ಮನೆಯ ನಿರ್ವಹಣೆಯಲ್ಲಿ ಮಹಿಳೆಯದ್ದು ಬಹಳ ದೊಡ್ಡ ಪಾತ್ರ ಇರುತ್ತದೆ. ಗಂಡ ದುಡಿದು ಬಂದು ಮನೆಗೆ ನಿರ್ವಹಣೆ (maintenance) ಮಾಡಲು ಹಣ ಕೊಟ್ಟರೂ, ಆಕೆ ತನ್ನ ಸ್ವಂತಕ್ಕೆ ಒಂದು ರೂಪಾಯಿ ಕೂಡ ಖರ್ಚು ಮಾಡುವುದಿಲ್ಲ. ಇಂತಹ ಸಂದರ್ಭದಲ್ಲಿ ಆಕೆಯ ದೈನಂದಿನ ಖರ್ಚಿಗಾಗಿ ಒಂದಿಷ್ಟು ಹಣ ಬೇಕೇ ಬೇಕು. ಈಗ ಪ್ರತಿ ಮಹಿಳೆಯರಿಗೆ ನೆರವಾಗುತ್ತಿರುವುದು ಸರ್ಕಾರ!
ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಮಹಿಳೆಯರಿಗೆ ಪ್ರತಿ ತಿಂಗಳು 2000 ನೀಡುತ್ತಿರುವುದು ಆಕೆಯ ಸಣ್ಣಪುಟ್ಟ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಹಾಯಕವಾಗಿದೆ ಎನ್ನಬಹುದು. ಐದು ಕಂತುಗಳ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆ (Bank Account) ಸೇರಿದೆ. ಆರನೇ ಕಂತು ಸದ್ಯದಲ್ಲಿಯೇ ಬಿಡುಗಡೆ ಆಗಲಿದೆ.
ಅನ್ನಭಾಗ್ಯ ಯೋಜನೆಗೆ ಹೊಸ ರೂಲ್ಸ್; ಇನ್ಮುಂದೆ ಹಣ ಪಡೆಯೋಕೆ ಈ ಕೆಲಸ ಕಡ್ಡಾಯ
ಇಷ್ಟಾಗಿಯೂ, ಇನ್ನು ಸಾಕಷ್ಟು ಮಹಿಳೆಯರ ಖಾತೆಗೆ ಒಂದೇ ಒಂದು ಕಂತಿನ ಹಣವು ಬಿಡುಗಡೆ (Money Deposit) ಆಗಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ. ಒಂದಿಷ್ಟು ಮಹಿಳೆಯರು ಹಣ ಪಡೆದುಕೊಳ್ಳುತ್ತಿದ್ದರೆ ಇನ್ನೊಂದಿಷ್ಟು ಮಹಿಳೆಯರು ಅರ್ಜಿ ಸಲ್ಲಿಸಿಯು ಕೂಡ 2000ಗಳನ್ನು ಉಚಿತವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಸರ್ಕಾರ ತಿಳಿಸಿರುವಂತೆ ಖಾತೆಯಲ್ಲಿ ಆಗಬೇಕಾಗಿರುವ ಬದಲಾವಣೆಗಳನ್ನು ಮಹಿಳೆ ಮಾಡಿಕೊಳ್ಳದೆ ಇರುವುದು!
ನೀವು ಈ ಕೆಲಸ ಮಾಡಿದ್ದೀರಾ?
ಸರ್ಕಾರ ಈಗಾಗಲೇ ತಿಳಿಸಿರುವಂತೆ, ರೇಷನ್ ಕಾರ್ಡ್ (Ration Card) ಮಹಿಳೆಯ ಹೆಸರಿನಲ್ಲಿಯೇ ಇರಬೇಕು. ಇನ್ನು ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಬ್ಯಾಂಕ್ ಖಾತೆಗೆ ಈಕೆ ವೈ ಸಿ (E-KYC mandatory) ಕಡ್ಡಾಯ. ಇದೀಗ ಬಂದಿರುವ ಹೊಸ ನಿಯಮದ ಪ್ರಕಾರ ಬ್ಯಾಂಕ್ ಖಾತೆಗೆ ಎನ್ಪಿಸಿಐ ಮ್ಯಾಪಿಂಗ್ (NPCI mapping) ಕೂಡ ಆಗಿರಬೇಕು.
ಗೃಹಲಕ್ಷ್ಮಿ 6ನೇ ಕಂತಿನ ಬಗ್ಗೆ ಬಿಗ್ ಅಪ್ಡೇಟ್! ಇಂತಹವರಿಗೆ ಹಣ ವರ್ಗಾವಣೆ ಆಗೋಲ್ಲ
ಈ ಎಲ್ಲಾ ಆಗಬೇಕುಗಳ ನಡುವೆ ಆಗದೆ ಇರುವುದೇ ಜಾಸ್ತಿ! ಹೌದು, ಸಾಕಷ್ಟು ಮಹಿಳೆಯರ ಖಾತೆಯಲ್ಲಿ ಆಧಾರ್ ಲಿಂಕ್ ಮಾಡಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇದರಿಂದಾಗಿ ಅಂತಹ ಮಹಿಳೆಯರ ಖಾತೆಗೆ ಹಣ ಜಮಾ ಆಗುವುದಿಲ್ಲ.
