ಜನವರಿ ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮಾ ಆಗಿದೆ! ಚೆಕ್ ಮಾಡುವ ಲಿಂಕ್ ಇಲ್ಲಿದೆ

ಅನ್ನಭಾಗ್ಯ ಯೋಜನೆ (Annabhagya scheme) ಯ ಹಣ ಫಲಾನುಭವಿಗಳ ಖಾತೆಗೆ (Bank Account) ಜಮಾ ಆಗುತ್ತಿದೆ, ಬಹುತೇಕ ಎಲ್ಲಾ ಬಿಪಿಎಲ್ ರೇಷನ್ ಕಾರ್ಡ್ (BPL Ration card) ಹೊಂದಿರುವ ಜನರಿಗೆ ಡಿಬಿಟಿ ಮಾಡಲಾಗಿದೆ.

Bengaluru, Karnataka, India
Edited By: Satish Raj Goravigere

ಕಳೆದ ಆರು ತಿಂಗಳುಗಳಿಂದ ಹಂತ ಹಂತವಾಗಿ ಅನ್ನಭಾಗ್ಯ ಯೋಜನೆ (Annabhagya scheme) ಯ ಹಣ ಫಲಾನುಭವಿಗಳ ಖಾತೆಗೆ (Bank Account) ಜಮಾ ಆಗುತ್ತಿದೆ, ಜುಲೈ ತಿಂಗಳಿನಿಂದ ಡಿಸೆಂಬರ್ ವರೆಗೆ ಹಣ ವರ್ಗಾವಣೆ (DBT) ಆಗಿದ್ದು ಬಹುತೇಕ ಎಲ್ಲಾ ಬಿಪಿಎಲ್ ರೇಷನ್ ಕಾರ್ಡ್ (BPL Ration card) ಹೊಂದಿರುವ ಜನರಿಗೆ ಡಿಬಿಟಿ ಮಾಡಲಾಗಿದೆ.

ಅನ್ನಭಾಗ್ಯ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರ ಫಲಾನುಭವಿಗಳಿಗೆ 5 ಕೆಜಿ ಉಚಿತ ಅಕ್ಕಿ (free rice) ಯನ್ನು ನೀಡಬೇಕಿತ್ತು ಆದರೆ ಆರು ತಿಂಗಳಾಗಿದ್ದರೂ ಕೂಡ ಇದುವರೆಗೆ ಅಗತ್ಯ ಇರುವಷ್ಟು ಅಕ್ಕಿ ದಾಸ್ತಾನು ಸರ್ಕಾರದಲ್ಲಿ ಇಲ್ಲವಾಗಿರುವುದರಿಂದ ಅಕ್ಕಿಯ ಬದಲು ಹಣವನ್ನೇ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ.

The government has given good news to all families with ration cards

ಸ್ವಂತ ಮನೆ ಇಲ್ಲದವರಿಗೆ ಸರ್ಕಾರದಿಂದ ಸಿಗಲಿದೆ ಉಚಿತ ಸೈಟ್; ಅಪ್ಲೈ ಮಾಡಿ

ಪ್ರತಿ ಕೆಜಿ ಗೆ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170ಗಳನ್ನು ಪ್ರತಿ ಮನೆಯ ಒಬ್ಬ ಸದಸ್ಯನಿಗೆ ನೀಡಲಾಗುತ್ತಿದೆ. ಮನೆಯಲ್ಲಿ ಎಷ್ಟು ಜನ ಇದ್ದಾರೋ ಅಷ್ಟು ಜನರಿಗೆ ತಲಾ 170 ರೂಪಾಯಿಗಳು ಪ್ರತಿ ತಿಂಗಳು ಜಮಾ (Money Transfer) ಮಾಡಲಾಗುತ್ತಿದೆ.

ಹಣದ ಬದಲು ಅಕ್ಕಿಯನ್ನು ಕೊಡಿ ಎಂದ ಮಹಿಳೆಯರು!

