ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಖಾತೆಗೆ ಬಂದ್ರೂ ಕೈಸೇರುತ್ತಿಲ್ಲ! ಇಲ್ಲಿದೆ ಕಾರಣ
ಇದುವರೆಗೆ ಹಣ ಜಮಾ ಆಗದೇ ಇರುವವರೆಗೂ ಕೂಡ ಖಾತೆ (Bank Account) ಸರಿ ಆಗಿರುವ ಹಿನ್ನೆಲೆಯಲ್ಲಿ ನಾಲ್ಕು ಮತ್ತು ಐದನೇ ಕಂತಿನ ಹಣ ಬಿಡುಗಡೆ ಆಗಿದೆ
ಗೃಹಲಕ್ಷ್ಮಿ ಯೋಜನೆ (Gruha lakshmi scheme) 5 ಕಂತಿನ ಹಣ ಬಿಡುಗಡೆ ಆಗಿದ್ದು ಫಲಾನುಭವಿ ಮಹಿಳೆಯರು 6ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅಂದರೆ ಫೆಬ್ರುವರಿ ಮೊದಲ ವಾರದಲ್ಲಿ 6ನೇ ಕಂತಿನ ಹಣವು ಕೂಡ ಬಿಡುಗಡೆ ಆಗಲಿದೆ ಎಂದು ಮಾಹಿತಿ ಲಭ್ಯವಾಗಿದೆ.
ಜನವರಿ ತಿಂಗಳಲ್ಲಿ ನಾಲ್ಕು ಮತ್ತು ಐದು ಕಂತಿನ ಹಣ ಬಿಡುಗಡೆ ಆಗಿತ್ತು. ಇದುವರೆಗೆ ಹಣ ಜಮಾ ಆಗದೇ ಇರುವವರೆಗೂ ಕೂಡ ಖಾತೆ (Bank Account) ಸರಿ ಆಗಿರುವ ಹಿನ್ನೆಲೆಯಲ್ಲಿ ನಾಲ್ಕು ಮತ್ತು ಐದನೇ ಕಂತಿನ ಹಣ ಬಿಡುಗಡೆ ಆಗಿದೆ ಎನ್ನುವುದು ಸಂತಸದ ವಿಚಾರ. ಆದರೆ ಇದರ ಜೊತೆಗೆ ಮಹಿಳೆಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಕೂಡ ಸಿಕ್ಕಿದೆ.
ರೇಷನ್ ಕಾರ್ಡ್ ನಲ್ಲಿ ಡಿಲೀಟ್ ಆದವರ ಹೆಸರನ್ನು ಮತ್ತೆ ಸೇರಿಸಿಕೊಳ್ಳಿ! ಇಲ್ಲಿದೆ ವಿಧಾನ
ಸರ್ಕಾರದಿಂದ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಹಣ ಕಡಿತಗೊಳ್ಳುತ್ತಿದೆ!
ಹೌದು, ಸರ್ಕಾರ (government) ದಿಂದ ಗೃಹಲಕ್ಷ್ಮಿಯ 2,000 ಬರುತ್ತಿದೆ. ಆದರೆ ಅದನ್ನ ನೀವು ಹಿಂಪಡೆಯದೆ ಇದ್ದರೂ ಕೂಡ ನಿಮ್ಮ ಖಾತೆಯಲ್ಲಿ ಆ ಹಣ ಉಳಿಯುತ್ತಿಲ್ಲ ಅದು ಕಡಿತಗೊಳ್ಳುತ್ತಿದೆ. ಇದಕ್ಕೆ ಕಾರಣ ಏನು ಎಂದು ಬ್ಯಾಂಕಿನವರನ್ನು (Bank) ಕೇಳಿದರೆ ಅವರಿಗೂ ಗೊತ್ತಿಲ್ಲ.
