Loan : ರಾಜ್ಯ ಸರ್ಕಾರ ಮಹಿಳೆಯರ ಸ್ವಾವಲಂಬನ ಜೀವನ (women independent life) ಕ್ಕಾಗಿ ಒಂದಲ್ಲ ಒಂದು ರೀತಿಯ ಯೋಜನೆಗಳನ್ನು 2023 ರಿಂದ ಜಾರಿಗೆ ತರುತ್ತಿದೆ. ಈಗ ಮತ್ತೊಂದು ಯೋಜನೆ (government scheme) ಜಾರಿಗೆ ಬಂದಿದ್ದು, ಈ ಮೂಲಕ ಮಹಿಳೆಯರು ತಮ್ಮ ಸ್ವಂತ ಉದ್ಯಮ (Own Business) ಆರಂಭಿಸಲು ತರಬೇತಿ ಹಾಗೂ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯವನ್ನು (Loan) ಕೂಡ ಸರ್ಕಾರ ಒದಗಿಸುತ್ತದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಮಹಿಳೆಯರು ಸ್ವಂತ ಉದ್ಯಮ (own business) ಮಾಡುವ ಕನಸು ಹೊಂದಿರುತ್ತಾರೆ. ಆದರೆ ಎಲ್ಲರಿಗೆ ಈ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಇಂತಹ ಮಹಿಳೆಯರಿಗೆ ಉತ್ತೇಜನ ನೀಡಲು ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ.
ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್; ಒಂದೇ ತಿಂಗಳಲ್ಲಿ ಎರಡು ಕಂತಿನ ಹಣ ಜಮಾ
ಅದರಲ್ಲೂ ಮಹಿಳೆಯರ ಆರ್ಥಿಕ ಪರಿಸ್ಥಿತಿ (financial situation) ಸುಧಾರಿಸುವ ಸಲುವಾಗಿ ಈಗಾಗಲೇ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಜಾರಿಗೆ ತರಲಾಗಿದೆ. ಈ ಮೂಲಕ 2000 ಪ್ರತಿ ತಿಂಗಳು ಗೃಹಿಣಿಯರ ಖಾತೆಗೆ (Bank Account) ಸೇರುತ್ತದೆ.
ಬೆಂಗಳೂರಿನ IIM ಸಂಸ್ಥೆ ಮೂಲಕ ಸಹಾಯ!
ರಾಜ್ಯ ಸರ್ಕಾರ, ಬೆಂಗಳೂರಿನ IIM ಸಂಸ್ಥೆಯ ಸಹಯೋಗದಲ್ಲಿ ಮಹಿಳೆಯರಿಗಾಗಿ ಮತ್ತೊಮ್ಮೆ ಯೋಜನೆಯ ಜಾರಿಗೆ ತಂದಿದ್ದು ಉದ್ಯಮಶೀಲತೆಯನ್ನು ಮಹಿಳೆಯರಲ್ಲಿ ಹೆಚ್ಚಿಸಲು ಯೋಜನೆ ಪ್ರಯೋಜನಕಾರಿ ಆಗಲಿದೆ.
ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ! ಹೆಸರು ಸೇರಿಸಲು, ಡಿಲೀಟ್ ಮಾಡಲು ಅನುವು
ಐ ಐ ಎಂ ಸಂಸ್ಥೆ ಪರಿಶಿಷ್ಟ ಜಾತಿ (scheduled cast) ಯ ಪದವಿ ಮುಗಿಸಿರುವ ಮಹಿಳೆಯರಿಗೆ ಸ್ವಂತ ಉದ್ಯಮ ಆರಂಭಿಸಲು ಉದ್ಯಮಶೀಲತಾ ತರಬೇತಿ (entrepreneurship training) ಯನ್ನು ನೀಡುತ್ತಿದೆ. ಇಲ್ಲಿ ಸ್ವಂತ ಉದ್ಯಮ ಮಾಡಿ ಕೊಳ್ಳಲು ಸಹಾಯಕವಾಗುವಂತೆ ಉದ್ಯಮಶೀಲತಾ ತರಬೇತಿ ಪಡೆದುಕೊಳ್ಳಬಹುದು.
ಹೊಲ, ಗದ್ದೆ, ಕೃಷಿ ಜಮೀನಿಗೆ ದಾರಿ ಪಡೆಯಲು ಸುಲಭ ಮಾರ್ಗ! ಸರ್ಕಾರದ ಹೊಸ ಅಪ್ಡೇಟ್
ಉದ್ಯಮಶೀಲತಾ ತರಬೇತಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ! (Apply for training)
ಆಸಕ್ತ ಪರಿಶಿಷ್ಟ ಜಾತಿಯ ಪದವಿ ಪಡೆದಿರುವ ಮಹಿಳೆಯರು ಸ್ವಂತ ಉದ್ಯಮ ಆರಂಭಿಸುವುದಕ್ಕೆ ಬೆಂಗಳೂರಿನ ಮೂಲಕ ಉದ್ಯಮಶೀಲತಾ ತರಬೇತಿಯನ್ನು ಪಡೆದುಕೊಳ್ಳಬಹುದು, ಆಸಕ್ತ ಅಭ್ಯರ್ಥಿಗಳು ಜನವರಿ 31, 2024ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ಹೊರಡಿಸಲಾಗಿದೆ.
ಅರ್ಜಿ ಸಲ್ಲಿಸಲು https://swdservices.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಅಗತ್ಯ ಇರುವ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. 21ರಿಂದ 45 ವರ್ಷ ವಯಸ್ಸಿನ ಪರಿಶಿಷ್ಟ ಜಾತಿ ಮಹಿಳಾ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ.
ಆಯ್ಕೆಯಾದ ಮಹಿಳಾ ಅಭ್ಯರ್ಥಿಗೆ ನಾಲ್ಕರಿಂದ ಆರು ತಿಂಗಳುಗಳ ಕಾಲ ಉದ್ಯಮಶೀಲತಾ ತರಬೇತಿ ನೀಡಲಾಗುತ್ತದೆ. ಇಲ್ಲಿ ತರಬೇತಿ ಪಡೆದುಕೊಂಡರೆ ಸುಲಭವಾಗಿ ಯಾವುದೇ ರೀತಿಯ ಸ್ವಉದ್ಯೋಗ ಆರಂಭಿಸಲು ಮಹಿಳೆಯರಿಗೆ ಆತ್ಮವಿಶ್ವಾಸ (confidence) ಹಾಗೂ ಜ್ಞಾನ (knowledge) ಎರಡು ಲಭ್ಯವಾಗುತ್ತವೆ.
ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡೋ ವಿಧಾನ; 5ನೇ ಕಂತಿನ ಹಣ ಬಂದಿದ್ಯಾ ಚೆಕ್ ಮಾಡಿ
Another new scheme for women, Loan facility along with training
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.