ಘೋಷಿಸಿರುವಂತೆ ಯಾವುದೇ ಸರ್ಕಾರಿ ನೌಕರಿ (government job) ಯಲ್ಲಿ ಇರುವ ಮಹಿಳೆಯರು ಅಥವಾ ಮನೆಯಲ್ಲಿ ಯಾರೇ ಆದಾಯ ತೆರಿಗೆ ಪಾವತಿ (tax payer) ಮಾಡುವ ಸದಸ್ಯರು ಇದ್ದರು ಅಂತವರು ಅರ್ಜಿ ಸಲ್ಲಿಸುವಂತಿಲ್ಲ.

ಆದಾಗ್ಯೂ ಸಾಕಷ್ಟು ಮಹಿಳೆಯರು ಈ ಮಾನದಂಡಗಳನ್ನು ಮೀರಿ ಅರ್ಜಿ ಸಲ್ಲಿಸಿದ್ದಾರೆ. ಅಂತಹ ಅರ್ಜಿಗಳನ್ನು ಗುರುತಿಸಿ ಅವುಗಳನ್ನು ವಜಾ ಮಾಡಲಾಗುತ್ತಿದೆ. ಸುಮಾರು 80,000 ಅರ್ಜಿಗಳನ್ನು ಸರ್ಕಾರ ತಿರಸ್ಕರಿಸಿದೆ.

ಆದರೆ ದುರದೃಷ್ಟವಶಾತ್ ಯಾರು ಈ ಮಾನದಂಡದ ಒಳಗೆ ಬರುತ್ತಾರೋ.. ಅಂದ್ರೆ ಸರ್ಕಾರಿ ನೌಕರಿಯಲ್ಲಿ ಇಲ್ಲದೆ, ಆದಾಯ ತೆರಿಗೆ ಪಾವತಿ ಮಾಡುವವರಾಗಿರದೆ ಇರುವ ಮಹಿಳೆಯರ ಹೆಸರು ಕೂಡ ಸೇರ್ಪಡೆಗೊಂಡಿದೆ. ಸರ್ಕಾರದ ಎಡವಟ್ಟಿನಿಂದಾಗಿ ಸುಮಾರು 26 ಸಾವಿರ ಮಹಿಳೆಯರು ಸುಖಾ ಸುಮ್ಮನೆ ಹಣ ಕಳೆದುಕೊಳ್ಳುವಂತೆ ಆಗಿದೆ.

ನಿಮ್ಮ ಜಮೀನು ಅಕ್ಕ-ಪಕ್ಕದವರು ಒತ್ತುವರಿ ಮಾಡಿದ್ರೆ, ಈ ರೀತಿ ಮಾಡಿ ಸಾಕು!

ರಾಜ್ಯ ಸರ್ಕಾರ 26 ಸಾವಿರ ಮಹಿಳೆಯರ ಖಾತೆಗೆ (Bank Account) 6ನೇ ಕಂತಿನ ಹಣ ಜಮಾ ಆಗುವುದಿಲ್ಲ ಎಂದು ತಿಳಿಸಿದೆ. ಹಾಗಂತ ಆತಂಕ ಪಟ್ಟುಕೊಳ್ಳುವ ಅಗತ್ಯವಿಲ್ಲ. ಇಂಥವರನ್ನ ಗುರುತಿಸಿ ಅವರ ಹೆಸರುಗಳನ್ನು ಲಿಸ್ಟ್ ನಿಂದ ತೆಗೆಯಲಾಗುತ್ತಿದೆ ಹಾಗೂ 7ನೇ ಕಂತಿನ ಹಣ ಬಿಡುಗಡೆ ಆದಾಗ ಎರಡು ಕಂತಿನ ಹಣವನ್ನು ಒಟ್ಟಿಗೆ ಸೇರಿಸಿ ಖಾತೆಗೆ ಜಮಾ (Money Deposit) ಮಾಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.