ಹಾಗಾದ್ರೆ ಸರ್ಕಾರದಿಂದ ಬಿಡುಗಡೆ ಆಗಿರುವ ಹಣ ಎಲ್ಲಿ ಹೋಯಿತು ಎನ್ನುವ ಪ್ರಶ್ನೆ ಮೂಡುತ್ತೆ. ಇದು ನಿಜಕ್ಕೂ ಶಾಕಿಂಗ್ ವಿಚಾರವಾಗಿದೆ. ಬ್ಯಾಂಕ್ ನಲ್ಲಿ ಇನ್ನು ಮುಂದೆ ಹಣ ಇಡಬಾರದೆ ಎನ್ನುವಂತಹ ಯೋಚನೆ ಸಾಮಾನ್ಯರಲ್ಲಿ ಮೂಡುತ್ತಿದೆ.
ಹಾಗಾದ್ರೆ ಸರ್ಕಾರದಿಂದ ವರ್ಗಾವಣೆ ಆಗಿರುವ ಹಣ ಎಲ್ಲಿ ಹೋಯ್ತು ಎಂದು ತಿಳಿದುಕೊಳ್ಳುವುದಾದರೆ, ಸಾಕಷ್ಟು ಜನ ನಿಮ್ಮ ಬಳಿ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಜಮಾ ಆಗಿದ್ಯೋ ಇಲ್ಲವೋ ಎಂದು ಚೆಕ್ ಮಾಡಿ ಕೊಡುತ್ತೇವೆ ಎಂದು ನಿಮ್ಮ ತಂಬ್ ಇಂಪ್ರೆಶನ್ (thumb impression) ಅಂದರೆ ಹೆಬ್ಬಟ್ಟು ಒತ್ತಿಸಿಕೊಂಡು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನು ಲಪಟಾಯಿಸುತ್ತಿದ್ದಾರೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಈ ರೀತಿ ಆಗುತ್ತದೆ.
ಹಾಲಿನ ಪ್ರೋತ್ಸಾಹ ಧನ ನೀಡಲು ಅರ್ಹ ಫಲಾನುಭವಿ ರೈತರ ಪಟ್ಟಿ ಬಿಡುಗಡೆ!
ಈಗಾಗಲೇ ಹುಬ್ಬಳ್ಳಿಯ ಗ್ರಾಮ ಒಂದರಲ್ಲಿ ಮಹಿಳೆ ತನ್ನಲ್ಲಿ ಇರುವ 64 ಲಕ್ಷ ರೂಪಾಯಿಗಳನ್ನು ಇದೆ ರೀತಿ ಕಳೆದುಕೊಂಡಿದ್ದಾಳೆ. ಬ್ಯಾಂಕ್ ನವರು ಖಾತೆಯನ್ನು ಚೆಕ್ ಮಾಡಿ ಹಣ ಕಡಿತಗೊಂಡಿದೆ ಎಂದು ತಿಳಿಸಿದ್ದಾರೆ.
ಆದರೆ ಆಕೆ ಹಣವನ್ನು ಹಿಂಪಡೆದಿಲ್ಲ ಇದು ವಂಚಕರ ಕೆಲಸ. ನೀವು ಗೊತ್ತಿಲ್ಲದೇ ಇರುವ ವ್ಯಕ್ತಿಯ ಬಳಿ ಯಾವುದೇ ಕಾರಣಕ್ಕೂ ನಿಮ್ಮ ಆಧಾರ್ ಕಾರ್ಡ್ (Aadhaar Card) ಹಾಗೂ ಬೆರಳಚ್ಚು ನೀಡಬಾರದು. ಈ ರೀತಿ ಮಾಡಿದ್ರೆ ನಿಮ್ಮ ಖಾತೆಯಲ್ಲಿ ಇರುವ ಗ್ರಹಲಕ್ಷ್ಮಿ ಹಣ ಮಾತ್ರವಲ್ಲ ಇನ್ನು ಬೇರೆ ಹಣ ಇದ್ದರೂ ಕೂಡ ಅದು ಕಡಿತಗೊಳ್ಳುತ್ತದೆ.
