ಗೃಹಲಕ್ಷ್ಮಿ 6ನೇ ಕಂತಿನ ಹಣ ಬಿಡುಗಡೆ! ಮೊದಲು ಈ ಜಿಲ್ಲೆಯ ಜನರಿಗೆ ಹಣ ಜಮಾ
ಫೆಬ್ರವರಿ ಮೊದಲ ವಾರದ ಹೊತ್ತಿಗೆ ಪ್ರತಿಯೊಬ್ಬರ ಖಾತೆಗೂ (Bank Account) ಕೂಡ 6ನೇ ಕಂತಿನ ಹಣ ಜಮಾ ಆಗಲಿದೆ
ರಾಜ್ಯ ಸರ್ಕಾರ (State government) ದಿಂದ ಅತಿ ಹೆಚ್ಚು ಹಣ ಬಿಡುಗಡೆ ಆಗಿರುವ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಪ್ರಯೋಜನವನ್ನು ಇಂದು ಕೋಟ್ಯಾಂತರ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ.
ಯೋಜನೆ ಆರಂಭವಾದಾಗ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಇಲ್ಲಿವರೆಗೆ ಐದು ಕಂತಿನ ಹಣ ಅಂದರೆ 10 ಸಾವಿರ ರೂಪಾಯಿ ಸಿಕ್ಕಿದೆ. 6ನೇ ಕಂತಿನ ಹಣದ ಬಿಡುಗಡೆ ಬಗ್ಗೆ ಇಲ್ಲಿದೆ ಅಪ್ಡೇಟ್.
ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಮತ್ತೆ ಅವಕಾಶ!
ಆರನೇ ಕಂತಿನ ಹಣ ಬಿಡುಗಡೆ (6th installment released)
ಸರ್ಕಾರ ಜನವರಿ 27 ಹಾಗೂ 28ನೇ ತಾರೀಕಿನಂದು ಆರನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಲಿದೆ. ಇಲ್ಲಿಯವರೆಗೆ ಐದು ಕಂತಿನ ಹಣ ಪಡೆದುಕೊಂಡ ಮಹಿಳೆಯರು 6ನೇ ಕಂತಿನ ಹಣವನ್ನು ಪಡೆದುಕೊಂಡು ತಮ್ಮ ತಿಂಗಳ ಕುಟುಂಬದ ಖರ್ಚು ನಿರ್ವಹಣೆ ಮಾಡಿಕೊಳ್ಳಬಹುದು.
ಯಾವ ಜಿಲ್ಲೆಗಳಿಗೆ 6ನೇ ಕಂತಿನ ಹಣ ಮೊದಲು ಬಿಡುಗಡೆ ಆಗಲಿದೆ ಗೊತ್ತಾ?
ಸರ್ಕಾರ ರಾಜ್ಯದ ಪ್ರತಿಯೊಂದು ಜಿಲ್ಲೆಗೂ ಕೂಡ ಒಂದೇ ಬಾರಿ ಹಣ ವರ್ಗಾವಣೆ ಮಾಡುತ್ತದೆ. ಆದರೆ ಆರ್ ಬಿಐ (RBI) ಪ್ರಕಾರ ಒಂದು ದಿನಕ್ಕೆ ಇಷ್ಟು ಹಣ ಮಾತ್ರ ವರ್ಗಾವಣೆ ಮಾಡಲು ಸಾಧ್ಯವಿದ್ದು, ಈ ಮಿತಿಯ (limit ) ಅಡಿಯಲ್ಲಿ ಕೆಲವು ಜಿಲ್ಲೆಗಳಿಗೆ ಮೊದಲು ಹಾಗೂ ಕೆಲವು ಜಿಲ್ಲೆಗಳಿಗೆ ನಂತರ ಹಣ ವರ್ಗಾವಣೆ ಆಗುತ್ತದೆ. ಆದರೆ ಫೆಬ್ರವರಿ ಮೊದಲ ವಾರದ ಹೊತ್ತಿಗೆ ಪ್ರತಿಯೊಬ್ಬರ ಖಾತೆಗೂ (Bank Account) ಕೂಡ 6ನೇ ಕಂತಿನ ಹಣ ಜಮಾ ಆಗಲಿದೆ.
ಪೆಂಡಿಂಗ್ ಇರುವ ಗೃಹಲಕ್ಷ್ಮಿ ಯೋಜನೆ ಹಣ ರಿಲೀಸ್! ಒಟ್ಟಿನಲ್ಲಿ ಎಲ್ಲರಿಗೂ ಬಂತು ಹಣ
ಈ ಜಿಲ್ಲೆಗಳಿಗೆ 6ನೇ ಕಂತಿನ ಹಣ ಮೊದಲು ಸಿಗಲಿದೆ
ಬೆಂಗಳೂರು ನಗರ ಮತ್ತು ಗ್ರಾಮಾಂತರ
ದಕ್ಷಿಣ ಕನ್ನಡ
ಉತ್ತರ ಕನ್ನಡ
ಕೋಲಾರ
ಚಿಕ್ಕಮಗಳೂರು
ಗದಗ
ಧಾರವಾಡ
ಬಳ್ಳಾರಿ
ಬಾಗಲಕೋಟೆ
ಹಾವೇರಿ
ಮಂಡ್ಯ
ತುಮಕೂರು
ಶಿವಮೊಗ್ಗ
ಉಡುಪಿ
ಯಾದಗಿರಿ
ರಾಯಚೂರು ಈ ಮೊದಲಾದ ಜಿಲ್ಲೆಗಳಿಗೆ 6ನೇ ಕಂತಿನ ಹಣ ಸಂದಾಯವಾಗಲಿದೆ.