ಈ ಕೆಲಸ ಮಾಡಿ ನೋಡಿ ಪೆಂಡಿಂಗ್ ಇರುವ ಹಣವು ಬರುತ್ತೆ!
ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆ ಸರಿ ಇಲ್ಲ ಅಥವಾ ಅದಕ್ಕೆ ಮ್ಯಾಪಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದರೆ, ತಕ್ಷಣ ಅಂಚೆ ಕಚೇರಿಯಲ್ಲಿ ಒಂದು ಖಾತೆಯನ್ನು ತೆರೆಯಿರಿ ಅಂಚೆ ಕಚೇರಿ (post office) ಯಲ್ಲಿ ಹೊಸ ಖಾತೆ ತೆರೆದಾಗ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬೇಗ ಜಮಾ ಆಗುತ್ತದೆ.
ಇನ್ನು ಎರಡನೆಯದಾಗಿ ಸಿಡಿಪಿಓ (CDPO) ಕಚೇರಿಗೆ ಭೇಟಿ ನೀಡಿ ಅಲ್ಲಿಯ ಅಧಿಕಾರಿಗಳ ಬಳಿ ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಿ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಸ್ವೀಕೃತಿ ಪ್ರತಿ ಇದ್ದರೆ ಅದನ್ನು ತೋರಿಸಿ.
5 ಲಕ್ಷ ಬಿಪಿಎಲ್ ರೇಷನ್ ಕಾರ್ಡುಗಳು ರದ್ದು; ರಾತ್ರೋ-ರಾತ್ರಿ ಹೊಸ ಪಟ್ಟಿ ಬಿಡುಗಡೆ
ಆನ್ಲೈನ್ ಮೂಲಕವೇ ನಿಮ್ಮ ಖಾತೆಗೆ ಯಾಕೆ ಹಣ ಜಮಾ ಆಗುತ್ತಿಲ್ಲ ಎನ್ನುವುದನ್ನು ಸಿಡಿಪಿಓ ಅಧಿಕಾರಿಗಳು ತಿಳಿಸುತ್ತಾರೆ. ತಕ್ಷಣ ಆಗಬೇಕಿರುವ ಬದಲಾವಣೆಗಳನ್ನು ಮಾಡಿಕೊಂಡರೆ ನಿಮ್ಮ ಖಾತೆಗೆ ಹಣ ಬರೋದು ಮಿಸ್ ಆಗುವುದಿಲ್ಲ.
ಇನ್ನು ನಿಮ್ಮ ಬ್ಯಾಂಕ್ ಗೆ ಹೋಗಿ ನಮ್ಮ ಖಾತೆಗೆ ಈಕೆ ವೈ ಸಿ, npci ಮ್ಯಾಪಿಂಗ್ ಆಗಬೇಕು ಮಾಡಿಕೊಡಿ ಎಂದು ಕೇಳಿ. ಎನ್‌ಪಿಸಿಐ ಮ್ಯಾಪಿಂಗ್ ಆಗಿದ್ರೆ ಮುಂದೆ ಯಾವುದೇ ಸಮಸ್ಯೆ ಇಲ್ಲದೆ ಸುಲಭವಾಗಿ ನಿಮ್ಮ ಖಾತೆಗೆ ಹಣ ಬರುತ್ತದೆ.
ಗೃಹಲಕ್ಷ್ಮಿ ಹಣವನ್ನು ಯಾವುದೇ ಮಹಿಳೆಯ ಖಾತೆಗೆ ಆಟೋಮೆಟಿಕ್ ಆಗಿ ವರ್ಗಾವಣೆ ಮಾಡಲಾಗುತ್ತದೆ. ಹಾಗಾಗಿ ಅಗತ್ಯ ಇರುವ ಎಲ್ಲಾ ಲಿಂಕ್ ಗಳನ್ನು ಮಾಡಿಕೊಳ್ಳಲೇಬೇಕು. ಆಧಾರ್ ಲಿಂಕ್ ಆಗಿದ್ರೆ ಸರ್ಕಾರದ ಸರ್ವರ್ ನಲ್ಲಿ ನಿಮ್ಮ ಹೆಸರು ಸ್ಟೋರ್ ಆಗುತ್ತದೆ ಹಾಗೂ ಮಿಸ್ ಆಗದೆ ಪ್ರತಿ ತಿಂಗಳು ಹಣ ಜಮಾ ಆಗುತ್ತದೆ.
ಫೆಬ್ರುವರಿ ತಿಂಗಳ ಮೊದಲ ವಾರ ಆರನೇ ಕಂತಿನ ಹಣ ಕೂಡ ಜಮಾ ಆಗಲಿದ್ದು, ಇದರ ಜೊತೆಗೆ ಪೆಂಡಿಂಗ್ ಹಣವನ್ನು ಪಡೆದುಕೊಳ್ಳಲು ಮೇಲೆ ತಿಳಿಸಲಾಗಿರುವ ಕೆಲಸಗಳನ್ನು ಮಾಡಿಕೊಳ್ಳಿ.
ಗೃಹಲಕ್ಷ್ಮಿ 6ನೇ ಕಂತಿನ ಹಣ ಬಿಡುಗಡೆ! ಮೊದಲು ಈ ಜಿಲ್ಲೆಯ ಜನರಿಗೆ ಹಣ ಜಮಾ
Do this to get pending money of Gruha Lakshmi Yojana
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.