Karnataka NewsBengaluru News

ಅನ್ನಭಾಗ್ಯ ಯೋಜನೆಗೆ ಹೊಸ ರೂಲ್ಸ್; ಇನ್ಮುಂದೆ ಹಣ ಪಡೆಯೋಕೆ ಈ ಕೆಲಸ ಕಡ್ಡಾಯ

ರಾಜ್ಯದಲ್ಲಿ ವಾಸಿಸುವ ಬಡತನ ರೇಖೆಗಿಂತಲೂ ಕೆಳಗೆ (below poverty line) ಇರುವ ಕುಟುಂಬಗಳಿಗೆ ಅಥವಾ ಬಿಪಿಎಲ್ (BPL card) ಹಾಗೂ ಅಂತ್ಯೋದಯ ಕಾರ್ಡ್ (Antyodaya Card) ಹೊಂದಿರುವವರಿಗೆ ಸರ್ಕಾರ ಉಚಿತವಾಗಿ ಪ್ರತಿ ತಿಂಗಳು ಪಡಿತರ ನೀಡುತ್ತಿದೆ.

ಇನ್ನು ಕೇಂದ್ರ ಸರ್ಕಾರ (Central government) ಕೊಡುವ 5 ಕೆಜಿ ಉಚಿತ ಜೊತೆಗೆ ರಾಜ್ಯ ಸರ್ಕಾರ 5 ಕೆ.ಜಿ ಉಚಿತ ಅಕ್ಕಿಯನ್ನು ಕೊಡುವುದಾಗಿ ತಿಳಿಸಿತ್ತು. ಇದಕ್ಕಾಗಿ ಜನ ಈಗಲೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಅಷ್ಟು ದೊಡ್ಡ ಪ್ರಮಾಣದ ಅಕ್ಕಿ ದಾಸ್ತಾನು ಇಲ್ಲದೆ ಇರುವ ಹಿನ್ನೆಲೆಯಲ್ಲಿ ಈಗಲೂ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ (AnnaBhagya scheme) ಯ ಅಡಿಯಲ್ಲಿ ಅಕ್ಕಿಯ ಬದಲು ಹಣವನ್ನು ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡುತ್ತಿದೆ.

Do this if Annabhagya Yojana money not reached your Bank account yet

ರಾಜ್ಯ ಸರ್ಕಾರದಿಂದಲೇ ಸಿಗಲಿದೆ ಸ್ವಂತ ಉದ್ಯೋಗ ಮಾಡೋರಿಗೆ 5 ಲಕ್ಷ ಸಾಲ! ಅರ್ಜಿ ಸಲ್ಲಿಸಿ

ಹೌದು, ಕಳೆದ ಆರು ತಿಂಗಳಿನಿಂದಲೂ ಕೂಡ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳ ಖಾತೆಗೆ 5 ಕೆ.ಜಿ ಅಕ್ಕಿಯ ಬದಲು ಹಣವನ್ನು ಸರ್ಕಾರ ನೇರವಾಗಿ ಜಮಾ ಮಾಡುತ್ತಿದೆ. ಇನ್ನು ಮುಂದೆಯೂ ಕೂಡ ಕೆಲವು ತಿಂಗಳು ಇದೇ ಪದ್ಧತಿ ಮುಂದುವರಿಯಬಹುದು.

ರೇಷನ್ ಆಧಾರ್ ಲಿಂಕ್! (Ration card Aadhaar card link)

ಅನ್ನಭಾಗ್ಯ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಸೇರಲು ಕೆಲವು ನಿಯಮಗಳನ್ನು ಸರ್ಕಾರ ತಿಳಿಸಿದೆ. ಅವುಗಳಲ್ಲಿ ಮುಖ್ಯವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಈ ಕೆ ವೈ ಸಿ (E-KYC) ಮಾಡಿಸುವುದು, ಆಧಾರ್ ಲಿಂಕ್ ರೇಷನ್ ಕಾರ್ಡ್ ಮತ್ತು ಆಧಾರ್ ಲಿಂಕ್ ಮೊದಲಾದವು ಮುಖ್ಯವಾಗಿರುವ ವಿಷಯಗಳು.

