Karnataka NewsBangalore News

ರೈತರಿಗೆ ಕೃಷಿ ಇಲಾಖೆಯಿಂದ ಬಂಪರ್ ಕೊಡುಗೆ! ಈ ಯೋಜನೆಗೆ ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರ (Central government) ಹಾಗೂ ರಾಜ್ಯ ಸರ್ಕಾರಗಳು ಕೃಷಿ ಇಲಾಖೆಯ (Agriculture department) ಸಹಯೋಗದಲ್ಲಿ ರೈತರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ನೀಡಿವೆ.

ಕೃಷಿ ಚಟುವಟಿಕೆ (agriculture activities) ಗಾಗಿ ಅಗತ್ಯ ಇರುವ ವಸ್ತುಗಳಿಗೆ ಹಾಗೂ ಕೃಷಿ ಚಟುವಟಿಕೆಗೆ ಬೇಕಾಗಿರುವ ಸಾಲ ಸೌಲಭ್ಯ (Loan) ಪಡೆದುಕೊಳ್ಳಲು ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತದೆ.

Loan

ಇದೀಗ ಸೂಕ್ಷ್ಮ ನೀರಾವರಿ (micro irrigation) ಯೋಜನೆಯಡಿಯಲ್ಲಿ ರೈತರಿಗೆ ಅನುಕೂಲವಾಗುವಂತಹ ಬಹಳ ಪ್ರಮುಖವಾದ ಯೋಜನೆ ಒಂದನ್ನು ಸರ್ಕಾರ ಪರಿಚಯಿಸಿದೆ.

ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್; NPCI ಆಗದೆ ಇದ್ರೆ ಹಣ ಜಮಾ ಆಗೋದಿಲ್ಲ!

ರೈತರಿಗೆ ಸ್ಪ್ರಿಂಕ್ಲರ್ ಸೆಟ್ ವಿತರಣೆ!

ಇಂದು ನೀರಿನ ಅಭಾವದಿಂದಾಗಿ ರೈತರು ಕೂಡ ಬೆಳೆ ಬೆಳೆಯಲು ಸರಿಯಾಗಿ ಆಗುತ್ತಿಲ್ಲ. ಹಾಗಾಗಿ ಹಿತಮಿತವಾಗಿ ಇರುವ ನೀರನ್ನು ಬಳಕೆ ಮಾಡಿಕೊಳ್ಳುವುದು ಬಹಳ ಮುಖ್ಯ.

ಇದಕ್ಕಾಗಿ ಅತಿ ಕಡಿಮೆ ನೀರು ಬಳಕೆ ಆಗುವಂತಹ ಹಾಗೂ ನೀರು ನಷ್ಟ ಆಗದೆ ಇರುವ ರೀತಿಯಲ್ಲಿ, ರೈತರ ಜಮೀನಿಗೆ ನೀರು ಒದಗಿಸುವ ಸ್ಪ್ರಿಂಕ್ಲರ್ ಸೆಟ್ ಅನ್ನು ಸಬ್ಸಿಡಿ ಬೆಲೆಗೆ ರೈತರಿಗೆ ನೀಡಲಾಗುತ್ತಿದೆ.

ಸ್ಪ್ರಿಂಕ್ಲರ್ ಸೆಟ್ ನ್ನ ರೈತರು ಜೋಡಣೆ ಮಾಡುವುದರಿಂದ ನೀರಿನ ಉಳಿತಾಯ ಆಗುವುದು ಮಾತ್ರವಲ್ಲದೆ ಮಣ್ಣಿನ ಸವಕಳಿ ಆಗುವುದಿಲ್ಲ ಹಾಗೂ ಮಣ್ಣಿನ ಫಲವತ್ತತೆ ನಷ್ಟ ಆಗುವುದಿಲ್ಲ. ಈ ಉದ್ದೇಶದಿಂದ ಹಳೆಯ ಸಾಂಪ್ರದಾಯಿಕ ನೀರಾವರಿ ಪದ್ಧತಿಗಿಂತಲೂ ಸ್ಪ್ರಿಂಕ್ಲರ್ ಅಳವಡಿಸುವುದು ಬಹಳ ಉತ್ತಮ.