ಹಣ ಬಂದಿದ್ಯೋ ಇಲ್ಲವೋ ಎಂದು ಪರಿಶೀಲಿಸಿ ಕೊಡುತ್ತೇವೆ ಎಂದು ಹೇಳಿ ನಿಮ್ಮ ಖಾತೆಯಿಂದ ಹಣವನ್ನು ಹಿಂಪಡೆದುಕೊಳ್ಳುತ್ತಾರೆ. ಹಾಗೆ ನಿಮ್ಮ ಖಾತೆಗೆ ಹಣ ಜಮಾ ಆಗಿಲ್ಲ (Money Deposit) ಎಂದು ಹೇಳುತ್ತಾರೆ.
ಸಾಕಷ್ಟು ಜನರು ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಸರಿಯಾಗಿ ಜಮಾ ಆಗ್ತಾ ಇಲ್ಲದೆ ಇರುವ ಸಮಸ್ಯೆಯನ್ನು ಅಡ್ವಾನ್ಟೇಜ್ ಆಗಿ ಬಳಸಿಕೊಂಡು ವಂಚಕರು ಮುಗ್ಧ ಮಹಿಳೆಯರನ್ನು ವಂಚಿಸುತ್ತಿದ್ದಾರೆ.
ಜನವರಿ ತಿಂಗಳ ಎಲ್ಲಾ ವಿಧದ ಪಿಂಚಣಿ ಹಣ ಬಿಡುಗಡೆ; ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ
ಬ್ಯಾಂಕ್ ಖಾತೆಯಲ್ಲಿ ಹಣ ಇದ್ರೆ ಸರ್ಕಾರವೇ ಹಿಂಪಡೆಯುತ್ತಾ?
ಇದರ ಬಗ್ಗೆ ಸಾಕಷ್ಟು ಜನರಿಗೆ ಗೊಂದಲ ಇದೆ. ಸರ್ಕಾರ ಪ್ರತಿ ತಿಂಗಳು ಬಿಡುಗಡೆ ಮಾಡಿದ ಹಣವನ್ನು ಮಹಿಳೆಯರು ಬ್ಯಾಂಕ್ ನಲ್ಲಿ ಹಾಗೆಯೇ ಇಟ್ಟುಕೊಂಡರೆ ಏನಾದರೂ ಸಮಸ್ಯೆ ಆಗಬಹುದೇ ಅಥವಾ ಸರ್ಕಾರವೇ ಹಣವನ್ನ ಹಿಂಪಡೆಯಬಹುದೇ ಎಂದು ಹಲವರ ಪ್ರಶ್ನೆಯಾಗಿದೆ.
ಆದರೆ ಈ ರೀತಿ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ ನಿಮ್ಮ ಖಾತೆಗೆ ಒಮ್ಮೆ ಹಣ ಬಂದ ನಂತರ ನಿಮ್ಮ ಅನುಮತಿ ಇಲ್ಲದೆ ಅದನ್ನ ಯಾರು ಕೂಡ ಮುಟ್ಟುವಂತಿಲ್ಲ. ಆದರೆ ಬ್ಯಾಂಕ್ನಲ್ಲಿ ನೀವು ಸಾಲ (Bank Loan) ಮಾಡಿಕೊಂಡಿದ್ದರೆ ಆಗ ಆ ಹಣ ಕಟ್ಟಾಗುವ ಸಾಧ್ಯತೆ ಇರುತ್ತದೆ.
ಇದರ ಹೊರತು ನಿಮ್ಮ ಖಾತೆಯಿಂದ ಯಾರು ಕೂಡ ಹಣ ಹಿಂಪಡೆಯುವುದಿಲ್ಲ. ಇದಕ್ಕೆ ನಿಮ್ಮ ತಂಬ್ ಇಂಪ್ರೆಶನ್ ಬೇಕಿರುವುದರಿಂದ ಅಪರಿಚಿತರಿಗೆ ಬೆರಳಚ್ಚು ಕೊಡುವ ತಪ್ಪು ಕೆಲಸವನ್ನು ಮಾತ್ರ ಮಾಡಬೇಡಿ.
ಈ ತಾರೀಕಿನಂದು ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಜಮಾ! ಹೊಸ ಅಪ್ಡೇಟ್
Gruha Lakshmi Yojana money is not reaching to your Hand after bank account