ಕಳೆದ ಆರರಿಂದ ಏಳು ತಿಂಗಳುಗಳ ಅವಧಿಯಲ್ಲಿ ರಾಜ್ಯ ಸರ್ಕಾರದಿಂದ 10,000ಗಳನ್ನು ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಅಡಿಯಲ್ಲಿ ಜಮಾ ಮಾಡಲಾಗಿದೆ.

5 ಕಂತುಗಳ ಹಣವು ಕೂಡ ಬಿಡುಗಡೆ ಆಗಿದೆ. ಮಹಿಳೆಯರ ತಿಂಗಳ ಸಣ್ಣಪುಟ್ಟ ಖರ್ಚುಗಳನ್ನು ನಿಭಾಯಿಸಲು ಈ ಎರಡು ಸಾವಿರ ರೂಪಾಯಿ ಬಹಳ ಪ್ರಯೋಜನಕಾರಿಯಾಗಿದೆ ಎನ್ನುವುದು.

Gruha Lakshmi money received only 2,000, Update About Pending Money

ಗೃಹಲಕ್ಷ್ಮಿ ಯೋಜನೆಗಾಗಿ ಸುಮಾರು 1.20 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿ ಫಲಾನುಭವಿಗಳಾಗಿದ್ದಾರೆ, ಇವರಲ್ಲಿ 90% ಮಹಿಳೆಯರು ಈಗಾಗಲೇ ಹಣ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಬಗ್ಗೆ ಸರ್ಕಾರ ಹೊಸ ಅಪ್ಡೇಟ್ ನೀಡಿದ್ದು, ಇದರ ಬಗ್ಗೆ ಮಾಹಿತಿ ಇಲ್ಲಿದೆ.

ಸರ್ಕಾರದ ಹೊಸ ಯೋಜನೆ! ಮಹಿಳೆಯರಿಗೆ ಸಿಗಲಿದೆ 3 ಲಕ್ಷ ತನಕ ಬಡ್ಡಿ ರಹಿತ ಸಾಲ

ರದ್ದಾಗಿದೆ ಹಲವರ ರೇಷನ್ ಕಾರ್ಡ್!

ರೇಷನ್ ಕಾರ್ಡ್ ರದ್ದುಪಡಿಗೆ (ration card cancellation) ಸಂಬಂಧಪಟ್ಟ ಹಾಗೆ ಸರ್ಕಾರ ಆಹಾರ ಇಲಾಖೆಯ ಮಾಹಿತಿ ಪಡೆದು ಸಾಕಷ್ಟು ಜನರ ಬಿಪಿಎಲ್ ಕಾರ್ಡ್ (BPL card) ರದ್ದುಪಡಿಸಿದೆ.

ಅನ್ನಭಾಗ್ಯ, ಗೃಹ ಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗಬೇಕು ಅಂದ್ರೆ, ಮನೆಯ ಯಜಮಾನಿಯ ಹೆಸರಿನಲ್ಲಿ ರೇಷನ್ ಕಾರ್ಡ್ ಇರಬೇಕು ಹಾಗೂ ಬಿಪಿಎಲ್ ಕಾರ್ಡ್ ಹೊಂದಿರಬೇಕು.

ಇನ್ನು ಸಾಕಷ್ಟು ಮಹಿಳೆಯರು ಬ್ಯಾಂಕ್ ಖಾತೆಗೆ ಈ ಆಧಾರ ಈ ಲಿಂಕ್ ಮಾಡಿಕೊಳ್ಳದೆ ಇರುವ ಹಿನ್ನೆಲೆಯಲ್ಲಿ ಇದುವರೆಗೆ ಅಂತವರ ಖಾತೆಗೆ ಹಣ ಜಮಾ ಆಗಿಲ್ಲ. ಇದನ್ನು ಹೊರತುಪಡಿಸಿ ಸರ್ಕಾರದ ಮಾನದಂಡಗಳನ್ನು ನಿರ್ಲಕ್ಷಿಸಿ, ಬಿಪಿಎಲ್ ಕಾರ್ಡ್ ಬಳಸುತ್ತಿರುವವರ ಕಾರ್ಡ್ ರದ್ದುಪಡಿ ಮಾಡಲು ಸರ್ಕಾರ ನಿರ್ಧರಿಸಿದೆ.

ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ಯೋ ಇಲ್ಲವೋ ಎಂಬುದನ್ನು https://ahara.kar.nic.in/Home/EServices ಸರ್ಕಾರ ಇಲಾಖೆಯ ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ರದ್ದುಪಡಿ ಆಗಿರುವ ರೇಷನ್ ಕಾರ್ಡ್ ವಿವರ ಎನ್ನುವ ಆಯ್ಕೆಯಲ್ಲಿ ನಿಮ್ಮ ಹೆಸರು ಇದೆಯಾ ಎಂಬುದನ್ನು ಚೆಕ್ ಮಾಡಬಹುದು.

ರೈತರಿಗೆ ಗುಡ್ ನ್ಯೂಸ್; ಕೃಷಿ ಸಾಲದ ಬಡ್ಡಿ ಮನ್ನಾ, ಯಾರಿಗೆ ಸಿಗಲಿದೆ ಬೆನಿಫಿಟ್?

Gruha Lakshmi Yojana2000 ಬದಲು ಸರ್ಕಾರ ನೀಡುತ್ತೆ ನಾಲ್ಕು ಸಾವಿರ ರೂಪಾಯಿ!

