Karnataka NewsBangalore News

ರೈತರಿಗೆ ಗುಡ್ ನ್ಯೂಸ್; ರಾಜ್ಯದ 30 ಲಕ್ಷ ರೈತರಿಗೆ ಸಿಗಲಿದೆ ಬರ ಪರಿಹಾರ ಸೌಲಭ್ಯ!

ಮಳೆನೇ ನಂಬಿಕೊಂಡು ಕೃಷಿಯನ್ನು ಮಾಡುವ ರೈತರಿಗೆ ಒಂದು ವರ್ಷ ಮಳೆ ಆಗದೆ ಇದ್ದರೂ ಕೂಡ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯನ್ನು ಇಂದು ಕರ್ನಾಟಕದ ಬಹುತೇಕ ರೈತರು (farmers) ಅನುಭವಿಸುತ್ತಿದ್ದಾರೆ. ಈ ಕಾರಣಕ್ಕೆ ಕೆಲವು ಪ್ರದೇಶವನ್ನು ರಾಜ್ಯ ಸರ್ಕಾರ ಬರ ಪೀಡಿತ ಪ್ರದೇಶ (Drought prone area) ಎಂದು ಕೂಡ ಘೋಷಣೆ ಮಾಡಿದೆ.

ಒಂದು ಮಳೆಗಾಲ ಕಳೆದು ಇನ್ನೊಂದು ಮಳೆಗಾಲ ಆರಂಭವಾದರೂ ಕೂಡ ಬರ ಪರಿಹಾರದ ಹಣ ಮಾತ್ರ ಜನರಿಗೆ ಸಿಗುತ್ತಿಲ್ಲ ಎನ್ನುವುದು ವಿಶಾದನೀಯ! ಯಾಕೆಂದರೆ ಸರ್ಕಾರ (government) ಬಹಳ ಹಿಂದೆಯೇ ಬರಪೀಡಿತ ಪ್ರದೇಶ ಎಂದು ರಾಜ್ಯದ 223 ತಾಲೂಕುಗಳನ್ನು ಗುರುತಿಸಿದೆ.

Farmer Scheme

ಉಚಿತ ವಿದ್ಯುತ್ ಪಡೆಯಲು ಹೊಸ ನಿಯಮ; ಗೃಹಜ್ಯೋತಿ ಯೋಜನೆಯಲ್ಲಿ ಬದಲಾವಣೆ

48.19 ಹೆಕ್ಟರ್ ಜಮೀನಿನಲ್ಲಿ ಮಳೆ ಇಲ್ಲದೆ ಬೆಳೆ ನಾಶವಾಗಿದೆ. ಇಂತಹ ಪ್ರದೇಶದಲ್ಲಿ ವಾಸಿಸುವ ರೈತರಿಗೆ ಪರಿಹಾರ ಧನವಾಗಿ ಪ್ರತಿ ತಿಂಗಳು ಹಣ ನೀಡಲಾಗುವುದು ಎಂದು ತಿಳಿಸಿತ್ತು. ಆದರೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ರೈತರಿಗೆ ಇದುವರೆಗೆ ಬರ ಪರಿಹಾರ ಹಣವನ್ನು ನೀಡಿರಲಿಲ್ಲ.

ಇದೀಗ ಈ ವಿಚಾರದ ಬಗ್ಗೆ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿರುವಾಗಿ ಸಚಿವ ಕೃಷ್ಣಬೈರೇಗೌಡ (revenue minister Krishna bairagowda ) ತಿಳಿಸಿದ್ದಾರೆ. ಬರ ಪರಿಹಾರ ಇಂದು ಬರುತ್ತದೆ, ನಾಳೆ ಬರುತ್ತದೆ ಎಂದು ರೈತರು ಕಾದು ಕುಳಿತಿದ್ದಾರೆ.

ಆದರೆ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟನಲ್ಲಿ ಈವರೆಗೆ ಒಂದು ರೂಪಾಯಿ ಪರಿಹಾರ ಕೂಡ ಸಿಕ್ಕಿರಲಿಲ್ಲ. ಇದೀಗ ರೈತರಿಗೆ ಗುಡ್ ನ್ಯೂಸ್ ಅನ್ನು ರಾಜ್ಯ ಸರ್ಕಾರ ನೀಡಿದ್ದು ಮುಂದಿನ ಒಂದು ವಾರಗಳ ಒಳಗೆ 30 ಲಕ್ಷ ರೈತರಿಗೆ ಬರ ಪರಿಹಾರವಾಗಿ ಮೊದಲ ಕಂತಿನ 2000 ರೂ.ಗಳನ್ನು ಖಾತೆಗೆ (Bank Account) ಜಮ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ಆಸ್ತಿ, ಜಮೀನು ಕೇವಲ 1 ವಾರದಲ್ಲಿ ನಿಮ್ಮ ಹೆಸರಿಗೆ ನೋಂದಾಯಿಸಿಕೊಳ್ಳಿ! ಸುಲಭ ವಿಧಾನ

