ಗೃಹಲಕ್ಷ್ಮಿ 6ನೇ ಕಂತಿನ ಹಣಕ್ಕೆ 2 ಹೊಸ ರೂಲ್ಸ್; ಇಲ್ಲವಾದರೆ ಖಾತೆಗೆ ಹಣ ಬರೋಲ್ಲ
ಕೋಟ್ಯಾಂತರ ಮಹಿಳೆಯರು, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ಅದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಈಗಲೂ ಕೂಡ ಗೃಹಲಕ್ಷ್ಮಿ ಹೊಸ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಣ ಪ್ರತಿ ತಿಂಗಳು ಮಹಿಳೆಯರ ಖಾತೆಯನ್ನು (Bank Account) ತಲುಪುತ್ತಿದೆ. ಈಗಾಗಲೇ ಐದು ಕಂತಿನ ಹಣ ಬಿಡುಗಡೆ ಮಾಡಿರುವ ಸರ್ಕಾರ ಮಹಿಳೆಯರಿಗೆ ಒಟ್ಟಾರೆಯಾಗಿ 10,000 ನೆರವು ನೀಡಿದೆ ಎನ್ನಬಹುದು.
ಇದೀಗ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ಬಿಗ್ ಅಪ್ಡೇಟ್ ( update ) ಸರ್ಕಾರ ನೀಡಿದೆ. ನೀವು ಕೂಡ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದರೆ ಈ ಸರ್ಕಾರದ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಲೇ ಬೇಕು.
ಹೊಸ ರೇಷನ್ ಕಾರ್ಡ್ ವಿತರಣೆ ವಿಚಾರದಲ್ಲಿ ರಾತ್ರೋರಾತ್ರಿ ಹೊಸ ನಿಯಮ!
ಅರ್ಜಿಗಳಲ್ಲಿ ಸಮಸ್ಯೆ! (Problems in application)
ಸರ್ಕಾರಕ್ಕೆ ಕೋಟ್ಯಾಂತರ ಮಹಿಳೆಯರು, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ಅದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಈಗಲೂ ಕೂಡ ಗೃಹಲಕ್ಷ್ಮಿ ಹೊಸ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು, ಮುಂದಿನ ತಿಂಗಳಿನಿಂದ ಹೊಸ ಅರ್ಜಿ ಸಲ್ಲಿಸಿದವರಿಗೂ ಕೂಡ ಹಣ ಬರಲು ಆರಂಭವಾಗುತ್ತದೆ.
ಸರ್ಕಾರ ತಿಳಿಸಿರುವ ಮಾಹಿತಿಯ ಪ್ರಕಾರ 15 ಲಕ್ಷ ಮಹಿಳೆಯರು ಆಧಾರ್ ಕಾರ್ಡ್ ಸೀಡಿಂಗ್ (Aadhar card seeding) ಹಾಗೂ ಬ್ಯಾಂಕ್ ಖಾತೆಯ ಕೆವೈಸಿ (E-KYC) ಆಗದೆ ಅರ್ಜಿ ಸಲ್ಲಿಸಿದ್ದಾರೆ. ಅಂತವರ ಖಾತೆಗೆ ಇದುವರೆಗೆ ಹಣ ಜಮಾ ಆಗಿಲ್ಲ.
ಈ ಎರಡು ಕೆಲಸ ಮಾಡದೆ ಇದ್ರೆ ಮುಂದಿನ ತಿಂಗಳಿನ ಹಣ ಬರುವುದಿಲ್ಲ!
ಮೊಟ್ಟಮೊದಲನೆಯದಾಗಿ ನಿಮ್ಮ ಬಳಿ ಆಧಾರ್ ಕಾರ್ಡ್ (Aadhaar Card) ಇದ್ರೆ ಅದನ್ನು ನೀವು ಅಪ್ಡೇಟ್ ಮಾಡಿಸಿಕೊಳ್ಳಬೇಕು. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಬೇರೆಯದೇ ಅಡ್ರೆಸ್ ಅಥವಾ ಹೆಸರು ಇದ್ದು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಬೇರೆ ಅಡ್ರೆಸ್ (address) ಅಥವಾ ಹೆಸರು ಇದ್ದರೆ ಒಂದಕ್ಕೊಂದು ಮ್ಯಾಚ್ ಆಗದೆ ಇದ್ದಾಗ ಸಮಸ್ಯೆ ಉಂಟಾಗುತ್ತದೆ ಹಾಗಾಗಿ ನೀವು ಹಳೆಯ ಆಧಾರ್ ಕಾರ್ಡ್ ಹೊಂದಿದ್ದರೆ ತಕ್ಷಣ ಅದರಲ್ಲಿ ಅಗತ್ಯ ಇರುವ ಬದಲಾವಣೆಯನ್ನು ಮಾಡಿಕೊಳ್ಳಬೇಕು.
