ಆಸ್ತಿ, ಜಮೀನು ಕೇವಲ 1 ವಾರದಲ್ಲಿ ನಿಮ್ಮ ಹೆಸರಿಗೆ ನೋಂದಾಯಿಸಿಕೊಳ್ಳಿ! ಸುಲಭ ವಿಧಾನ
ನೋಂದಾವಣೆ ಕಚೇರಿಗೆ (registration office) ಹೋಗಿ ಹೆಸರಿಗೆ ಆಸ್ತಿ ಪತ್ರ (property papers) ಮಾಡಿಸಿಕೊಳ್ಳಬೇಕು ಅಂದ್ರೆ ಸಾಕಷ್ಟು ಪ್ರಕ್ರಿಯೆಗಳು ಇರುತ್ತದೆ. ಇದಕ್ಕೆ ಹೆಚ್ಚು ಸಮಯ ಕೂಡ ತಗುಲುತ್ತದೆ.
ಯಾವುದಾದರೂ ಜಮೀನು ಖರೀದಿ ಮಾಡಿದ್ರೆ ಅಥವಾ ಮನೆಯವರಿಂದಲೇ ಆಸ್ತಿ ವರ್ಗಾವಣೆ (property transfer) ಆಗಬೇಕಿದ್ದರೆ ಅದು ದೊಡ್ಡ ತಲೆನೋವಿನ ಕೆಲಸ. ಯಾಕಂದ್ರೆ ನೋಂದಾವಣೆ ಕಚೇರಿಗೆ (registration office) ಹೋಗಿ ಹೆಸರಿಗೆ ಆಸ್ತಿ ಪತ್ರ (property papers) ಮಾಡಿಸಿಕೊಳ್ಳಬೇಕು ಅಂದ್ರೆ ಸಾಕಷ್ಟು ಪ್ರಕ್ರಿಯೆಗಳು ಇರುತ್ತದೆ. ಇದಕ್ಕೆ ಹೆಚ್ಚು ಸಮಯ ಕೂಡ ತಗುಲುತ್ತದೆ.
ನಿಮಗೆಲ್ಲಾ ಗೊತ್ತಿರುವ ಹಾಗೆ ಜಮೀನಿನ ಹಕ್ಕು ವರ್ಗಾವಣೆಗೆ ಕನಿಷ್ಠ 30ರಿಂದ 45 ದಿನಗಳ ಅವಧಿ ಬೇಕು. ಇದಕ್ಕಿಂತ ಹೆಚ್ಚಿನ ಸಮಯ ಆದರೂ ಆಗಬಹುದು. ಅದೇ ರೀತಿ ತಕರಾರು ಅರ್ಜಿ ಸಲ್ಲಿಸಲು 30 ದಿನಗಳ ಅವಕಾಶ ನೀಡಲಾಗಿತ್ತು.
ಇದರಿಂದ ಸದುಪಯೋಗಪಡಿಸಿಕೊಳ್ಳುವವರಿಗಿಂತ ದುರುಪಯೋಗಪಡಿಸಿಕೊಂಡರೆ ಜಾಸ್ತಿ. ಈ ರೀತಿ 30 ದಿನಗಳ ಅವಕಾಶ ಬಳಸಿಕೊಂಡು ಅನಗತ್ಯವಾಗಿ ತಕರಾರು ಸಲ್ಲಿಸಿ ಇನ್ನೊಬ್ಬರಿಗೆ ತೊಂದರೆ ಕೊಡುತ್ತಿದ್ದವರಿಗೆ ಈಗ ಸರ್ಕಾರ ಬಿಸಿ ಮುಟ್ಟಿಸಿದೆ.
ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಖಾತೆಗೆ ಬಂದ್ರೂ ಕೈಸೇರುತ್ತಿಲ್ಲ! ಇಲ್ಲಿದೆ ಕಾರಣ
ಕೇವಲ 7 ದಿನಗಳಲ್ಲಿ ಮ್ಯೂಟೇಶನ್! (mutation in 7 days)
ಹೌದು, ಇನ್ನು ಮುಂದೆ ಮ್ಯೂಟೇಶನ್ ಅವಧಿ ಕೇವಲ ಏಳು ದಿನಗಳು ಅಂದರೆ ಒಂದು ವಾರದಲ್ಲಿ ಮ್ಯೂಟೇಶನ್ ಪ್ರಕ್ರಿಯೆ ಮುಗಿಯುತ್ತದೆ. ಜಮೀನು ರಿಜಿಸ್ಟರ್ (land register) ಆದ ನಂತರ ಆಸ್ತಿ ಹಕ್ಕು ವರ್ಗಾವಣೆ ಆಗುವುದಕ್ಕೆ ಮ್ಯೂಟೇಶನ್ ಎಂದು ಹೇಳಲಾಗುತ್ತದೆ.