Gruha Lakshmi Yojanaಒಟ್ಟಿನಲ್ಲಿ ಸುಮಾರು ಮಹಿಳೆಯರು ಎಷ್ಟು ತಿಂಗಳವರೆಗೆ ಹಣ ಪಡೆದುಕೊಂಡರು ಇನ್ನು ಮುಂದೆ ಹಣ ಪಡೆದುಕೊಳ್ಳಲು ಸಮಸ್ಯೆ ಎದುರಿಸಬೇಕಾಗಿದೆ. GST ಪಾವತಿದಾರರ ಹೆಸರುಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ಸೇರ್ಪಡೆಗೊಂಡಿಲ್ಲ ಎನ್ನುವುದನ್ನು ಚೆಕ್ ಮಾಡಲು https://mahitikanaja.karnataka.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ಗೃಹಲಕ್ಷ್ಮಿ ಸ್ಟೇಟಸ್ ಎನ್ನುವ ಆಯ್ಕೆ ಕಾಣಿಸುತ್ತದೆ. ನಿಮ್ಮ ರೇಷನ್ ಕಾರ್ಡ್ (Ration Card) ಸಂಖ್ಯೆಯನ್ನು ಹಾಕಿ ಸ್ಟೇಟಸ್ ಚೆಕ್ ಮಾಡಿ.

14 ಕೋಟಿ ರೈತರ ಖಾತೆಗೆ ಬರ ಪರಿಹಾರ ಹಣ ಜಮಾ; ನಿಮ್ಮ ಖಾತೆ ಚೆಕ್ ಮಾಡಿ!

ಈ ಕೆಲಸ ಮಾಡಬೇಕು, ಇಲ್ಲಾಂದ್ರೆ ಹಣ ಬರಲ್ಲ!

ಇನ್ನು ಫಲಾನುಭವಿಗಳ ಪರಿಶೀಲನೆ ಮಾಡುವುದು ಸರ್ಕಾರಿ ಅಧಿಕಾರಿಗಳಿಗೆ ದೊಡ್ಡ ತಲೆ ನೋವಾಗಿದೆ. ಯಾಕೆಂದರೆ ಗೃಹಲಕ್ಷ್ಮಿ ಅರ್ಜಿಗಳಲ್ಲಿ ನಕಲಿ ಅರ್ಜಿಗಳು ಸಾಕಷ್ಟು ಸಂದಾಯವಾಗಿವೆ.

ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುತ್ತಿರುವವರ ಪೈಕಿ ನೈಜತೆ ಪರಿಶೀಲನೆಗೆ ಸರ್ಕಾರ ಮುಂದಾಗಿದ್ದು ಇನ್ನು ಮುಂದಿನ ಕಂತಿನ ಹಣ ಬರಬೇಕು ಅಂದ್ರೆ ನಿಮ್ಮ ಬ್ಯಾಂಕ್ ಖಾತೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.

ಈ ಕೆ ವೈ ಸಿ ಆಗದೆ ಇದ್ರೆ ತಕ್ಷಣ ಆ ಕೆಲಸವನ್ನು ಮಾಡಿಕೊಳ್ಳಿ. ಇದಕ್ಕಾಗಿ ನೀವು ನಿಮ್ಮ ಹತ್ತಿರದ ಗ್ರಾಮ ಒನ್, ಬಾಪೂಜಿ ಕೇಂದ್ರ, ಕರ್ನಾಟಕ ಒನ್ ಮೊದಲಾದ ಸೇವಾಕೇಂದ್ರಗಳಲ್ಲಿ ಮಾಡಿಸಿಕೊಳ್ಳಬಹುದು.

ಕೆವೈಸಿ ಮಾಡಿಸಿಕೊಳ್ಳಲು ನಿಮ್ಮ ರೇಷನ್ ಕಾರ್ಡ್, ಆಧಾರ ಕಾರ್ಡ್, ಬ್ಯಾಂಕ್ ಖಾತೆಯ ವಿವರ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಸ್ವೀಕೃತಿ ಪ್ರತಿ ಸಲ್ಲಿಸಬೇಕಾಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಪೆಂಡಿಂಗ್ ಹಣ ಪಡೆಯಲು ಈ ರೀತಿ ಮಾಡಿ!

26,000 women of Gruha Lakshmi Yojana will not get money

Our Whatsapp Channel is Live Now 👇

Whatsapp Channel

Related Stories