ರೇಷನ್ ಕಾರ್ಡ್ ತಿದ್ದುಪಡಿ, ಹೊಸ ಹೆಸರು ಸೇರ್ಪಡೆ ಹೇಗೆ? ಇಲ್ಲಿದೆ ಫುಲ್ ಡೀಟೇಲ್ಸ್
ಇನ್ನು ಎರಡನೆಯದಾಗಿ ಆಧಾರ್ ಸೀಡಿಂಗ್ ಕಡ್ಡಾಯ ಎಂದು ಸರ್ಕಾರ ಈಗಾಗಲೇ ತಿಳಿಸಿದೆ. ನೀವು ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ನಿಮ್ಮ ಖಾತೆಗೆ ಆಧಾರ್ ಸೀಡಿಂಗ್ ಆಗಿದ್ಯೋ ಇಲ್ವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ.
ಒಂದು ವೇಳೆ ಆಗದೆ ಇದ್ದರೆ ತಕ್ಷಣ ಈ ಕೆಲಸ ಮಾಡಿ. ನೀವು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಂಡಿದ್ದರೆ ಹಾಗೂ ಆಧಾರ್ ಅಪ್ಡೇಟ್ ಮಾಡಿಕೊಂಡಿದ್ದರೆ ಸ್ವಲ್ಪ ದಿನ ಕಾಯಿರಿ. ನಿಮ್ಮ ಖಾತೆಗೂ ಕೂಡ ಆರನೇ ಕಂತಿನಿಂದ ಅಂದರೆ February ತಿಂಗಳಿನಲ್ಲಿ ಬಿಡುಗಡೆ ಆಗುವ ಹಣ ನಿಮ್ಮ ಖಾತೆಗೂ ಕೂಡ ತಲುಪಬಹುದು.
ಗೃಹಜ್ಯೋತಿ ಯೋಜನೆಯ ಜೀರೋ ವಿದ್ಯುತ್ ಬಿಲ್ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್
ಸ್ಟೇಟಸ್ ತಿಳಿದುಕೊಳ್ಳಿ – Check Gruha lakshmi Scheme status
ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆಯಾ ಇಲ್ವಾ ಅನ್ನೋದನ್ನ ತಿಳಿದುಕೊಳ್ಳಲು ನೀವು ಗೂಗಲ್ನಲ್ಲಿ “ಮಾಹಿತಿ ಕಣಜ” (Mahiti kanaja) ಎಂದು ಸರ್ಚ್ ಮಾಡಿ. ಆ ವೆಬ್ಸೈಟ್ ಕಾಣುತ್ತಿದ್ದಂತೆ ಅದರ ಮೇಲೆ ಕ್ಲಿಕ್ ಮಾಡಿ.
ಹೊಸ ಪುಟದಲ್ಲಿ ಮೇಲ್ಭಾಗದಲ್ಲಿ ಗೃಹಲಕ್ಷ್ಮಿ ಅರ್ಜಿ ಸ್ಥಿತಿ ಎನ್ನುವ ಆಯ್ಕೆಯನ್ನು ಕಾಣುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.
ಈಗ ಗೋ ಎಂದು ಕ್ಲಿಕ್ ಮಾಡಿದರೆ, ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ತಿಳಿಯಬಹುದು. ಯಾರ ಖಾತೆಗೆ ಹಣ ಜಮಾ ಆಗಿದೆ? ಎಷ್ಟು ಕಂತಿನ ಹಣ ಜಮಾ ಆಗಿದೆ? ಎಲ್ಲಾ ಮಾಹಿತಿಗಳು ಕೂಡ ಇಲ್ಲಿ ಲಭ್ಯ.
ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಹಣವನ್ನು 4 ಸಾವಿರ ಮಾಡಿಕೊಳ್ಳಿ! ಹೊಸ ಅಪ್ಡೇಟ್
2 new rules for Gruha Lakshmi Scheme 6th installment money