ಇಷ್ಟು ದಿನ ಗೃಹಲಕ್ಷ್ಮಿ ಯೋಜನೆ ಹಣ ಪಡೆದವರಿಗೆ ರಾತ್ರೋ-ರಾತ್ರಿ ಹೊಸ ಅಪ್ಡೇಟ್!
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯಿಂದ ಸಾಕಷ್ಟು ಮಹಿಳೆಯರಿಗೆ ತಿಂಗಳ ಖರ್ಚು ವೆಚ್ಚ ನಿಭಾಯಿಸುವಲ್ಲಿ ಸಹಾಯಕವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರತಿ ತಿಂಗಳು 2000ಗಳನ್ನ ಸುಖಾ ಸುಮ್ಮನೆ ಯಾರು ಕೊಡುವುದಿಲ್ಲ, ಸರ್ಕಾರದ ಗೃಹಲಕ್ಷ್ಮಿ ಯೋಜನೆಯಿಂದಾಗಿ ಮಹಿಳೆಯರು ಈ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.
ಇದೀಗ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ಸರ್ಕಾರದಿಂದ ಹೊಸ ಅಪ್ಡೇಟ್ (update) ಒಂದು ಹೊರಬಿದ್ದಿದ್ದು ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ ಮುಂದೆ ಓದಿ.
ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಈ ಕೆಲಸ ಮಾಡಿಕೊಳ್ಳುವುದು ಕಡ್ಡಾಯ!
ರೇಷನ್ ಕಾರ್ಡ್ ಬದಲಾವಣೆ ಹಾಗೂ ತಿದ್ದುಪಡಿಗೆ ಅವಕಾಶ! ಇಲ್ಲಿದೆ ಮಹತ್ವದ ಮಾಹಿತಿ
ಆಧಾರ್ ಸೀಡಿಂಗ್! (Aadhaar seeding)
ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 2000ಗಳನ್ನು ಪ್ರತಿ ತಿಂಗಳು ನೀವು ಪಡೆದುಕೊಳ್ಳಬೇಕು ಎಂದಿದ್ದರೆ ನಿಮ್ಮ ಬಳಿ ಆಧಾರ್ ಕಾರ್ಡ್ ಇರಬೇಕು ಹಾಗೂ ಆ ಆಧಾರ್ ಕಾರ್ಡ್ ನಿಮ್ಮ ಬ್ಯಾಂಕ್ ಖಾತೆಗೆ (Bank Account) ಲಿಂಕ್ ಆಗಿರಬೇಕು. ಇದುವರೆಗೆ ಸಾಕಷ್ಟು ಜನರ ಖಾತೆಗೆ ಆಧಾರ್ ಲಿಂಕ್ ಮಾಡಿಕೊಳ್ಳುವ ಪ್ರಕ್ರಿಯೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಅಂತಹ ಮಹಿಳೆಯರ ಖಾತೆಗೆ ಹಣ ಬಂದಿಲ್ಲ. ಇನ್ನಾದ್ರೂ ಬ್ಯಾಂಕಿಗೆ ಹೋಗಿ ಈ ಕೆಲಸ ಮಾಡಿಕೊಳ್ಳಿ.
ಈ ಪಟ್ಟಿಯಲ್ಲಿ ಹೆಸರು ಇದ್ರೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಹಣ ಬರುವುದಿಲ್ಲ!
E-KYC ಕಡ್ಡಾಯ!
ಬ್ಯಾಂಕ್ ಖಾತೆಗೆ ಈಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಸರ್ಕಾರ ಈಗಾಗಲೇ ತಿಳಿಸಿದೆ. ಒಂದು ವೇಳೆ ನೀವು ಈಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದೆ ಇದ್ದರೆ ನಿಮ್ಮ ಖಾತೆಗೆ ಗ್ಯಾರಂಟಿ ಯೋಜನೆಯ ಹಣ ಇನ್ನು ಮುಂದೆ ಸಂದಾಯ ಆಗುವುದಿಲ್ಲ.
ಇಷ್ಟು ದಿನ ಯಾವ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ (DBT) ಆಗಿಲ್ಲವೋ ಅವರು ಈಕೆವೈಸಿ ಮಾಡಿಸಿಕೊಳ್ಳದೆ ಇರುವುದು ಕೂಡ ಒಂದು ಕಾರಣವಾಗಿರುತ್ತದೆ ಹಾಗಾಗಿ ತಕ್ಷಣ ಈ ಕೆಲಸ ಮಾಡಿಕೊಳ್ಳಿ.
ಬ್ಯಾಂಕ್ ಖಾತೆಯ ಅಪ್ಡೇಟ್!
ನೀವು ಗೃಹಲಕ್ಷ್ಮಿ ಯೋಜನೆಯ ಹಣ ಬರಲು ನೀಡಿರುವ ಅಥವಾ ಬಳಸಿಕೊಳ್ಳುತ್ತಿರುವ ಬ್ಯಾಂಕ್ ಖಾತೆ ಸಕ್ರಿಯವಾಗಿರಬೇಕು ಒಂದು ವೇಳೆ ನೀವು ಬಹಳ ವರ್ಷಗಳ ಹಿಂದೆ ಬ್ಯಾಂಕ್ ಖಾತೆಯನ್ನು ತೆರೆದು ಅದ್ರಲ್ಲಿ ಹಣಕಾಸಿನ ವ್ಯವಹಾರ ಮಾಡದೇ ಇದ್ದರೆ ಆ ಖಾತೆ ಸಕ್ರಿಯವಾಗಿರುವುದಿಲ್ಲ ನೀವು ಅದರಲ್ಲಿ ಮಿನಿಮಂ ಬ್ಯಾಲೆನ್ಸ್ (minimum balance) ಇಟ್ಟು ಮತ್ತೆ ಸಕ್ರಿಯಗೊಳಿಸಿಕೊಂಡರೆ ಖಂಡಿತವಾಗಿಯೂ ನಿಮ್ಮ ಖಾತೆಗೆ ಹಣ ವರ್ಗಾವಣೆ (Money Deposit) ಆಗಲಿದೆ.