ರಾಜ್ಯ ಸರ್ಕಾರ ನಡೆಸಿರುವ ಸರ್ವೆ (survey) ಪ್ರಕಾರ ಶೇಕಡಾ 80ರಷ್ಟು ಮಹಿಳೆಯರು ತಮಗೆ ಹಣ ಬೇಡ ಅದರ ಬದಲು ಉಚಿತ ಅಕ್ಕಿಯನ್ನು ನೀಡಿ ಎಂದು ಸರ್ಕಾರವನ್ನು ಮನವಿ ಮಾಡಿದ್ದಾರೆ, ಹಣ ಅನಗತ್ಯ ಕಾರಣಗಳಿಗೆ ಖರ್ಚಾಗುತ್ತದೆ ಅಕ್ಕಿ ನಮ್ಮ ಜೀವನಕ್ಕೆ ಆಧಾರವಾಗುತ್ತದೆ ಎಂದು ಹೆಂಗಸರು ಹೇಳುತ್ತಿದ್ದಾರೆ.

ಆದರೆ ಮುಂಗಾರು ಮಳೆ ಅಭಾವದಿಂದ ರಾಜ್ಯದಲ್ಲಿ ಬೇಕಾದಷ್ಟು ಭತ್ತ ಉತ್ಪಾದನೆ ಆಗುತ್ತಿಲ್ಲ ಹಾಗಾಗಿ ಮುಂಬರುವ ದಿನಗಳಲ್ಲಿ ಅಕ್ಕಿಯ ಬೆಲೆ ಕೂಡ ದುಬಾರಿ ಆಗಬಹುದು. ಜೊತೆಗೆ ಸರ್ಕಾರಕ್ಕೆ ಅಗತ್ಯ ಇರುವಷ್ಟು ಉಚಿತ ಅಕ್ಕಿ ನೀಡಲು ಅಕ್ಕಿಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹಣ ವಿತರಣೆ ಮಾಡುವ ಕೆಲಸ ಇನ್ನಷ್ಟು ದಿನ ಮುಂದುವರಿಯಬಹುದು.

ರೇಷನ್ ಕಾರ್ಡ್‌ನಲ್ಲಿ ಡಿಲೀಟ್ ಆದ ಹೆಸರನ್ನ ಆನ್ಲೈನ್ ಮೂಲಕವೇ ಸೇರಿಸಿಕೊಳ್ಳಿ! ಇಲ್ಲಿದೆ ವಿವರ

Annabhagya Schemeಜನವರಿ ತಿಂಗಳಿನ ಹಣ ಸೇರಿದೆಯಾ ಚೆಕ್ ಮಾಡಿ (Check DBT status)

https://ahara.kar.nic.in/lpg/ ಇದು ಆಹಾರ ಇಲಾಖೆಯ ನೇರವಾಗಿ ಡಿಬಿಟಿ ಚೆಕ್ ಮಾಡುವ ಲಿಂಕ್ ಆಗಿರುತ್ತದೆ. ಇದರ ಮೇಲೆ ಕ್ಲಿಕ್ ಮಾಡಿ. ನಿಮಗೆ ಬೇರೆ ಬೇರೆ ಜಿಲ್ಲೆಯ ಹೆಸರುಗಳು ಕಾಣಿಸುತ್ತವೆ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿ ಅದರ ಮೇಲೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಈಗ ಡಿಬಿಟಿ ಸ್ಟೇಟಸ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಮುಂದಿನ ಹಂತದಲ್ಲಿ ವರ್ಷ ತಿಂಗಳು ಆಯ್ಕೆ ಮಾಡಿಕೊಂಡು ನಂತರ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಗೂ ಕೆಳಗಡೆ ಕೊಟ್ಟಿರುವ ಕ್ಯಾಪ್ಚ ನಂಬರ್ ಅನ್ನು ನಮೂದಿಸಿ, ಗೋ ಎಂದು ಕ್ಲಿಕ್ ಮಾಡಿ.

