ರೇಷನ್ ಕಾರ್ಡ್ ಆಧಾರ್ ಲಿಂಕ್ ಆದ್ರೆ ಮಾತ್ರ ಅನ್ನಭಾಗ್ಯ ಯೋಜನೆ ಹಣ! ಈ ರೀತಿ ಲಿಂಕ್ ಮಾಡಿ

ಮುಂದಿನ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಬೇಕು ಅಂದ್ರೆ ಆಧಾರ್ ಕಾರ್ಡ್ (Aadhaar Card) ಹಾಗೂ ರೇಷನ್ ಕಾರ್ಡ್ (Ration Card) ಲಿಂಕ್ ಮಾಡಿಕೊಳ್ಳಲೇಬೇಕು.

ನೀವು ಬಿಪಿಎಲ್ ಕಾರ್ಡ್ ಹೊಂದಿದ್ದೀರಾ? ಅನ್ನಭಾಗ್ಯ ಯೋಜನೆ (Annabhagya scheme) ಯ ಹಣವನ್ನು ಪಡೆದುಕೊಳ್ಳುತ್ತಿದ್ದೀರಾ? ಹಾಗಾದ್ರೆ ಮುಂದಿನ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಬೇಕು ಅಂದ್ರೆ ಆಧಾರ್ ಕಾರ್ಡ್ (Aadhaar Card) ಹಾಗೂ ರೇಷನ್ ಕಾರ್ಡ್ (Ration Card) ಲಿಂಕ್ ಮಾಡಿಕೊಳ್ಳಲೇಬೇಕು.

ನೀವಿನ್ನು ಲಿಂಕ್ ಮಾಡದೆ ಇದ್ದರೆ ಹೇಗೆ ಮಾಡುವುದು ಎಂಬುದನ್ನು ಈ ಲೇಖನದಲ್ಲಿ ಕೊಡಲಾಗಿದೆ ಲೇಖನವನ್ನು ಕೊನೆಯವರೆಗೂ ಓದಿ ಹಾಗೂ ಇದೇ ರೀತಿ ಲಿಂಕ್ ಮಾಡಿಕೊಳ್ಳಿ, ಇಲ್ಲವಾದರೆ ನಿಮ್ಮ ಖಾತೆಗೆ ಹಣ ಬರಲು ಸಾಧ್ಯವೇ ಇಲ್ಲ.

ಸರ್ಕಾರ ಈಗಾಗಲೇ ತಿಳಿಸಿರುವಂತೆ ನಿಮ್ಮ ಬ್ಯಾಂಕ್ ಖಾತೆಗೆ ಈಕೆ ವೈ ಸಿ (E-KYC)ಆಗಿರಬೇಕು ಹಾಗೂ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಬೇಕು. ಒಂದು ವೇಳೆ ನೀವು ಇದುವರೆಗೆ ಲಿಂಕ್ ಮಾಡಿಕೊಳ್ಳದೆ ಇದ್ದರೆ ತಕ್ಷಣ ಆ ಕೆಲಸ ಮಾಡಿಕೊಳ್ಳಿ.

ರೇಷನ್ ಕಾರ್ಡ್ ಆಧಾರ್ ಲಿಂಕ್ ಆದ್ರೆ ಮಾತ್ರ ಅನ್ನಭಾಗ್ಯ ಯೋಜನೆ ಹಣ! ಈ ರೀತಿ ಲಿಂಕ್ ಮಾಡಿ - Kannada News

ಗೃಹಲಕ್ಷ್ಮಿ 6ನೇ ಕಂತಿನ ಹಣಕ್ಕೆ 2 ಹೊಸ ರೂಲ್ಸ್; ಇಲ್ಲವಾದರೆ ಖಾತೆಗೆ ಹಣ ಬರೋಲ್ಲ

ಸರ್ಕಾರ 5 ಕೆಜಿ ಉಚಿತ ಅಕ್ಕಿಯ ಬದಲು ಅಕ್ಕಿಗೆ ತಗುಲುವ ವೆಚ್ಚ, ಪ್ರತಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿಗೆ 170ಗಳನ್ನು ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡುತ್ತಿದೆ. ಈಗಲೂ ಸರ್ಕಾರ ಹೆಚ್ಚುವರಿ ಅಕ್ಕಿ ಒದಗಿಸಲು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಮುಂದೆಯೂ ಕೂಡ ಅನ್ನಭಾಗ್ಯ ಯೋಜನೆಯ ಹಣ ಫಲಾನುಭವಿಗಳ ಖಾತೆ ಸೇರಲಿದೆ, ಆದರೆ ನೀವು ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಲಿಂಕ್ ಮಾಡಿಕೊಳ್ಳದೆ ಇದ್ದರೆ ಮಾತ್ರ ನಿಮಗೆ ಹಣ ಸಂದಾಯವಾಗುವುದಿಲ್ಲ.

ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದು ಹೇಗೆ? (How to link Aadhaar Card and ration card in online)

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಗೆ ಹೋಗಿ. ಇಲ್ಲಿ ಈ ಸ್ಥಿತಿ ವಿಭಾಗದಲ್ಲಿ ಯು ಐ ಡಿ ಲಿಂಕ್ ಆಯ್ಕೆ ಮಾಡಿ.

ಹೊಸ ರೇಷನ್ ಕಾರ್ಡ್ ವಿತರಣೆ ವಿಚಾರದಲ್ಲಿ ರಾತ್ರೋರಾತ್ರಿ ಹೊಸ ನಿಯಮ!

BPL Ration Cardಈಗ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ UID link for RC members ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ಆಧಾರ್ ಸಂಖ್ಯೆಯನ್ನು ನಮೂದಿಸಿ ಗೊ ಎಂದು ಕ್ಲಿಕ್ ಮಾಡಿ. ಈಗ ನೊಂದಾಯಿಸಿಕೊಂಡ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ಅದನ್ನು ಇಲ್ಲಿ ನಮೂದಿಸಿ. ನಂತರ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.

ಅಗತ್ಯ ಇರುವ ದಾಖಲೆಗಳನ್ನು ತೆಗೆದುಕೊಂಡು ನೀವು ಆಹಾರ ಸರಬರಾಜು ಸ್ಥಳಿಯ ಕಚೇರಿಗೆ ಹೋಗಿ ಕೂಡ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡಿಕೊಳ್ಳಬಹುದು.

ರೇಷನ್ ಕಾರ್ಡ್ ತಿದ್ದುಪಡಿ, ಹೊಸ ಹೆಸರು ಸೇರ್ಪಡೆ ಹೇಗೆ? ಇಲ್ಲಿದೆ ಫುಲ್ ಡೀಟೇಲ್ಸ್

ಅನ್ನಭಾಗ್ಯ ಯೋಜನೆಯ ಮುಂದಿನ ಕಂತಿನ ಹಣ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆ ಆಗಲಿದ್ದು, ಅದಕ್ಕಿಂತ ಮೊದಲು ಆಧಾರ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ. ಆಗ ಯಾವುದೇ ಸಮಸ್ಯೆ ಇಲ್ಲದೆ ನಿಮ್ಮ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆ (Money Deposit) ಆಗುತ್ತದೆ.

Annabhagya Yojana money only if ration card is Aadhaar linked

Follow us On

FaceBook Google News