ಕುರಿ ಮೇಕೆ ಹಸು ಸಾಕಾಣಿಕೆ ಮಾಡಲು ಉಚಿತವಾಗಿ ತರಬೇತಿ; ಅರ್ಜಿ ಆಹ್ವಾನ
ಈ ಕೆಲಸ ಮಾಡದೆ ಇದ್ರೆ ಹಣ ಬರುವುದಿಲ್ಲ!
ಸುಮಾರು 1.20 ಕೋಟಿ ಮಹಿಳೆಯರು ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು. ಆದರೆ ಇವುಗಳಲ್ಲಿ ಇನ್ನೂ 15 ಲಕ್ಷ ಮಹಿಳೆಯರ ಖಾತೆಗೆ ಕೆವೈಸಿ (EKYC) ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾಗಿ ನೀವು ಆಧಾರ್ ಸೀಡಿಂಗ್ (Aadhaar seeding) ಮಾಡಿಕೊಳ್ಳದೆ ಇದ್ದರೆ ಖಾತೆಗೆ ಹಣ ಬರಲು ಸಾಧ್ಯವಿಲ್ಲ.
ಒಂದು ವೇಳೆ ಬ್ಯಾಂಕ್ ಖಾತೆಗೆ ಕೆವೈಸಿ ಹಾಗೂ ಆಧಾರ್ ಸೀಡಿಂಗ್ ಮಾಡಿಸದಿದ್ದರೆ, ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಯನ್ನು ಅಪ್ಡೇಟ್ ಮಾಡಿಸಿ ಆಗ ಲಿಂಕ್ ಸರಿಯಾಗಿ ಆಗುತ್ತದೆ ಹಾಗೂ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಎರಡು ಯೋಜನೆಗಳ ಹಣ ಬರುತ್ತದೆ (Money Deposit).
ಇಂತಹ ರೈತರಿಗೆ ಬೆಳೆ ಪರಿಹಾರ ನಿಧಿ ಹಣ ಜಮಾ ಆಗಿದೆ; ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿ!
ಎನ್‌ಪಿಸಿಐ ಕಡ್ಡಾಯ
ಬ್ಯಾಂಕ್ ಖಾತೆಗೆ ಎನ್‌ಪಿಸಿಐ ಆಗದೆ ಇದ್ದರೆ ಅಂತವರ ಖಾತೆಗೆ ಆರನೇ ಕಂತಿನ ಹಣ ಡಿಬಿಟಿ ಆಗುವುದಿಲ್ಲ. ಇದನ್ನು ಮಾಡಿಸಲು ನೀವು ನೇರವಾಗಿ ಬ್ಯಾಂಕ್ ಶಾಖೆಗೆ ಹೋಗಿ ಅಲ್ಲಿ npcl ಮಾಡಿಸಿಕೊಡಿ ಎಂದು ಕೇಳಬೇಕು. ಅಲ್ಲಿನ ಸಿಬ್ಬಂದಿಗಳು ನಿಮಗೆ ತಕ್ಷಣ NPCI ಮಾಡಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತಾರೆ. ನೀವು ಇದೆ ವಾರದ ಮೊದಲ ದಿನ ಈ ಕೆಲಸ ಮಾಡಿಕೊಂಡರೆ ವಾರಾಂತ್ಯದ ಹೊತ್ತಿಗೆ ನಿಮ್ಮ ಖಾತೆಗೆ (Bank Account) ಮಿಸ್ ಆಗದೆ ಹಣ ಜಮಾ ಆಗುತ್ತದೆ.
ರೇಷನ್ ಕಾರ್ಡ್ ಆಕ್ಟಿವ್ ಇರಬೇಕು!
ಈಗಾಗಲೇ ಆಹಾರ ಇಲಾಖೆ, ಅನರ್ಹರ ರೇಷನ್ ಕಾರ್ಡನ್ನು ರದ್ದುಗೊಳಿಸಿದೆ. ನಿಮ್ಮ ರೇಷನ್ ಕಾರ್ಡ್ (Ration Card active) ಆಕ್ಟಿವ್ ಇದೆಯೋ ಇಲ್ಲವೋ ಎಂಬುದನ್ನು ನ್ಯಾಯಬೆಲೆ ಅಂಗಡಿಯಲ್ಲಿ ಚೆಕ್ ಮಾಡಿಸಿ. ಅಥವಾ ಮಾಹಿತಿ ಕಣಜ ವೆಬ್ಸೈಟ್ನಲ್ಲಿ ನೀವು ನೇರವಾಗಿ ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಆಗಿದ್ಯೋ ಇಲ್ವೋ ಎಂಬುದನ್ನು ತಿಳಿಯಬಹುದು.
ಮುಂದಿನ ಕಂತಿನ ಗೃಹಲಕ್ಷ್ಮಿ ಹಣ ಪಡೆಯೋಕೆ ಈ ಹೊಸ ನಿಯಮ ಪಾಲಿಸಲೇಬೇಕು!
Gruha Lakshmi Scheme 6th installment money released For the people of this district