ಇನ್ನು ಮುಂದೆ ಗೃಹಜ್ಯೋತಿ ಯೋಜನೆ (Gruha jyothi scheme) ಯ ಅಡಿಯಲ್ಲಿ 10% ಹೆಚ್ಚುವರಿಯಾಗಿ ವಿದ್ಯುತ್ (electricity) ವಿತರಣೆ ಮಾಡುವ ಬದಲು ಕೇವಲ 10 ಯೂನಿಟ್ ಮಾತ್ರ ಹೆಚ್ಚುವರಿಯಾಗಿ ನೀಡಲು ಸರ್ಕಾರ ನಿರ್ಧರಿಸಿದೆ.
ರಾಜ್ಯ ಸರ್ಕಾರ (state government) ದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆ, ಕಳೆದ ಆರು ತಿಂಗಳುಗಳಿಂದ ಲಕ್ಷಾಂತರ ಕುಟುಂಬವನ್ನು ಬೆಳಗಿದೆ ಎನ್ನಬಹುದು.
ಯಶಸ್ವಿನಿ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ; ಸಿಗುತ್ತೆ 5 ಲಕ್ಷ ರೂಪಾಯಿ ಬೆನಿಫಿಟ್!
ಪ್ರತಿ ತಿಂಗಳು ವಿದ್ಯುತ್ ಬಿಲ್ (electricity bill) ಪಾವತಿ ಮಾಡಲು ಕಷ್ಟಪಡುತ್ತಿದ್ದ ಜನರು ಇದೀಗ 200ಗಿಂತ ಕಡಿಮೆ ವಿದ್ಯುತ್ ಬಳಸಿದರೆ ಉಚಿತವಾಗಿ ವಿದ್ಯುತ್ ಪಡೆದುಕೊಳ್ಳಲು ಸಾಧ್ಯವಿದೆ. ಸರ್ಕಾರ ಗೃಹಜ್ಯೋತಿ ಯೋಜನೆಯ ಮೂಲಕ 200 ಯೂನಿಟ್ ವರೆಗಿನ ವಿದ್ಯುತ್ ಬಳಕೆದಾರರಿಗೆ ಉಚಿತವಾಗಿ ವಿದ್ಯುತ್ ಒದಗಿಸಿ ಕೊಡುತ್ತಿದೆ.
ಗೃಹಜ್ಯೋತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ!
ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗೃಹಜ್ಯೋತಿ ಯೋಜನೆಗೆ ಸಂಬಂಧಪಟ್ಟ ಹಾಗೆ ಮಹತ್ವದ ಬದಲಾವಣೆಯನ್ನು ಮಾಡಲು ತೀರ್ಮಾನಿಸಲಾಗಿದೆ.
ಈ ಹೊಸ ನಿರ್ಧಾರದ ಪ್ರಕಾರ, ಇಲ್ಲಿಯವರೆಗೆ ಹೆಚ್ಚುವರಿಯಾಗಿ 10% ಗಳನ್ನು ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ 10 ಯೂನಿಟ್ ಮಾತ್ರ ಹೆಚ್ಚುವರಿಯಾಗಿ ನೀಡಲಾಗುವುದು. 10% ಹೆಚ್ಚುವರಿಯಾಗಿ ಸಿಗುತ್ತಿತ್ತು ಅಂದರೆ ಯಾರು 180 ಯೂನಿಟ್ ವರೆಗೆ ಖರ್ಚು ಮಾಡುತ್ತಾರೋ ಅವರಿಗೆ ಇನ್ನೂ 10% ಅಂದರೆ 190 ಯೂನಿಟ್ ವರೆಗೆ ಖರ್ಚು ಮಾಡಲು ಮಿತಿ ವಿಧಿಸಲಾಗಿತ್ತು.
ಬಿಪಿಎಲ್ ರೇಷನ್ ಕಾರ್ಡುದಾರರಿಗೆ ಬಿಗ್ ಅಪ್ಡೇಟ್, ಲಕ್ಷಾಂತರ ರೇಷನ್ ಕಾರ್ಡುಗಳು ರದ್ದು!
ಆದರೆ ಈಗ ಕೇವಲ 10 ಯೂನಿಟ್ ಮಾತ್ರ ಹೆಚ್ಚುವರಿಯಾಗಿ ನೀಡುತ್ತಿರುವುದರಿಂದ, 200 ಯೂನಿಟ್ ವರೆಗಿನ ಮಿತಿಯಲ್ಲಿ ವಿದ್ಯುತ್ ಬಳಕೆ ಮಾಡುತ್ತಿರುವವರಿಗೆ ಉಚಿತ ವಿದ್ಯುತ್ ಪಡೆದುಕೊಳ್ಳುವುದಕ್ಕೆ ಕಷ್ಟ ಆಗಬಹುದು, ಆದರೆ ಕಡಿಮೆ ಯೂನಿಟ್ ಬಳಸುತ್ತಿರುವವರಿಗೆ ಇದು ಹೆಚ್ಚಿನ ಪ್ರಯೋಜನ ನೀಡಲಿದೆ.
ಮಹಿಳೆಯರಿಗಾಗಿ ಮತ್ತೊಂದು ಹೊಸ ಯೋಜನೆ; ತರಬೇತಿ ಜೊತೆಗೆ ಸಾಲ ಸೌಲಭ್ಯ
ಹೆಚ್ಚುತ್ತಿರುವ ವಿದ್ಯುತ್ ಅಭಾವದಿಂದ ಜನರ ಬೇಡಿಕೆಗೆ ತಕ್ಕಹಾಗೆ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಬಹುಶಃ ಸರ್ಕಾರ ಇದೆ ಕಾರಣಕ್ಕೆ, ಇಂಥದೊಂದು ನಿರ್ಧಾರ ಕೈಗೊಂಡಿದೆ ಎನ್ನಬಹುದು. ಇನ್ನು ಮುಂದೆ ಉಚಿತ ವಿದ್ಯುತ್ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಕೂಡ ಕಡಿಮೆ ಆಗಬಹುದು.
Free electricity, changes in Karnataka Gruha Jyothi scheme
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.