ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡೋ ವಿಧಾನ; 5ನೇ ಕಂತಿನ ಹಣ ಬಂದಿದ್ಯಾ ಚೆಕ್ ಮಾಡಿ
ರೇಷನ್ ಕಾರ್ಡ್ (Ration Card), ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಲಿಂಕ್ (Aadhaar Card) ಆಗಿದ್ದರೆ, ಬ್ಯಾಂಕ್ ಖಾತೆ ಆಕ್ಟಿವ್ ಆಗಿದ್ದರೆ ಯೋಜನೆಯ ಹಣ ಖಾತೆಗೆ (Bank Account) ಸಲ್ಲಿಕೆ ಆಗುತ್ತದೆ.
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಸ್ಟೇಟಸ್ ಅನ್ನು ಕೂಡ ಈಗ ಸುಲಭವಾಗಿ ಅನ್ನಭಾಗ್ಯ ಯೋಜನೆ (Annabhagya scheme) ಯ ಸ್ಟೇಟಸ್ ಚೆಕ್ ಮಾಡಿದಂತೆ ಮಾಡಬಹುದು. ನಿಮಗೆ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಡೈರೆಕ್ಟ್ ಲಿಂಕ್ (direct link) ಇಲ್ಲಿದೆ.
ಗೃಹಲಕ್ಷ್ಮಿ ಯೋಜನೆ, ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆ ಆರಂಭವಾದಾಗ ಸಾಕಷ್ಟು ಗೊಂದಲಗಳು ಸಮಸ್ಯೆಗಳು ಉಂಟಾಗಿದ್ದರು ಕೂಡ, ಈಗ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸರ್ಕಾರ, ಜನರಿಗೆ ಹಣ ಸಂದಾಯ ಮಾಡುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು.
ಪ್ರತಿ ತಿಂಗಳು 2,000ಗಳನ್ನು ಮಹಿಳೆಯರು ಉಚಿತವಾಗಿ ಸರ್ಕಾರದಿಂದ ಪಡೆಯಬಹುದು. ಬಡ ಹಾಗೂ ಹಿಂದುಳಿದ ವರ್ಗದ ಮಹಿಳೆಯರು ಇಂದು ಸರ್ಕಾರದಿಂದ ಸಿಗುವ ಈ ಹಣದಿಂದ ಸಾಕಷ್ಟು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಜನವರಿ 22ಕ್ಕೆ ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇದಿಯಾ? ಇಲ್ಲಿದೆ ಮಾಹಿತಿ
ಮಹಿಳೆಯರ ಹೆಸರಿಗೆ ರೇಷನ್ ಕಾರ್ಡ್ (Ration Card) ಇದ್ದರೆ, ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಲಿಂಕ್ (Aadhaar Card) ಆಗಿದ್ದರೆ, ಬ್ಯಾಂಕ್ ಖಾತೆ ಆಕ್ಟಿವ್ ಆಗಿದ್ದರೆ ಮಿಸ್ ಆಗದೆ ಪ್ರತಿ ತಿಂಗಳು ಮಹಿಳೆಯರ ಖಾತೆಗೆ (Bank Account) 2,000 ರೂಪಾಯಿ ಸಲ್ಲಿಕೆ ಆಗುತ್ತದೆ.
ಈಗಾಗಲೇ ಐದು ಕಂತಿನ ಹಣ ಬಿಡುಗಡೆ ಆಗಿದೆ. ಅಂದರೆ ಮಹಿಳೆಯರು 10 ಸಾವಿರ ರೂಪಾಯಿಗಳನ್ನು ಸರ್ಕಾರದಿಂದ ಉಚಿತವಾಗಿ ಪಡೆದುಕೊಂಡಿದ್ದಾರೆ. ಸಲ್ಲಿಕೆ ಆಗಿರುವ 1.27 ಕೋಟಿ ಅರ್ಜಿಗಳಲ್ಲಿ ಶೇಕಡ 90ರಷ್ಟು ಮಹಿಳೆಯರ ಖಾತೆಗೆ ಎಲ್ಲಾ ಕಂತಿನ ಹಣವು ಬಿಡುಗಡೆ ಆಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಜನವರಿ ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿದೆ! ಚೆಕ್ ಮಾಡುವ ಲಿಂಕ್ ಇಲ್ಲಿದೆ
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ
ಕಳೆದ ಒಂದೆರಡು ತಿಂಗಳುಗಳಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗಾಗಲೇ ಅರ್ಜಿ ಸಲ್ಲಿಕೆ ಆಗಿರುವ ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಹಣ ವರ್ಗಾವಣೆ ಮಾಡುವ ಗೊಂದಲದಲ್ಲಿ ಇದ್ದ ರಾಜ್ಯ ಸರ್ಕಾರ, ಇನ್ನಷ್ಟು ಮಹಿಳೆಯರಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿರಲಿಲ್ಲ. ಇದೀಗ ಮತ್ತೆ ಹೊಸದಾಗಿ ಅರ್ಜಿ ಸ್ವೀಕಾರ ಮಾಡಲಾಗುತ್ತಿದ್ದು, ನೀವು ಎಲ್ಲಾ ದಾಖಲೆಗಳ ಸಮೇತ ಹತ್ತಿರದ ಸೇವ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.