ಹೊಸ ಬಿಪಿಎಲ್ ಕಾರ್ಡ್ ವಿತರಣೆಗೆ ಸರ್ಕಾರದ ನಿರ್ಧಾರ; ರೇಷನ್ ಕಾರ್ಡ್ ವಿತರಣೆ!

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents)

Subsidy Loanಆಧಾರ್ ಕಾರ್ಡ್
ಆರ್ ಟಿ ಸಿ ಪತ್ರ
ಬ್ಯಾಂಕ್ ಖಾತೆಯ ವಿವರ (Bank Account)
20 ರೂಪಾಯಿ ಸ್ಟ್ಯಾಂಪ್ ಪೇಪರ್ ಅಫಿಡವಿಟ್
ನೀರಾವರಿ ಜಮೀನು ಎನ್ನುವುದಕ್ಕೆ ಕಂದಾಯ ಇಲಾಖೆಯ ದೃಡೀಕರಣ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ ( SC/ ST ಹಾಗಿದ್ದರೆ ಮಾತ್ರ)
ಇತ್ತೀಚಿನ ಭಾವಚಿತ್ರ

ಇನ್ಮುಂದೆ ಮೊಬೈಲ್‌ನಲ್ಲೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಿ; ಇಲ್ಲಿದೆ ಮಾಹಿತಿ!

ಯಾವ ಬೆಲೆಗೆ ಸಿಗಲಿದೆ ಸ್ಪ್ರಿಂಕ್ಲರ್ ಸೆಟ್

18 ಪೈಪ್ ಹಾಗೂ 2 ಜೆಟ್ – 2496 (ಒಂದು ಎಕರೆ ಜಮೀನಿಗೆ)

30 ಪೈಪ್ ಹಾಗೂ 5 ಜೆಟ್ – 4139 (1 – 2.5 ಎಕರೆ ಜಮೀನಿಗೆ)

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿ ನೇರವಾಗಿ ಹೋಗಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಅಥವಾ ಮೊಬೈಲ್ ಮೂಲಕ ಕೂಡ ನೀವು ಹಣ ಪಾವತಿ ಮಾಡಿ ಸ್ಪ್ರಿಂಕ್ಲರ್ ಸೆಟ್ (sprinkler set) ಪಡೆದುಕೊಳ್ಳಬಹುದು.

ನಿಮ್ಮ ಮೊಬೈಲ್ ನಲ್ಲಿ https://kkisan.karnataka.gov.in/Home.aspx ಈ ವೆಬ್ ಸೈಟ್ ಗೆ ಹೋಗಿ ಸಣ್ಣ ನೀರಾವರಿ ಅರ್ಜಿ ನೋಂದಣಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈಗ ರೈತರು FID ಸಂಖ್ಯೆಯನ್ನು ನಮೂದಿಸಬೇಕು.

ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿದೆ! ಈ ರೀತಿ ಚೆಕ್ ಮಾಡಿಕೊಳ್ಳಿ

ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಿದರೆ ನಿಮ್ಮ ಅರ್ಜಿ ಸಲ್ಲಿಕೆ ಆಗ್ತದೆ. ಇದಕ್ಕೆ ನೀವು ದಾಖಲೆಗಳು ಸ್ಕ್ಯಾನ್ ಕಾಪಿ ಹಾಗೂ ಆನ್ಲೈನ್ ಪೇಮೆಂಟ್ ಮಾಡಬೇಕು.

ಅರ್ಜಿ ಸಲ್ಲಿಕೆ ಆದನಂತರ ಈ – ರಶೀದಿ ಪಡೆದುಕೊಂಡು ಹತ್ತಿರದ ಕೃಷಿ ಸೇವಾ ಕೇಂದ್ರಕ್ಕೆ ಇದನ್ನು ತೋರಿಸಿದರೆ ನಿಮಗೆ ಸ್ಪ್ರಿಂಕ್ಲರ್ ಸೆಟ್ ನೀಡಲಾಗುತ್ತದೆ.

A bumper Scheme from the Department of Agriculture to farmers

Our Whatsapp Channel is Live Now 👇

Whatsapp Channel

Related Stories