ಆದರೆ ಈಗಲೂ ಕೂಡ ಸಾಕಷ್ಟು ಜನ ಈ ಕೆಲಸ ಮಾಡಿಕೊಳ್ಳದೆ ಇರುವುದರಿಂದ ಅಂತವರ ಖಾತೆಗೆ (Bank Account) ಹಣ ಜಮಾ ಆಗುವುದಿಲ್ಲ. ಇದೀಗ ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡಬಹುದಾಗಿತ್ತು. ಈಗಲಾದರೂ ನೀವು ಈ ಕೆಲಸ ಮಾಡಿಕೊಂಡರೆ ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಆಗಲಿರುವ ಕಂತಿನ ಹಣ ನಿಮ್ಮ ಖಾತೆಯನ್ನು ತಲುಪುತ್ತದೆ.

ಗೃಹಲಕ್ಷ್ಮಿ 6ನೇ ಕಂತಿನ ಬಗ್ಗೆ ಬಿಗ್ ಅಪ್ಡೇಟ್! ಇಂತಹವರಿಗೆ ಹಣ ವರ್ಗಾವಣೆ ಆಗೋಲ್ಲ

Annabhagya Schemeಆಧಾರ್ ಕಾರ್ಡ್ ರೇಷನ್ ಕಾರ್ಡ್ ಆನ್ಲೈನ್ ನಲ್ಲಿ ಲಿಂಕ್ ಮಾಡುವುದು ಹೇಗೆ?

– ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ https://ahara.kar.nic.in/Home/EServices ಈ ವೆಬ್ ಸೈಟ್ ಗೆ ಭೇಟಿ ನೀಡಿ.

– ಎಡಭಾಗದಲ್ಲಿ ಕಾಣಿಸುವ ಮೂರು ಲೈನ್ ಗಳ ಮೇಲೆ ಕ್ಲಿಕ್ ಮಾಡಿ, ಈ ಸ್ಥಿತಿಯನ್ನು ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

-ಈ ಸ್ಥಿತಿಯಲ್ಲಿ ಯುಐಡಿ ಲಿಂಕ್ ನ್ನು ಆಯ್ಕೆ ಮಾಡಿ.

-ಈಗ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, GO ಎಂದು ಕ್ಲಿಕ್ ಮಾಡಿ.

5 ಲಕ್ಷ ಬಿಪಿಎಲ್ ರೇಷನ್ ಕಾರ್ಡುಗಳು ರದ್ದು; ರಾತ್ರೋ-ರಾತ್ರಿ ಹೊಸ ಪಟ್ಟಿ ಬಿಡುಗಡೆ

-ಈಗ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ಓಟಿಪಿ (OTP) ಕಳುಹಿಸಲಾಗುತ್ತದೆ ಅದನ್ನ ನಮೂದಿಸಿ. ಓಟಿಪಿ ನಮೂದಿಸಿದ ನಂತರ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ, GO ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಈ ರೀತಿ ನೀವು ನಿಮ್ಮ ಆಧಾರ್ ಸಂಖ್ಯೆ ಹಾಗೂ ರೇಷನ್ ಕಾರ್ಡ್ ಲಿಂಕ್ ಮಾಡಿಕೊಳ್ಳಬಹುದು. ಅಥವಾ ಹತ್ತಿರದ ಆಹಾರ ಇಲಾಖೆಯ ಕಚೇರಿಗೆ ಹೋಗಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡಬಹುದು.

ನ್ಯಾಯಬೆಲೆ ಅಂಗಡಿಯಲ್ಲಿಯೂ ಕೂಡ ಈ ಕೆಲಸ ಮಾಡಲು ಅವಕಾಶವಿದೆ. ಫೆಬ್ರವರಿ ತಿಂಗಳಿನ ಮೊದಲ ವಾರದಲ್ಲಿ ಮುಂದಿನ ಕಂತಿನ ಅನ್ನ ಭಾಗ್ಯ ಯೋಜನೆ ಹಣ ಬಿಡುಗಡೆ ಆಗಲು ತಕ್ಷಣ ಲಿಂಕಿಂಗ್ ಪ್ರೋಸೆಸ್ ಮುಗಿಸಿಕೊಳ್ಳಿ.

ಗೃಹಲಕ್ಷ್ಮಿ 6ನೇ ಕಂತಿನ ಹಣ ಬಿಡುಗಡೆ! ಮೊದಲು ಈ ಜಿಲ್ಲೆಯ ಜನರಿಗೆ ಹಣ ಜಮಾ

New Rules for Annabhagya Yojana, do this to get money from now on

Related Stories