ಗೃಹಿಣಿಯರು ಪ್ರತಿ ತಿಂಗಳು ಸರ್ಕಾರದಿಂದ ಸಿಗುತ್ತಿರುವ 2000 ಪಡೆದುಕೊಂಡು, ಮನೆಯ ಖರ್ಚು ನಿಭಾಯಿಸುವುದರ ಜೊತೆಗೆ ಚೀಟಿ ವ್ಯವಹಾರವನ್ನು ಕೂಡ ಆರಂಭಿಸಿದ್ದಾರೆ. ಅಂದರೆ ಖಾಸಗಿ ಚೀಟಿ ವ್ಯವಹಾರದಲ್ಲಿ ಹೂಡಿಕೆ (Investment) ಮಾಡುವುದು. ಆದರೆ ಈ ರೀತಿ ಚೀಟಿ ವ್ಯವಹಾರ ಅಥವಾ ಯಾರ ಕೈಗಾದರೂ ಕೈ ಸಾಲ ಕೊಟ್ಟರೆ ಅದು ಹಿಂತಿರುಗಿ ಬಾರದೆ ಇರಬಹುದು. ಇಂತಹ ಸಾಲಗಳಿಗೆ ಗ್ಯಾರಂಟಿ ಕೂಡ ಇರುವುದಿಲ್ಲ.

ಈ ರೀತಿ ಸರ್ಕಾರದಿಂದ ಉಚಿತವಾಗಿ ಸಿಕ್ಕ ಹಣವನ್ನು ಎಲ್ಲೆಲ್ಲೋ ಕಳೆದುಕೊಳ್ಳುವ ಬದಲು ಸರ್ಕಾರವೇ ನೀಡುವ ಮತ್ತೊಂದು ಯೋಜನೆಯ ಪ್ರಯೋಜನ ಪಡೆದುಕೊಂಡು 2,000ಗಳನ್ನು 4,000 ಗಳನ್ನಾಗಿ ಮಾಡಿಕೊಳ್ಳಬಹುದು.

ಮಹಿಳೆಯರಿಗಾಗಿ ಮತ್ತೊಂದು ಯೋಜನೆ; ಸಿಗಲಿದೆ 2.25 ಲಕ್ಷ ರೂಪಾಯಿ ಸಬ್ಸಿಡಿ ಹಣ

ಚಿಟ್ ಫಂಡ್! (Government chit fund)

ಈಗಾಗಲೇ ಕೇರಳ (Kerala) ರಾಜ್ಯದಲ್ಲಿ ಯಶಸ್ವಿಯಾಗಿರುವ ಸರ್ಕಾರದ ಚಿಟ್ ಫಂಡ್ ಯೋಜನೆಯನ್ನು ಕರ್ನಾಟಕದಲ್ಲಿಯೂ ಕೂಡ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. Mysore sales international limited. (Under Government of Karnataka) ಅಡಿಯಲ್ಲಿ ಮಹಿಳೆಯರು ಸರ್ಕಾರಕ್ಕೆ ಪ್ರತಿ ತಿಂಗಳು 2000ಗಳನ್ನು ಹೂಡಿಕೆ ಮಾಡಲು ಕೊಟ್ಟರೆ ಕೆಲವು ತಿಂಗಳ ಅವಧಿಯ ನಂತರ ಆ ಹಣಕ್ಕೆ ಬಡ್ಡಿ ಸೇರಿಸಿ ಹಿಂತಿರುಗಿಸಲಾಗುತ್ತದೆ.

ಇದು ಚೀಟಿ ವ್ಯವಹಾರದಂತೆ ಆಗಿದ್ದು ನೀವು 20, 30, 40 ತಿಂಗಳುಗಳ ಅವಧಿಗೆ ಹೂಡಿಕೆ ಮಾಡಬಹುದು. ಅವಧಿ ಮುಗಿದ ನಂತರ ನೀವು ಹೂಡಿಕೆ ಮಾಡಿದ ಹಣವನ್ನು ಬಡ್ಡಿ ಸಮೇತ ಹಿಂತಿರುಗಿ ಪಡೆಯಬಹುದು.

ಇಷ್ಟು ದಿನ ಗೃಹಲಕ್ಷ್ಮಿ ಯೋಜನೆ ಹಣ ಪಡೆದವರಿಗೆ ರಾತ್ರೋ-ರಾತ್ರಿ ಹೊಸ ಅಪ್ಡೇಟ್!

ಚಿಟ್ ಫಂಡ್ ಹೂಡಿಕೆ (chitfund investment) ಬಗ್ಗೆ ಸರ್ಕಾರ ಈಗಾಗಲೇ ಚಿಂತನೆ ನಡೆಸಿದೆ. ಸದ್ಯದಲ್ಲೇ ಇದರ ಬಗ್ಗೆ ಅಧಿಕೃತ ಮಾಹಿತಿಯನ್ನು ಸರ್ಕಾರ ತನ್ನ ಸುತ್ತೋಲೆಯಲ್ಲಿ ಹೊರಡಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಚಿಟ್ ಫಂಡ್ ಮೂಲಕ ಇನ್ನು ಮುಂದೆ ಮಹಿಳೆಯರು ಹೆಚ್ಚಿನ ಹಣ ಸಂಪಾದನೆ ಮಾಡಲು ಕೂಡ ಸಾಧ್ಯವಿದೆ.

Here is the new update on Gruha Lakshmi Scheme Money Deposit