ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಪ್ರಯೋಜನವನ್ನು ಯಾವೆಲ್ಲಾ ಮಹಿಳೆಯರು ಪಡೆದುಕೊಳ್ಳುತ್ತಿದ್ದರೋ ಅಂತವರಿಗೆ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ ಇದೆ.

ನಿಮ್ಮ ಖಾತೆಗೆ 4ನೇ ಹಾಗೂ 5ನೇ ದಿನ ಹಣ ಜಮಾ ಆಗಿಲ್ವಾ? ಹೊಸದಾಗಿ ಅರ್ಜಿ ಸಲ್ಲಿಸಬೇಕೆ? 6ನೇ ಕಂತಿನ ಹಣ ಜಮಾ (Money Deposit) ಆಗುತ್ತದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕಾ? ಈ ರೀತಿಯಾಗಿರುವಂತಹ ನಿಮ್ಮ ಗೊಂದಲಪೂರಿತ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಇದೆ ಉತ್ತರ.

Gruha Lakshmi money received only 2,000, Update About Pending Money

ಹೊಸ ಬಿಪಿಎಲ್ ಕಾರ್ಡ್ ವಿತರಣೆಗೆ ಸರ್ಕಾರದ ನಿರ್ಧಾರ; ರೇಷನ್ ಕಾರ್ಡ್ ವಿತರಣೆ!

ಪೆಂಡಿಂಗ್ ಇರುವ ಹಣ ಬಿಡುಗಡೆ ಮಾಡಲು ನಿರ್ಧಾರ!

ಮೊದಲನೇದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳೆಯರಿಗಾಗಿ ನೀಡಿರುವ ಗುಡ್ ನ್ಯೂಸ್ ಏನು ಎಂಬುದನ್ನು ನೋಡೋಣ. ಇದುವರೆಗೆ ಗೃಹಲಕ್ಷ್ಮಿ ಯೋಜನೆಯ ಮೂರು ನಾಲ್ಕು ಹಾಗೂ ಐದನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗದೇ ಇದ್ದರೆ ತಕ್ಷಣ ಅಂತವರ ಖಾತೆಗೆ ಹಣ ಜಮಾ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

ಸದ್ಯದಲ್ಲಿ ಅಂದ್ರೆ 6ನೇ ಕಂತಿನ ಹಣ ಬಿಡುಗಡೆಗೂ ಮೊದಲು ಪೆಂಡಿಂಗ್ ಇರುವ ಹಣವನ್ನು (pending amount) ಮಹಿಳೆಯರ ಖಾತೆಗೆ ಜಮಾ ಮಾಡಲಾಗುವುದು. ಶೇಕಡಾ 70% ನಷ್ಟು ಫಲಾನುಭವಿ ಮಹಿಳೆಯರಿಗೆ 5ನೇ ಕಂತಿನ ಹಣ ಜಮಾ ಆಗಿದೆ. ಇನ್ನು ಉಳಿದ 30% ಜನರಿಗೂ ಕೂಡ ಸದ್ಯದಲ್ಲಿಯೇ ಹಣ ಖಾತೆಗೆ (Bank Account) ಬರಲಿದೆ ಎಂದು ಸಚಿವೆ ಭರವಸೆ ನೀಡಿದ್ದಾರೆ.

ಇನ್ಮುಂದೆ ಮೊಬೈಲ್‌ನಲ್ಲೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಿ; ಇಲ್ಲಿದೆ ಮಾಹಿತಿ!

ಹೊಸ ಅರ್ಜಿ ಸಲ್ಲಿಕೆ!

ಸರ್ಕಾರ ನೀಡಿರುವ ಹೊಸ ಅಪ್ಡೇಟ್ನಲ್ಲಿ ಹೊಸ ಅರ್ಜಿ ಸಲ್ಲಿಕೆ ಬಗ್ಗೆಯೂ ಕೂಡ ತಿಳಿಸಲಾಗಿದೆ. ಈ ಹಿಂದೆ ಯಾವ ಮಹಿಳೆಯರ ಅರ್ಜಿ ತಿರಸ್ಕಾರಗೊಂಡಿತ್ತು ಅಥವಾ ಅರ್ಜಿ ನೀಡಿದರು ಕೂಡ ಇದುವರೆಗೆ ಹಣ ಜಮಾ ಆಗಿಲ್ವೋ ಅಂತವರು ಚಿಂತಿಸುವ ಅಗತ್ಯವಿಲ್ಲ.

ತಕ್ಷಣ ಗೃಹಲಕ್ಷ್ಮಿ ಯೋಜನೆಗೆ ಮತ್ತೆ ಅರ್ಜಿ ಸಲ್ಲಿಸಿ ಎಲ್ಲಾ ದಾಖಲೆಗಳು ಸರಿಯಾಗಿ ಇದ್ದರೆ ಅಂತವರಿಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಜಮಾ ಮಾಡುವುದಾಗಿ ಸಚಿವೆ ತಿಳಿಸಿದ್ದಾರೆ. ಈಗಲೂ ಅರ್ಜಿ ಸಲ್ಲಿಸಿ ಅರ್ಜಿ ಸ್ವೀಕಾರಗೊಂಡರೆ, 6ನೇ ಕಂತಿನ ಹಣವನ್ನು ಇಂತಹ ಫಲಾನುಭವಿ ಮಹಿಳೆಯರು ಪಡೆಯಬಹುದು.

ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿದೆ! ಈ ರೀತಿ ಚೆಕ್ ಮಾಡಿಕೊಳ್ಳಿ

Gruha Lakshmi Yojana6ನೇ ಕಂತಿನ ಹಣ ಬಿಡುಗಡೆ ಬಗ್ಗೆ ಅಪ್ಡೇಟ್!

ಆರನೇ ಕಂತಿನ ಹಣ ಬಿಡುಗಡೆ ಬಗ್ಗೆಯೂ ಕೂಡ ಸರ್ಕಾರ ಅಪ್ಡೇಟ್ ನೀಡಿದೆ. 5ನೇ ಕಂತಿನವರೆಗಿನ ಹಣ ಪಡೆದುಕೊಂಡ ಮಹಿಳೆಯರು 6ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತದೆ ಎಂದು ಕಾದು ಕುಳಿತಿದ್ದಾರೆ

ಇದಕ್ಕೆ ಸರ್ಕಾರ ಉತ್ತರ ನೀಡಿದ್ದು, ಇದೆ ಬರುವ ಫೆಬ್ರವರಿ ತಿಂಗಳಿನ ಮೊದಲ ವಾರದಲ್ಲಿ 6ನೇ ಕಂತಿನ ಹಣವನ್ನು ಕೂಡ ಮಹಿಳೆಯರ ಖಾತೆಗೆ (Bank Account) ಜಮಾ ಮಾಡಲಾಗುವುದು ಎಂದು ಹೇಳಿದೆ. ಹಾಗಾಗಿ ಕೆಲವೇ ದಿನಗಳಲ್ಲಿ 6ನೇ ಕಂತಿನ ಹಣ ಮಹಿಳೆಯರ ಖಾತೆಯನ್ನು ತಲುಪಲಿದೆ.

ಗೃಹಲಕ್ಷ್ಮಿ 6ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್; ಅದಕ್ಕೂ ಮೊದಲು ಈ ಕೆಲಸ ಮಾಡಿ

ಎನ್‌ಪಿಸಿಐ ಆಗದೆ ಇದ್ರೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ!

ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿತ್ತು. ಒಂದು ವೇಳೆ ಕೆವೈಸಿ ಆಗದೆ ಇದ್ದರೆ ಅನ್ನಭಾಗ್ಯ ಯೋಜನೆ (Annabhagya scheme) ಯ ಹಣವಾಗಲಿ ಅಥವಾ ಗೃಹಲಕ್ಷ್ಮಿ ಯೋಜನೆಯ ಹಣವಾಗಲಿ ಫಲಾನುಭವಿಗಳ ಖಾತೆಗೆ ಜಮಾ ಆಗುವುದಿಲ್ಲ.

ಆದರೆ ಈಗ ಮತ್ತೊಂದು ಅಪ್ಡೇಟ್ ಸಿಕ್ಕಿದ್ದು ಪ್ರತಿಯೊಬ್ಬರೂ ತಮ್ಮ ಖಾತೆಗೆ ಎನ್ ಪಿ ಸಿ ಐ (National Payment Corporation of India – NPCI) ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ಇದನ್ನ ಮಾಡಿಸಿಕೊಳ್ಳದಿದ್ದರೆ ಇದುವರೆಗೆ ಹಣ ಪಡೆದುಕೊಂಡಿರುವವರಿಗೆ ಮುಂದಿನ ಕಂತಿನ ಹಣ ಜಮಾ ಆಗುವುದಿಲ್ಲ ಎಂದು ಸರ್ಕಾರ ಹೇಳಿದೆ.

NPCI ಮಾಡಿಸಿಕೊಳ್ಳುವುದು ಹೇಗೆ?

ನೀವು ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಮಾಡಿಸಿಕೊಂಡಿದ್ದರು, ಆಧಾರ್ ಸೀಡಿಂಗ್ ಆಗಿದ್ದರು ಕೂಡ, NPCI ಕಡ್ಡಾಯವಾಗಿದೆ. ಇದನ್ನು ಮಾಡಿಸಲು ನೀವು, ನಿಮ್ಮ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಬರುವ ಖಾತೆ ಎಲ್ಲಿದೆಯೋ, ಆ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ಗೆ ಹೋಗಿ ನಮ್ಮ ಖಾತೆಗೆ ಎನ್ ಪಿಸಿಐ ಮಾಡಿಸಿಕೊಡಿ ಎಂದು ಹೇಳಿ.

ಇದಕ್ಕೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯ ವಿವರ ಅಂದ್ರೆ ಅಕೌಂಟ್ ನಂಬರ್ ಇಷ್ಟಿದ್ರೆ ಸಾಕು. ತಕ್ಷಣ ಈ ಕೆಲಸ ಮಾಡಿಕೊಳ್ಳಿ ಇಲ್ಲವಾದರೆ ಮುಂದಿನ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆ ಹಣ ನಿಮ್ಮ ಖಾತೆಯನ್ನು ಸೇರುವುದಿಲ್ಲ.

Big Update of Gruha Lakshmi Yojana, money will not be deposited without NPCI