ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಮತ್ತೆ ಅವಕಾಶ!

ರೇಷನ್ ಕಾರ್ಡ್ (Ration Card) ಇದ್ದರೆ ಅದರಿಂದ ಸರಕಾರದ ಹಲವು ಯೋಜನೆಗಳ ಮೂಲಕ ಮೂಲಭೂತ ಸೌಲಭ್ಯಗಳನ್ನು ಕೂಡ ಪಡೆದುಕೊಳ್ಳಲು ಸಾಧ್ಯವಿದೆ.

ಬಿಪಿಎಲ್ ಕಾರ್ಡ್ (BPL card) , ಅಂತ್ಯೋದಯ ರೇಷನ್ ಕಾರ್ಡ್ ಪ್ರಮುಖ ಗುರುತಿನ ಚೀಟಿಯಾಗಿ ಬಳಸಲ್ಪಡುತ್ತಿದೆ. ಅದರಲ್ಲೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ (guarantee schemes) ಯಿಂದಾಗಿ ಈಗ ರೇಷನ್ ಕಾರ್ಡಿನ ಬೆಲೆಯೂ ಕೂಡ ಜಾಸ್ತಿಯಾಗಿದೆ.

ಇದೇ ಕಾರಣಕ್ಕೆ ಈವರೆಗೆ ಅರ್ಜಿ ಸಲ್ಲಿಸಿ, ಸುಮ್ಮನಾಗಿದ್ದ ಜನರು ಈಗ ಮತ್ತೆ ಎಚ್ಚೆತ್ತುಕೊಂಡಿದ್ದು ನಮಗೆ ರೇಷನ್ ಕಾರ್ಡ್ (Ration Card) ವಿತರಣೆ ಮಾಡಿ ಎಂದು ಸರ್ಕಾರದ ಮೊರೆ ಹೋಗಿದ್ದಾರೆ.

ಆಹಾರ ಇಲಾಖೆಯಿಂದ ಬಡವರಿಗೆ ರಾಜ್ಯದಲ್ಲಿ ವಾಸಿಸುವ ಬಡತನ ರೇಖೆಗಿಂತ ಕೆಳಗಿರುವ (below poverty line) ಕುಟುಂಬಗಳಿಗೆ ಉಚಿತವಾಗಿ ರೇಷನ್ ಪಡೆದುಕೊಳ್ಳುವ ಸಲುವಾಗಿ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.

ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಮತ್ತೆ ಅವಕಾಶ! - Kannada News

ಪೆಂಡಿಂಗ್ ಇರುವ ಗೃಹಲಕ್ಷ್ಮಿ ಯೋಜನೆ ಹಣ ರಿಲೀಸ್! ಒಟ್ಟಿನಲ್ಲಿ ಎಲ್ಲರಿಗೂ ಬಂತು ಹಣ

ರೇಷನ್ ಕಾರ್ಡ್ (Ration Card) ಇದ್ದರೆ ಅದರಿಂದ ಸರಕಾರದ ಹಲವು ಯೋಜನೆಗಳ ಮೂಲಕ ಮೂಲಭೂತ ಸೌಲಭ್ಯಗಳನ್ನು ಕೂಡ ಪಡೆದುಕೊಳ್ಳಲು ಸಾಧ್ಯವಿದೆ. ಬಡವರ ಹಸಿವನ್ನು ನೀಗಿಸುವ ಸಲುವಾಗಿ, ಸರ್ಕಾರದಿಂದ ಸಿಗುವ ಪಡಿತರ ಪಡೆದುಕೊಳ್ಳಲು ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುವ ಗುರುತಿನ ಚೀಟಿ ಆಗಿರುತ್ತದೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ! (do changes in Ration card)

ಕಳೆದ ಎರಡುವರೆ ವರ್ಷಗಳಿಂದ ಅರ್ಜಿ ಸಲ್ಲಿಸಿದ ಸಾಕಷ್ಟು ಜನರಿಗೆ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಈಗಾಗಲೇ ಬೇರೆ ಬೇರೆ ಕಾರ್ಯಕ್ರಮದ ಸಂದರ್ಭದಲ್ಲಿ, ಆಹಾರ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಸದ್ಯದಲ್ಲಿಯೇ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಇನ್ನು ರೇಷನ್ ಕಾರ್ಡ್ ಹೊಂದಿರುವವರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಹೆಸರನ್ನು ಕೂಡ ರೇಷನ್ ಕಾರ್ಡ್ ನಲ್ಲಿ ಸೇರಿಸಬೇಕು. ಒಂದು ವೇಳೆ ನಿಮ್ಮ ಮನೆಗೆ ಮದುವೆಯಾಗಿ ಸೊಸೆ ಬಂದಿದ್ದರೆ ಅಥವಾ ಮನೆಯಲ್ಲಿ ಮಗುವಿನ ಜನನ ಆಗಿದ್ದರೆ ಅವರುಗಳ ಹೆಸರನ್ನು ಹೆಸರನ್ನು ನಿಮ್ಮ ರೇಷನ್ ಕಾರ್ಡ್ ನಲ್ಲಿ ಸೇರಿಸಿಕೊಳ್ಳಬೇಕು. ಇದರಿಂದ ಕುಟುಂಬದ ಎಲ್ಲಾ ಸದಸ್ಯರು ಕೂಡ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಬಹುದಾಗಿದೆ.

ಕುರಿ ಮೇಕೆ ಹಸು ಸಾಕಾಣಿಕೆ ಮಾಡಲು ಉಚಿತವಾಗಿ ತರಬೇತಿ; ಅರ್ಜಿ ಆಹ್ವಾನ

ಈ ಹಿಂದೆ ನಾಲ್ಕು ಬಾರಿ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿತ್ತು. ಆದರೆ ಸರ್ವರ್ ಸಮಸ್ಯೆಯಿಂದಾಗಿ ಸಾಕಷ್ಟು ಜನ ತಿದ್ದುಪಡಿ ಮಾಡಿಕೊಳ್ಳಲು, ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರು ಸೇರ್ಪಡೆ ಮಾಡಲು ಸಾಧ್ಯವಾಗಿಲ್ಲ.

ಇದೇ ಕಾರಣಕ್ಕೆ ಈಗ ಮತ್ತೆ ಗ್ರಾಮ ಒನ್, ಕರ್ನಾಟಕ ಒನ್ ಮೊದಲಾದ ಸೇವಾಕೇಂದ್ರಗಳಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಇದೆ. ಅಷ್ಟೇ ಅಲ್ಲದೆ ಆನ್ಲೈನ್ ಮೂಲಕವೂ ಕೂಡ ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದಾಗಿದೆ.

BPL Ration Cardರೇಷನ್ ಕಾರ್ಡ್ ನಲ್ಲಿ ಈ ತಿದ್ದುಪಡಿ ಮಾಡಬಹುದು!

ಹೊಸ ಸದಸ್ಯರ ಸೇರ್ಪಡೆ (ಜನನ ಪ್ರಮಾಣ ಪತ್ರ (birth certificate) ಸಲ್ಲಿಸಿ)

ಮರಣ ಹೊಂದಿದ ಸದಸ್ಯರ ಹೆಸರು ತೆಗೆದು ಹಾಕುವುದು (ಜನನ ಪ್ರಮಾಣ ಪತ್ರ (death certificate) ಸಲ್ಲಿಸಿ)

ಪ್ರಸ್ತುತ ವಾಸವಿರುವ ವಿಳಾಸ ಬದಲಾವಣೆ (ವಿಳಾಸ ಪುರಾವೆಯಾಗಿ ವಿದ್ಯುತ್ ಬಿಲ್, ರೆಂಟ್ ಅಗ್ರಿಮೆಂಟ್ ಮೊದಲಾದವುಗಳನ್ನು ಸಲ್ಲಿಸಬಹುದು)

ಇಂತಹ ರೈತರಿಗೆ ಬೆಳೆ ಪರಿಹಾರ ನಿಧಿ ಹಣ ಜಮಾ ಆಗಿದೆ; ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿ!

ಇವುಗಳ ಜೊತೆಗೆ ಅರ್ಜಿ ಸಲ್ಲಿಸಲು ಸದಸ್ಯರು ರೇಷನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕೂಡ ಹೊಂದಿರಬೇಕು. ಈ ದಾಖಲೆಗಳು ನಿಮ್ಮ ಬಳಿ ಇದ್ದರೆ ಹತ್ತಿರದ ಸೇವಾ ಕೇಂದ್ರಕ್ಕೆ ಹೋಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬಹುದು.

ನಿಮ್ಮ ಅರ್ಜಿ ಸ್ವೀಕಾರ ಗೊಂಡಿದ್ದಕ್ಕೆ ಸ್ವೀಕೃತಿ ಪ್ರತಿ ನೀಡುತ್ತಾರೆ ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಅರ್ಜಿ ಸ್ವೀಕಾರಗೊಂಡ ಕೆಲವೇ ದಿನಗಳಲ್ಲಿ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಪೂರ್ಣಗೊಳ್ಳುತ್ತದೆ

ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್, https://ahara.kar.nic.in/Home/EServices ಎಲ್ಲಿ ಸ್ಲಿಪ್ ಮಾಡುವುದರ ಮೂಲಕ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಸ್ಥಿತಿ ಬಗ್ಗೆ ಮಾಹಿತಿ ಪಡೆಯಬಹುದು. ಇದಕ್ಕಾಗಿ ನೀವು ನಿಮ್ಮ ಬಳಿ ಅರ್ಜಿ ಸಲ್ಲಿಸಿದ ನಂತರ ಕೊಡಲಾಗುವ ಸ್ವೀಕೃತಿ ಪ್ರತಿಯನ್ನು ಇಟ್ಟುಕೊಂಡಿರಬೇಕು.

ರೇಷನ್ ಕಾರ್ಡ್ ಆಧಾರ್ ಲಿಂಕ್ ಆದ್ರೆ ಮಾತ್ರ ಅನ್ನಭಾಗ್ಯ ಯೋಜನೆ ಹಣ! ಈ ರೀತಿ ಲಿಂಕ್ ಮಾಡಿ

Do New name addition and correction in ration card

Follow us On

FaceBook Google News

Do New name addition and correction in ration card