ರೈತರಿಗೆ ಕೃಷಿ ಇಲಾಖೆಯಿಂದ ಬಂಪರ್ ಕೊಡುಗೆ! ಈ ಯೋಜನೆಗೆ ಅರ್ಜಿ ಸಲ್ಲಿಸಿ
NPCI ಮಾಡಿಸಿಕೊಳ್ಳಿ!
ಸರ್ಕಾರ ಈಗ ನೀಡಿರುವ ಹೊಸ ಅಪ್ಡೇಟ್ ಪ್ರಕಾರ ಬ್ಯಾಂಕ ಖಾತೆಗೆ npci ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ನೀವು ಬ್ಯಾಂಕ್ ಖಾತೆಗೆ ಈಕೆವೈಸಿ ಆಗಿದೆ ಆಧಾರ್ ಕಾರ್ಡ್ ಸೀಡಿಂಗ್ ಆಗಿದೆ ಎಂದು ಹೇಳಿದರು ಕೂಡ, ಜೊತೆಗೆ ಎನ್‌ಪಿಸಿಐ ಕಡ್ಡಾಯವಾಗಿದೆ. ಇದಕ್ಕಾಗಿ ನೀವು ಬ್ಯಾಂಕ್ ಗೆ ಹೋಗಿ ನಮ್ಮ ಖಾತೆಗೆ npci ಮಾಡಿಸಿಕೊಡಿ ಎಂದು ಕೇಳಬೇಕು. ಎನ್‌ಪಿಸಿಐ ಆಗಿದ್ದರೆ ಯಾವುದೇ ಸಮಸ್ಯೆ ಇಲ್ಲದೆ ಹಣ ನಿಮ್ಮ ಖಾತೆಯನ್ನು ತಲುಪುತ್ತದೆ.
ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್; NPCI ಆಗದೆ ಇದ್ರೆ ಹಣ ಜಮಾ ಆಗೋದಿಲ್ಲ!
ಹೊಸ ಅರ್ಜಿಗಳ ಸ್ವೀಕಾರ! (New application)
ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಕೋಟ್ಯಾಂತರ ಜನ ಅರ್ಜಿ ಸಲ್ಲಿಸಿ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇನ್ನು ನೀವು ಇದುವರೆಗೆ ಅರ್ಜಿ ಸಲ್ಲಿಸದೆ ಇದ್ದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರ ಮತ್ತೆ ಅವಕಾಶ ನೀಡುತ್ತಿದೆ. ಹಾಗಾಗಿ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನೀವು ಹತ್ತಿರದ ಸೇವಾ ಕೇಂದ್ರಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಮತ್ತೆ ಅರ್ಜಿ ಸಲ್ಲಿಸಬಹುದಾಗಿದೆ.
ಎಲ್ಲ ದಾಖಲೆಗಳು ಸರಿ ಇದ್ದು, ಸರ್ಕಾರದ ಮಾನದಂಡದ ಒಳಗೆ ಬರುವ ಮಹಿಳೆಯರಿಗೆ ತಪ್ಪದೇ ಪ್ರತಿ ತಿಂಗಳು 20ನೇ ತಾರೀಕಿನಂದು ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಲಿದೆ ಎಂದು ಸರ್ಕಾರ ಭರವಸೆ ನೀಡಿದೆ.
ಹೊಸ ಬಿಪಿಎಲ್ ಕಾರ್ಡ್ ವಿತರಣೆಗೆ ಸರ್ಕಾರದ ನಿರ್ಧಾರ; ರೇಷನ್ ಕಾರ್ಡ್ ವಿತರಣೆ!
6ನೇ ಕಂತಿನ ಹಣ ಜಮಾ ಆಗುವುದು ಯಾವಾಗ?
ಇನ್ನು ಇದುವರೆಗೆ 5 ಕಂತಿನ ಹಣ ಪಡೆದುಕೊಂಡವರು 6ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗಲಿದೆ ಎಂದು ಕಾದು ಕುಳಿತಿದ್ದಾರೆ. ಸರ್ಕಾರ ಈಗಾಗಲೇ ತಿಳಿಸಿರುವಂತೆ ಸಾಕಷ್ಟು ಮಹಿಳೆಯರಿಗೆ ಪೆಂಡಿಂಗ್ ಹಣ ಕೂಡ ವಿತರಣೆ ಮಾಡುವುದು ಬಾಕಿ ಇದೆ.
ಈಗ ಯಾರ ಖಾತೆಯಲ್ಲಿ ಯಾವ ಸಮಸ್ಯೆಯೂ ಇಲ್ಲವೋ ಅಂತಹ ಮಹಿಳೆಯರಿಗೆ ಪೆಂಡಿಂಗ್ ಹಣ ಕೂಡ ಜಮಾ ಆಗಲಿದೆ. ಇನ್ನು 6ನೇ ಕಂತಿನ ಹಣ ಫೆಬ್ರವರಿ ಮೊದಲ ವಾರ ಬಿಡುಗಡೆ ಆಗುವ ಸಾಧ್ಯತೆ ಇದೆ.
A new update for those who have Getting Gruha Lakshmi Yojana money
Our Whatsapp Channel is Live Now 👇