ಕ್ರಯ, ವಿಭಾಗ, ದಾನ, ಪೌತಿ ಖಾತೆ ಮೂಲಕ ಮಾತ್ರ ಆಸ್ತಿ ಹಕ್ಕಿನ ವರ್ಗಾವಣೆ ಮಾಡಲಾಗುತ್ತದೆ. ಈ ಎಲ್ಲಾ ರೀತಿಯಲ್ಲಿ ಆಸ್ತಿ ವರ್ಗಾವಣೆ ಮಾಡಲು ಹಿಂದೆ ಒಂದು ತಿಂಗಳಿನಿಂದ 45 ದಿನಗಳು ಬೇಕಿತ್ತು. ಎರಡರಿಂದ ಹದಿನೈದು ದಿನಗಳ ಒಳಗೆ ನೀವು ಈ ಕೆಲಸವನ್ನು ಮಾಡಿಕೊಳ್ಳಬಹುದು.
ರೇಷನ್ ಕಾರ್ಡ್ ನಲ್ಲಿ ಡಿಲೀಟ್ ಆದವರ ಹೆಸರನ್ನು ಮತ್ತೆ ಸೇರಿಸಿಕೊಳ್ಳಿ! ಇಲ್ಲಿದೆ ವಿಧಾನ
ಜನರ ಹಿತಾಸಕ್ತಿ ಬಯಸುವ ಸರ್ಕಾರ ಈ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಆಸ್ತಿ ಹಕ್ಕು ವರ್ಗಾವಣೆ ಪ್ರಕ್ರಿಯೆ ಇನ್ನು ಮುಂದೆ ಬಹಳ ಬೇಗ ನೆರವೇರಲಿದೆ. ಪ್ರೀತಿ ಆಸ್ತಿ ಹಕ್ಕನ್ನು ಬಹಳ ಬೇಗ ವರ್ಗಾವಣೆ ಮಾಡಲು ಅವಕಾಶ ಇರುವುದರಿಂದ ಆಗುವ ದೊಡ್ಡ ತೊಂದರೆ ಅಂದರೆ, ನಿಜವಾಗಿ ಯಾರಿಗೆ ತಕರಾರು ಅರ್ಜಿ ಹಾಕುವ ಅವಶ್ಯಕತೆ ಇರುತ್ತದೆಯೋ ಅಂಥವರಿಗೆ ಸಮಯಾವಕಾಶ ಇರುವುದಿಲ್ಲ.
ತಕರಾರು ಹಾಕುವಾಗ ಸಾಕಷ್ಟು ದಾಖಲೆಗಳನ್ನು ನೀಡಬೇಕಾಗುತ್ತದೆ ಆದರೆ ಕೇವಲ ಏಳು ದಿನಗಳಲ್ಲಿ ಈ ದಾಖಲೆಗಳನ್ನು ಕ್ರೋಢಿಕರಿಸಿಕೊಳ್ಳುವುದು ಕಷ್ಟವಾಗಬಹುದು. ಇಂತಹ ಸಂದರ್ಭದಲ್ಲಿ ತಕರಾರು ಅರ್ಜಿ ಹಾಕದೆ ಕೆಲವರಿಗೆ ಮೋಸ ಆಗಬಹುದು.
ಹಾಲಿನ ಪ್ರೋತ್ಸಾಹ ಧನ ನೀಡಲು ಅರ್ಹ ಫಲಾನುಭವಿ ರೈತರ ಪಟ್ಟಿ ಬಿಡುಗಡೆ!
ಅಲ್ಲದೆ ಮ್ಯೂಟೇಶನ್ ಅವಧಿಯನ್ನು ಕಡಿಮೆ ಮಾಡಿರುವುದರಿಂದ ನ್ಯಾಯಾಲಯದಲ್ಲಿ ಆಸ್ತಿ ವಿವಾದ ಪ್ರಕರಣಗಳು ಇನ್ನಷ್ಟು ಜಾಸ್ತಿ ಆಗಬಹುದು. ಹಾಗಾಗಿ ಯಾವುದೇ ಕಾಗದ ಪತ್ರದ ನೋಂದಣಿ ವ್ಯವಹಾರ ಮಾಡುವಾಗ ಮೊದಲು ಅದನ್ನು ಓದಿ ತಿಳಿದುಕೊಂಡು ನಂತರ ಹಕ್ಕುಪತ್ರ ವರ್ಗಾವಣೆ ಹಾಗೂ ಇತರ ಪ್ರಕ್ರಿಯೆಗಳನ್ನು ಮುಗಿಸಿಕೊಳ್ಳುವುದು ಒಳ್ಳೆಯದು.
Get property, land registered in your name in just 1 week