ಇನ್ಮುಂದೆ ಮೊಬೈಲ್‌ನಲ್ಲೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಿ; ಇಲ್ಲಿದೆ ಮಾಹಿತಿ!

ಕರ್ನಾಟಕ ರಾಜ್ಯದಲ್ಲಿಯೂ ಕೂಡ ಹೊಸ ಪಡಿತರ ಚೀಟಿ (Ration Card) ವಿತರಣೆ ಮಾಡಲಾಗುತ್ತದೆ, ಹಾಗೂ ಪಡಿತರ ಚೀಟಿಯಲ್ಲಿ ಅಗತ್ಯ ಬದಲಾವಣೆಗೆ ಕೂಡ ಅವಕಾಶ ಮಾಡಿಕೊಡಲಾಗುತ್ತದೆ

ಇಂದು ಆಧಾರ್ ಕಾರ್ಡ್ (Aadhaar Card) , ಪ್ಯಾನ್ ಕಾರ್ಡ್ (PAN Card) ಮೊದಲಾದ ದಾಖಲೆಗಳನ್ನು ಹೇಗೆ ಪ್ರಮುಖ ಗುರುತಿನ ಚೀಟಿಯಾಗಿ ಬಳಸಿಕೊಳ್ಳುತ್ತಿದ್ದೇವೆಯೋ ಅಷ್ಟೇ ಮಹತ್ವ ರೇಷನ್ ಕಾರ್ಡ್ (Ration Card) ಗೆ ಕೂಡ ಇದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ (guarantee schemes) ಗಳಿಂದಾಗಿ ರೇಷನ್ ಕಾರ್ಡ್ ಮಹತ್ವ ಇನ್ನಷ್ಟು ಹೆಚ್ಚಿದೆ.

ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ (Below poverty line family) ಹಾಗೂ ಕಡು ಬಡತನದಲ್ಲಿ ಇರುವ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ (BPL card) ಹಾಗೂ ಅಂತ್ಯೋದಯ ಕಾರ್ಡ್ (Antyodaya Card) ವಿತರಣೆ ಮಾಡಲಾಗುತ್ತದೆ.

ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿದೆ! ಈ ರೀತಿ ಚೆಕ್ ಮಾಡಿಕೊಳ್ಳಿ

ಇನ್ಮುಂದೆ ಮೊಬೈಲ್‌ನಲ್ಲೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಿ; ಇಲ್ಲಿದೆ ಮಾಹಿತಿ! - Kannada News

ಕೇಂದ್ರ ಸರ್ಕಾರ (Central government) ಪ್ರತಿಯೊಂದು ರಾಜ್ಯಕ್ಕೂ ಕೂಡ ಇಂತಿಷ್ಟು ಎಂದು ರೇಷನ್ ಕಾರ್ಡ್ ವಿತರಣೆ ಮಾಡಲು ಅವಕಾಶ ಮಾಡಿಕೊಟ್ಟಿದೆ.

ರೇಷನ್ ಕಾರ್ಡ್ ಒಂದು ನಿಮ್ಮ ಬಳಿ ಇದ್ದರೆ, ಅದರಲ್ಲೂ ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿದ್ರೆ, ಸರ್ಕಾರದ ಎಲ್ಲಾ ಉಚಿತ ಯೋಜನೆ ಪ್ರಯೋಜನ ಪಡೆದುಕೊಳ್ಳಬಹುದು.. ಆಹಾರ, ಆರೋಗ್ಯ, ಶಿಕ್ಷಣ ಈ ಮೂರು ಪ್ರಮುಖ ಮೂಲಭೂತ ಪ್ರಯೋಜನಗಳು ಸಿಗುತ್ತವೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ!

ರೇಷನ್ ಕಾರ್ಡ್ ನಲ್ಲಿ ಸಣ್ಣ ತಪ್ಪಾಗಿದ್ದರು ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಡಿ ಬಿ ಟಿ (DBT) ಬಾರದೇ ಇರಬಹುದು. ಇದರ ಜೊತೆಗೆ ರೇಷನ್ ಕಾರ್ಡ್ ಈ ಕೆ ವೈ ಸಿ (E-KYC) ಆಗುವುದು ಕೂಡ ಕಡ್ಡಾಯವಾಗಿದೆ. ನೀವು ನಿಮ್ಮ ರೇಷನ್ ಕಾರ್ಡ್ ನೊಂದಿಗೆ ಆಧಾರ್ ಲಿಂಕ್ ಮಾಡಿಕೊಳ್ಳದೆ ಇದ್ದರೆ ಸರ್ಕಾರದ ಯೋಜನೆ ಪಡೆದುಕೊಳ್ಳಲು ಸಾಧ್ಯವಿಲ್ಲ.