ಸ್ವಂತ ಮನೆ ಇಲ್ಲದವರಿಗೆ ಸರ್ಕಾರದಿಂದ ಸಿಗಲಿದೆ ಉಚಿತ ಸೈಟ್; ಅಪ್ಲೈ ಮಾಡಿ
ಸ್ಟೇಟಸ್ ಚೆಕ್ ಮಾಡುವುದು ಹೇಗೆ? (How to check DBT status)
https://mahitikanaja.karnataka.gov.in/Service/Service/3136 ಮಾಹಿತಿ ಕಣಜ (Mahiti khanaja) ದ ಈ ಲಿಂಕ್ ಮೇಲೆ ಮೊದಲು ಕ್ಲಿಕ್ ಮಾಡಿ. ಗೃಹಲಕ್ಷ್ಮಿ ಅಪ್ಲಿಕೇಶನ್ ಸ್ಥಿತಿ ಎನ್ನುವ ಆಯ್ಕೆಯನ್ನು ಕಾಣುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ.
ಈಗ ಹೊಸ ಪುಟ ತೆರೆದುಕೊಳ್ಳುತ್ತದೆ ಅದರಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಬೇಕು. ಬಳಿಕ ಸಬ್ಮಿಟ್ ಎಂದು ಕ್ಲಿಕ್ ಮಾಡಿ. ಇಲ್ಲಿ ಯಾವುದೇ ಓಟಿಪಿ (OTP) ನಮೂದಿಸುವ ಅಗತ್ಯವಿಲ್ಲ.
ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕುತ್ತಿದ್ದ ಹಾಗೆ ಯಾರ ಖಾತೆಗೆ ಹಣ ಸಂದಾಯವಾಗಿದೆ ಯಾವ ತಿಂಗಳಿನಲ್ಲಿ ಹಣ ಬಂದಿದೆ ಎನ್ನುವ ಪ್ರತಿಯೊಂದು ವಿವರವನ್ನು ನೀವು ಕಾಣಬಹುದು.
ಇನ್ನು ಎರಡನೆಯದಾಗಿ ಡಿಬಿಟಿ ಕರ್ನಾಟಕ ಎನ್ನುವ ಮೊಬೈಲ್ ಅಪ್ಲಿಕೇಶನ್ (mobile application) ಮೂಲಕ ನೀವು ನಿಮ್ಮ ಖಾತೆಗೆ ಸರ್ಕಾರದಿಂದ ಡಿ ಬಿ ಟಿ ಆಗಿರುವ ಹಣದ ಬಗ್ಗೆ ಮಾಹಿತಿ ಪಡೆಯಬಹುದು.
ರೇಷನ್ ಕಾರ್ಡ್‌ನಲ್ಲಿ ಡಿಲೀಟ್ ಆದ ಹೆಸರನ್ನ ಆನ್ಲೈನ್ ಮೂಲಕವೇ ಸೇರಿಸಿಕೊಳ್ಳಿ! ಇಲ್ಲಿದೆ ವಿವರ
ಮೊದಲು DBT Karnataka ಎನ್ನುವ ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ (Download) ಮಾಡಿಕೊಂಡು ಇನ್ಸ್ಟಾಲ್ ಮಾಡಿ. ಬಳಿಕ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ಓ ಟಿ ಪಿ ಯನ್ನು ಮೊಬೈಲ್ ಗೆ ಕಳುಹಿಸಲಾಗುತ್ತದೆ. ಅದನ್ನು ನಮೂದಿಸಿ. ಬಳಿಕ ನೀವು mPIN ಸಂಖ್ಯೆಯನ್ನು ಹಾಕಿ ಲಾಗಿನ್ ಆಗಬೇಕು. ಇಷ್ಟು ಮಾಡಿದ್ರೆ ಸರ್ಕಾರದಿಂದ ಯಾವುದೇ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿದ್ದರೆ ಇಲ್ಲಿ ತಿಳಿದುಕೊಳ್ಳಬಹುದು.
Gruha Lakshmi Yojana Money Deposit Status Checking Method