ಮುಂದಿನ ಒಂದು ವಾರಗಳಲ್ಲಿ ರೈತರ ಖಾತೆಗೆ ಜಮಾ ಆಗಲಿದೆ ರೂ. 2,000

drought reliefಬರ ಪರಿಹಾರ ಹಣವನ್ನು ಪಡೆದುಕೊಳ್ಳಲು ರೈತರು FRUITS ID ಹೊಂದಿರುವುದು ಕಡ್ಡಾಯವಾಗಿದೆ. ಈಗಲೇ ಫ್ರೂಟ್ಸ್ ಐಡಿ ಹೊಂದಿರುವ 75 ರಷ್ಟು ರೈತರ ಮಾಹಿತಿಯನ್ನು ಸರ್ಕಾರದ ದಾಖಲೆಗಳ ಪಟ್ಟಿಯಲ್ಲಿ ಸೇರಿಸಲಾಗಿದ್ದು, 30 ಲಕ್ಷ ರೈತರು ಮೊದಲ ಕಂತಿನ 2,000ಗಳನ್ನು ಇನ್ನು ಕೇವಲ ಒಂದು ವಾರಗಳಲ್ಲಿ ಪಡೆದುಕೊಳ್ಳಲಿದ್ದಾರೆ.

NDFC ಮಾರ್ಗಸೂಚಿಯ ಅನ್ವಯ ಕೇಂದ್ರ ಸರ್ಕಾರ ಇದುವರೆಗೆ ಬರ ಪರಿಹಾರಕ್ಕಾಗಿ ಒಂದು ರೂಪಾಯಿಗಳನ್ನು ಕೂಡ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸಿತ್ತು ಆದರೆ ಯಾವುದೇ ಪ್ರಯೋಜನ ಆಗಿಲ್ಲ.

ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಖಾತೆಗೆ ಬಂದ್ರೂ ಕೈಸೇರುತ್ತಿಲ್ಲ! ಇಲ್ಲಿದೆ ಕಾರಣ

ಈ ಕಾರಣದಿಂದಾಗಿ ರಾಜ್ಯ ಸರ್ಕಾರವೇ ಮುತುವರ್ಜಿ ವಹಿಸಿಕೊಂಡು ಬರ ಪರಿಹಾರ ನಿಧಿಯನ್ನು ರೈತರಿಗೆ ಒದಗಿಸುವ ನಿರ್ಧಾರ ಕೈಗೊಂಡಿದೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಒಟ್ಟಿನಲ್ಲಿ ಸದ್ಯದಲ್ಲಿಯೇ ಬರ ಪೀಡಿತ ಪ್ರದೇಶದ ರೈತರಿಗೆ ಸರ್ಕಾರದಿಂದ ಬರ ಪರಿಹಾರವಾಗಿ 2000 ರೂ.ಗಳನ್ನು ಖಾತೆಗೆ (Bank Account) ನೇರವಾಗಿ ಜಮಾ (DBT) ಮಾಡಲಾಗುವುದು.

ಇನ್ನು ಈ ಹಣ ನಿಮ್ಮ ಖಾತೆಗೆ ಬರಬೇಕು ಅಂದ್ರೆ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಿ. ಜೊತೆಗೆ ನಿಮ್ಮ ಬ್ಯಾಂಕ್ ಖಾತೆಗೆ ಈಕೆ ವೈ ಸಿ (EKYC) ಮಾಡಿಸಿಕೊಳ್ಳುವುದನ್ನು ಮರೆಯಬೇಡಿ. ಈ ಎರಡು ಕೆಲಸ ನೀವು ಮಾಡದೇ ಇದ್ದಲ್ಲಿ ನಿಮ್ಮ ಖಾತೆಗೆ ಹಣ ಜಮಾ (Money Deposit) ಆಗುವುದಿಲ್ಲ.

ರೇಷನ್ ಕಾರ್ಡ್ ನಲ್ಲಿ ಡಿಲೀಟ್ ಆದವರ ಹೆಸರನ್ನು ಮತ್ತೆ ಸೇರಿಸಿಕೊಳ್ಳಿ! ಇಲ್ಲಿದೆ ವಿಧಾನ

Good news for farmers, 30 lakh farmers of the state will get drought relief

Our Whatsapp Channel is Live Now 👇

Whatsapp Channel

Related Stories