ಈ ತಾರೀಕಿನಂದು ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಜಮಾ! ಹೊಸ ಅಪ್ಡೇಟ್
ಫಲಾನುಭವಿ ಮಹಿಳೆಯರು ಈಗಾಗಲೇ ರೂ.10,000ಗಳನ್ನ ಉಚಿತವಾಗಿ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಅಡಿಯಲ್ಲಿ ಪಡೆದುಕೊಂಡಿದ್ದಾರೆ.
ಪ್ರತಿ ತಿಂಗಳು 2000ಗಳನ್ನು ಉಚಿತವಾಗಿ ನೀಡುವುದು ಅಂದ್ರೆ ಸಣ್ಣ ವಿಚಾರವೇನು ಅಲ್ಲ. ಯಾಕೆಂದರೆ ಕರ್ನಾಟಕ (Karnataka) ದ ಫಲಾನುಭವಿ ಮಹಿಳೆಯರು ಈಗಾಗಲೇ ರೂ.10,000ಗಳನ್ನ ಉಚಿತವಾಗಿ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಅಡಿಯಲ್ಲಿ ಪಡೆದುಕೊಂಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ 5ನೇ ಕಂತಿನ ಹಣ ಬಿಡುಗಡೆ
ಗೃಹಲಕ್ಷ್ಮಿ ಯೋಜನೆ ಹಲವು ಗೊಂದಲಗಳ ನಡುವೆಯೂ ಕೂಡ ಸಾಕಾರಗೊಂಡಿದೆ ಎಂದು ಹೇಳಬಹುದು. ಆರಂಭದಲ್ಲಿ ಫಲಾನುಭವಿ ಮಹಿಳೆಯರ (beneficiary women) ಖಾತೆಗೆ (Bank Account) ಹಣ ವರ್ಗಾವಣೆ (DBT) ಮಾಡುವಲ್ಲಿ ಸಾಕಷ್ಟು ಸಮಸ್ಯೆಗಳನ್ನು ಸರ್ಕಾರ ಎದುರಿಸಿತ್ತು. ಆದರೆ ಈಗ ಬಹುತೇಕ ಫಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗುತ್ತಿದ್ದು, ಇತ್ತೀಚಿಗೆ, 5ನೇ ಕಂತಿನ ಹಣ ವರ್ಗಾವಣೆ ಆಗಿದೆ.
ಗೃಹಜ್ಯೋತಿ ಯೋಜನೆಯಲ್ಲಿ ಬದಲಾವಣೆ! ಸಿಎಂ ಸಿದ್ದರಾಮಯ್ಯನವರೇ ಕೊಟ್ಟ ಅಪ್ಡೇಟ್
ಹೌದು, 5ನೇ ಕಂತನ ಹಣವು ಕೂಡ ಜನವರಿ ತಿಂಗಳಿನಲ್ಲಿಯೇ ವರ್ಗಾವಣೆ ಆಗಿದೆ. ಒಟ್ಟಾರೆಯಾಗಿ ಗೃಹಲಕ್ಷ್ಮಿ ಯೋಜನೆಯ 4 ಮತ್ತು 5ನೇ ಕಂತಿನ ಹಣ ಒಂದೇ ತಿಂಗಳಿನಲ್ಲಿ ಮಹಿಳೆಯರ ಕೈ ಸೇರಿದೆ, ಇದುವರೆಗೆ ಹಣ ಬಾರದೆ ಇರುವವರೆಗೂ ಕೂಡ ಕೆವೈಸಿ (E-KYC) ಸರಿಪಡಿಸಿಕೊಂಡ ನಂತರ 5ನೇ ಕಂತಿನ ಹಣ ಬಿಡುಗಡೆ ಆಗಿದೆ.
ಆರನೇ ಕಂತಿನ ಹಣ ಯಾವಾಗ ಸಿಗುತ್ತದೆ?