ಇದೇ ಕಾರಣಕ್ಕೆ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಮತ್ತೆ ಸರ್ಕಾರ ಅವಕಾಶ ನೀಡಿದೆ. ಸದ್ಯ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿಗೆ ಅವಕಾಶ ಸಿಕ್ಕಿದ್ದು, ಛತ್ತಿಸ್ಗಢ (Chhattisgarh) ರಾಜ್ಯದಲ್ಲಿ. ಛತ್ತೀಸ್ಗಡ ರಾಜ್ಯದಲ್ಲಿ ಬಹಳ ದಿನಗಳಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಕಾದು ಕುಳಿತಿದ್ದವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ.

ಗೃಹಲಕ್ಷ್ಮಿ 6ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್; ಅದಕ್ಕೂ ಮೊದಲು ಈ ಕೆಲಸ ಮಾಡಿ

BPL Ration Cardಜನವರಿ 25 ರಿಂದ ಅಭಿಯಾನ!

ಜನವರಿ 25 ರಿಂದ ರೇಷನ್ ಕಾರ್ಡ್ ತಿದ್ದುಪಡಿ ಅಭಿಯಾನವನ್ನು ರಾಜ್ಯಾದ್ಯಂತ ಆರಂಭಿಸಲಾಗುವುದು ಹಾಗೂ ಫೆಬ್ರುವರಿ 29ರ ಹೊತ್ತಿಗೆ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಛತ್ತೀಸ್ಗಡ ರಾಜ್ಯ ಸರ್ಕಾರ ತಿಳಿಸಿದೆ. ತಿದ್ದುಪಡಿಗೆ ಒಂದು ತಿಂಗಳ ಅವಕಾಶ ಇದ್ದು ಅಷ್ಟರಲ್ಲಿ ರೇಷನ್ ಕಾರ್ಡ್ ನಲ್ಲಿ ಅಗತ್ಯವಿರುವ ತಿದ್ದುಪಡಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ! ಕೂಡಲೇ ಅಪ್ಲೈ ಮಾಡಿ

ಆನ್ಲೈನ್ ನಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ!

ಸೇವಾ ಕೇಂದ್ರಗಳ ಮುಂದೆ ಕ್ಯೂ ನಿಲ್ಲದೆ, ಮೊಬೈಲ್ ನಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಛತ್ತೀಸ್ಗಡ ರಾಜ್ಯ ಸರ್ಕಾರ ಜನರಿಗಾಗಿ ಹೊಸ ಮೊಬೈಲ್ ಅಪ್ಲಿಕೇಶನ್ ನನ್ನು ಬಿಡುಗಡೆ ಮಾಡಿದೆ. ಪಡಿತರ ಚೀಟಿಯಲ್ಲಿ ಅಗತ್ಯ ಇರುವ ತಿದ್ದುಪಡಿ ಅಥವಾ ನವೀಕರಣಕ್ಕಾಗಿ http://khadya.cg.nic.in/ ಈ ಅಪ್ಲಿಕೇಶನ್ ಗೆ ಭೇಟಿ ನೀಡಬೇಕು ಎಂದು ಛತ್ತೀಸ್ಗಡ ಸರ್ಕಾರ ತಿಳಿಸಿದೆ.

ಸದ್ಯದಲ್ಲಿಯೇ, ಕರ್ನಾಟಕ ರಾಜ್ಯದಲ್ಲಿಯೂ ಕೂಡ ಹೊಸ ಪಡಿತರ ಚೀಟಿ (Ration Card) ವಿತರಣೆ ಮಾಡಲಾಗುತ್ತದೆ, ಹಾಗೂ ಪಡಿತರ ಚೀಟಿಯಲ್ಲಿ ಅಗತ್ಯ ಬದಲಾವಣೆಗೆ ಕೂಡ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ಇತ್ತೀಚಿಗೆ ತಿಳಿಸಿದ್ದಾರೆ.

ರೈತರಿಗೆ ಗುಡ್ ನ್ಯೂಸ್; ರಾಜ್ಯದ 30 ಲಕ್ಷ ರೈತರಿಗೆ ಸಿಗಲಿದೆ ಬರ ಪರಿಹಾರ ಸೌಲಭ್ಯ!

Make ration card correction on mobile, Here is the details

Follow us On

FaceBook Google News

Make ration card correction on mobile, Here is the details