ಗೃಹಜ್ಯೋತಿ ಯೋಜನೆಯ ಜೀರೋ ವಿದ್ಯುತ್ ಬಿಲ್ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್

Story Highlights

Free Electricity Bill : ಯೂನಿಟ್ ದರ ಪರಿಷ್ಕರಣೆಗೆ ಮುಂದಾದ ಸರ್ಕಾರ, ಮತ್ತೆ ಹೆಚ್ಚಾಗಲಿದಿಯಾ ಯುನಿಟ್ ರೇಟ್!

ಹಣದುಬ್ಬರದ ಪ್ರಭಾವ ಇಂದು ಪ್ರತಿಯೊಬ್ಬ ನಾಗರಿಕನ ಮೇಲೆ ಆಗುತ್ತಿದೆ. ಪೆಟ್ರೋಲ್, ಡೀಸೆಲ್ ಮೊದಲಾದ ತೈಲ ವಸ್ತುಗಳ (oil products) ಮೇಲೆ ದರ ಏರಿಕೆ (price increased) ಮಾತ್ರವಲ್ಲದೆ ದೈನಂದಿನ ದಿನಸಿ ವಸ್ತುಗಳ ಬೆಲೆ ಕೂಡ ಜಾಸ್ತಿಯಾಗಿದೆ. ಇದರ ಜೊತೆಗೆ ಇದೀಗ ಸರ್ಕಾರ ಮತ್ತು ಶಾಕಿಂಗ್ ಸುದ್ದಿಯನ್ನು ನೀಡಿದೆ.

ಹೌದು, ದುಬಾರಿ ದುನಿಯಾದಲ್ಲಿ ಜನರಿಗೆ ಜೀವನ ನಡೆಸುವುದೇ ಕಷ್ಟವಾಗಿದೆ. ಎಲ್ಲದರ ಬೆಲೆ, ನಾವು ದುಡಿಯುವ ದುಡಿಮೆಗಿಂತಲೂ ಹೆಚ್ಚಾಗಿದೆ. ಹಾಗಾಗಿ ದುಡಿಮೆಗಿಂತಲೂ ಖರ್ಚೇ (cost) ಜಾಸ್ತಿಯಾಗಿದೆ ಎನ್ನಬಹುದು.

ರೈತರ ಖಾತೆಗೆ ಈ ದಿನ ಜಮಾ ಆಗಲಿದೆ 2,000 ರೂಪಾಯಿ, ಅಧಿಕೃತ ಘೋಷಣೆ

ಈ ಸಮಯದಲ್ಲಿ, ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆ (guarantee schemes) ಗಳು ಜನರಿಗೆ ಸ್ವಲ್ಪ ನೆಮ್ಮದಿ ನೀಡಿತ್ತು. ಮಹಿಳೆಯರು ಪ್ರತಿ ತಿಂಗಳು 2,000ಗಳನ್ನು ಮನೆಯ ಖರ್ಚು ನಿರ್ವಹಣೆಗಾಗಿ ಸರ್ಕಾರದಿಂದ ಪಡೆದುಕೊಳ್ಳುತ್ತಿದ್ದಾರೆ, ಗೃಹಜೋತಿ ಯೋಜನೆಯ ಅಡಿಯಲ್ಲಿ ಮನೆಯ ಪುರುಷರು ಪ್ರತಿ ತಿಂಗಳು ಶೂನ್ಯ ಬಿಲ್ (Zero Electricity Bill) ಪಾವತಿ ಮಾಡುವ ಹಿನ್ನೆಲೆಯಲ್ಲಿ ಪ್ರತಿ ತಿಂಗಳ 2,000 ವರೆಗಿನ ಖರ್ಚನ್ನು ಉಳಿಸುತ್ತಿದ್ದಾರೆ.

ವಿದ್ಯುತ್ ದರ ಪರಿಷ್ಕರಣೆ!

2024 – 25ರ ಹಣಕಾಸು ವರ್ಷ ಆರಂಭವಾಗುತ್ತಿದ್ದ ಹಾಗೆ, ವಿದ್ಯುತ್ ದರವನ್ನು ಪರಿಷ್ಕರಣೆ ಮಾಡಲು ಎಸ್ಕಾಂ (ascom) , ಬೆಸ್ಕಾಂ (BESCOM) , ಹೆಸ್ಕಾಂ ಮೊದಲಾದ ವಿದ್ಯುತ್ ಸರಬರಾಜು ಕಂಪನಿಗಳು ಮುಂದಾಗಿವೆ. ಪ್ರತಿ ವರ್ಷವೂ ವಿದ್ಯುತ್ ದರ ಪರಿಷ್ಕರಣೆಯನ್ನು ಮಾಡಲಾಗುತ್ತದೆ, ಅದೇ ರೀತಿ ಈಗಲೂ ಕೂಡ ಯೂನಿಟ್ ಬೆಲೆ ನಿರ್ಧರಿಸುವ ಬಗ್ಗೆ ತೀರ್ಮಾನಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಹಣವನ್ನು 4 ಸಾವಿರ ಮಾಡಿಕೊಳ್ಳಿ! ಹೊಸ ಅಪ್ಡೇಟ್

electricity Billಎಷ್ಟು ಹೆಚ್ಚಾಗಲಿದೆ ಯುನಿಟ್ ರೇಟ್? (How much electricity cost increase)

ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು ಕೂಡ ಈಗಾಗಲೇ ಕರ್ನಾಟಕ ರಾಜ್ಯ ವಿದ್ಯುತ್ ಶಕ್ತಿ ನಿಯಂತ್ರಣ ಮಂಡಳಿಗೆ (KERC) ದರ ಹೆಚ್ಚಿಸುವ ಬಗ್ಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜು ಕಂಪನಿಗಳ KERC ಕೂಡ ವಿದ್ಯುತ್ ಪರಿಷ್ಕರಣೆ ನಡೆಸಲಿದೆ. 40 ರಿಂದ 60 ಪೈಸೆ ಹೆಚ್ಚಳಕ್ಕೆ ವಿದ್ಯುತ್ ಸರಬರಾಜು ಕಂಪನಿಗಳು ಸರ್ಕಾರಕ್ಕೆ ಮನವಿ ಮಾಡಿದೆ. ಸಿಕ್ಕಿರುವ ಮಾಹಿತಿಯ ಪ್ರಕಾರ ಸುಮಾರು 35 ಪೈಸೆಯಿಂದ 40 ಪೈಸೆಗಳವರೆಗೆ ಪ್ರತಿ ಯೂನಿಟ್ ದರ ಹೆಚ್ಚಳ ಆಗುವ ಸಾಧ್ಯತೆ ಇದೆ.

ಸರ್ಕಾರದ ಹೊಸ ಯೋಜನೆ! ಮಹಿಳೆಯರಿಗೆ ಸಿಗಲಿದೆ 3 ಲಕ್ಷ ತನಕ ಬಡ್ಡಿ ರಹಿತ ಸಾಲ

ಇಲ್ಲಿಯವರೆಗಿನ ದರ ಹೆಚ್ಚಳ ಹೇಗಿತ್ತು? (Old rate per unit)

2009 – ಪ್ರತಿ ಯೂನಿಟ್ ಗೆ 34 ಪೈಸೆ
2010 – ಪ್ರತಿ ಯೂನಿಟ್ ಗೆ 30 ಪೈಸೆ
2011 – ಪ್ರತಿ ಯೂನಿಟ್ ಗೆ 28 ಪೈಸೆ
2012 -ಪ್ರತಿ ಯೂನಿಟ್ ಗೆ 13 ಪೈಸೆ
2013 – ಪ್ರತಿ ಯೂನಿಟ್ ಗೆ 13 ಪೈಸೆ
2017 – ಪ್ರತಿ ಯೂನಿಟ್ ಗೆ 48 ಪೈಸೆ
2019 – ಪ್ರತಿ ಯೂನಿಟ್ ಗೆ 35 ಪೈಸೆ
2020 – ಪ್ರತಿ ಯೂನಿಟ್ ಗೆ 30 ಪೈಸೆ
2022 – ಪ್ರತಿ ಯೂನಿಟ್ ಗೆ 35 ಪೈಸೆ
2023 – ಪ್ರತಿ ಯೂನಿಟ್ ಗೆ 35 ಪೈಸೆ

ರೈತರಿಗೆ ಗುಡ್ ನ್ಯೂಸ್; ಕೃಷಿ ಸಾಲದ ಬಡ್ಡಿ ಮನ್ನಾ, ಯಾರಿಗೆ ಸಿಗಲಿದೆ ಬೆನಿಫಿಟ್?

ಇನ್ನು ಈ ವರ್ಷ ಅಂದರೆ 2024ರ ಆರಂಭದಲ್ಲಿ ವಿದ್ಯುತ್ ದರದ ಹೆಚ್ಚಳದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದು, ಈ ಬಾರಿ ಎಷ್ಟು ಹೆಚ್ಚಳ ಆಗಲಿದೆ ಎನ್ನುವುದನ್ನು ಕಾದು ನೋಡಬೇಕು. ಹಾಗೇನೆ ಈ ವಿದ್ಯುತ್ ದರ ಹೆಚ್ಚಳದಿಂದ ಗೃಹಜ್ಯೋತಿ ಯೋಜನೆಯ ಗ್ರಾಹಕರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಸದ್ಯದಲ್ಲಿಯೇ ತಿಳಿಯಬಹುದು.

Big update for those who are getting zero electricity bill