ಕಳೆದ ಆರು ತಿಂಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜನರಿಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಲಾಯಿತು.
ಆರಂಭದಲ್ಲಿ ಯೋಜನೆ ಅಷ್ಟೊಂದು ಮಹತ್ವ ಎಂದು ಅನಿಸದೆ ಇದ್ದರೂ ಕೂಡ ಈಗ ಲಕ್ಷಾಂತರ ಕುಟುಂಬಗಳು ಗೃಹಜೋತಿ ಯೋಜನೆ (Gruha jyothi Yojana) ಅಡಿಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ (Free Electricity) ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.
ಆಸ್ತಿ, ಜಮೀನು ಕೇವಲ 1 ವಾರದಲ್ಲಿ ನಿಮ್ಮ ಹೆಸರಿಗೆ ನೋಂದಾಯಿಸಿಕೊಳ್ಳಿ! ಸುಲಭ ವಿಧಾನ
ಗೃಹಜ್ಯೋತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ!
ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಜನರು ವಾರ್ಷಿಕವಾಗಿ ಬಳಸುವ ಯೂನಿಟ್ (unit) ಅನ್ನು ಸರಾಸರಿ ಲೆಕ್ಕಾಚಾರ ಮಾಡಿ ಒಂದು ಮಿತಿಯನ್ನು ನಿಗದಿಪಡಿಸಲಾಗುತ್ತದೆ, ಆ ಮಿತಿಯ ಒಳಗೆ ವಿದ್ಯುತ್ ಬಳಕೆ ಮಾಡಿದರೆ ಅಂತವರಿಗೆ ಯಾವುದೇ ರೀತಿಯ ಬಿಲ್ (Electricity Bill) ಪಾವತಿ ಮಾಡುವ ಅಗತ್ಯ ಇರುವುದಿಲ್ಲ.
ಇನ್ನು ಮಿತಿಯ ಮೇಲೆ ಸರ್ಕಾರದಿಂದ ಶೇಕಡ 10% ನಷ್ಟು ಹೆಚ್ಚುರಿಯಾಗಿ ನೀಡಲಾಗುತ್ತಿತ್ತು. ಉದಾಹರಣೆಗೆ, ನಿಮ್ಮ ಯೂನಿಟ್ ಬಳಕೆ 180 ಎಂದಾಗಿದ್ದರೆ ಸರ್ಕಾರದಿಂದ 10% ಸೇರಿಸಿ 190 ರಷ್ಟು ಯೂನಿಟ್ ನ್ನು ಬಳಸಲು ಅವಕಾಶವಿತ್ತು. ಈಗ ಈ ವಿಚಾರದಲ್ಲಿ ಸರ್ಕಾರ ಬದಲಾವಣೆಯನ್ನು ತಂದಿದೆ.
ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಖಾತೆಗೆ ಬಂದ್ರೂ ಕೈಸೇರುತ್ತಿಲ್ಲ! ಇಲ್ಲಿದೆ ಕಾರಣ
10 ಯೂನಿಟ್ ಹೆಚ್ಚುವರಿ ನೀಡಲು ಸರ್ಕಾರದ ನಿರ್ಧಾರ!
ಸಚಿವರಾಗಿರುವ ಕೆಜೆ ಜಾರ್ಜ್ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಹೆಚ್ಚುವರಿಯಾಗಿ ನೀಡುತ್ತಿದ್ದ ಶೇಕಡ 10% ಅನ್ನು ಬಿಟ್ಟು 10 ಯೂನಿಟ್ ಹೆಚ್ಚುರಿಯಾಗಿ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಬದಲಾವಣೆಯಿಂದ 100 ಯೂನಿಟ್ ಗಿಂತಲೂ ಕಡಿಮೆ ಯಾರು ವಿದ್ಯುತ್ ಬಳಕೆ ಮಾಡುತ್ತಾರೆ ಅಂತವರಿಗೆ ಅನುಕೂಲವಾಗಲಿದೆ. ಆದರೆ ನೂರು ಯೂನಿಟ್ ಗಿಂತ ಹೆಚ್ಚಿನ ಯೂನಿಟ್ ಬಳಕೆ ಮಾಡುವವರಿಗೆ ಇದು ಇನ್ನು ಮುಂದೆ ತೊಂದರೆ ಉಂಟು ಮಾಡಬಹುದು.
ರೇಷನ್ ಕಾರ್ಡ್ ನಲ್ಲಿ ಡಿಲೀಟ್ ಆದವರ ಹೆಸರನ್ನು ಮತ್ತೆ ಸೇರಿಸಿಕೊಳ್ಳಿ! ಇಲ್ಲಿದೆ ವಿಧಾನ
ಸಚಿವರು ಹೇಳುವ ಪ್ರಕಾರ ಕಡಿಮೆ ಯೂನಿಟ್ ಬಳಕೆ ಮಾಡುವವರಿಗೆ 10% ಹೆಚ್ಚುವರಿಯಾಗಿ ಕೊಡುವ ಬದಲು 10 ಯೂನಿಟ್ ಕೊಡಲಾಗುವುದು. ಉದಾಹರಣೆಗೆ 48 ಯೂನಿಟ್ ಬಳಕೆ ಮಾಡುವವರಿಗೆ ಕೇವಲ 2% ನಷ್ಟು ಮಾತ್ರ ಹೆಚ್ಚುವರಿಯಾಗಿ ಸಿಗುತ್ತಿತ್ತು. ಈಗ 48 ಯೂನಿಟ್ ಖರ್ಚು ಮಾಡುವವರಿಗೆ 58 ಯೂನಿಟ್ ವರೆಗೆ ಮಿತಿ ಇರುತ್ತದೆ. ಆದರೆ ಇನ್ನು ಮುಂದೆ 100 unit ಗಿಂತಲೂ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಈ ನಿರ್ಧಾರ ಹೆಚ್ಚು ಪ್ರಯೋಜನವಾಗಲಿದೆ ಹಾಗೂ ನೂರನೇ ಅಧಿಕ ವಿದ್ಯುತ್ ಬಳಕೆ ಮಾಡುವವರಿಗೆ ಯಾವುದೇ ರೀತಿಯ ಪ್ರಯೋಜನ ಇಲ್ಲ.
ಸರ್ಕಾರ ಗೃಹಜೋತಿ ಯೋಜನೆಯಲ್ಲಿ ತಂದಿರುವ ಈ ಮಹತ್ವದ ಬದಲಾವಣೆಯಿಂದ ಸರ್ಕಾರಕ್ಕೆ 500 ರಿಂದ 600 ಕೋಟಿ ರೂಪಾಯಿಗಳ ಉಳಿತಾಯ ಆಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಲಕ್ಷಾಂತರ ಕುಟುಂಬಗಳು ಇಲ್ಲಿಯವರೆಗೆ ಉಚಿತ ವಿದ್ಯುತ್ ಪಡೆದುಕೊಳ್ಳುತ್ತಿದ್ದರು. ಆದರೆ ಇನ್ನು ಮುಂದೆ ಕೆಲವು ಕುಟುಂಬಗಳು ಈ ಸೌಲಭ್ಯವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು.
ಹಾಲಿನ ಪ್ರೋತ್ಸಾಹ ಧನ ನೀಡಲು ಅರ್ಹ ಫಲಾನುಭವಿ ರೈತರ ಪಟ್ಟಿ ಬಿಡುಗಡೆ!
New rule to get free electricity, Changes in Gruha Jyothi Scheme
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.