ಅನ್ನಭಾಗ್ಯ ಯೋಜನೆ ಉಚಿತ ಹಣ ಇನ್ಮುಂದೆ ಸಿಗೋದಿಲ್ಲ; ಸರ್ಕಾರದ ಹೊಸ ಅಪ್ಡೇಟ್

ಇಷ್ಟು ಮಾಡಿದ್ರೆ ತಕ್ಷಣಕ್ಕೆ ನಿಮ್ಮ ಬ್ಯಾಂಕ್ ಖಾತೆಗೆ ನೀವು ಆಯ್ಕೆ ಮಾಡಿದ ತಿಂಗಳಿನ ಹಣ ವರ್ಗಾವಣೆ ಆಗಿದೆಯಾ ಇಲ್ವಾ ಎಂಬುದನ್ನು ತಿಳಿದುಕೊಳ್ಳಬಹುದು. ಜನವರಿ ತಿಂಗಳಿನ ಅನ್ನ ಭಾಗ್ಯ ಯೋಜನೆಯ ಹಣವನ್ನು ಬಿಡುಗಡೆ ಮಾಡಲಾಗಿದೆ, ಹಂತ ಹಂತವಾಗಿ ಪ್ರತಿಯೊಬ್ಬರ ಖಾತೆಗೆ ಹಣ ಜಮಾ ಆಗುತ್ತಿದೆ.

ಒಂದು ವೇಳೆ ನೀವು ಜನವರಿ ತಿಂಗಳಿನ ಡಿಬಿಟಿ ಸ್ಟೇಟಸ್ ಚೆಕ್ ಮಾಡುವಾಗ, ಪಾವತಿ ಪ್ರಗತಿ (payment in progress) ಯಲ್ಲಿ ಇದೆ ಎನ್ನುವ ಸಂದೇಶ ಕಂಡರೆ ಸದ್ಯದಲ್ಲಿಯೇ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಅರ್ಥ.

ನಿಮ್ಮ ಖಾತೆಗೆ ಇನ್ನೂ ಹಣ ಬರ್ತಾ ಇಲ್ವಾ?

ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಯಲ್ಲಿ ಇರುವ ಹೆಸರು ಮ್ಯಾಚ್ ಆಗದೆ ಇದ್ದರೆ ಅಥವಾ ನೀವಿನ್ನು ಆಧಾರ್ ಕಾರ್ಡ್ ಲಿಂಕ್ (Aadhaar Card link) ಅನ್ನು ನಿಮ್ಮ ಖಾತೆಗೆ ಮಾಡಿಸಿಕೊಳ್ಳದೆ ಇದ್ದರೆ ಆಗ ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗಲು ಸಾಧ್ಯವಿಲ್ಲ.

ಅಷ್ಟು ಮಾತ್ರವಲ್ಲದೆ ನಿಮ್ಮ ಬ್ಯಾಂಕ್ ಖಾತೆ ಆಕ್ಟಿವ್ ಆಗಿರಬೇಕು ಹಾಗೂ ಆಕ್ಟಿವ್ ಆಗಿರುವ ಮೊಬೈಲ್ ಸಂಖ್ಯೆಯ ಜೊತೆಗೆ ಲಿಂಕ್ ಆಗಿರಬೇಕು. ಇವೆರಡು ಆಗದೆ ಇದ್ರೆ ಸರ್ಕಾರದಿಂದ ಹಣ ಬಿಡುಗಡೆ ಆಗಿದ್ದರೂ ಕೂಡ ಬ್ಯಾಂಕ್ ಮೂಲಕ ನಿಮಗೆ ಹಣ ಬಂದಿರುವುದಿಲ್ಲ.

ಗೃಹಲಕ್ಷ್ಮಿ ಯೋಜನೆ ಹಣ ಪ್ರತಿ ತಿಂಗಳು ಮಿಸ್ ಆಗದೆ ಪಡೆಯೋಕೆ ಹೊಸ ಅಪ್ಡೇಟ್

ಇಂತಹ ಸಂದರ್ಭದಲ್ಲಿ ನೀವು ನೇರವಾಗಿ ಬ್ಯಾಂಕ್ ಗೆ ಹೋಗಿ ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಿಕೊಳ್ಳಿ. ಅಪ್ಡೇಟ್ ಮಾಡಿಕೊಂಡ ನಂತರದ ತಿಂಗಳಿನಿಂದ ನಿಮ್ಮ ಖಾತೆಗೂ ಅನ ಭಾಗ್ಯ ಯೋಜನೆಯ ಹಣ ವರ್ಗಾವಣೆ ಆಗಲು ಆರಂಭವಾಗುತ್ತದೆ.

Annabhagya Yojana Money has been deposited, Here is the link to check