ಈಗಾಗಲೇ ಜನವರಿ ತಿಂಗಳಲ್ಲಿ ಎರಡು ಕಂತಿನ ಹಣವನ್ನು ಮಹಿಳೆಯರ ಖಾತೆಗೆ ವರ್ಗಾವಣೆ (Money Deposit) ಮಾಡಲಾಗಿದೆ. ಇನ್ನು 6ನೇ ಕಂತಿನ ಹಣ ಬಿಡುಗಡೆ ಫೆಬ್ರವರಿ (February) ತಿಂಗಳಿನ ಮೊದಲ ವಾರದಲ್ಲಿ ಆಗಬಹುದು.
ಗೃಹಲಕ್ಷ್ಮಿ ಯೋಜನೆಯ ಹಣ ಈ ತಿಂಗಳಿನ ಹಣ ಮುಂದಿನ ತಿಂಗಳಿನಲ್ಲಿ ಬಿಡುಗಡೆ ಆಗುತ್ತದೆ. ಉದಾಹರಣೆಗೆ ಡಿಸೆಂಬರ್ ತಿಂಗಳಿನ ಹಣ ಜನವರಿಯಲ್ಲಿ ಬಿಡುಗಡೆ ಆಗಿತ್ತು. ಈಗ ಜನವರಿ ತಿಂಗಳಿನ ಹಣ ಫೆಬ್ರವರಿಯಲ್ಲಿ ಫಲಾನುಭವಿಗಳ ಖಾತೆ ತಲುಪಲಿದೆ.
ಒಟ್ಟಿಗೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ! ಪರಿಶೀಲಿಸಿಕೊಳ್ಳಿ
5ನೇ ಕಂತಿನ ಹಣ ಬಂದಿಲ್ಲ ಅಂದ್ರೆ ಏನು ಮಾಡಬೇಕು?
ಈಗಾಗಲೇ ಸರ್ಕಾರ ತಿಳಿಸಿರುವಂತೆ 5ನೇ ಕಂತಿನ ಹಣ ಬಾರದೇ ಇದ್ದರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ (Aadhaar seeding) ಆಗಿದ್ಯೋ ಇಲ್ಲವೋ ಎಂಬುದನ್ನು ಬ್ಯಾಂಕಿಗೆ ಹೋಗಿ ಪರಿಶೀಲಿಸಿಕೊಳ್ಳಿ. ಅಥವಾ ಹತ್ತಿರದ ಪೋಸ್ಟ್ ಆಫೀಸ್ನಲ್ಲಿ (post office) ಹೊಸ ಖಾತೆಯನ್ನು ಆರಂಭಿಸಿ. ಈ ರೀತಿ ಮಾಡಿದರೆ ನಿಮ್ಮ ಖಾತೆಗೂ ಕೂಡ ಮುಂದಿನ ಗೃಹಲಕ್ಷ್ಮಿಯ ಎಲ್ಲಾ ಕಂತಿನ ಹಣವು ಜಮಾ ಆಗುತ್ತದೆ.
ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆಯಲ್ಲಿ ರಾತ್ರೋ-ರಾತ್ರಿ ಮಹತ್ವದ ಬದಲಾವಣೆ
DBT ಸ್ಟೇಟಸ್ ಚೆಕ್ ಮಾಡಿ! (Check your DBT status)
ನಿಮ್ಮ ಖಾತೆಗೆ ಹಣ ಬಂದಿದ್ಯೋ ಇಲ್ಲವೋ ಎಂಬುದನ್ನು ಮಾಹಿತಿ ಕಣಜ ವೆಬ್ಸೈಟ್ ಮೂಲಕ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ ತಿಳಿದುಕೊಳ್ಳಬಹುದು. ಅಥವಾ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ DBT Karnataka mobile ಅಪ್ಲಿಕೇಶನ್ ಮೂಲಕ ಆಧಾರ್ ಸಂಖ್ಯೆಯನ್ನು ನಮೂದಿಸಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆಯೋ ಇಲ್ವೋ ಅಂತ ಚೆಕ್ ಮಾಡಿಕೊಳ್ಳಬಹುದು..
On this date, the 6th installment of the Gruha Lakshmi Yojana Money will deposit